ಒಂದು ಕಾಲದಲ್ಲಿ ರಾಹುಲ್ ಗಾಂಧಿ ಆಪ್ತ; ಈಗ ಹಸ್ತಲಾಘವ ಮಾಡಲೂ ನಿರಾಸಕ್ತಿ: ರವನೀತ್ ಸಿಂಗ್ ವಿರುದ್ಧ ಕಾಂಗ್ರೆಸ್ ಕಿಡಿಕಿಡಿ
ಸೇನಾ ಮಾಜಿ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ ಅವರ ಪುಸ್ತಕದೊಂದಿಗೆ ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಈ ಸಂದರ್ಭದಲ್ಲಿ ಎದುರಾದ ರವನೀತ್ ಸಿಂಗ್ ಅವರಿಗೆ ಹಸ್ತಲಾಘವ ಮಾಡಲು ಮುಂದಾಗಿದ್ದು, ಅವರು ನಿರಾಕರಿಸಿದರು. ಇದು ಕಾಂಗ್ರೆಸ್ ನಾಯಕರನ್ನು ಕೆರಳಿಸಿದ್ದು, ಅವರನ್ನು ದೇಶದ್ರೋಹಿ ಎಂದು ಕರೆದರು. ಇದು ಮಾತಿನ ಚಕಮಕಿಗೆ ಕಾರಣವಾಯಿತು.
ಸಂಗ್ರಹ ಚಿತ್ರ -
ನವದೆಹಲಿ: ಸೇನಾ ಮಾಜಿ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರ ಆತ್ಮಚರಿತ್ರೆಯನ್ನು (EX-Army chief MM Naravane’s book) ಹಿಡಿದು ಸಂಸತ್ತಿನ ಆವರಣದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು (Congress leaders) ಪ್ರತಿಭಟನೆ ನಡೆಸುತ್ತಿದ್ದ ವೇಳೆ ಎದುರಾದ ಸಚಿವ ರವನೀತ್ ಸಿಂಗ್ ಬಿಟ್ಟು (Ravneet Singh) ಅವರಿಗೆ ಹಸ್ತಲಾಘವ ಮಾಡಲು ರಾಹುಲ್ ಗಾಂಧಿ ಮುಂದಾಗಿದ್ದು, ಅವರು ನಿರಾಕರಿಸಿದರು. ಇದು ಕಾಂಗ್ರೆಸ್ ನಾಯಕರನ್ನು ಕೆರಳಿಸಿದ್ದು, ಅವರನ್ನು ದೇಶದ್ರೋಹಿ ಎಂದು ಕರೆದರು. ಇದು ಮಾತಿನ ಚಕಮಕಿಗೆ ಕಾರಣವಾದ ಘಟನೆ ನಡೆದಿದೆ.
2020ರ ಭಾರತ-ಚೀನಾ ಸಂಘರ್ಷದ ಕುರಿತು ಮಾಜಿ ಸೇನಾ ಮುಖ್ಯಸ್ಥ ನರವಾಣೆ ಅವರ ಅಪ್ರಕಟಿತ ಕೃತಿಯ ಬಗ್ಗೆ ಸಂಸತ್ತಿನ ಕಲಾಪದಲ್ಲಿ ಉಲ್ಲೇಖಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಯತ್ನಿಸಿದ್ದರು. ಆದರೆ ಇದಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಗೃಹ ಸಚಿವ ಅಮಿತ್ ಶಾ ತೀವ್ರ ಅವರು ವಿರೋಧ ವ್ಯಕ್ತಪಡಿಸಿದರು. ಆ ಪುಸ್ತಕ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ ಎಂದು ಅವರು ವಾದಿಸಿದ್ದರು.
ರಾಹುಲ್ ಗಾಂಧಿಗೆ ಶೇಕ್ ಹ್ಯಾಂಟ್ ನಿರಾಕರಿಸಿದ ರವನೀತ್ ಸಿಂಗ್ ಬಿಟ್ಟು:
#WATCH | Delhi: As Union MoS Ravneet Singh Bittu passes by the protesting Congress MPs at Makar Dwar, Lok Sabha LoP Rahul Gandhi says, "Here is a traitor walking right by. Look at the face..."
— ANI (@ANI) February 4, 2026
LoP Rahul Gandhi offered to shake his hands, saying, "Hello brother, my traitor… pic.twitter.com/5wMgjM8KAW
ಬಳಿಕ ಈ ಪುಸ್ತಕವನ್ನು ಹಿಡಿದು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಕೇಂದ್ರ ರೈಲ್ವೆ ರಾಜ್ಯ ಸಚಿವ ರವನೀತ್ ಸಿಂಗ್ ಅವರು ಹಸ್ತಲಾಘವ ಮಾಡಲು ನಿರಾಕರಿಸಿದರು. ಇದು ಮಾತಿನ ಚಕಮಕಿಗೆ ಕಾರಣವಾಗಿದೆ.
This is the strongest scene coming from the #Parliament today
— Amock_ (@Amockx2022) February 4, 2026
240 BJP MPs against him
81 ministers against him
Speaker Om Birla against him
Godi media against him
But look at Rahul Gandhi and his courage, challenging them all with a book 🔥🔥
pic.twitter.com/DifwgiJIdU
ರವನೀತ್ ಸಿಂಗ್ ಅವರು 2024 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಪ್ರತಿಭಟನಾ ನಿರತ ಸಂಸದರನ್ನು ನೋಡಿ ರವನೀತ್ ಅವರು, ಕಾಂಗ್ರೆಸ್ ಸಂಸದರು ಯುದ್ಧ ಗೆದ್ದಂತೆ ಕುಳಿತಿದ್ದಾರೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿ ಅವರು "ದೇಶದ್ರೋಹಿ ಸ್ನೇಹಿತ" ಎಂದು ಕರೆದು ಹಸ್ತಲಾಘವ ಮಾಡಲು ಮುಂದಾಗಿದ್ದಾರೆ. ಒಬ್ಬ ದೇಶದ್ರೋಹಿ ನಡೆದುಕೊಂಡು ಬರುತ್ತಿದ್ದಾನೆ. ಮುಖವನ್ನು ನೋಡಿ, ನಮಸ್ಕಾರ ಸಹೋದರ, ನನ್ನ ದೇಶದ್ರೋಹಿ ಸ್ನೇಹಿತ. ಚಿಂತಿಸಬೇಡಿ, ನೀವು ಕಾಂಗ್ರೆಸ್‌ಗೆ ಹಿಂತಿರುಗುತ್ತೀರಿ ಎಂದು ಹೇಳಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಎಂಎಂ ನರವಾಣೆ ಅವರ ಪುಸ್ತಕವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರಿಸುವುದಾಗಿ ತಿಳಿಸಿದರು. ಸರ್ಕಾರ ಬೇರೆ ರೀತಿಯಲ್ಲಿ ಹೇಳಿಕೆ ನೀಡುತ್ತಿದೆ. ಆದರೆ ನಿಜ ಏನೆಂದು ಈ ಪುಸ್ತಕದಲ್ಲಿದೆ. ಭಾರತದ ಯುವಜನರು ಓದಿ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಈ ಕೃತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ನರವಾಣೆ ಅವರಿಗೆ ಯಾವುದು ಸರಿ ಅನಿಸುತ್ತದೋ ಅದನ್ನು ಮಾಡು ಎಂದು ಹೇಳಿದ್ದಾರೆ., ಅವರು ರಾಜನಾಥ್ ಸಿಂಗ್ ಅವರಿಗೆ ಕರೆ ಮಾಡಿ, ಚೀನೀ ಟ್ಯಾಂಕ್‌ಗಳು ಬಂದಿವೆ, ನಾವು ಏನು ಮಾಡಬೇಕು? ಎಂದು ಕೇಳಿದಾಗ ರಾಜನಾಥ್ ಸಿಂಗ್ ಉತ್ತರಿಸಲಿಲ್ಲ. ಎಸ್. ಜೈಶಂಕರ್, ಅಜಿತ್ ದೋವಲ್ ಅವರ ಬಳಿ ಕೇಳಿದರೂ ಉತ್ತರ ನೀಡಲಿಲ್ಲ ಎಂದು ಉಲ್ಲೇಖಿಸಲಾಗಿದೆ ಎಂದು ರಾಹುಲ್ ಗಾಂಧಿ ತಿಳಿಸಿದರು.
ಪ್ರಧಾನಿ ಲೋಕಸಭೆಗೆ ಬರುವ ಧೈರ್ಯ ಹೊಂದಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ಅವರು ಬಂದರೆ ಈ ಪುಸ್ತಕವನ್ನು ಅವರಿಗೆ ನೀಡುತ್ತೇನೆ ಎಂದ ರಾಹುಲ್ ಗಾಂಧಿ, ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಕುರಿತು ಮಾತನಾಡಿ ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.