Bangalore News: ಜ.29ರಿಂದ ಫೆಬ್ರವರಿ 1ವರೆಗೆ ವೀರಶೈವ ಲಿಂಗಾಯಿತ ಗ್ಲೋಬಲ್ ಬಿಸಿನಸ್ ಬೃಹತ್ ಸಮಾವೇಶ
ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಲಿಂಗಾಯಿತ ಯುವ ವೇದಿಕೆ ವತಿ ಯಿಂದ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನಸ್ ಕಾಂಕ್ಲೇವ್ ಜ.29ರಿಂದ ಫೆಬ್ರವರಿ 1ರವರಗೆ ಬೆಂಗಳೂರಿನ ಅರಮನೆ ಮೈದಾನ ವೈಟ್ ಪೆಟಲ್ಸ್ ಸಭಾಂಗಣದಲ್ಲಿ ಜರುಗಲಿದೆ ಇದರ ಕುರಿತು ಮಾಧ್ಯಮಗೋಷ್ಟಿ ಏರ್ಪಡಿಸಿ ದ್ದರು.
-
ಬೆಂಗಳೂರು:ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಲಿಂಗಾಯಿತ ಯುವ ವೇದಿಕೆ ವತಿ ಯಿಂದ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನಸ್ ಕಾಂಕ್ಲೇವ್ ಜ.29ರಿಂದ ಫೆಬ್ರವರಿ 1ರವರಗೆ ಬೆಂಗಳೂರಿನ ಅರಮನೆ ಮೈದಾನ ವೈಟ್ ಪೆಟಲ್ಸ್ ಸಭಾಂಗಣದಲ್ಲಿ ಜರುಗಲಿದೆ ಇದರ ಕುರಿತು ಮಾಧ್ಯಮಗೋಷ್ಟಿ ಏರ್ಪಡಿಸಿದ್ದರು.
ಅಂತರಾಷ್ಟ್ರೀಯ ಲಿಂಗಾಯಿತ ಯುವ ವೇದಿಕೆ ಸಂತೋಷ್ ಕೆಂಜಾಂಬರವರು, ಟ್ರಸ್ಟಿ ಸತೀಶ್ ಮೂಡಿ, ಸಂಸ್ಥಾಪಕ ಸದಸ್ಯರುಗಳಾದ ವಿದ್ಯಾ ಪಟೇಲ್, ಶಿವಕುಮಾರ್ ಸರಶೆಟ್ಟಿ, ಮುಖ್ಯ ಕಾರ್ಯ ನಿರ್ವಾಹಣ ಅಧಕಾರಿ ವಿನಯ್ ಮಹದೇವ ಸ್ವಾಮಿ, ಬೆಂಗಳೂರುನಗರ ಅಧ್ಯಕ್ಷರಾದ ಪ್ರತಾಪ್ ಆರಾಧ್ಯ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಸಂತೋಷ್ ಕೆಂಚಾಂಬರವರು ಮಾತನಾಡಿ, ಸ್ವಾವಲಂಬಿ, ಸ್ವಾಭಿಮಾನಿ ಬದುಕಬೇಕು ಎಂದರೆ ಸಂಘಟಿರಗಾಬೇಕು. ಅದ್ದರಿಂದ ನಮ್ಮ ಟ್ರಸ್ಟ್ ವೀರಶೈವ ಲಿಂಗಾಯಿತ ಗ್ಲೋಬಲ್ ಬಿಸಿನಸ್ ಕಾಂಕ್ಲೇವ್ ಆಯೋಜಿಸಲಾಗಿದೆ.
ಜ.29ರಂದು ಕಾರ್ಯಕ್ರಮದ ಉದ್ಘಾಟನೆಯನ್ನು ಸಿದ್ದಗಂಗಾ ಮಠದ ಶ್ರೀ ಶ್ರೀ ಸಿದ್ದಲಿಂಗಾ ಮಹಾಸ್ವಾಮಿಗಳು ನೆರವೇರಿಸುವರು. ಸಚಿವ ಸಂಪುಟದ ಸಚಿವರಾದ ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆ, ಶರಣಗೌಡ ದರ್ಶನಪೂರ್(MB Patil, Ishwar Khandre, Sharangowda Darshanpur) ಗಣ್ಯ ಮಹನೀಯರುಗಳು ಭಾಗವಹಿಸಲಿದ್ದಾರೆ.
230ಕ್ಕೂ ಹೆಚ್ಚು ಮಳಿಗೆಗಳು ಇರಲಿದೆ, ಆಂಧ್ರ, ತೆಲಂಗಾಣ ಮತ್ತು ಕರ್ನಾಟಕದ ವಿವಿಧ ಜಿಲ್ಲೆ ಗಳಿಂದ ನಮ್ಮ ಸಮುದಾಯದವರು ಮಳಿಗೆಗಳು ಇರಲಿದೆ.
ಯುವ ಉದ್ಯಮಿಗಳಿಗೆ ಅನುಕೂಲಕ್ಕೆ ನೆಟ್ ವರ್ಕಿಂಗ್ ಜೋನ್ ಆರಂಭಿಸಿ ಕೈಗಾರಿಕೆ, ವೈದ್ಯಕೀಯ, ಬ್ಯಾಕಿಂಗ್ , ಐ.ಟಿ.ಬಿಟಿ ಉದ್ಯಮಗಳ ಕುರಿತು ಮಾಹಿತಿ ಸಿಗಲಿದೆ.
ಉತ್ತರ ಕರ್ನಾಟಕ, ದಕ್ಷಿಣ, ಮೈಸೂರು ಭಾಗದ ವಿಶೇಷ ಖಾದ್ಯ-ತಿನಿಸುಗಳ ಫುಡ್ ಫೆಸ್ಟ್ ಆಯೋಜಿಸಲಾಗಿದೆ, ಅಂದಾಜು 1ಲಕ್ಷ ಜನರು ಭಾಗವಹಿಸುವ ಸಾಧ್ಯತೆ ಇದೆ.
ಫೆಬ್ರವರಿ 1ರಂದು ಸಮಾರೋಪ ಸಮಾರಂಭದಲ್ಲಿ ಚಿಕ್ಕಮಗಳೂರಿನ ಬಸವತತ್ವ ಪೀಠದ ಡಾ.ಬಸವಮರಳಸಿದ್ದಪ್ಪ ಸ್ವಾಮೀಜಿಗಳು ಮತ್ತು ಸಚಿವರಾದ ಡಾ||ಶರಣ ಪ್ರಕಾಶ್ ಪಾಟೀಲ್, ಶಾಸಕರಾದ ವಿಜಯಾನಂದ ಕಾಶಪ್ಪನವರ್, ಶಂಕರ್ ಬಿದರಿ, ಮುರುಗೇಶ್ ನಿರಾಣಿ, ಶ್ರೀಮತಿ ರಾಣಿ ಸತೀಶ್, ವಿಧಾನಪರಿಷತ್ ನವೀನ್ ರವರು ಭಾಗವಹಿಸಲಿದ್ದಾರೆ.
ಆರ್ಥಿಕವಾಗಿ ಸಬಲೀಕರಣರಾಗಬೇಕು, ಸ್ವಾಭಿಮಾನಿ, ಸ್ವಾವಲಂಭಿಯಾಗಿ ವೀರಶೈವ-ಲಿಂಗಾಯಿತ ಹೊರಹೊಮ್ಮಬೇಕು ಮತ್ತು ಎಲ್ಲರಿಗೂ ಮುಕ್ತ ಅವಕಾಶ ನೀಡಲಾಗಿದೆ ಎಲ್ಲರು ಭಾಗವಹಿಸಬೇಕಾಗಿ ವಿನಂತಿ ಎಂದು ಹೇಳಿದರು.