ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇರಾನ್ ಮೇಲೆ ಜೋರ್ಡಾನ್ ಪ್ರತೀಕಾರದ ದಾಳಿ ಆರಂಭಿಸಿದ ಅಮೆರಿಕ; ಹೊರ್ಮುಜ್‌ನಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚಳ

ಜೋರ್ಡಾನ್ ಮೇಲೆ ಇರಾನ್ ದಾಳಿ ನಡೆಸಿದ ಬಳಿಕ ಪ್ರತೀಕಾರವಾಗಿ ಅಮೆರಿಕವು ಇರಾನ್ ಮೇಲೆ ಡ್ರೋನ್ ದಾಳಿಯನ್ನು ನಡೆಸಿದೆ. ಇದು ಹೊರ್ಮುಜ್ ಸಲಸಂಧಿಯಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದ್ದು, ಭೀಕರ ಯುದ್ಧದ ಆತಂಕವನ್ನು ಉಂಟು ಮಾಡಿದೆ. ಜೋರ್ಡಾನ್‌ನಲ್ಲಿನ ಯುಎಸ್ ಮಿಲಿಟರಿ ನೆಲೆಗಳ ಮೇಲೆ ಇರಾನ್ ಬುಧವಾರ ದಾಳಿ ನಡೆಸಿದ ಬಳಿಕ ಅಮೆರಿಕ ಸೇನಾ ಪಡೆಗಳು ಪ್ರತೀಕಾರದ ದಾಳಿಯನ್ನು ಪ್ರಾರಂಭಿಸಿವೆ.

ಇರಾನ್ ಮೇಲೆ ಅಮೆರಿಕ ದಾಳಿ: ಭೀಕರ ಯುದ್ಧದ ಆತಂಕ

ಸಂಗ್ರಹ ಚಿತ್ರ -

ವಾಷಿಂಗ್ಟನ್: ಜೋರ್ಡಾನ್ (Jordan) ಮೇಲೆ ಇರಾನ್ ದಾಳಿ (Iran attack) ನಡೆಸಿದಿರುವುದಕ್ಕೆ ಪ್ರತೀಕಾರವಾಗಿ ಅಮೆರಿಕ ಸೇನಾ ಪಡೆಯು (American forces) ಇರಾನ್ ಮೇಲೆ ಪ್ರತೀಕಾರದ ದಾಳಿಯನ್ನು ಪ್ರಾರಂಭಿಸಿವೆ. ಜೋರ್ಡಾನ್‌ನಲ್ಲಿನ ಯುಎಸ್ ಮಿಲಿಟರಿ ನೆಲೆಗಳ ಮೇಲೆ ಬುಧವಾರ ಇರಾನ್ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕದ ಸೇನಾ ಪಡೆಗಳು ಸೌದಿ ಅರೇಬಿಯಾದೊಂದಿಗೆ ಸೇರಿಕೊಂಡು ಇರಾಕ್‌ನಲ್ಲಿನ ಇರಾನ್ ಬೆಂಬಲಿತ ಮಿಲಿಟಿಯಾಗಳ ಮೇಲೆ ದಾಳಿ ನಡೆಸಿದೆ. ಇದರಿಂದ ಸುಮಾರು 20 ಗಾರ್ಡ್ ಗಳು, 6 ಇರಾನಿನ ಸಲಹೆಗಾರರು ಸಾವನ್ನಪ್ಪಿದ್ದಾರೆ. ಇದು ಈಗ ಹೊರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ.

ಇರಾನ್ ಮತ್ತು ಯುಎಸ್ ನಡುವಿನ ಸಂಘರ್ಷವು ಈಗ ಇರಾಕ್ ಹೊರತಾಗಿ ಈಜಿಪ್ಟ್‌ಗೂ ವ್ಯಾಪಿಸಿದೆ. ಈಜಿಪ್ಟ್ ನ ಡಾಮಿಯೆಟ್ಟಾ ಬಂದರಿನಲ್ಲಿ ಎರಡು ನೈಸರ್ಗಿಕ ಅನಿಲ ಹಡಗುಗಳ ಮೇಲೆ ಡ್ರೋನ್ ದಾಳಿ ನಡೆದಿದೆ. ಸಂಘರ್ಷವು ವಿಸ್ತರಿಸುತ್ತಿರುವುದರಿಂದ ಜಾಗತಿಕ ಮಟ್ಟದಲ್ಲಿ ತೈಲ ಬೆಲೆಗಳು ಏರಿಕೆಯಾಗಿದ್ದು, ಇದು ಇನ್ನಷ್ಟು ಹೆಚ್ಚಿಸುವ ಆತಂಕ ಉಂಟು ಮಾಡಿದೆ. ಇದು ಈಗ ಕದನ ವಿರಾಮ ಮಾತುಕತೆಗಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಪ್ರತಿಭಟನೆ ವೇಳೆ ರಷ್ಯಾದಲ್ಲಿದ್ದರೂ ಬಿಹಾರದ ಯುವಕನ ಹೆಸರಲ್ಲಿ ಪ್ರಕರಣ: ಪೊಲೀಸರಿಂದ ನಡೆಯಿತಾ ಯಡವಟ್ಟು?

ಜೋರ್ಡಾನ್ ಮೇಲೆ ಇರಾನ್ ದಾಳಿ ನಡೆಸಿದ ಬಳಿಕ ಪ್ರತಿಕ್ರಿಯೆ ನೀಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್‌ಗೆ ತುಂಬಾ ಕಠಿಣ ಹೊಡೆತ ಬೀಳುತ್ತದೆ ಎಂದರು. ಓವಲ್ ಆಫೀಸ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಇದು ಸ್ವಲ್ಪ ಹೆಚ್ಚಾಗಿದೆ. ಈಗ ನಾವು ಅವರನ್ನು ಹೊಡೆಯುವ ಸರದಿ ಬಂದಿದೆ ಎಂದು ತಿಳಿಸಿದರು.

ಹೊರ್ಮುಜ್ ಜಲಸಂಧಿಯಲ್ಲಿರುವ ಕೆಶ್ಮ್ ದ್ವೀಪದಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ವಾಯುವ್ಯದಲ್ಲಿರುವ ಖುಜೆಸ್ತಾನ್ ಪ್ರಾಂತ್ಯದಲ್ಲೂ ಸ್ಫೋಟಗಳಾಗಿವೆ ಎಂದು ಇರಾನ್ ಮಾಧ್ಯಮಗಳು ತಿಳಿಸಿವೆ.

ಈಜಿಪ್ಟ್‌ನ ಡಾಮಿಯೆಟ್ಟಾ ಬಂದರಿನ ಮೇಲೆ ಡ್ರೋನ್ ದಾಳಿ ನಡೆದಿದ್ದು, ಯುಎಸ್ ಒಡೆತನದ ತೇಲುವ ಸಂಗ್ರಹಣಾ ಸೌಲಭ್ಯ ಮತ್ತು ಗ್ರೀಕ್ ಒಡೆತನದ ಟ್ಯಾಂಕರ್ ಬೆಂಕಿಗೆ ಆಹುತಿಯಾಗಿದೆ. ಈ ದಾಳಿ ಯಾರು ಮಾಡಿದ್ದು ಎಂಬುದು ಸ್ಪಷ್ಟವಾಗಿಲ್ಲ. ಯಾವುದೇ ಸಾವುನೋವಿನ ವರದಿಯಾಗಿಲ್ಲ ಎಂದು ಬ್ರಿಟಿಷ್ ಕಡಲ ಭದ್ರತಾ ಸಂಸ್ಥೆ ಆಂಬ್ರೇ ತಿಳಿಸಿದೆ.

ಕಳೆದ ಮೇ ತಿಂಗಳಲ್ಲಿ ಪ್ರಾರಂಭವಾಗಿದ್ದ ಇರಾನ್ ಮತ್ತು ಯುಎಸ್ ನಡುವಿನ ಸಂಘರ್ಷವು ಮಾತುಕತೆಯ ಕೊನೆಯ ಹಂತವನ್ನು ತಲುಪಿ ಈಗ ಮತ್ತೊಮ್ಮೆ ಉದ್ವಿಗ್ನಗೊಂಡಿದೆ. ಇದು ಈಗ ಸಂಪೂರ್ಣ ಯುದ್ಧವಾಗುವ ಕಳವಳವನ್ನು ಹೆಚ್ಚಿಸಿದೆ. ಈ ಎರಡು ರಾಷ್ಟ್ರಗಳ ನಡುವಿನ ಸಂಘರ್ಷ ಜಾಗತಿಕ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮವನ್ನು ಉಂಟು ಮಾಡಿದೆ. ಅಮೆರಿಕವು ಯುದ್ಧ ಕೊನೆಗೊಳಿಸಲು ಕಾತರವಾಗಿತ್ತು. ಆದರೆ ಇರಾನ್ ಹೊರ್ಮುಜ್ ಜಲಸಂಧಿಯಲ್ಲಿ ದಾಳಿಯನ್ನು ಮುಂದುವರಿಸಿದ್ದರಿಂದ ಮತ್ತೊಮ್ಮೆ ಮಧ್ಯಪ್ರಾಚ್ಯ ಭಾಗದಲ್ಲಿ ಯುದ್ಧದ ಭೀತಿ ಹೆಚ್ಚಾಗಿದೆ.

ಕಳೆದ ಎರಡು ದಿನಗಳಲ್ಲಿ ಇರಾಕ್ ಸೇನಾ ಪಡೆಗಳು ತನ್ನ ತೈಲ ಸೌಲಭ್ಯಗಳ ಮೇಲೆ ಡ್ರೋನ್ ದಾಳಿ ನಡೆಸುತ್ತಿದೆ ಎಂದು ಸೌದಿ ಅರೇಬಿಯಾ ಆರೋಪಿಸಿದ್ದು, ಇರಾಕ್ ಸೇನಾಪಡೆಯ ಒಂದು ಗುಂಪು ಈ ಆರೋಪಗಳನ್ನು ನಿರಾಕರಿಸಿದೆ. ಇರಾನ್ ಬೆಂಬಲಿತ ಯೆಮೆನ್‌ನಲ್ಲಿರುವ ಹೌತಿ ಬಂಡುಕೋರರು ಸೌದಿ ಇಂಧನ ಸೌಲಭ್ಯಗಳ ಮೇಲೆ ದಾಳಿ ನಡೆಸಿರುವುದಾಗಿ ಹೇಳಿದೆ.

ಕಳೆದ ಎರಡು ದಿನಗಳಲ್ಲಿ ಇರಾಕ್ ಸೇನಾ ಪಡೆಗಳು ತನ್ನ ತೈಲ ಸೌಲಭ್ಯಗಳ ಮೇಲೆ ಡ್ರೋನ್ ದಾಳಿ ನಡೆಸುತ್ತಿದೆ ಎಂದು ಸೌದಿ ಅರೇಬಿಯಾ ಆರೋಪಿಸಿದ್ದು, ಇರಾಕ್ ಸೇನಾಪಡೆಯ ಒಂದು ಗುಂಪು ಈ ಆರೋಪಗಳನ್ನು ನಿರಾಕರಿಸಿದೆ. ಇರಾನ್ ಬೆಂಬಲಿತ ಯೆಮೆನ್‌ನಲ್ಲಿರುವ ಹೌತಿ ಬಂಡುಕೋರರು ಸೌದಿ ಇಂಧನ ಸೌಲಭ್ಯಗಳ ಮೇಲೆ ದಾಳಿ ನಡೆಸಿರುವುದಾಗಿ ಹೇಳಿದೆ.

ಭಾರತ, ಚೀನಾಕ್ಕೆ ಶೇಕಡಾ 100 ಸುಂಕ: ಅಮೆರಿಕ ಸೆನೆಟ್‌ನಲ್ಲಿ ರಷ್ಯಾ, ಇರಾನ್ ಮೇಲಿನ ನಿರ್ಬಂಧಕ್ಕೆ ಮಸೂದೆ ಮಂಡನೆ

ಸೌದಿ ರಕ್ಷಣಾ ಸಚಿವ ಖಾಲಿದ್ ಬಿನ್ ಸಲ್ಮಾನ್ ಅವರು ಬುಧವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರನ್ನು ಪ್ರತ್ಯೇಕವಾಗಿ ಭೇಟಿಯಾದರು. ಅವರು ಯಾವ ವಿಷಯದ ಕುರಿತಾಗಿ ಮಾತುಕತೆ ನಡೆಸಿದ್ದಾರೆ ಎಂಬುದು ಬಹಿರಂಗವಾಗಿಲ್ಲ.