ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Haveri News: ಮನೆಗೆ ನುಗ್ಗಿ 13 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು: ಆರೋಪಿ ಬಂಧನ

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಸೋಮಾಪುರ ಗ್ರಾಮದ ಬಸವರಾಜ ಗೂಳ್ಳಪ್ಪ ಪೂಜಾರ ಎಂಬುವವರ ಮನೆಗೆ ನುಗ್ಗಿ 112 ಗ್ರಾಂ ಚಿನ್ನ ಹಾಗೂ 310 ಗ್ರಾಂ ಬೆಳ್ಳಿ ಒಟ್ಟು 13,69,000 ರೂ. ಮೌಲ್ಯದ ಆಭರಣಗಳನ್ನು ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಆಡೂರ ಪೊಲೀಸ್ ಠಾಣೆಯ ವಿಶೇಷ ತಂಡ ಬಂಧಿಸಿದೆ.

ಮನೆಗೆ ನುಗ್ಗಿ 13 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು: ಆರೋಪಿ ಬಂಧನ

ಮನೆ ಕಳವು ಆರೋಪಿ ಬಂಧಿಸಿರುವ ಆಡೂರ ಪೊಲೀಸ್ ಠಾಣೆಯ ವಿಶೇಷ ತಂಡ. -

Profile
Siddalinga Swamy Jan 21, 2026 10:27 PM

ಹಾವೇರಿ, ಜ.21: ಮನೆಗೆ ನುಗ್ಗಿ 13 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಆಡೂರ ಪೊಲೀಸ್ ಠಾಣೆಯ ವಿಶೇಷ ತಂಡವು ಬುಧವಾರ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಜಿಲ್ಲೆಯ (Haveri News) ಹಾನಗಲ್‌ ತಾಲೂಕಿನ ಸೋಮಾಪುರ ಗ್ರಾಮದ ಬಸವರಾಜ ಗೂಳ್ಳಪ್ಪ ಪೂಜಾರ ಎಂಬುವವರ ಮನೆಗೆ ಕಳೆದ ಜ.19 ರಂದು ರಾತ್ರಿ 11 ಗಂಟೆಯ ಸುಮಾರು ಹಿಂಬಾಗಿಲು ಮುರಿದು ಮನೆಯೊಳಗಿನ ಟ್ರೆಜರಿ ಒಡೆದು 112 ಗ್ರಾಂ ಚಿನ್ನ ಹಾಗೂ 310 ಗ್ರಾಂ ಬೆಳ್ಳಿ ಒಟ್ಟು 13,69‌,000 ರೂ. ಮೌಲ್ಯದ ಆಭರಣಗಳನ್ನು ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಶ್ವಾನದಳವನ್ನೊಳಗೊಂಡ ಆಡೂರ ಪೊಲೀಸ್ ಠಾಣೆಯ ವಿಶೇಷ ತಂಡ ಬಂಧಿಸಿದೆ.

ಕಳ್ಳನ ಪತ್ತೆಗಾಗಿ ಜಿಲ್ಲಾ ಎಸ್ಪಿ ಯಶೋಧಾ ವಂಟಗೋಡಿ, ಎಎಸ್‌ಪಿ ಎಲ್.ವೈ. ಶಿರಕೋಳ ಅವರ ನಿರ್ದೇಶನದಂತೆ ಡಿವೈಎಸ್‌ಪಿ ಗುರುಶಾಂತಪ್ಪ ಕೆ.ವಿ, ಸಿಪಿಐ ಬಸವರಾಜ ಹಳಬಣ್ಣನವರ ಮಾರ್ಗದರ್ಶನದಲ್ಲಿ ಪಿಎಸ್ಐ ಶರಣಪ್ಪ ಹಂಡ್ರಗಲ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಸ್.ಎಂ ಕಂಬಳಿ, ಮಾರುತಿ ಹಿತ್ಲರ್, ಎಸ್.ಎಸ್ ಸುಳ್ಳಳ್ಳಿ, ಪಿ.ಬಿ ಹೊಸಮನಿ, ತಾಂತ್ರಿಕ ಸಿಬ್ಬಂದಿ ಸತೀಶ, ಮಾರುತಿ ಅವರು ಶ್ವಾನದಳ ತಂಡದೊಂದಿಗೆ ಆರೋಪಿ ಶರಣಪ್ಪ ದೊಡ್ಡ ಬಸಪ್ಪ ಮುದಿಯಪ್ಪನವರ (32) ಎಂಬುವವನ್ನು ಬಂಧಿಸಿದ್ದಾರೆ.

Haveri News: ಹಾವೇರಿಯಲ್ಲಿ ಗಾಂಜಾ ಮಾರಾಟ; ಮೂವರು ಆರೋಪಿಗಳ ಬಂಧನ

ಬಂಧಿತ ಆರೋಪಿಯಿಂದ 13,69,000 ರೂ. ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ತನಿಖಾ ತಂಡಕ್ಕೆ ಜಿಲ್ಲಾ ಎಸ್‌ಪಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಜಾತ್ರೆಯಲ್ಲಿ ಪ್ರಾಣಿ-ಪಕ್ಷಿ ಬಲಿ ನಿಷೇಧಿಸಿ ಹಾವೇರಿ ಜಿಲ್ಲಾಧಿಕಾರಿ ಆದೇಶ

ಹಾವೇರಿ: ಹಾವೇರಿ ತಾಲೂಕಿನ ಹಾವನೂರು ಗ್ರಾಮದಲ್ಲಿ ಜನವರಿ 23 ರಿಂದ ಒಂದುವಾರ ಗ್ರಾಮದೇವತೆ ಶ್ರೀ ದ್ಯಾಮವ್ವದೇವಿ ಜಾತ್ರೆ (Dyamavva devi Jatra) ನಡೆಯಲಿದೆ. ಈ ಸಮಯದಲ್ಲಿ ದೇವಸ್ಥಾನದ ಆವರಣ ಹಾಗೂ ಗ್ರಾಮದ ವ್ಯಾಪ್ತಿಯಲ್ಲಿ ಪ್ರಾಣಿ - ಪಕ್ಷಿ ಬಲಿಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ವಿಜಯಮಹಾಂತೇಶ ಬಿ ದಾನಮ್ಮನವರ ಆದೇಶ ಹೊರಡಿಸಿದ್ದಾರೆ.

ಭಕ್ತಾಧಿಗಳು, ಸಾರ್ವಜನಿಕರು ದೇವರ ಹೆಸರಿನಲ್ಲಿ ಯಾವುದೇ ರೀತಿಯ ಪ್ರಾಣಿ - ಪಕ್ಷಿ ಬಲಿ ನೀಡುವುದನ್ನು ನಿಷೇಧಸಲಾಗಿದೆ. ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯ್ದೆ 1959 ಮತ್ತು ನಿಯಮಗಳು 1963 ರ ಪ್ರಕಾರ ಹಾಗೂ ಗ್ರಾಮದ ವ್ಯಾಪ್ತಿಯಲ್ಲಿ ನೈರ್ಮಲ್ಯ ಕಾಪಾಡುವುದು ಮತ್ತು ಮುಂಜಾಗೃತ ಕ್ರಮವಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಸಾರ್ವಜನಿಕ ಹಿತ ದೃಷ್ಟಿಯಿಂದ ಪ್ರಾಣಿ - ಪಕ್ಷಿ ಬಲಿಯನ್ನು ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.