ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

US-China: ಸುಂಕ ಯುದ್ಧಕ್ಕೆ ತೆರೆ ಎಳೆದು ತಾತ್ಕಾಲಿಕ ಒಪ್ಪಂದ ಮಾಡಿಕೊಂಡ ಅಮೆರಿಕ-ಚೀನಾ; ಶೇ.115ಕ್ಕೆ ಟಾರಿಫ್ ಕಡಿತ

ಅಮೆರಿಕ ಮತ್ತು ಚೀನಾ ಹೊಸ ಸುಂಕ ವಿಧಿಸುವುದನ್ನು 90 ದಿನಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಮತ್ತು ಈಗ ಇರುವ ಸುಂಕಗಳನ್ನು 115%ರಷ್ಟು ಕಡಿಮೆಗೊಳಿಸಲು ಒಪ್ಪಿಗೆ ಸೂಚಿಸಿವೆ ಎಂದು ಅಮೆರಿಕ ಟ್ರೆಜುರಿ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ತಿಳಿಸಿದ್ದಾರೆ. ಈ ಒಪ್ಪಂದ ಎರಡೂ ದೇಶಗಳ ನಡುವಿನ ವ್ಯಾಪಾರ ಯುದ್ಧವನ್ನು ಸರಾಗಗೊಳಿಸಿ, ಮುಂದಿನ ಮಾತುಕತೆಗಳಿಗೆ ದಾರಿ ಮಾಡಿಕೊಡುವ ಗುರಿ ಹೊಂದಿದೆ ಎಂದು ಅವರು ಹೇಳಿದ್ದಾರೆ.

ಅಮೆರಿಕ-ಚೀನಾ ಆರ್ಥಿಕ ಬಿಕ್ಕಟ್ಟಿಗೆ ತೆರೆ

ಸಾಂದರ್ಭಿಕ ಚಿತ್ರ

Profile Sushmitha Jain May 12, 2025 9:54 PM

ವಾಷಿಂಗ್ಟನ್: ಅಮೆರಿಕ (United States) ಮತ್ತು ಚೀನಾ (China) ಹೊಸ ಸುಂಕ (Tariffs) ವಿಧಿಸುವುದನ್ನು 90 ದಿನಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಮತ್ತು ಈಗ ಇರುವ ಸುಂಕಗಳನ್ನು 115% ರಷ್ಟು ಕಡಿಮೆಗೊಳಿಸಲು ಒಪ್ಪಿಗೆ ಸೂಚಿಸಿವೆ ಎಂದು ಅಮೆರಿಕ ಟ್ರೆಜುರಿ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ತಿಳಿಸಿದ್ದಾರೆ. ಈ ಒಪ್ಪಂದ ಎರಡೂ ದೇಶಗಳ ನಡುವಿನ ವ್ಯಾಪಾರ ಯುದ್ಧವನ್ನು (Trade War ) ಸರಾಗಗೊಳಿಸಿ, ಮುಂದಿನ ಮಾತುಕತೆಗಳಿಗೆ ದಾರಿ ಮಾಡಿಕೊಡುವ ಗುರಿ ಹೊಂದಿದೆ ಎಂದು ಅವರು ಹೇಳಿದ್ದಾರೆ. "ಚೀನಾದೊಂದಿಗೆ 90 ದಿನಗಳ ಸುಂಕ ತಡೆಯ ಒಪ್ಪಂದವಾಗಿದ್ದು, ಸುಂಕಗಳ ಮಟ್ಟವನ್ನು ಗಣನೀಯವಾಗಿ ಕಡಿಮೆ ಮಾಡಲಾಗುವುದು" ಎಂದು ಬೆಸೆಂಟ್ ಸ್ಪಷ್ಟಪಡಿಸಿದ್ದಾರೆ.

ಜಿನೀವಾದಲ್ಲಿ ಬಿಡುಗಡೆಯಾದ ಜಂಟಿ ಹೇಳಿಕೆಯ ಪ್ರಕಾರ, ಅಮೆರಿಕ ಚೀನಾದಿಂದ ಆಮದಾಗುವ ಹೆಚ್ಚಿನ ಉತ್ಪನ್ನಗಳ ಮೇಲಿನ 145% ಸುಂಕವನ್ನು ಮೇ 14ರ ವೇಳೆಗೆ 30% ಇಳಿಸಲಿದೆ. ಇದೇ ರೀತಿ, ಚೀನಾವು ಯುಎಸ್ ಒಡಂಬಡಿಕೆಗಳ ಮೇಲಿನ 125% ಸುಂಕವನ್ನು 10% ಕಡಿಮೆಗೊಳಿಸಲಿದೆ. "ಫೆಂಟಾನಿಲ್ ವಿಷಯದಲ್ಲಿ ನಾವು ಗಟ್ಟಿಯಾದ ಮತ್ತು ಫಲಪ್ರದ ಚರ್ಚೆ ನಡೆಸಿದ್ದೇವೆ. ಎರಡೂ ಕಡೆಯವರು ಆರ್ಥಿಕ ಸಂಬಂಧವನ್ನು ಕಡಿದುಕೊಳ್ಳಲು ಬಯಸುವುದಿಲ್ಲ ಎಂಬ ವಿಚಾರದಲ್ಲಿ ಒಮ್ಮತವಿದೆ" ಎಂದು ಬೆಸೆಂಟ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿ: Operation Sindoor: "ಪಿಒಕೆ ನಮ್ಮದು" ಪಾಕಿಸ್ತಾನದ ವಿರುದ್ಧ ಗುಡುಗಿದ ಮೋದಿ

ಈ ಹೇಳಿಕೆಯಲ್ಲಿ "ಎರಡೂ ಕಡೆಯವರು ಆರ್ಥಿಕ ಮತ್ತು ವ್ಯಾಪಾರ ಸಂಬಂಧಗಳ ಬಗ್ಗೆ ಚರ್ಚೆಯನ್ನು ಮುಂದುವರಿಸಲು ಒಂದು ಕಾರ್ಯವಿಧಾನವನ್ನು ಸ್ಥಾಪಿಸಲಿದ್ದಾರೆ" ಎಂದೂ ಉಲ್ಲೇಖಿಸಲಾಗಿದೆ. ಈ ಘೋಷಣೆಯು ಟಾರಿಫ್ ಯುದ್ಧವನ್ನು ಸರಾಗಗೊಳಿಸುವ ದಿಕ್ಕಿನಲ್ಲಿ ಒಂದು ಮಹತ್ವದ ಹೆಜ್ಜೆ ಎನ್ನಲಾಗಿದೆ. ಈ ಹಿಂದೆ ಎರಡೂ ದೇಶಗಳು "ಮಾತುಕತೆಗಳಲ್ಲಿ ಗಣನೀಯ ಪ್ರಗತಿ" ಸಾಧಿಸಿರುವುದಾಗಿ ಹೇಳಿದ್ದವು.

ಅಮೆರಿಕ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್, ಚೀನಾದೊಂದಿಗೆ ಹೆಚ್ಚು ಸಮತೋಲನದ ವ್ಯಾಪಾರ ಸಂಬಂಧವನ್ನು ರಾಷ್ಟ್ರ ಬಯಸುತ್ತದೆ ಎಂದು ತಿಳಿಸಿದ್ದಾರೆ. ಅಮೆರಿಕ ಆರಂಭದಲ್ಲಿ ಈ ಒಪ್ಪಂದವನ್ನು "ವ್ಯಾಪಾರ ಒಡಂಬಡಿಕೆ" ಎಂದು ಕರೆದಿತ್ತಾದರೂ, ಎರಡೂ ಕಡೆಗೆ ಸ್ವೀಕಾರಾರ್ಹ ಫಲಿತಾಂಶ ಯಾವುದು ಅಥವಾ ಅದನ್ನು ಸಾಧಿಸಲು ಎಷ್ಟು ಸಮಯ ತೆಗೆದುಕೊಳ್ಳಬಹುದು ಎಂಬುದು ಸ್ಪಷ್ಟವಾಗಿಲ್ಲ. ಚೀನಾವು ಈ ವರ್ಷ ವಿಧಿಸಲಾದ ಎಲ್ಲ ಯುಎಸ್ ಸುಂಕಗಳನ್ನು ತೆಗೆದುಹಾಕಬೇಕೆಂದು ಈ ಹಿಂದೆ ಒತ್ತಾಯಿಸಿತ್ತು.

ಮಾತುಕತೆಗಳ ಪ್ರಗತಿಯ ಸಂಕೇತಗಳಿಗೆ ಮಾರುಕಟ್ಟೆ ಧನಾತ್ಮಕವಾಗಿ ಸ್ಪಂದಿಸಿದ್ದರೂ, ಹಿಂದಿನ ಉದಾಹರಣೆಗಳು ವ್ಯಾಪಾರ ಒಪ್ಪಂದವನ್ನು ತಲುಪುವುದು ಸಮಯ ತೆಗೆದುಕೊಳ್ಳಬಹುದು ಎಂಬುದನ್ನು ಸೂಚಿಸುತ್ತವೆ. 2018ರಲ್ಲಿ, ಅಮೆರಿಕ ಮತ್ತು ಚೀನಾ ಮಾತುಕತೆಗಳ ಬಳಿಕ ತಮ್ಮ ವಿವಾದವನ್ನು ಸ್ಥಗಿತಗೊಳಿಸಲು ಒಪ್ಪಿಕೊಂಡಿದ್ದವು. ಆದರೆ, ಅಮೆರಿಕ ನಂತರ ಹಿಂದೆ ಸರಿದಿತ್ತು, ಅಂತಿಮವಾಗಿ 2020ರ ಜನವರಿಯಲ್ಲಿ "ಫೇಸ್ ಒನ್" ಒಪ್ಪಂದಕ್ಕೆ ಸಹಿ ಹಾಕಿದ್ದವು