ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹಾವೇರಿ

ನೀಟ್‌ ಪಾಸ್‌ ಆಗಿ ಎಂಬಿಬಿಎಸ್‌ ಸೀಟ್‌ ಪಡೆದ ಒಂದೇ ಗ್ರಾಮದ ಇಬ್ಬರು ವಿದ್ಯಾರ್ಥಿಗಳು; ಗ್ರಾಮಸ್ಥರಲ್ಲಿ ಹರ್ಷ

ಎಂಬಿಬಿಎಸ್‌ ಸೀಟ್‌ ಪಡೆದ ಒಂದೇ ಗ್ರಾಮದ ಇಬ್ಬರು ವಿದ್ಯಾರ್ಥಿಗಳು!

Haveri News: ಹಾವೇರಿ ತಾಲೂಕಿನ ಶಾಕಾರ ಗ್ರಾಮದ ವಿದ್ಯಾರ್ಥಿಗಳಾದ ಜಗದೀಶ ದೇವೇಂದ್ರಪ್ಪ ಬೆಂಡಿಗೇರಿ ಮತ್ತು ವರ್ಷಾ ರೇಣುಕಾ ಕಮ್ಮಾರ್ ಅವರು ಬಡತನವನ್ನು ಮೆಟ್ಟಿನಿಂತು, ಸತತ ಪರಿಶ್ರಮದಿಂದ ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ಸರ್ಕಾರಿ ಎಂಬಿಬಿಎಸ್ ಸೀಟ್ ಪಡೆದುಕೊಂಡಿದ್ದಾರೆ.

Haveri News: ಚಕ್ಕಡಿ ಸಮೇತ ತುಂಗಾ ಕಾಲುವೆಗೆ ಬಿದ್ದು ಜೋಡೆತ್ತು ದುರ್ಮರಣ‌

ಚಕ್ಕಡಿ ಸಮೇತ ತುಂಗಾ ಕಾಲುವೆಗೆ ಬಿದ್ದು ಜೋಡೆತ್ತು ದುರ್ಮರಣ‌

Tunga canal: ಹಾವೇರಿ ತಾಲೂಕಿನ ಕುರಗುಂದ ಗ್ರಾಮದಲ್ಲಿ ಘಟನೆ ನಡೆದಿದೆ. ತುಂಗಾ ಮೇಲ್ದಂಡೆ ಕಾಲುವೆ ದಂಡೆಗಳ‌ ಮೇಲೆ ಹೊಲಗಳಿಗೆ ಹೋಗಲು ರೈತರಿಗೆ ರಸ್ತೆ ಕಲ್ಪಿಸಿದ್ದು, ಕಾಲುವೆ ಏರಿಗಳಿಗೆ ತಡೆ ಬೇಲಿ ನಿರ್ಮಿಸದಿರುವುದೇ ಈ ದುರಂತಕ್ಕೆ ಕಾರಣವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

Haveri Murder: ಹಾವೇರಿ ಬಳಿ ಹೆದ್ದಾರಿಯಲ್ಲಿ ಕತ್ತು ಸೀಳಿ ನೃತ್ಯ ನಿರ್ದೇಶಕನ ಬರ್ಬರ ಹತ್ಯೆ!

ಹೆದ್ದಾರಿಯಲ್ಲಿ ಕತ್ತು ಸೀಳಿ ನೃತ್ಯ ನಿರ್ದೇಶಕನ ಬರ್ಬರ ಹತ್ಯೆ!

Murder Case: ಹಾವೇರಿ ಜಿಲ್ಲೆಯ ಮೋಟೆ ಬೆನ್ನೂರು ಹೆದ್ದಾರಿಯಲ್ಲೇ ವ್ಯಕ್ತಿಯೊಬ್ಬನನ್ನು ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಮೃತನನ್ನು ಚಿತ್ರದುರ್ಗದ ಮೂಲದ ನೃತ್ಯ ನಿರ್ದೇಶಕ ಲಿಂಗೇಶ್ ಎಂದು ಗುರುತಿಸಲಾಗಿದೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.

Bus Accident: ಹಾವೇರಿಯಲ್ಲಿ ಖಾಸಗಿ ಬಸ್‌ ಪಲ್ಟಿಯಾಗಿ ಇಬ್ಬರು ಸಾವು

ಹಾವೇರಿಯಲ್ಲಿ ಖಾಸಗಿ ಬಸ್‌ ಪಲ್ಟಿಯಾಗಿ ಇಬ್ಬರು ಸಾವು

ಮಹಾರಾಷ್ಟ್ರದ ಸಾಂಗ್ಲಿಯಿಂದ ತಮಿಳುನಾಡು ಕಡೆ ಹೊರಟಿದ್ದ ಬಸ್‌ಗೆ ಮೊಟೇಬೆನ್ನೂರು ಗ್ರಾಮದ ಬಳಿ‌ ಕಾರು ಇದ್ದಕ್ಕಿದ್ದಂತೆ ಅಡ್ಡ ಬಂದಿತ್ತು. ಕಾರಿಗೆ ಗುದ್ದಿ ಅಪಘಾತವಾಗುವುದನ್ನು ತಪ್ಪಿಸಲು ಹೋಗಿ ಬಸ್ ಚಾಲಕ ಬ್ರೇಕ್ ಹಾಕಿದ್ದಾನೆ. ಪರಿಣಾಮ ಬಸ್‌ ಮೊದಲು ಡಿವೈಡರ್‌ಗೆ ಡಿಕ್ಕಿ ಹೊಡೆದು ಬಳಿಕ ಪಲ್ಟಿಯಾಗಿ ಬಿದ್ದಿದೆ.

ಕಾರವಾರ-ಇಳಕಲ್ ರಾಷ್ಟ್ರೀಯ ಹೆದ್ದಾರಿ ಶೀಘ್ರ ಕಾಮಗಾರಿ ಆರಂಭಿಸಿ: ಸಚಿವ ಗಡ್ಕರಿಗೆ ಸಂಸದ ಬೊಮ್ಮಾಯಿ ಮನವಿ

ಕಾರವಾರ-ಇಳಕಲ್ ರಾ.ಹೆ. ಶೀಘ್ರ ಕಾಮಗಾರಿ ಆರಂಭಿಸಿ: ಗಡ್ಕರಿಗೆ ಮನವಿ

Basavaraj Bommai: ನವದೆಹಲಿಯಲ್ಲಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಾರವಾರ - ಇಳಕಲ್ ರಾಷ್ಟ್ರೀಯ ಹೆದ್ದಾರಿಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಶೀಘ್ರವೇ ಡಿಪಿಆರ್ ಮಾಡಿ ಕಾಮಗಾರಿ ಪ್ರಾರಂಭಿಸುವಂತೆ ಮನವಿ ಮಾಡಿದ್ದಾರೆ.

Haveri News: ವಿವಾಹಿತ ಯುವತಿಗೆ ಮೆಸೇಜ್; ಹುಟ್ಟುಹಬ್ಬದ ದಿನವೇ ಕಾಂಗ್ರೆಸ್ ಯುವ ಮುಖಂಡನ ಹತ್ಯೆ

ಹುಟ್ಟುಹಬ್ಬದ ದಿನವೇ ಕಾಂಗ್ರೆಸ್ ಯುವ ಮುಖಂಡನ ಹತ್ಯೆ

Congress leader murdered: ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಕೊಲೆ ನಡೆದಿದೆ. ಹೆಣ್ಣಿನ ವಿಚಾರಕ್ಕೆ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಡಾಬಾದಿಂದ ಕಿಡ್ನ್ಯಾಪ್‌ ಮಾಡಿ, ಕೊಲೆಗೈದ ಬಳಿಕ ಶವವನ್ನು ವರದಾ ನದಿಗೆ ಶವ ಎಸೆಯಲಾಗಿದೆ. ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Murder case: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಕೆರೆಗೆ ತಳ್ಳಿ ಕೊಂದ ಪತ್ನಿ

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಕೆರೆಗೆ ತಳ್ಳಿ ಕೊಂದ ಪತ್ನಿ

Haveri news: ಶಫೀವುಲ್ಲಾನನ್ನು ಕೆರೆಗೆ ತಳ್ಳಿದ್ದಾರೆ. ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬಿಂಬಿಸಿದ್ದರು. ಮೃತದೇಹ ಪತ್ತೆಯಾದ ಬಳಿಕ, ದೇಹದಲ್ಲಿ ಗಾಯಗಳಿರುವುದು ಕಂಡು ಅನುಮಾನ ಮೂಡಿತ್ತು. ಪೊಲೀಸರ ತನಿಖೆ ವೇಳೆ ಪತ್ನಿ ಶಹೀನಾಬಾನು ಹಾಗೂ ಆಕೆಯ ಪ್ರಿಯಕರ ಮುಬಾರಕ್ ಖಲಂದರಸಾಬ್‌ ಸಂಚು ಬಯಲಾಗಿದೆ.

Haveri News: ಹಾವೇರಿಯಲ್ಲಿ ನಾಪತ್ತೆಯಾಗಿದ್ದ ಸಹೋದರಿಯರು ಪುಣೆಯಲ್ಲಿ ಪತ್ತೆ; ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ

ಹಾವೇರಿಯಲ್ಲಿ ನಾಪತ್ತೆಯಾಗಿದ್ದ ಸಹೋದರಿಯರು ಪುಣೆಯಲ್ಲಿ ಪತ್ತೆ

ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯರಿಬ್ಬರು ಏಕಾಏಕಿ ಮನೆಯಿಂದ ನಾಪತ್ತೆಯಾದ ಪ್ರಕರಣವು ಜನರಲ್ಲಿ ಆತಂಕವನ್ನು ಸೃಷ್ಟಿಸಿತ್ತು. ಇದೀಗ ಪೊಲೀಸರು ನಾಪತ್ತೆಯಾಗಿದ್ದ ಅಕ್ಕ ತಂಗಿಯನ್ನು ಪುಣೆಯಲ್ಲಿ ಪತ್ತೆ ಹಚ್ಚಿ ರಕ್ಷಿಸಿದ್ದಾರೆ. ಹಾವೇರಿಯ ಅಬ್ದುಲ್ ಖಾದರ್ ಲೋಹರ್ ಅವರ ಪುತ್ರಿಯರು ನಾಪತ್ತೆಯಾಗಿದ್ದರು.

Murder Case: ಸಹೋದರಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಕೊಲೆ ಮಾಡಿದ ತಮ್ಮ

ಸಹೋದರಿಯೊಂದಿಗೆ ಅಕ್ರಮ ಸಂಬಂಧ ಕೊಲೆಯಲ್ಲಿ ಅಂತ್ಯ

ಸಹೋದರಿಯೊಂದಿಗೆ ಅನೈತಿಕ ಸಂಬಂಧ (Immoral relationship) ಹೊಂದಿದ್ದ ವ್ಯಕ್ತಿಯನ್ನು ತಮ್ಮ ಕೊಲೆ ಮಾಡಿರುವ ಘಟನೆ ಹಾವೇರಿ (Haveri) ಜಿಲ್ಲೆಯ ರಾಣೆಬೆನ್ನೂರು (Ranebennur) ತಾಲೂಕಿನ ಚಳಗೇರಿ ಗ್ರಾಮದಲ್ಲಿ ನಡೆದಿದೆ. ಬಳಿಕ ಆರೋಪಿಯು ಪೊಲೀಸರಿಗೆ ಶರಣಾಗಿದ್ದಾನೆ. ದಿಲೀಪ್ ಹಿತ್ತಲಮನಿ (47) ಎಂಬಾತನನ್ನು ರಾಜು ಅಲಿಯಾಸ್ ರಾಜಯ್ಯ ಕೊಲೆ ಮಾಡಿದ್ದಾನೆ.

Murder Case: ಅಕ್ಕನ ಪಕ್ಕಕ್ಕೆ ಬಂದು ಸಿಕ್ಕಿಹಾಕಿಕೊಂಡವನನ್ನು ಕಲ್ಲು ಎತ್ತಿ ಹಾಕಿ ಕೊಂದ ತಮ್ಮ

ಅಕ್ಕನ ಪಕ್ಕಕ್ಕೆ ಬಂದು ಸಿಕ್ಕಿಹಾಕಿಕೊಂಡವನ ಕಲ್ಲಿನಿಂದ ಜಜ್ಜಿ ಕೊಂದ ತಮ್ಮ

Haveri news: ನನ್ನ ಅಕ್ಕನಿಗೆ ಮದುವೆಯಾಗಿದೆ ಆಕೆಯ ಸಹವಾಸ ಬಿಟ್ಟು ಬಿಡು ಎಂದು ದಿಳ್ಳೆಪ್ಪನಿಗೆ ರಾಜಯ್ಯ ಹೇಳುತ್ತಲೇ ಇದ್ದ. ಆದರೆ ದಿಳ್ಳೆಪ್ಪ ಮಾತ್ರ ಕೇಳಿರಲಿಲ್ಲ. ಹೀಗಾಗಿ ನಾನೇ ಕೊಲೆ ಮಾಡಿದ್ದೇನೆ ಎಂದು ರಾಜಯ್ಯ ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Haveri News: ವಿದ್ಯುತ್ ತಂತಿ ತುಂಡಾಗಿ ಬಿದ್ದು ವಿದ್ಯಾರ್ಥಿ ಸಾವು, ಇಬ್ಬರಿಗೆ ಗಂಭೀರ ಗಾಯ

ವಿದ್ಯುತ್ ತಂತಿ ತುಂಡಾಗಿ ಬಿದ್ದು ವಿದ್ಯಾರ್ಥಿ ಸಾವು

Haveri News: ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಂಸಭಾವಿ ಗ್ರಾಮದಲ್ಲಿ ನಡೆದಿದೆ. ಶಾಲೆಯ ಆವರಣದಲ್ಲಿದ್ದ ತೆಂಗಿನಮರದ ಬಳಿ ಹಾದು ಹೋಗಿದ್ದ ವಿದ್ಯುತ್ ತಂತಿ ಬಿದ್ದು ಅವಘಡ ನಡೆದಿದೆ. ಒಬ್ಬ ವಿದ್ಯಾರ್ಥಿ ಮೃತಪಟ್ಟಿದ್ದು, ಇನ್ನಿಬ್ಬರು ಬಾಲಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Self Harming: ಮದುವೆಗೆ ಕನ್ಯೆ ಸಿಗದೆ ಖಿನ್ನತೆ, ಯುವಕ ಆತ್ಮಹತ್ಯೆ

ಮದುವೆಗೆ ಕನ್ಯೆ ಸಿಗದೆ ಖಿನ್ನತೆ, ಯುವಕ ಆತ್ಮಹತ್ಯೆ

Self Harming: ಗ್ರಾಮದಲ್ಲಿ ತಮ್ಮ ವಯಸ್ಸಿನ ಇತರ ಯುವಕರೆಲ್ಲರೂ ಮದುವೆಯಾಗಿದ್ದು, ತನಗೆ ಮಾತ್ರ ಹುಡುಗಿ ಸಿಗದಿರುವ ಕಾರಣಕ್ಕೆ ಅವಿನಾಶ್ ಮಾನಸಿಕವಾಗಿ ಕುಗ್ಗಿದ್ದರು. ಈ ನೋವಿನಲ್ಲಿ ಆತ ನೇಣಿಗೆ ಶರಣಾಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆಯು ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.

ರಾಜ್ಯ ಸರ್ಕಾರದಿಂದ ಪ್ರತಿ ವ್ಯಕ್ತಿಯ ಮೇಲೆ 1 ಲಕ್ಷ ರೂ. ಹೆಚ್ಚುವರಿ ಸಾಲದ ಹೊರೆ; ಬಸವರಾಜ ಬೊಮ್ಮಾಯಿ ಆರೋಪ

ರಾಜ್ಯ ಸರ್ಕಾರದ ಬಳಿ ಶ್ವೇತ ಪತ್ರ ಇಲ್ಲ, ಬ್ಲ್ಯಾಕ್ ಪೇಪರ್ ಇದೆ: ಬೊಮ್ಮಾಯಿ

Basavaraj Bommai: ರಾಜ್ಯ ಸರ್ಕಾರದ ಬಳಿ ದುಡ್ಡಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸತ್ಯ ಹೇಳಿದ್ದಾರೆ. ಸುಳ್ಳನ್ನು ಎಷ್ಟು ದಿನ ಅಂತ ಮರೆಮಾಚಲು ಆಗುತ್ತದೆ? ಸತ್ಯ ಹೊರಬರಲೇ ಬೇಕು, ಪರಮೇಶ್ವರ ಬಾಯಲ್ಲಿ ಬಂದರೆ ಶಿವನ ಬಾಯಲ್ಲಿ ಬಂದ ಹಾಗೆ ಎಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದು ಹೇಳಿದ್ದಾರೆ.

Murder Case: ಹಾವೇರಿಯಲ್ಲಿ ನಡುಬೀದಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕಾಂಟ್ರಾಕ್ಟರ್‌ ಕೊಲೆ

ಹಾವೇರಿ: ನಡುಬೀದಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕಾಂಟ್ರಾಕ್ಟರ್‌ ಕೊಲೆ

ಗುತ್ತಿಗೆದಾರ ಶಿವಾನಂದ ಕುನ್ನೂರು (40) ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ನಿನ್ನೆ ಹೊಟೇಲ್​ನಲ್ಲಿ ಊಟ ಮಾಡಿ ವಾಪಸ್​ ಕಾರಿನ ಕಡೆಗೆ ಹೋಗುತ್ತಿದ್ದ ವೇಳೆ ನಾಲ್ಕು ಜನರ ತಂಡ ಅಟ್ಯಾಕ್​ ಮಾಡಿ, ಕಬ್ಬಿಣದ ರಾಡ್ ಮತ್ತು ತಲವಾರ್‌ನಿಂದ ಹೊಡೆದು ಕೊಲೆ ಮಾಡಿದೆ.

Haveri News: ರೋಡಿಗೆ ಬಿದ್ದ ರಾಶಿ ರಾಶಿ ಮಾತ್ರೆಗಳು!; ಆರೋಗ್ಯ ಇಲಾಖೆ ವಿರುದ್ದ ಸಾರ್ವಜನಿಕರು ಗರಂ

ಹಾವೇರಿಯಲ್ಲಿ ರೋಡಿಗೆ ಬಿದ್ದ ರಾಶಿ ರಾಶಿ ಮಾತ್ರೆಗಳು!

Haveri News: ಸರ್ಕಾರಿ ಆಸ್ಪತ್ರೆ ಅಂದರೆ ಅದು ಬಡವರ ಪಾಲಿನ ಆಶಾಕಿರಣ ಎನ್ನಲಾಗುತ್ತಿದೆ. ಆದರೆ ಅದೇ ಆಸ್ಪತ್ರೆಯ ರೋಗಿಗಳಿಗೂ ದಕ್ಕದೇ, ಆಸ್ಪತ್ರೆಗಳಲ್ಲೇ ಉಳಿದು ಇದೀಗ ಕಸವಾಗಿರುವ ಕಾರಣಕ್ಕೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹಾವೇರಿಯ ಕನಕಾಪುರ ರಸ್ತೆ ಬದಿಯಲ್ಲಿ ಹೀಗೆ ರಾಶಿ ರಾಶಿ ಮಾತ್ರೆ ನೋಡಿ ರೈತರು ಹಾಗೂ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ.

Physical assault: ರಾಜ್ಯವನ್ನೇ ಬೆಚ್ಚಿ ಬೀಳಿಸೋ ಘಟನೆ; ಬಾಲಕಿ ಮೇಲೆ ಗ್ಯಾಂಗ್‌ರೇಪ್‌

ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

Haveri Horror: ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಠಾಣೆ ವ್ಯಾಪ್ತಿಯಲ್ಲಿ ಬಾಲಕಿಯನ್ನು ಪ್ರೀತಿಸುತ್ತಿದ್ದ ಯುವಕನ ಇಬ್ಬರು ಸ್ನೇಹಿತರೇ ಬೆದರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಇನ್ನು ಆರೋಪಿಗಳನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

Basavaraj Bommai: ಕಾಲ್ತುಳಿತ ಪ್ರಕರಣಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ: ಬಸವರಾಜ ಬೊಮ್ಮಾಯಿ

ಕಾಲ್ತುಳಿತ ಪ್ರಕರಣಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ: ಬಸವರಾಜ ಬೊಮ್ಮಾಯಿ

Basavaraj Bommai: ಆರ್‌ಸಿಬಿ ವಿಜಯೋತ್ಸವ ವೇಳೆ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು, ಇದೊಂದು ಬುದ್ಧಿ ಇಲ್ಲದ ಅತ್ಯಂತ ಬೇಜವಾಬ್ದಾರಿ ಸರ್ಕಾರ. ಇಂತಹ ಸರ್ಕಾರ ನೋಡಿರಲಿಲ್ಲ. ಬುದ್ಧಿಗೇಡಿ ಸರ್ಕಾರ ಇದು ಎಂದು ವಾಗ್ದಾಳಿ ನಡೆಸಿದ್ದಾರೆ.

Basavaraj Bommai: ಶಿಗ್ಗಾವಿ ಕ್ಷೇತ್ರದಲ್ಲಿ ಜೂಜಾಟ, ಒಸಿ ನಿಲ್ಲಿಸಿ: ಡಿಜಿಪಿ, ಎಸ್‌ಪಿಗೆ ಬಸವರಾಜ ಬೊಮ್ಮಾಯಿ ಆಗ್ರಹ

ಶಿಗ್ಗಾವಿ ಕ್ಷೇತ್ರದಲ್ಲಿ ಜೂಜಾಟ, ಒಸಿ ನಿಲ್ಲಿಸಿ: ಬಸವರಾಜ ಬೊಮ್ಮಾಯಿ

ಶಿಗ್ಗಾವಿ ತಾಲೂಕಿನಲ್ಲಿ ಕೂಡಲೇ ಒಸಿ, ಜೂಜಾಟ, ಗಾಂಜಾ ಸೇವನೆ ನಿಲ್ಲಿಸಬೇಕು. ಅವರು ಎಷ್ಟೇ ದೊಡ್ಡವರಿದ್ದರೂ ರಾಜಕೀಯ ಒತ್ತಡಕ್ಕೆ ಮಣಿಯದೆ ಎಲ್ಲರನ್ನು ಬಂಧಿಸಬೇಕು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೇ ಈ ಅಕ್ರಮದಲ್ಲಿ ಯಾರು ಭಾಗಿಯಾಗಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಜಿಪಿ ಹಾಗೂ ಹಾವೇರಿ ಎಸ್ಪಿ ಅವರಿಗೆ ಆಗ್ರಹಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Karnataka Rain: ರಾಜ್ಯದಲ್ಲಿ ಮಳೆಯ ಆರ್ಭಟ, ಮಕ್ಕಳೂ ಸೇರಿ ಒಂದೇ ದಿನ 8 ಮಂದಿ ಸಾವು

ರಾಜ್ಯದಲ್ಲಿ ಮಳೆಯ ಆರ್ಭಟ, ಮಕ್ಕಳೂ ಸೇರಿ ಒಂದೇ ದಿನ 8 ಮಂದಿ ಸಾವು

Karnataka Rain News: ನಿರಂತರ ಮಳೆಯಿಂದ ಮನೆ ಗೋಡೆ ಕುಸಿದು, ತುಂಬಿ ಹರಿಯುವ ಹಳ್ಳದಲ್ಲಿ ಎತ್ತಿನ ಬಂಡಿ ಮಗುಚಿ ಬಿದ್ದು, ಕರೆಂಟ್ ಶಾಕ್​ ಹೊಡೆದು, ಕಾವೇರಿ ನದಿಯಲ್ಲಿ ಈಜಲು ಇಳಿದು- ಹೀಗೆ ಎಂಟು ಮಂದಿ ನಾನಾ ಕಡೆ ಸಾವಿಗೀಡಾಗಿದ್ದಾರೆ.

Physical Abuse Case: ಜಾಮೀನು ಸಿಗುತ್ತಿದ್ದಂತೆ  ಮೆರವಣಿಗೆ , ರೋಡ್‌ ಶೋ....... ಗ್ಯಾಂಗ್ ರೇಪ್ ಆರೋಪಿಗಳು ಮತ್ತೆ ಅಂದರ್

ಜಾಮೀನು ಸಿಗುತ್ತಿದ್ದಂತೆ ರೋಡ್‌ ಶೋ;ಗ್ಯಾಂಗ್ ರೇಪ್ ಆರೋಪಿಗಳು ಮತ್ತೆ ಅಂದರ್

ಕಳೆದ ವರ್ಷ ಹಾವೇರಿಯ (Haveri) ಹಾನಗಲ್‌ನಲ್ಲಿ ಮಹಿಳೆಯ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಸಿಕ್ಕ ಬಳಿಕ ಜೈಲಿನಿಂದ ಬಿಡುಗಡೆಯಾಗಿ ಕಾರುಗಳಲ್ಲಿ ರೋಡ್ ಶೋ ಮಾಡಿ ವಿಜಯೋತ್ಸವ ಮಾಡಿದ್ದ ಏಳು ಆರೋಪಿಗಳನ್ನು ಪೊಲೀಸರು ಮತ್ತೆ ಜೈಲಿಗಟ್ಟಿದ್ದಾರೆ.

Haveri News: ಜೈಲಿಂದ ಬಿಡುಗಡೆಯಾಗಿ ರೋಡ್‌ ಶೋ; ಹಾನಗಲ್ ಗ್ಯಾಂಗ್ ರೇಪ್ ಆರೋಪಿಗಳು ಮತ್ತೆ ಅರೆಸ್ಟ್‌!

ಹಾನಗಲ್‌ನಲ್ಲಿ ರೋಡ್‌ ಶೋ ನಡೆಸಿದ್ದ ಆರೋಪಿಗಳು ಮತ್ತೆ ಅರೆಸ್ಟ್‌

Haveri News: ಬೇಲ್ ಷರತ್ತುಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. 7 ಪ್ರಮುಖ ಆರೋಪಿಗಳ ಜಾಮೀನು ರದ್ದತಿಗೆ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಹಾವೇರಿ ಎಸ್‌ಪಿ ಅಂಶುಕುಮಾರ್ ಮಾಹಿತಿ ನೀಡಿದ್ದಾರೆ.

Haveri News: ಹಾವೇರಿಯಲ್ಲಿ ಗ್ಯಾಂಗ್‌ರೇಪ್‌ ಆರೋಪಿಗಳಿಗೆ ಜಾಮೀನು, ಭರ್ಜರಿ ರೋಡ್‌ಶೋ

ಹಾವೇರಿಯಲ್ಲಿ ಗ್ಯಾಂಗ್‌ರೇಪ್‌ ಆರೋಪಿಗಳಿಗೆ ಜಾಮೀನು, ಭರ್ಜರಿ ರೋಡ್‌ಶೋ

ಗ್ಯಾಗ್‌ರೇಪ್‌ ಆರೋಪಿಗಳಾದ ಅಪ್ತಾಬ್ ಚಂದನಕಟ್ಟಿ, ಮದರ್ ಸಾಬ್ ಮಂಡಕ್ಕಿ, ಸಮಿವುಲ್ಲಾ ಲಾಲನವರ, ಮಹಮದ್ ಸಾದಿಕ್ ಅಗಸಿಮನಿ, ಶೊಯಿಬ್ ಮುಲ್ಲಾ, ತೌಸಿಪ್ ಚೋಟಿ, ರಿಯಾಜ್ ಸಾವಿಕೇರಿಗೆ ಜಾಮೀನು ದೊರೆತಿದ್ದು, ಜೈಲಿನಿಂದ ಹೊರಬಿದ್ದ ಕೂಡಲೇ ಕಾರುಗಳಲ್ಲಿ ಭರ್ಜರಿ ರೋಡ್‌ ಶೋ ನಡೆಸಿದ್ದಾರೆ.

Lokayukta Raid: ಲೋಕಾಯುಕ್ತ ಬಲೆಗೆ ತೆಗ್ಗಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ

ಲೋಕಾಯುಕ್ತ ಬಲೆಗೆ ತೆಗ್ಗಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ

Lokayukta Raid: ಗೋದಾಮು ನಿರ್ಮಾಣ ಕಾಮಗಾರಿ ಬಿಲ್ ಮಂಜೂರು ಮಾಡಲು ಲಂಚ ಪಡೆಯುತ್ತಿದ್ದ ಗ್ರಾಪಂ ಪಿಡಿಒ, ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಸೋಮವಾರ ನಡೆದಿದೆ. ತೆಗ್ಗಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಅಶೋಕ ದ್ಯಾಮಪ್ಪ ಗೊಂದಿ, ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣದಲ್ಲಿನ ಖಾಸಗಿ ಹೋಟೇಲ್‌ನಲ್ಲಿ 50 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ, ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

AITUC strike: ಮೇ 20ಕ್ಕೆ ಕೇಂದ್ರ, ರಾಜ್ಯ ಸರಕಾರದ ಜನ, ಕಾರ್ಮಿಕ ವಿರೋಧಿ ನೀತಿ ಖಂಡಿಸಿ ದೇಶವ್ಯಾಪಿ ಎಐಟಿಯುಸಿ ಮುಷ್ಕರ

ಮೇ 20ಕ್ಕೆ ಜನ, ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಎಐಟಿಯುಸಿ ಮುಷ್ಕರ

AITUC strike: 8 ಗಂಟೆ ಕೆಲಸದ ಅವಧಿ, ಕಾಯಂ ಕೆಲಸ, ಇನ್ನಿತರ ಹಕ್ಕುಗಳನ್ನು ಇಲ್ಲವಾಗಿಸಿ ಕಾರ್ಮಿಕರನ್ನು ಗುಲಾಮರನ್ನಾಗಿಸಲು ಕೇಂದ್ರ ಸರ್ಕಾರ ಕಾರ್ಪೊರೇಟ್ ಬಂಡವಾಳದ ಪರ ರೂಪಿಸಿರುವ ಕಾರ್ಮಿಕ ವಿರೋಧಿ 4 ಸಂಹಿತೆಗಳನ್ನು ರದ್ದುಪಡಿಸಬೇಕು ಎಂದು ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಬಿ.ಅಮ್ಜದ್ ಆಗ್ರಹಿಸಿದ್ದಾರೆ.

Loading...