ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಿಜೆಪಿ ಭರ್ಜರಿ ಗೆಲುವು: ಬಾಂಗ್ಲಾದೇಶ, ಬಂಗಾಳ ಗಡಿಯಲ್ಲಿ ಢಾಕಾ ಎಚ್ಚರಿಕೆ

ಇತ್ತೀಚೆಗೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಭಾರತದಿಂದ ಅಕ್ರಮ ಬಾಂಗ್ಲಾದೇಶಿಗರ ವಲಸೆಯನ್ನು ತಡೆಯುವ ನಿಟ್ಟಿನಲ್ಲಿ ಢಾಕಾ ತನ್ನ ಅಂತಾರಾಷ್ಟ್ರೀಯ ಗಡಿಯಲ್ಲಿ ಎಚ್ಚರಿಕೆ ನೀಡಿದೆ. ಈ ಕ್ರಮದ ಮೂಲಕ ಗಡಿ ಭಾಗದ ರಾಜ್ಯಗಳಲ್ಲಿ ಆಡಳಿತ ಬದಲಾವಣೆಯು ಭಾರತದಿಂದ ಹೆಚ್ಚು ಮಂದಿ ವಲಸೆ ಬರುವ ಆತಂಕ ಢಾಕಾಕ್ಕೆ ಇರುವುದು ಸ್ಪಷ್ಟವಾಗಿದೆ.

ಬಾಂಗ್ಲಾದೇಶ, ಬಂಗಾಳ ಗಡಿಯಲ್ಲಿ ಎಚ್ಚರಿಕೆ

ಸಂಗ್ರಹ ಚಿತ್ರ -

ಢಾಕಾ: ಅಕ್ರಮ ವಲಸಿಗರನ್ನು (illegal Bangladeshi immigrants) ನವದೆಹಲಿಯು ವಾಪಾಸ್ ಕಳುಹಿಸುವುದನ್ನು ವೇಗಗೊಳಿಸಲು ಪರಿಗಣಿಸುತ್ತಿರುವುದಾಗಿ ಹೇಳಿದ ಬಳಿಕ ಭಾರತದಿಂದ ಹೆಚ್ಚಿನ ಬಾಂಗ್ಲಾದೇಶಿಗರು (Bangladesh) ವಾಪಾಸ್ ಬರುವ ಆತಂಕದ ಹಿನ್ನೆಲೆಯಲ್ಲಿ ಢಾಕಾ (dhaka) ತನ್ನ ಅಂತಾರಾಷ್ಟ್ರೀಯ ಗಡಿಯಲ್ಲಿ ಎಚ್ಚರಿಕೆ ನೀಡಿದೆ.ಇತ್ತೀಚೆಗೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ (west bengal) ಮತ್ತು ಅಸ್ಸಾಂನಲ್ಲಿ (Assam) ಬಿಜೆಪಿ ಭರ್ಜರಿ ಗೆಲುವುಡ್ ದಾಖಲಿಸಿದೆ. ಈ ಹಿನ್ನೆಲೆಯಲ್ಲಿ ಭಾರತದಿಂದ ಹೆಚ್ಚಿನ ಅಕ್ರಮ ಬಾಂಗ್ಲಾದೇಶಿಗರು ವಾಪಾಸ್ ಬರುವ ಆತಂಕದ ಹಿನ್ನೆಲೆಯಲ್ಲಿ ಢಾಕಾ ಈ ಎಚ್ಚರಿಕೆಯನ್ನು ನೀಡಿದೆ ಎನ್ನಲಾಗಿದೆ.

ನವದೆಹಲಿಯು ಗುರುವಾರ ಈ ಕುರಿತು ಹೇಳಿಕೆ ನೀಡಿದ್ದು, ಭಾರತದಿಂದ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ವಾಪಸ್ ಕಳುಹಿಸುವ ಪರಿಶೀಲನಾ ಪ್ರಕ್ರಿಯೆಯನ್ನು ವೇಗಗೊಳಿಸುವುದಾಗಿ ಹೇಳಿದೆ. ಇದರ ಬೆನ್ನಲ್ಲೇ ಬಾಂಗ್ಲಾದೇಶದ ಗೃಹ ಸಚಿವ ಸಲಾಹುದ್ದೀನ್ ಅಹ್ಮದ್ ಅವರು ಭಾರತದಿಂದ ಯಾವುದೇ ರೀತಿಯಲ್ಲಿ ವಲಸೆ ಬರುವವರನ್ನು ತಡೆಯಲು ಗಡಿಗಳಲ್ಲಿ ಜಾಗರೂಕರಾಗಿರಲು ಗಡಿ ಕಾವಲುಗಾರ ಬಾಂಗ್ಲಾದೇಶ (ಬಿಜಿಬಿ) ಕ್ಕೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.

West Bengal CM: ಅಮಿತ್‌ ಶಾ ಆಯ್ಕೆಯ ನಾಯಕ ಸುವೇಂದು ಅಧಿಕಾರಿ

ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಭರ್ಜರಿ ಗೆಲುವು ದಾಖಲಿಸಿದ ಬಳಿಕ ನಡೆದಿರುವ ಈ ಬೆಳವಣಿಗೆ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ವಿದೇಶಾಂಗ ಸಚಿವ ಖಲೀಲುರ್ ರೆಹಮಾನ್ ಅವರು ಭಾರತ- ಬಾಂಗ್ಲಾದೇಶ ಗಡಿಯಲ್ಲಿ ಎಚ್ಚರಿಕೆ ನೀಡಲು ಢಾಕಾ ಕ್ರಮ ಕೈಗೊಂಡಿದೆ ಎಂದು ಹೇಳಿದರು.

ಮೇ 5ರಂದು ವಿಧಾನ ಸಭಾ ಚುನಾವಣೆ ನಡೆದ ಮರುದಿನವೇ ಬಾಂಗ್ಲಾದೇಶದ ವಿದೇಶಾಂಗ ಸಚಿವ ಖಲೀಲುರ್ ರೆಹಮಾನ್ ಅವರು ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಬಳಿಕ ಭಾರತದಿಂದ ಅಕ್ರಮವಾಗಿ ಬರುವವರನ್ನು ತಡೆಯಲು ಢಾಕಾ ಸೂಕ್ತ ಕ್ರಮಗಳನ್ನ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

2025ರ ಫೆಬ್ರವರಿಯಲ್ಲಿ ಭಾರತದ ಸುಪ್ರೀಂ ಕೋರ್ಟ್ ಈ ಕುರಿತು ಆದೇಶ ನೀಡಿದ್ದು, ಅಸ್ಸಾಂ ರಾಜ್ಯದಲ್ಲಿರುವ ವಲಸಿಗರನ್ನು ಗಡೀಪಾರು ಮಾಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ನಿರ್ದೇಶಿಸಿತ್ತು.

ಈ ಕುರಿತು ಗುರುವಾರ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಅಕ್ರಮ ಬಾಂಗ್ಲಾದೇಶಿಗಳನ್ನು ವಾಪಸ್ ಕಳುಹಿಸಲು ಪರಿಶೀಲಿಸುವ ಪ್ರಕ್ರಿಯೆಯನ್ನು ನವದೆಹಲಿಯು ವೇಗಗೊಳಿಸುತ್ತದೆ. ಇದಕ್ಕೆ ಸ್ಪಷ್ಟವಾಗಿ ಬಾಂಗ್ಲಾದೇಶದ ಸಹಕಾರದ ಅಗತ್ಯವಿದೆ ಎಂದು ಹೇಳಿದರು. ಇದರ ಬಳಿಕ ಢಾಕಾ ಕೂಡ ಗಡಿಯಲ್ಲಿ ಕಟ್ಟೆಚ್ಚರ ವಹಿಸಲು ಬಿಜಿಬಿಗೆ ಸೂಚಿಸಿದೆ.

ಚುನಾವಣೆಗೆ ಮೊದಲೇ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಪಶ್ಚಿಮ ಬಂಗಾಳದ ಎಲ್‌ಒಪಿ ಸುವೇಂದು ಅಧಿಕಾರಿ ಸೇರಿದಂತೆ ಹಲವು ಬಿಜೆಪಿ ನಾಯಕರು ಭಾರತಕ್ಕೆ ಬಂದಿರುವ ಅಕ್ರಮ ಬಾಂಗ್ಲಾದೇಶಿಗಳ ದೊಡ್ಡ ಪ್ರಮಾಣದ ವಲಸೆಯ ವಿಷಯದ ಕುರಿತು ಧ್ವನಿ ಎತ್ತಿದ್ದರು. ಇದರಿಂದ ಈಗ ಬಾಂಗ್ಲಾದೇಶಕ್ಕೆ ವಲಸಿಗರು ಬರುವ ಮರಳಿ ಬರುವ ಆತಂಕ ಹೆಚ್ಚಾಗಿದೆ .ಬಿಎಸ್‍ವೈ ಅದ್ಧೂರಿ ಪುರಪ್ರವೇಶ; ಪುಷ್ಪವೃಷ್ಟಿ, ಪೂರ್ಣಕುಂಭ ಸ್ವಾಗತ, ನೇಗಿಲ ಪ್ರತಿಕೃತಿ ಜತೆ ಭಾಗಿಯಾದ ರೈತರು

ಒಬ್ಬ ವ್ಯಕ್ತಿ ಭಾರತೀಯನಲ್ಲ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಭಾವಿಸಿದರೆ ಅವರನ್ನು ಹೊರಹಾಕುವ ಆದೇಶವನ್ನು ಹೊರಡಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದ ಬಳಿಕ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆದ್ದ ಬಳಿಕ ಇದು ತೀವ್ರಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಬಾಂಗ್ಲಾದೇಶದಲ್ಲಿ ಈಗ ಭಯ ಉಂಟಾಗಿದೆ.