Operation Sindoor Film: ತೆರೆ ಮೇಲೆ ಬರಲಿದೆ ʻಆಪರೇಷನ್ ಸಿಂದೂರ್ʼ-ಫಸ್ಟ್ ಪೋಸ್ಟರ್ ರಿಲೀಸ್
Operation Sindoor Film Announced:ನಿಕಿ ವಿಕಿ ಭಗ್ನಾನಿ ಫಿಲ್ಮ್ಸ್ ಮತ್ತು ದಿ ಕಂಟೆಂಟ್ ಎಂಜಿನಿಯರ್ ಅಧಿಕೃತವಾಗಿ ಆಪರೇಷನ್ ಸಿಂಧೂರ್ ಎಂಬ ಹೊಸ ಚಿತ್ರವನ್ನು ಘೋಷಿಸಿದ್ದಾರೆ. ಇದು ಮಾರಕ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತವು ತೋರಿಸಿದ ದಿಟ್ಟ ಪ್ರತೀಕಾರವನ್ನು ತೋರಿಸಲಿದೆ ಅಂತೆ. ಈ ಚಿತ್ರವು ಮೇ 6 ಮತ್ತು 7 ರ ಮಧ್ಯರಾತ್ರಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿ ಕುರಿತಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.


ಮುಂಬೈ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿರುವ ಆಪರೇಷನ್ ಸಿಂದೂರ ಭಾರತೀಯ ಸೇನೆಯ ಶೌರ್ಯದ ಸಂಕೇತ. ಉಗ್ರ ಪೋಷಕ ಪಾಕ್‌ಗೆ ಈ ಆಪರೇಷನ್ ಮೂಲಕ ಭಾರತ ಮುಟ್ಟಿ ನೋಡಿಕೊಳ್ಳುವಂತಹ ಪಾಠ ಕಲಿಸಿದೆ. ಅದಾಗ್ಯೂ ಪಾಕ್‌ನ ಉಪಟಳ ಇನ್ನೂ ನಿಂತಿಲ್ಲ.ನಿರಂತರ ಡ್ರೋನ್ ದಾಳಿ ಮೂಲಕ ಭಾರತವನ್ನು ಕೆಣಕುವ ಪ್ರಯತ್ನ ನಡೆಸುತ್ತಲೇ ಇದೆ. ಹೀಗೆ ಭಾರತ ಮತ್ತು ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ಇರುವಾಗಲೇ ಆಪರೇಷನ್ ಸಿಂದೂರ್ ಸಿನಿಮಾ(Operation Sindoor Film Announced) ಘೋಷಣೆಯಾಗಿದೆ.
ನಿಕಿ ವಿಕಿ ಭಗ್ನಾನಿ ಫಿಲ್ಮ್ಸ್ ಮತ್ತು ದಿ ಕಂಟೆಂಟ್ ಎಂಜಿನಿಯರ್ ಅಧಿಕೃತವಾಗಿ ಆಪರೇಷನ್ ಸಿಂಧೂರ್ ಎಂಬ ಹೊಸ ಚಿತ್ರವನ್ನು ಘೋಷಿಸಿದ್ದಾರೆ. ಇದು ಮಾರಕ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತವು ತೋರಿಸಿದ ದಿಟ್ಟ ಪ್ರತೀಕಾರವನ್ನು ತೋರಿಸಲಿದೆ ಅಂತೆ. ಈ ಚಿತ್ರವು ಮೇ 6 ಮತ್ತು 7 ರ ಮಧ್ಯರಾತ್ರಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿ ಕುರಿತಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈಗಾಗಲೇ ಚಿತ್ರದ ಫಸ್ಟ್ ಪೋಸ್ಟರ್ ಕೂಡ ಹೊರಬಿದ್ದಿದೆ.
ಕಾರ್ಯಾಚರಣೆಯ ಶೀರ್ಷಿಕೆ "ಸಿಂದೂರ" ಆಳವಾದ ಮಹತ್ವವನ್ನು ಹೊಂದಿದೆ. ಹಿಂದೂ ಸಂಪ್ರದಾಯದಲ್ಲಿ, ಸಿಂದೂರ ಮುತ್ತೈದೆತನದ ಪವಿತ್ರ ಸಂಕೇತವಾಗಿದೆ. ಮತ್ತೊಂದೆಡೆ ಯುದ್ಧಕ್ಕೆ ಹೋಗುವ ಯೋಧರು ತಿಲಕವಾಗಿ ಹಚ್ಚುತ್ತಾರೆ. ಏ.22ರಂದು ಅಂತಹ ಮಹಿಳೆಯರ ಮುತ್ತೈದೆತನವನ್ನೇ ಉಗ್ರರು ಕಿತ್ತುಕೊಂಡಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಆಪರೇಷನ್ ಸಿಂದೂರ್ ನಡೆಸಿ ಉಗ್ರರನ್ನು ಸದೆಬಡಿದಿತ್ತು. ಇನ್ನು ಆಪರೇಷನ್ ಸಿಂದೂರ ಚಿತ್ರದ ಪಾತ್ರವರ್ಗವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಆದಾಗ್ಯೂ, ಚಿತ್ರವನ್ನು ಉತ್ತಮ್ ಮಹೇಶ್ವರಿ ನಿರ್ದೇಶಿಸಲಿದ್ದಾರೆ ಮತ್ತು ಇದು ಒಂದು ಆಕರ್ಷಕ ನಿರೂಪಣೆಯಾಗಲಿದೆ ಎಂಬ ಭರವಸೆ ಇದೆ.
ಈ ಸುದ್ದಿಯನ್ನೂ ಓದಿ: Operation Sindoor: ಯಕ್ಷಗಾನದಲ್ಲೂ ಮಿಂಚಿದ ಆಪರೇಷನ್ ಸಿಂದೂರ; ಕಲಾವಿದರ ಸಂಭಾಷಣೆಯ ವಿಡಿಯೋ ವೈರಲ್!
ನಿಕಿ ಮತ್ತು ವಿಕಿ ಭಗ್ನಾನಿ ಈ ಹಿಂದೆ ನಿಕಿತಾ ರಾಯ್ ಎಂಬ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರವನ್ನು ನಿರ್ಮಿಸಿದ್ದಾರೆ, ಇದು ಸೋನಾಕ್ಷಿ ಸಿನ್ಹಾ ನಟಿಸಿದ್ದು, ಮೇ 30 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಕುಶ್ ಎಸ್ ಸಿನ್ಹಾ ನಿರ್ದೇಶಿಸಿದ ಈ ಚಿತ್ರವು ಅತೀಂದ್ರಿಯತೆ ಮತ್ತು ಮಾನಸಿಕ ಒತ್ತಡವನ್ನು ಪರಿಶೋಧಿಸುತ್ತದೆ. ಇದರಲ್ಲಿ ಅರ್ಜುನ್ ರಾಂಪಾಲ್, ಪರೇಶ್ ರಾವಲ್ ಮತ್ತು ಸುಹೇಲ್ ನಯ್ಯರ್ ಕೂಡ ನಟಿಸಿದ್ದಾರೆ.