"ನಮ್ಮ ನೀರು ಮುಟ್ಟಿದರೆ ಕೈ ಕತ್ತರಿಸುತ್ತೇವೆ" ; ಭಾರತಕ್ಕೆ ಮತ್ತೆ ಗೊಡ್ಡು ಬೆದರಿಕೆ ಹಾಕಿದ ಪಾಕಿಸ್ತಾನ
ಆಪರೇಷನ್ ಸಿಂದೂರದ ಬಳಿಕ ಸಿಂದೂ ನದಿಯ ನೀರನ್ನು ಪಾಕಿಸ್ತಾನಕ್ಕೆ ಬಂದ್ ಮಾಡುವ ಬಳಿಕ ಭಾರತ ಶತ್ರು ದೇಶಕ್ಕೆ ಭಾರೀ ಹೊಡೆತವನ್ನು ನೀಡಿದೆ. ಈ ಕುರಿತು ಪಾಕಿಸ್ತಾನ ಹಲವು ಬಾರಿ ಕಿಡಿ ಕಾರಿದ್ದರೂ ಏನೂ ಪ್ರಯೋಜನವಾಗಿಲ್ಲ. ಇದೀಗ ಮತ್ತೆ ಪಾಕಿಸ್ತಾನ ಭಾರತಕ್ಕೆ ಬೆದರಿಕೆ ಹಾಕಿದೆ. ಸಿಂಧೂ ಜಲ ಒಪ್ಪಂದ (ಐಡಬ್ಲ್ಯೂಟಿ) ಅಡಿಯಲ್ಲಿ ಇಸ್ಲಾಮಾಬಾದ್‌ನ ನೀರಿನ ಪಾಲನ್ನು ತಡೆದವರ ಕೈ ಕತ್ತರಿಸುತ್ತೇವೆ ಎಂದು ಪಾಕಿಸ್ತಾನದ ಸಚಿವರೊಬ್ಬರು ಬೆದರಿಕೆ ಹಾಕಿದರು.
ಸಂಗ್ರಹ ಚಿತ್ರ -
ಇಸ್ಲಾಮಾಬಾದ್: ಆಪರೇಷನ್ ಸಿಂದೂರದ (Operation Sindoor) ಬಳಿಕ ಸಿಂದೂ ನದಿಯ (Sindhu River) ನೀರನ್ನು ಪಾಕಿಸ್ತಾನಕ್ಕೆ ಬಂದ್ ಮಾಡುವ ಬಳಿಕ ಭಾರತ ಶತ್ರು ದೇಶಕ್ಕೆ ಭಾರೀ ಹೊಡೆತವನ್ನು ನೀಡಿದೆ. ಈ ಕುರಿತು ಪಾಕಿಸ್ತಾನ ಹಲವು ಬಾರಿ ಕಿಡಿ ಕಾರಿದ್ದರೂ ಏನೂ ಪ್ರಯೋಜನವಾಗಿಲ್ಲ. ಇದೀಗ ಮತ್ತೆ ಪಾಕಿಸ್ತಾನ (Pakistan ) ಭಾರತಕ್ಕೆ ಬೆದರಿಕೆ ಹಾಕಿದೆ. ಸಿಂಧೂ ಜಲ ಒಪ್ಪಂದ (ಐಡಬ್ಲ್ಯೂಟಿ) ಅಡಿಯಲ್ಲಿ ಇಸ್ಲಾಮಾಬಾದ್‌ನ ನೀರಿನ ಪಾಲನ್ನು ತಡೆದವರ ಕೈ ಕತ್ತರಿಸುತ್ತೇವೆ ಎಂದು ಪಾಕಿಸ್ತಾನದ ಸಚಿವರೊಬ್ಬರು ಬೆದರಿಕೆ ಹಾಕಿದರು. ಪಾಕಿಸ್ತಾನದ ಹವಾಮಾನ ಬದಲಾವಣೆ ಸಚಿವ ಮುಸಾದಿಕ್ ಮಲಿಕ್ ಅವರಿಂದ ಈ ಅಪೇಕ್ಷಿಸದ ಬೆದರಿಕೆ ಬಂದಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಲಿಕ್, ಭಾರತವು ಪಾಕಿಸ್ತಾನದ ನೀರಿನ ಪಾಲನ್ನು "ನಿಯಂತ್ರಿಸುತ್ತಿದೆ" ಎಂದು ಆರೋಪಿಸಿದರು , ಪಾಕಿಸ್ತಾನವು ತನ್ನ ನೀರಿನ ಪಾಲನ್ನು ತಡೆಯಲು "ಯಾರಿಗೂ" ಬಿಡುವುದಿಲ್ಲ ಎಂದು ಹೇಳಿದ್ದಾರೆ. ಪಾಕಿಸ್ತಾನದ ಜನಸಂಖ್ಯೆಯ ಶೇ.40-50 ರಷ್ಟು ಜನರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. "ದೇಶದ ಸಂಪೂರ್ಣ ಆಹಾರ ಭದ್ರತೆ, ದೇಶದಲ್ಲಿ ಶೇ.50 ರಷ್ಟು ಉದ್ಯೋಗ ಮತ್ತು ಶೇ.25 ರಷ್ಟು ಆರ್ಥಿಕತೆಯನ್ನು ಬೇರೆಯವರು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ" . ಅದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನಕ್ಕೆ ಹಕ್ಕಿನಂತೆ ದೊರೆಯಬೇಕಾದ ನೀರನ್ನು ತಡೆಯಲು ಅಥವಾ ಬೇರೆಡೆಗೆ ತಿರುಗಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ನಮ್ಮ ಪಾಲಿನ ನೀರಿನ ಮೇಲೆ ಯಾರಾದರೂ ಹಕ್ಕು ಸಾಧಿಸಲು ಯತ್ನಿಸಿದರೆ, ನಾವು ಸುಮ್ಮನಿರುವುದಿಲ್ಲ. ಅಗತ್ಯವಿದ್ದರೆ ಬಲಪ್ರಯೋಗಕ್ಕೂ ಹಿಂದೇಟು ಹಾಕುವುದಿಲ್ಲ ಎಂದು ಹೇಳಿದ್ದಾರೆ. ಪಾಕಿಸ್ತಾನಕ್ಕೆ ಹಕ್ಕಿನಂತೆ ದೊರೆಯಬೇಕಾದ ನೀರನ್ನು ತಡೆಯಲು ಅಥವಾ ಬೇರೆಡೆಗೆ ತಿರುಗಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ನಮ್ಮ ಪಾಲಿನ ನೀರಿನ ಮೇಲೆ ಯಾರಾದರೂ ಹಕ್ಕು ಸಾಧಿಸಲು ಯತ್ನಿಸಿದರೆ, ನಾವು ಸುಮ್ಮನಿರುವುದಿಲ್ಲ. ಅಗತ್ಯವಿದ್ದರೆ ಬಲಪ್ರಯೋಗಕ್ಕೂ ಹಿಂದೇಟು ಹಾಕುವುದಿಲ್ಲ ಎಂದು ಹೇಳಿದ್ದಾರೆ.
Operation Sindoor Film: ತೆರೆ ಮೇಲೆ ಬರಲಿದೆ ʻಆಪರೇಷನ್ ಸಿಂದೂರ್ʼ-ಫಸ್ಟ್ ಪೋಸ್ಟರ್ ರಿಲೀಸ್
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 62ನೇ ಅಧಿವೇಶನದಲ್ಲಿ ಮಾತನಾಡಿದ ಭಾರತದ ಪ್ರತಿನಿಧಿ ಅನುಪಮಾ ಸಿಂಗ್, ರಾಜ್ಯ ಪ್ರಾಯೋಜಿತ ಭಯೋತ್ಪಾದನೆಯನ್ನು ಬೆಂಬಲಿಸುವ ದೇಶವು ಸಹಕಾರದ ಆಧಾರದ ಮೇಲೆ ರೂಪುಗೊಂಡ ಒಪ್ಪಂದದ ಸೌಲಭ್ಯಗಳನ್ನು ನಿರಂತರವಾಗಿ ನಿರೀಕ್ಷಿಸುವುದು ಸಮಂಜಸವಲ್ಲ ಎಂದು ಅವರು ಹೇಳಿದರು.