ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಮುದ್ರದಲ್ಲಿ ನಾವು ತೈಲ, ಸರಕುಗಳನ್ನು ದೋಚುತ್ತೇವೆ: ಡೊನಾಲ್ಡ್ ಟ್ರಂಪ್

ಇರಾನ್ ಬಂದರುಗಳಿಗೆ ದಿಗ್ಬಂಧನವನ್ನು ವಿಧಿಸಿರುವ ಯುಎಸ್ ನೌಕಾ ಪಡೆಯು ಕಡಲ್ಗಳ್ಳರಂತೆ ಸಮುದ್ರದಲ್ಲಿ ಇರಾನಿನ ತೈಲ, ಸರಕುಗಳನ್ನು ದೋಚುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಫ್ಲೋರಿಡಾದಲ್ಲಿ ಈ ಕುರಿತು ಶನಿವಾರ ಮಾತನಾಡಿದ ಅವರು ಈ ಬಗ್ಗೆ ನಮಗೆ ಹೆಮ್ಮೆ ಇದೆ ಎಂದರು.

"ನಾವು ಕಡಲ್ಗಳ್ಳರು' ಈ ಬಗ್ಗೆ ಹೆಮ್ಮೆ ಇದೆ: ಡೊನಾಲ್ಡ್ ಟ್ರಂಪ್

ಸಂಗ್ರಹ ಚಿತ್ರ -

ಫ್ಲೋರಿಡಾ: ಹೊರ್ಮುಜ್ (Hormuz) ಜಲ ಮಾರ್ಗದಲ್ಲಿ ನಾವು ಕಡಲ್ಗಳ್ಳರಂತೆ (pirates) ಇರಾನಿನ ತೈಲವನ್ನು (Iranian oil) ಅಮೆರಿಕ (America) ವಶಪಡಿಸಿಕೊಳ್ಳುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಹೇಳಿದರು. ಫ್ಲೋರಿಡಾದಲ್ಲಿ (Florida) ನಡೆದ ರಾಲಿಯನ್ನು ಉದ್ದೇಶಿಸಿ ಶನಿವಾರ ಮಾತನಾಡಿದ ಅವರು ನಾವು ಯಾವುದೇ ಆಟವನ್ನು ಆಡುತ್ತಿಲ್ಲ. ನಾವು ಸಮುದ್ರದಲ್ಲಿ ಇಳಿದು ಇರಾನಿನ ಹಡಗು, ಸರಕುಗಳು, ತೈಲವನ್ನು ಸ್ವಾಧೀನಪಡಿಸಿಕೊಳ್ಳುತ್ತೇವೆ. ಇದು ತುಂಬಾ ಲಾಭದಾಯಕ ವ್ಯವಹಾರವಾಗಿದೆ ಎಂದು ತಿಳಿಸಿದರು.

ಕಳೆದ ಫೆಬ್ರವರಿ ತಿಂಗಳಾಂತ್ಯದಲ್ಲಿ ಯುಎಸ್, ಇಸ್ರೇಲ್ ಸೇನಾ ಪಡೆಯು ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಇರಾನ್ ಹೊರ್ಮುಜ್ ಜಲ ಮಾರ್ಗವನ್ನು ನಿರ್ಬಂಧಿಸಿತ್ತು. ಇದನ್ನು ತೆರವುಗೊಳಿಸುವ ಸಲುವಾಗಿ ಯುಎಸ್ ಇರಾನ್ ಬಂದರುಗಳಿಗೆ ದಿಗ್ಬಂಧನ ಹೇರಿದೆ. ಇದನ್ನು ಮೀರಿ ಬರುವ ಹಡಗುಗಳನ್ನು ಅದು ತನ್ನ ವಶಕ್ಕೆ ಪಡೆದು ಕೊಳ್ಳುತ್ತಿದೆ. ಈ ಕುರಿತು ಹೆಮ್ಮೆ ವ್ಯಕ್ತಪಡಿಸಿರುವ ಡೊನಾಲ್ಡ್ ಟ್ರಂಪ್, ಯುಎಸ್ ನೌಕಾಪಡೆಯು ಸಮುದ್ರದಲ್ಲಿ ಕಡಲ್ಗಳ್ಳರಂತೆ ವರ್ತಿಸುತ್ತಿದೆ. ಇರಾನಿನ ಬಂದರುಗಳ ದಿಗ್ಬಂಧನದ ನಡುವೆ ಹಡಗುಗಳನ್ನು ವಶಪಡಿಸಿಕೊಳ್ಳುವಾಗ ಕಾರ್ಯಾಚರಣೆಗಳು ಹೇಗೆ ನಡೆಯುತ್ತವೆ ಎಂಬುದರ ಬಗ್ಗೆ ಅವರು ಹೆಮ್ಮೆಪಡುತ್ತಾರೆ ಎಂದು ಹೇಳಿದರು.

ಪಾಕ್‌ ಜಲಸಂಧಿಯ 29 ಕಿಲೋ ಮೀಟರ್‌ ದೂರವನ್ನು 10 ಗಂಟೆಯೊಳಗೆ ಈಜಿ ದಾಖಲೆ ನಿರ್ಮಿಸಿದ 7 ವರ್ಷದ ಪೋರ

ಅಮೆರಿಕ ತನ್ನ ಹಡಗನ್ನು ವಶಕ್ಕೆ ಪಡೆದಿರುವುದನ್ನು ಇರಾನ್ "ಸಶಸ್ತ್ರ ದರೋಡೆ" ಎಂದು ಕರೆದಿದೆ. ಅಮೆರಿಕದ ಪಡೆಗಳು ಇರಾನಿನ ಕಚ್ಚಾ ತೈಲವನ್ನು ಸಾಗಿಸುತ್ತಿದ್ದ ಎರಡು ಟ್ಯಾಂಕರ್‌ಗಳನ್ನು ವಶಕ್ಕೆ ಪಡೆದಿದ್ದು, ಇರಾನ್ ಇದನ್ನು ಖಂಡಿಸಿದೆ. ವಾಷಿಂಗ್ಟನ್ ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದೆ.

ಇರಾನ್ ನ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ ಅವರು ಈ ಕುರಿತು ಪ್ರತಿಕ್ರಿಯಿಸಿ ಯುಎಸ್ ನಡೆಸುವ ಕಾರ್ಯಾಚರಣೆಯು ಕಡಲ್ಗಳ್ಳತನವನ್ನು ಅನುಮೋದಿಸುತ್ತದೆ ಎಂದು ಹೇಳಿದರು.

ಈ ಕುರಿತು ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್ ನಲ್ಲಿ ಬರೆದಿರುವ ಅವರು, ಅಮೆರಿಕವು ಸಮುದ್ರಗಳಲ್ಲಿ ಕಡಲ್ಗಳ್ಳತನ ಮತ್ತು ಸಶಸ್ತ್ರ ದರೋಡೆಯನ್ನು ಸಂಪೂರ್ಣವಾಗಿ ಕಾನೂನುಬದ್ಧಗೊಳಿಸುತ್ತಿದೆ. ಜಗತ್ತುಕಡಲ್ಗಳ್ಳರನ್ನು ವೀಕ್ಷಿಸುತ್ತಿದೆ ಎಂದು ಹೇಳಿದ್ದಾರೆ.

ಇರಾನ್ ಮೇಲೆ ಯುಎಸ್ ಯುದ್ಧ ಪ್ರಾರಂಭಿಸಿದ ಮೇಲೆ ಇರಾನ್ ತನ್ನ ನಿಯಂತ್ರಣದಲ್ಲಿರುವ ಹೊರ್ಮುಜ್ ಜಲಸಂಧಿಯಲ್ಲಿ ಹಾದುಹೋಗುವ ಬಹುತೇಕ ಎಲ್ಲಾ ಹಡಗುಗಳನ್ನು ನಿರ್ಬಂಧಿಸಿದೆ. ಇದಕ್ಕಾಗಿ ಡೊನಾಲ್ಡ್ ಟ್ರಂಪ್ ಇರಾನಿನ ಬಂದರುಗಳ ಮೇಲೆ ಪ್ರತ್ಯೇಕ ದಿಗ್ಬಂಧನವನ್ನು ವಿಧಿಸಿದರು.

ಭಾರತದ ವಿದೇಶಾಂಗ ಸಚಿವ ಜೈಶಂಕರ್‌ಗೆ ಇರಾನ್ ಸಚಿವ ಸೈಯದ್‌ ಅಬ್ಬಾಸ್‌ ಅರಾಗ್ಚಿ ಕರೆ: ಕದನ ವಿರಾಮದ ಕುರಿತು ಮಹತ್ವದ ಚರ್ಚೆ

ಯುಎಸ್ ಸೆಂಟ್ರಲ್ ಕಮಾಂಡ್ ಶುಕ್ರವಾರ ಇರಾನ್ ದಿಗ್ಬಂಧನಕ್ಕಾಗಿ ಮತ್ತೆ 45 ಹಡಗುಗಳನ್ನು ಮರುನಿರ್ದೇಶಿಸಿದೆ. ಈ ಕುರಿತು ಮಾಹಿತಿ ನೀಡಿರುವ ಪೆಂಟಗನ್ ಮುಖ್ಯಸ್ಥ ಪೀಟ್ ಹೆಗ್ಸೆತ್, ಇರಾನ್ ಮೇಲಿನ ದಿಗ್ಬಂಧನವು ಅಗತ್ಯವಿರುವವರೆಗೂ ಇರುತ್ತದೆ ಎಂದು ಹೇಳಿದರು.

ಈ ನಡುವೆ ಇರಾನ್ ಕೂಡ ವಾಷಿಂಗ್ಟನ್ ತನ್ನ ಬಂದರುಗಳಿಗೆ ದಿಗ್ಬಂಧನವನ್ನು ಮುಂದುವರಿಸುವವರೆಗೆ ಇರಾನ್ ಜಲಸಂಧಿಯಲ್ಲಿ ನಿರ್ಬಂಧವನ್ನು ಮುಂದುವರಿಸುವುದಾಗಿ ತಿಳಿಸಿದೆ.