17 ವರ್ಷಗಳ ಬಳಿಕ ಬಾಂಗ್ಲಾಕ್ಕೆ ಮರಳಿದ ತಾರಿಕ್ ರೆಹಮಾನ್; ನಾಯಕನನ್ನು ನೋಡಲು ಮುಗಿ ಬಿದ್ದ ಜನ
ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ಹಂಗಾಮಿ ಅಧ್ಯಕ್ಷ ತಾರಿಕ್ ರೆಹಮಾನ್ 17 ವರ್ಷಗಳಿಗೂ ಹೆಚ್ಚು ಕಾಲದ ಸ್ವಯಂ ಗಡಿಪಾರು ಮುಗಿಸಿ ಇಂದು ಬಾಂಗ್ಲಾದೇಶಕ್ಕೆ ಮರಳಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರನಾಗಿರುವ ರೆಹಮಾನ್ ಮುಂಬರುವ ಫೆಬ್ರವರಿ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಹುದ್ದೆಗೆ ಸ್ಪರ್ಧೆ ಮಾಡಲಿದ್ದಾರೆ.
ಸಾಂದರ್ಭಿಕ ಚಿತ್ರ -
ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ಹಂಗಾಮಿ ಅಧ್ಯಕ್ಷ ತಾರಿಕ್ ರೆಹಮಾನ್ 17 ವರ್ಷಗಳಿಗೂ ಹೆಚ್ಚು ಕಾಲದ ಸ್ವಯಂ ಗಡಿಪಾರು ಮುಗಿಸಿ ಇಂದು ಬಾಂಗ್ಲಾದೇಶಕ್ಕೆ ಮರಳಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರನಾಗಿರುವ ರೆಹಮಾನ್ ಮುಂಬರುವ ಫೆಬ್ರವರಿ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಹುದ್ದೆಗೆ ಸ್ಪರ್ಧೆ ಮಾಡಲಿದ್ದಾರೆ. ಯುಕೆಯಿಂದ ಪತ್ನಿ ಜುಬೈದಾ ರೆಹಮಾನ್ ಮತ್ತು ಮಗಳು ಜೈಮಾ ರೆಹಮಾನ್ ಅವರೊಂದಿಗೆ ಹಿಂದಿರುಗಿದ ರೆಹಮಾನ್ ಅವರನ್ನು ಸ್ವಾಗತಿಸಲು ಬಿಎನ್‌ಪಿ ಬೆಂಬಲಿಗರು ಮತ್ತು ಪಕ್ಷದ ಮುಖಂಡರು ಬನಾನಿ ವಿಮಾನ ನಿಲ್ದಾಣ ರಸ್ತೆಯಿಂದ ಢಾಕಾ ವಿಮಾನ ನಿಲ್ದಾಣ ಕಾಲ್ನಡಿಗೆಯಲ್ಲಿ ತೆರಳಿದ್ದರು.
ರೆಹಮಾನ್ ಅವರನ್ನು ಬರ ಮಾಡಿಕೊಳ್ಳಲು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ರಸ್ತೆಯ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತಿದ್ದರು. ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ಅಧ್ಯಕ್ಷ ತಾರಿಕ್ ರೆಹಮಾನ್ ತಮ್ಮ ಭಾಷಣದಲ್ಲಿ, ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರವನ್ನು ಎತ್ತಿ ತೋರಿಸಿದರು. ನವ ಬಾಂಗ್ಲಾದೇಶ ನಿರ್ಮಾಣದಲ್ಲಿ ಯುವ ಪೀಳಿಗೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅವರು ಒತ್ತಿ ಹೇಳಿದರು.
BNP leader Tarique Rahman leaving the Dhaka airport premises in Bangladesh after arriving to a massive welcome in the country after 17 years of exile from UK. pic.twitter.com/dNXCWEoS0q
— Aditya Raj Kaul (@AdityaRajKaul) December 25, 2025
ನಡೆಯುತ್ತಿರುವ ದೌರ್ಜನ್ಯ ಘಟನೆಗಳ ಕುರಿತು ಮಾತನಾಡಿದ ತಾರಿಕ್ ರೆಹಮಾನ್, ತಮ್ಮ ಭಾಷಣದಲ್ಲಿ, ಎಲ್ಲಾ ಸಮುದಾಯಗಳು ಮತ್ತು ಜನಾಂಗಗಳ ಜನರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುವ ಎಲ್ಲರನ್ನೂ ಒಳಗೊಂಡ ಮತ್ತು ಸಹಿಷ್ಣು ಬಾಂಗ್ಲಾದೇಶಕ್ಕೆ ಪ್ರತಿಜ್ಞೆ ಮಾಡಿದರು. ಮುಸ್ಲಿಮರು, ಬೌದ್ಧರು, ಕ್ರಿಶ್ಚಿಯನ್ನರು ಮತ್ತು ಹಿಂದೂಗಳ ನಡುವೆ ಸ್ಥಿರವಾದ ಸಂಬಂಧಗಳನ್ನು ನಿರ್ಮಿಸುವ ಬಗ್ಗೆ ಅವರು ಮಾತನಾಡಿದರು.
ತಾರಿಕ್ ರೆಹಮಾನ್, ಕೆಲವು ದಿನಗಳ ಹಿಂದೆ ಹತ್ಯೆಗೀಡಾದ ಉಸ್ಮಾನ್ ಹಾದಿಯನ್ನು ನೆನಪಿಸಿಕೊಂಡರು. ಮೃತ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದ ಅವರು, ಹಾದಿ ಅವರಿಗೆ ಪ್ರಜಾಪ್ರಭುತ್ವ ಬಾಂಗ್ಲಾದೇಶದ ಕನಸು ಇತ್ತು ಮತ್ತು ಬಿಎನ್‌ಪಿ ಅವರ ಕನಸನ್ನು ನನಸಾಗಿಸಲು ಕೆಲಸ ಮಾಡುತ್ತದೆ ಎಂದು ಹೇಳಿದರು. ತಮ್ಮ ಭಾಷಣದಲ್ಲಿ, ರೆಹಮಾನ್ 1971 ರ ವಿಮೋಚನಾ ಚಳವಳಿಗೆ ಗೌರವ ಸಲ್ಲಿಸಿದರು. ಜೊತೆಗೆ, ಜುಲೈ 2024 ರ ದಂಗೆಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಎಲ್ಲಾ ಸಮುದಾಯಗಳು ಮತ್ತು ಜನಾಂಗಗಳ ಜನರ ಭಾಗವಹಿಸುವಿಕೆಯೊಂದಿಗೆ ಎಲ್ಲರನ್ನೂ ಒಳಗೊಂಡ ಬಾಂಗ್ಲಾದೇಶವನ್ನು ನಿರ್ಮಿಸುವ ಕರೆಯನ್ನು ಅವರು ನೀಡಿದ್ದಾರೆ.