ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕದನ ವಿರಾಮ ಮಾತುಕತೆಗಾಗಿ ಇರಾನ್ ಅಮೆರಿಕವನ್ನು ಪಾಕಿಸ್ತಾನಕ್ಕೆ ಆಹ್ವಾನಿಸಿದ ಪ್ರಧಾನಿ ಶೆಹಬಾಜ್ ಷರೀಫ್

ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮದ ಮಾತುಕತೆಗಳಿಗಾಗಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಅವರನ್ನು ಇಸ್ಲಾಮಾಬಾದ್‌ಗೆ ಆಹ್ವಾನಿಸಿದ್ದಾರೆ. ಯುನೈಟೆಡ್ ಸ್ಟೇಟ್ಸ್, ಇರಾನ್ ಮತ್ತು ಅವರ ಎಲ್ಲಾ ಮಿತ್ರರಾಷ್ಟ್ರಗಳು 15 ದಿನಗಳ ಕದನ ವಿರಾಮಕ್ಕೆ ಒಪ್ಪಿಕೊಂಡ ಬಳಿಕ ಈ ಬೆಳವಣಿಗೆ ನಡೆದಿದೆ.

ಮಾತುಕತೆಗಾಗಿ ಅಮೆರಿಕ, ಇರಾನ್‌ಗೆ ಪಾಕಿಸ್ತಾನ ಅಹ್ವಾನ

ಸಂಗ್ರಹ ಚಿತ್ರ -

ಇಸ್ಲಾಮಾಬಾದ್: ಅಮೆರಿಕ (America), ಇಸ್ರೇಲ್ (Israel), ಇರಾನ್ (iran), ಲೆಬನಾನ್ (Lebanon) ಸೇರಿದಂತೆ ಅವರ ಎಲ್ಲಾ ಮಿತ್ರರಾಷ್ಟ್ರಗಳು ತಕ್ಷಣದ ಕದನ ವಿರಾಮಕ್ಕೆ (Ceasefire Deal) ಒಪ್ಪಿಕೊಂಡಿವೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ (Pakistan Prime Minister Shehbaz Sharif) ಘೋಷಿಸಿದರು. ಹೀಗಾಗಿ ಮುಂದಿನ ಮಾತುಕತೆಗಳಿಗಾಗಿ ಅಮೆರಿಕ ಮತ್ತು ಇರಾನ್ ಅನ್ನು ಇಸ್ಲಾಮಾಬಾದ್‌ಗೆ ಆಹ್ವಾನಿಸುತ್ತಿರುವುದಾಗಿ ತಿಳಿಸಿದರು. ಇಸ್ರೇಲ್, ಯುಎಸ್ ಸೇನಾ ಪಡೆಯು ಇರಾನ್ ಮೇಲೆ ದಾಳಿ ನಡೆಸಲು ಪ್ರಾರಂಭಿಸಿದ ಬಳಿಕ ಎರಡು ಪಕ್ಷಗಳ ನಡುವೆ ರಾಜತಾಂತ್ರಿಕ ಪರಿಹಾರ ಕೈಗೊಳ್ಳಲು ಪಾಕಿಸ್ತಾನ ಪ್ರಮುಖ ಸಂಧಾನಕಾರ ಪಾತ್ರವನ್ನು ನಿರ್ವಹಿಸುತ್ತಿದೆ.

ಕದನ ವಿರಾಮದ ಕುರಿತು ಹೇಳಿಕೆ ನೀಡಿದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು, ಎರಡು ಪಕ್ಷಗಳ ನಡುವಿನ ಎಲ್ಲಾ ವಿವಾದಗಳನ್ನು ಬಗೆ ಹರಿಸಲು ಮತ್ತು ನಿರ್ಣಾಯಕ ಒಪ್ಪಂದಕ್ಕಾಗಿ ಮತ್ತಷ್ಟು ಮಾತುಕತೆ ನಡೆಸಲು ಟೆಹ್ರಾನ್ ಮತ್ತು ವಾಷಿಂಗ್ಟನ್‌ನಿಂದ ನಿಯೋಗಗಳನ್ನು ಏಪ್ರಿಲ್ 10ರಂದು ಇಸ್ಲಾಮಾಬಾದ್‌ಗೆ ಆಹ್ವಾನಿಸಿ ತಿಳಿಸಿದ್ದಾರೆ.

US- Iran War: ಪಾಕಿಸ್ತಾನ ಮಧ್ಯಸ್ಥಿಕೆ, ಅಮೆರಿಕ-ಇರಾನ್‌ ಮಧ್ಯೆ 2 ವಾರಗಳ ಕದನ ವಿರಾಮ ಘೋಷಣೆ

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಾವು ಅತ್ಯಂತ ನಮ್ರತೆಯಿಂದ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಮತ್ತು ಅವರ ಮಿತ್ರರಾಷ್ಟ್ರಗಳು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಇದನ್ನು ಸ್ವಾಗತಿಸುವುದಾಗಿ ಹೇಳಿದ ಅವರು ಎರಡೂ ಪಕ್ಷಗಳ ನಾಯಕರಿಗೆ ಆಳವಾದ ಕೃತಜ್ಞತೆಯನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ.



ಈ ಕುರಿತು ಟ್ರೂತ್ ಸೋಶಿಯಲ್ ಪೋಸ್ಟ್‌ ಮಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದ್ವಿಪಕ್ಷೀಯ ಕದನ ವಿರಾಮವನ್ನು ಘೋಷಿಸಿ ಪಾಕಿಸ್ತಾನದ ನಾಯಕರೊಂದಿಗೆ ಮಾತನಾಡಿದ್ದೇನೆ. ಇರಾನ್‌ನ 10 ಅಂಶಗಳ ಪ್ರಸ್ತಾಪವು ಮಾತುಕತೆಗೆ ಕಾರ್ಯಸಾಧ್ಯವಾದ ಆಧಾರವಾಗಿದೆ ಎಂದು ತಿಳಿಸಿದರು.

ತಮ್ಮ ಬೇಡಿಕೆಗಳು ಈಡೇರಿಸದಿದ್ದರೆ ಇಂದು ರಾತ್ರಿ ಸಂಪೂರ್ಣ ಇರಾನ್ ನಾಗರಿಕತೆಯು ಸಾಯುತ್ತದೆ ಎಂದು ಎಚ್ಚರಿಕೆ ನೀಡಿದ ಬಳಿಕ ಅವಾರು ಮಾಡಿರುವ ಈ ಹೊಸ ಪೋಸ್ಟ್ ನಲ್ಲಿ ಜಾಗತಿಕ ತೈಲ ಸಾಗಣೆಯ ಐದನೇ ಒಂದು ಭಾಗವನ್ನು ನಿರ್ವಹಿಸುವ ಜಲಸಂಧಿಯ ಮೂಲಕ ತೈಲ ಮತ್ತು ಅನಿಲ ಪೂರೈಕೆಯ ದಿಗ್ಬಂಧನವನ್ನು ವಿರಾಮಗೊಳಿಸುವ ಇರಾನ್‌ನ ಒಪ್ಪಂದಕ್ಕೆ ಇದು ಒಳಪಟ್ಟಿರುತ್ತದೆ ಎಂದು ತಿಳಿಸಿದ್ದಾರೆ.

ಅಮೆರಿಕದ ಡೆಡ್‌ಲೈನ್‌ ಕೊನೆಗೊಳ್ಳುತ್ತಿದ್ದರೂ ಬೆದರದ ಇರಾನ್‌; ಸೇತುವೆ, ವಿದ್ಯುತ್‌ ಸ್ಥಾವರದ ಸುತ್ತ ʼಮಾನವ ಕೋಟೆʼ ನಿರ್ಮಾಣ

ಇರಾನ್‌ನ ಸರ್ವೋಚ್ಚ ಭದ್ರತಾ ಮಂಡಳಿಯು ಪಾಕಿಸ್ತಾನದ ಮೂಲಕ ಯುನೈಟೆಡ್ ಸ್ಟೇಟ್ಸ್‌ಗೆ ತನ್ನ 10 ಅಂಶಗಳ ಪ್ರಸ್ತಾವನೆಯನ್ನು ಸಲ್ಲಿಸಿದೆ. ಇದರಲ್ಲಿ ಇರಾನ್ ಸಶಸ್ತ್ರ ಪಡೆಗಳ ಸಮನ್ವಯ ನಡೆಸಿ ಹೊರ್ಮುಜ್ ಜಲ ಮಾರ್ಗದ ಮೂಲಕ ನಿಯಂತ್ರಿತ ರೂಪದಲ್ಲಿ ಸರಕು ಸಾಗಣೆ, ಇರಾನ್ ಮತ್ತು ಮಿತ್ರ ಗುಂಪುಗಳ ವಿರುದ್ಧದ ಯುದ್ಧವನ್ನು ಕೊನೆಗೊಳಿಸುವುದು ಮತ್ತು ಎಲ್ಲಾ ಪ್ರಾದೇಶಿಕ ನೆಲೆಗಳಿಂದ ಅಮೆರಿಕದ ಯುದ್ಧ ಪಡೆಗಳನ್ನು ಹಿಂತೆಗೆದುಕೊಳ್ಳುವುದು ಸೇರಿವೆ. ಅಲ್ಲದೇ ಇರಾನ್ ಮೇಲಿನ ಎಲ್ಲ ನಿರ್ಬಂಧಗಳನ್ನು ತೆಗೆದುಹಾಕುವುದು, ಇರಾನ್‌ಗೆ ಸಂಪೂರ್ಣ ಪರಿಹಾರವನ್ನು ಪಾವತಿಸುವುದು ಮತ್ತು ವಶಕ್ಕೆ ಪಡೆದಿರುವ ಇರಾನಿನ ಸ್ವತ್ತುಗಳನ್ನು ಮರಳಿ ಒಪ್ಪಿಸುವುದು ಸೇರಿವೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.