ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಿಸಿಯೂಟ ಯೋಜನೆ 'ಪಿಎಂ ಪೋಷಣ್' ಅನುಷ್ಠಾನಗೊಳಿಸುತ್ತಿರುವ ಅಕ್ಷಯ ಪಾತ್ರೆ ಸಂಸ್ಥೆಯ ಬಗ್ಗೆ ಹೆಮ್ಮೆ ಇದೆ: ನವೀನ ನೀರದ ದಾಸ

ಅಕ್ಷಯ ಪಾತ್ರವು ಮೂಲತಃ ಯಶಸ್ವಿ ಹಾಗೂ ಕಾಲಪರೀಕ್ಷೆಯಲ್ಲಿ ಸಾಬೀತಾಗಿರುವ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ PPP(ಪಬ್ಲಿಕ್ ಪ್ರೈವೇಟ್ ಪಾರ್ಟ್ನರ್ಶಿಪ್) ಮಾದರಿಯಾಗಿದೆ. ಲಾಭದ ಉದ್ದೇಶ ಹೊಂದಿರುವ ಮತ್ತು ಲಾಭರಹಿತ ವಲಯಗಳ ಶ್ರೇಷ್ಠ ಪರಿಣತರು ಹಾಗೂ ಸರ್ಕಾರವು ಒಗ್ಗೂಡಿ, ಹಸಿವು ಎಂಬುದು ಪರಿಹರಿಸಬಹುದಾದ ಸಮಸ್ಯೆ ಎಂಬ ಸಾಮಾನ್ಯ ನಂಬಿಕೆಯಿಂದ ಕಾರ್ಯನಿರ್ವಹಿಸುತ್ತಿವೆ.

ವಿಶ್ವಸಂಸ್ಥೆಯ ಅಭಿವೃದ್ಧಿ ಸಂವಾದಗಳಲ್ಲಿ ಭಾಗವಹಿಸಿದ ಅಕ್ಷಯ ಪಾತ್ರ ಫೌಂಡೇಶನ್

-

Profile
Ashok Nayak Nov 25, 2026 4:36 PM

ಜಿನೀವಾ: ಜಿನೀವಾದ ಪಲೈಸ್ ದೆ ನೇಷನ್ಸ್‌ನಲ್ಲಿ ನ.24ರಂದು ನಡೆದ ಅಭಿವೃದ್ಧಿ ಸಂವಾದಗಳ ಅಂಗವಾಗಿ ಆಯೋಜಿಸಲಾಗಿದ್ದ ರಿಸ್ಪಾನ್ಸಿಬಿಲಿಟಿ ಬೈ ಡಿಸೈನ್: ಪ್ರಾಮಿಸಿಂಗ್ ಬಿಸಿನೆಸ್ ಪ್ರಾಕ್ಟಿಸಸ್ ಎಂಬ ಶೀರ್ಷಿಕೆಯ ಪ್ಯಾನಲ್ ಚರ್ಚೆಯಲ್ಲಿ ಅಕ್ಷಯ ಪಾತ್ರ ಫೌಂಡೇಶನ್(Akshay Patra Foundation) ಭಾಗವಹಿಸಿತು.

ಅಭಿವೃದ್ಧಿಯ ಹಕ್ಕಿನ ಕುರಿತ ವಿಶ್ವಸಂಸ್ಥೆಯ ವಿಶೇಷ ವರದಿಗಾರ ಪ್ರೊ.ಸೂರ್ಯ ದೇವಾ ಅವರು ಈ ಸಂವಾದ ಆಯೋಜಿಸಿದ್ದರು. ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಮಾನವ ಹಕ್ಕುಗಳ ವೇದಿಕೆಯ ಅಂಗವಾಗಿ ಈ ಚರ್ಚೆ ನಡೆಯಿತು.

ಸಂಸ್ಥೆಗಳು ತಮ್ಮ ಉದ್ಯಮ ಮಾದರಿಗಳು, ಆಡಳಿತ ವ್ಯವಸ್ಥೆ, ಪ್ರೋತ್ಸಾಹಕ ಕ್ರಮಗಳು ಹಾಗೂ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಜನರ ಮತ್ತು ಪರಿಸರದ ಬಗೆಗಿನ ಜವಾಬ್ದಾರಿಯನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬುದರ ಕುರಿತು ಈ ಚರ್ಚೆ ಕೇಂದ್ರೀಕೃತವಾಗಿತ್ತು.

ಇದನ್ನೂ ಓದಿ: Akshay Mashelkar: ಶೈಕ್ಷಣಿಕ ಸಂಶೋಧನೆ; ಶಿರಸಿಯ ಯುವ ವಿಜ್ಞಾನಿ ಅಕ್ಷಯ್‌ ಮಶೇಲ್ಕರ್‌ ರಾಷ್ಟ್ರಮಟ್ಟದ ಗೌರವಕ್ಕೆ ಆಯ್ಕೆ

ಈ ಸಂವಾದದಲ್ಲಿ ಅಕ್ಷಯ ಪಾತ್ರ ಫೌಂಡೇಶನ್‌ನ ಕಾರ್ಯತಂತ್ರ ಮತ್ತು ಅಂತರರಾಷ್ಟ್ರೀಯ ಕಾರ್ಯನಿರ್ವಾಹಕ ನಿರ್ದೇಶಕರಾದ ನವೀನ ನೀರದ ದಾಸರು ಮಾತನಾಡುತ್ತಾ ಹೀಗೆ ಹೇಳಿದರು:

“ಶಾಲಾ ಮಕ್ಕಳಿಗೆ ಊಟ ಒದಗಿಸುವುದು ಒಂದು ವ್ಯವಸ್ಥಿತ ಮತ್ತು ಕಾರ್ಯತಂತ್ರದ ಸಾಮಾಜಿಕ ಮಧ್ಯಸ್ಥಿಕೆಯಾಗಿದೆ. ಇದು ಮಕ್ಕಳ ಬೆಳವಣಿಗೆಯ ಮೂಲಕ ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯನ್ನು ಒದಗಿಸುವುದರ ಜೊತೆಗೆ, ಸಾಮಾಜಿಕ ಸುರಕ್ಷತಾ ಕವಚವಾಗಿಯೂ ಕಾರ್ಯ ನಿರ್ವಹಿಸಬಲ್ಲದು. ಕಳೆದ 26 ವರ್ಷಗಳಿಂದ ಮಹತ್ವಾಕಾಂಕ್ಷೆಯ ಪಿಎಂ ಪೋಷಣ್ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಅಕ್ಷಯ ಪಾತ್ರೆ ಸಂಸ್ಥೆಯ ಬಗ್ಗೆ ನಮಗೆ ಹೆಮ್ಮೆ ಇದೆ.

akshay Patra Foundation2

ಅಕ್ಷಯ ಪಾತ್ರವು ಮೂಲತಃ ಯಶಸ್ವಿ ಹಾಗೂ ಕಾಲಪರೀಕ್ಷೆಯಲ್ಲಿ ಸಾಬೀತಾಗಿರುವ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ PPP(ಪಬ್ಲಿಕ್ ಪ್ರೈವೇಟ್ ಪಾರ್ಟ್ನರ್ಶಿಪ್) ಮಾದರಿಯಾಗಿದೆ. ಲಾಭದ ಉದ್ದೇಶ ಹೊಂದಿರುವ ಮತ್ತು ಲಾಭರಹಿತ ವಲಯಗಳ ಶ್ರೇಷ್ಠ ಪರಿಣತರು ಹಾಗೂ ಸರ್ಕಾರವು ಒಗ್ಗೂಡಿ, ಹಸಿವು ಎಂಬುದು ಪರಿಹರಿಸಬಹುದಾದ ಸಮಸ್ಯೆ ಎಂಬ ಸಾಮಾನ್ಯ ನಂಬಿಕೆಯಿಂದ ಕಾರ್ಯನಿರ್ವಹಿಸುತ್ತಿವೆ. ಮಗುವಿಗೆ ನೀಡುವ ಪ್ರತಿಯೊಂದು ಊಟವೂ ಸುಸ್ಥಿರ ಭವಿಷ್ಯಕ್ಕಾಗಿ ಮಾಡುವ ಹೂಡಿಕೆ ಎಂಬುದು ನಮ್ಮ ನಂಬಿಕೆ.

ವಿವಿಧ ವಲಯಗಳ ನಡುವಿನ ಪರಸ್ಪರ ಕಲಿಕೆಯ ಮಹತ್ವ ಒತ್ತಿ ಹೇಳುತ್ತಾ, “ವಿವಿಧ ವಲಯ ಗಳಲ್ಲಿ, ಎಲ್ಲ ಗಾತ್ರದ ಹಲವಾರು ಉತ್ತಮ ಕಂಪನಿಗಳು ಮಾನವೀಯ ಮತ್ತು ಪರಿಸರ ಸಂಬಂಧಿತ ಅಂಶಗಳನ್ನು ತಮ್ಮ ಉದ್ಯಮ ಮಾದರಿಗಳಲ್ಲಿ ಯಶಸ್ವಿಯಾಗಿ ಅಳವಡಿಸಿ ಕೊಂಡು, ಅದೇ ಸಮಯದಲ್ಲಿ ಲಾಭದಾಯಕವಾಗಿಯೂ ಕಾರ್ಯನಿರ್ವಹಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ ಎಂದರು.

ಇಂತಹ ಯಶಸ್ವಿ ಮತ್ತು ಸಾಬೀತಾದ ಮಾದರಿ ಸಂಸ್ಥೆಗಳು ಇತರರಿಗೆ ಆದರ್ಶವಾಗಬೇಕು ಎಂಬುದು ನನ್ನ ಅಭಿಪ್ರಾಯ. ಈ ‘ಪರಿಕಲ್ಪನೆಯ ಪ್ರಾಯೋಗಿಕ ಸಾಬೀತು’ ಅಧ್ಯಯನಗಳನ್ನು ವ್ಯಾಪಕವಾಗಿ ಪ್ರಚಾರಗೊಳಿಸಬೇಕು. ಇದರಿಂದ ಇತರ ಸಂಸ್ಥೆಗಳಲ್ಲಿಯೂ ಜಾಗೃತಿ ಮೂಡಿಸುವುದರ ಜೊತೆಗೆ, ತಮ್ಮ ಉದ್ಯಮ ಮಾದರಿಗಳಲ್ಲಿ ಮಾನವ ಹಕ್ಕುಗಳು ಮತ್ತು ಪರಿಸರ ಸಂರಕ್ಷಣೆಯ ಅಂಶಗಳನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬುದರ ಕುರಿತು ಅರಿವು ಮತ್ತು ತಿಳುವಳಿಕೆ ಬೆಳೆಸಲು ಸಾಧ್ಯವಾಗುತ್ತದೆ.”