ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

''ನೀನು ಮುಸ್ಲಿಮಾ?ʼʼ ಧರ್ಮ ಕೇಳಿ ಭಾರತ ಮೂಲದ ಮುಸ್ಲಿಂ ವ್ಯಕ್ತಿಯ ಮೇಲೆ ಅಮೆರಿಕದಲ್ಲಿ ಚಾಕು ದಾಳಿ

ಅಮೆರಿಕದ ಉಟಾ ರಾಜ್ಯದ ವೆಸ್ಟ್ ವ್ಯಾಲಿ ಸಿಟಿಯ ವ್ಯಾಲಿ ಫೇರ್ ಮಾಲ್‌ನಲ್ಲಿ ಭಾರತ ಮೂಲದ ಮುಸ್ಲಿಂ ಉದ್ಯೋಗಿಯ ಮೇಲೆ ಧರ್ಮ ಕೇಳಿದ ಬಳಿಕ ಚಾಕು ದಾಳಿ ನಡೆಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಯುವಕ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಮೆರಿಕದಲ್ಲಿ ಭಾರತೀಯ ಮುಸ್ಲಿಂ ವ್ಯಕ್ತಿಯ ಮೇಲೆ ದಾಳಿ

ಹತ್ಯೆಯಾದ ವ್ಯಕ್ತಿ -

Profile
Sushmitha Jain Jul 16, 2026 8:52 AM

ವಾಷಿಂಗ್ಟನ್‌, ಜು. 16: ಅಮೆರಿಕದ ಉಟಾ ರಾಜ್ಯದ ವೆಸ್ಟ್ ವ್ಯಾಲಿ ಸಿಟಿಯ ವ್ಯಾಲಿ ಫೇರ್ ಮಾಲ್‌ನಲ್ಲಿ (Valley Fair Mall) ಭಾರತ ಮೂಲದ ಮುಸ್ಲಿಂ ವ್ಯಕ್ತಿಯ ಮೇಲೆ ನಡೆದ ಭೀಕರ ಚಾಕು ದಾಳಿ ಆತಂಕ ಸೃಷ್ಟಿಸಿದೆ. ಈ ಪ್ರಕರಣವನ್ನು ಪೊಲೀಸರು ದ್ವೇಷಪೂರಿತ ಅಪರಾಧ (Hate Crime) ಎಂದು ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ.

ಪೊಲೀಸರ ಪ್ರಕಾರ, 48 ವರ್ಷದ ಪೀಟರ್ ಮೈಕಲ್ ಲಾರ್ಸನ್ (Peter Michael Larsen) ಎಂಬಾತ ಮಾಲ್‌ನಲ್ಲಿದ್ದ ಕಿಯೋಸ್ಕ್ ಉದ್ಯೋಗಿ ಸೋಹೈಲ್ ಅವರನ್ನು ಮೊದಲು "ನೀವು ಎಲ್ಲಿಂದ ಬಂದವರು?" ಎಂದು ಕೇಳಿದ್ದಾನೆ. ಅದಕ್ಕೆ ಸೋಹೈಲ್ "ನಾನು ಭಾರತದಿಂದ ಬಂದಿದ್ದೇನೆ" ಎಂದು ಉತ್ತರಿಸಿದ್ದಾರೆ. ಬಳಿಕ "ನೀವು ಮುಸ್ಲಿಮಾ?" ಎಂದು ಪ್ರಶ್ನಿಸಿದ ಲಾರ್ಸನ್, "ಹೌದು" ಎಂಬ ಉತ್ತರ ಸಿಕ್ಕ ತಕ್ಷಣ ಏಕಾಏಕಿ ಚಾಕುವಿನಿಂದ ದಾಳಿ ನಡೆಸಿದ್ದಾನೆ.

ಅನುಕಂಪದ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ತಾಯಿಯನ್ನೇ ಕೊಂದ ಪಾಪಿ ಮಗಳು

ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಆರೋಪಿಯು ಮೊದಲು ನೀರಿನ ಬಾಟಲಿ ಕೇಳಿದ್ದು, ಸೋಹೈಲ್ ಅದನ್ನು ತರಲು ತಿರುಗಿದಾಗ ಚಾಕು ತೆಗೆದು ದಾಳಿ ನಡೆಸಿದ್ದಾನೆ. ದಾಳಿಯಲ್ಲಿ ಸೋಹೈಲ್ ಅವರಿಗೆ ಸುಮಾರು 15 ಬಾರಿ ಚಾಕು ಇರಿಯಲಾಗಿದೆ ಎಂದು ತಿಳಿದುಬಂದಿದ್ದು, ಅವರು ಹಲವು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಇನ್ನೂ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ವೇಳೆ ಅಲ್ಲಿದ್ದ ಜನರು ಧೈರ್ಯದಿಂದ ಆರೋಪಿಯನ್ನು ಹಿಡಿದು ನೆಲಕ್ಕೊರಗಿಸಿ, ಪೊಲೀಸರು ಬರುವವರೆಗೆ ನಿಯಂತ್ರಣದಲ್ಲಿಟ್ಟಿದ್ದರು. ಇದರಿಂದ ಮತ್ತಷ್ಟು ಅನಾಹುತ ತಪ್ಪಿದೆ. ವಿಚಾರಣೆ ವೇಳೆ ಆರೋಪಿ ಲಾರ್ಸನ್, "ನಾನು ಉದ್ದೇಶಪೂರ್ವಕವಾಗಿ ಮುಸ್ಲಿಂ ವ್ಯಕ್ತಿಯನ್ನೇ ಗುರಿಯಾಗಿಸಿಕೊಂಡೆ. ಮುಸ್ಲಿಮರನ್ನು ಕೊಲ್ಲುವ ಉದ್ದೇಶ ನನ್ನದು" ಎಂದು ಹೇಳಿರುವುದಾಗಿ ನ್ಯಾಯಾಲಯದ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಕೊಲೆ ಯತ್ನ (Attempted Murder) ಹಾಗೂ ಅಪಾಯಕಾರಿ ಶಸ್ತ್ರಾಸ್ತ್ರ ಬಳಕೆ ಸೇರಿ ಹಲವು ಆರೋಪಗಳನ್ನು ದಾಖಲಿಸಲಾಗಿದ್ದು, ಸಾಲ್ಟ್ ಲೇಕ್ ಕೌಂಟಿ ಜೈಲಿನಲ್ಲಿ ಬಂಧನದಲ್ಲಿದ್ದಾನೆ.

ಸೋಹೈಲ್ ಅವರ ಸಹೋದ್ಯೋಗಿಗಳು ಅವರು ಅತ್ಯಂತ ಶ್ರಮಜೀವಿ ಹಾಗೂ ಕುಟುಂಬದ ಏಕೈಕ ಸಂಪಾದಕ ಎಂದು ತಿಳಿಸಿದ್ದಾರೆ. ಪತ್ನಿ ಮತ್ತು ಇಬ್ಬರು ಚಿಕ್ಕ ಮಕ್ಕಳ ಜವಾಬ್ದಾರಿ ಅವರ ಮೇಲಿದೆ ಎಂದು ಸ್ನೇಹಿತರು ಹೇಳಿದ್ದಾರೆ. ಘಟನೆಯನ್ನು ಖಂಡಿಸಿರುವ ಸೋಹೈಲ್ ಅವರ ವ್ಯವಸ್ಥಾಪಕ ಅದ್ನಾನ್ ಮೊಹಮ್ಮದ್, "ದ್ವೇಷಕ್ಕೆ ಸಮಾಜದಲ್ಲಿ ಯಾವುದೇ ಸ್ಥಾನವಿಲ್ಲ. ಒಬ್ಬ ವ್ಯಕ್ತಿಯನ್ನು ಕೊಲ್ಲುವುದು ಎಂದರೆ ಒಂದು ಕುಟುಂಬವನ್ನೇ ನಾಶಪಡಿಸಿದಂತಾಗುತ್ತದೆ" ಎಂದು ಕಿಡಿಕಾರಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಅಮೆರಿಕದಲ್ಲಿ ಮುಸ್ಲಿಂ ವಿರೋಧಿ ಘಟನೆಗಳು ಹೆಚ್ಚುತ್ತಿರುವ ಬಗ್ಗೆ ಹಲವು ನಾಗರಿಕ ಹಕ್ಕುಗಳ ಸಂಘಟನೆಗಳು ಎಚ್ಚರಿಕೆ ನೀಡುತ್ತಿದ್ದು, ಈ ಘಟನೆ ಕೂಡ ಅಂತಹ ದ್ವೇಷಪೂರಿತ ದಾಳಿಗಳ ಸಾಲಿಗೆ ಸೇರಿದೆ ಎಂದು ಹೇಳಲಾಗುತ್ತಿದೆ.