ಸ್ತ್ರೀರೋಗ ಶಸ್ತ್ರಚಿಕಿತ್ಸೆಯಲ್ಲಿ ಫ್ಲೋರಸೆನ್ಸ್-ಮಾರ್ಗದರ್ಶಿತ ತಂತ್ರಜ್ಞಾನಕ್ಕೆ ಉತ್ತೇಜನ: ಸ್ಟ್ರೈಕರ್–ಐಎಜಿಇ ಸಹಭಾಗಿತ್ವ
ಎಫ್‌ಜಿಎಸ್ ಕ್ಷೇತ್ರದಲ್ಲಿ ಗುಣಮಟ್ಟದ ಶೈಕ್ಷಣಿಕ ಅವಕಾಶಗಳ ಲಭ್ಯತೆಯನ್ನು ವಿಸ್ತರಿಸಲು ಸ್ಟ್ರೈಕರ್ ಮತ್ತು ಐಎಜಿಇ ಉದ್ದೇಶಿಸಿವೆ. ಮುಂದಿನ ಎರಡು ವರ್ಷ ಗಳಲ್ಲಿ ದೇಶದಾದ್ಯಂತ ವಿವಿಧ ವೈದ್ಯಕೀಯ ಶೈಕ್ಷಣಿಕ ಕಾರ್ಯಕ್ರಮಗಳನ್ನು ಈ ಸಹಯೋಗದಡಿ ಆಯೋಜಿಸಲಾಗುವುದು. ಭಾಗವಹಿಸುವ ಶಸ್ತ್ರಚಿಕಿತ್ಸಕರು ಭಾರತದ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ತಜ್ಞರಿಂದ ಕಲಿಯುವ ಅವಕಾಶ ಪಡೆಯಲಿದ್ದು, ಇದರಿಂದ ಜ್ಞಾನ ವಿನಿಮಯಕ್ಕೆ ಉತ್ತೇಜನ ದೊರೆಯಲಿದೆ ಮತ್ತು ಸ್ತ್ರೀರೋಗ ಶಸ್ತ್ರಚಿಕಿತ್ಸೆಯಲ್ಲಿ ಜಾಗತಿಕ ಉತ್ತಮ ಪದ್ಧತಿಗಳ ಅಳವಡಿಕೆಗೆ ಪ್ರೋತ್ಸಾಹ ದೊರೆಯಲಿದೆ
-
ಬೆಂಗಳೂರು: ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದ ಜಾಗತಿಕ ಮುಂಚೂಣಿ ಸಂಸ್ಥೆಯಾದ ಸ್ಟ್ರೈಕರ್, ಸ್ತ್ರೀರೋಗ ಶಾಸ್ತ್ರದಲ್ಲಿ ಫ್ಲೋರಸೆನ್ಸ್-ಮಾರ್ಗದರ್ಶಿತ ಶಸ್ತ್ರಚಿಕಿತ್ಸೆ (ಎಫ್‌ಜಿಎಸ್) ಕುರಿತ ಶಸ್ತ್ರ ಚಿಕಿತ್ಸಕರ ಶಿಕ್ಷಣ ಮತ್ತು ಕೌಶಲ್ಯಗಳನ್ನು ಬಲಪಡಿಸುವ ಉದ್ದೇಶದಿಂದ ಇಂಡಿಯನ್ ಅಸೋಸಿ ಯೇಷನ್ ಆಫ್ ಗೈನಕಾಲಾಜಿಕಲ್ ಎಂಡೋಸ್ಕೋಪಿಸ್ಟ್ಸ್ (ಐಎಜಿಇ) ಜೊತೆ ಕಾರ್ಯ ತಂತ್ರದ ಸಹಭಾಗಿತ್ವ ಘೋಷಿಸಿದೆ.
ಚೆನ್ನೈನಲ್ಲಿ ನಡೆದ ಪೆಲ್ವಿಕ್ ಆರ್ಗನ್ ಪ್ರೊಲ್ಯಾಪ್ಸ್ ಕಾನ್ಫರೆನ್ಸ್ 2026ರ ಸಂದರ್ಭದಲ್ಲಿ, ದೇಶದಾ ದ್ಯಂತದ 350 ಸ್ತ್ರೀರೋಗ ಶಸ್ತ್ರಚಿಕಿತ್ಸಕರು ಮತ್ತು ಆರೋಗ್ಯ ಕ್ಷೇತ್ರದ ವೃತ್ತಿಪರರ ಸಮ್ಮುಖದಲ್ಲಿ ಈ ಸಹಭಾಗಿತ್ವಕ್ಕೆ ಸಹಿ ಹಾಕಲಾಯಿತು.
ಭಾರತದಲ್ಲಿ ಮಹಿಳೆಯರ ಆರೋಗ್ಯ ಸಮಸ್ಯೆಗಳ ಪ್ರಮಾಣ ಹೆಚ್ಚುತ್ತಿರುವುದರ ಜೊತೆಗೆ, ಕನಿಷ್ಠ ಆಕ್ರಮಣಕಾರಿ ಶಸ್ತ್ರಚಿಕಿತ್ಸೆಯ ಬಳಕೆಯೂ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸಕರ ಸಾಮರ್ಥ್ಯ ವೃದ್ಧಿ ಮತ್ತು ಪ್ರಮಾಣೀಕೃತ ವೈದ್ಯಕೀಯ ಶಿಕ್ಷಣದಲ್ಲಿ ಹೆಚ್ಚಿನ ಹೂಡಿಕೆಯ ಅಗತ್ಯತೆ ಹೆಚ್ಚಾಗಿದೆ. ಫ್ಲೋರಸೆನ್ಸ್-ಮಾರ್ಗದರ್ಶಿತ ಶಸ್ತ್ರಚಿಕಿತ್ಸೆಯು ಸ್ತ್ರೀರೋಗ ಶಾಸ್ತ್ರದಲ್ಲಿ ಪ್ರಮುಖ ಪ್ರಗತಿಯಾಗಿ ಹೊರಹೊಮ್ಮುತ್ತಿದ್ದು, ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಉತ್ತಮ ದೃಶ್ಯೀಕರಣವನ್ನು ಒದಗಿಸುವ ಮೂಲಕ ಶಸ್ತ್ರಚಿಕಿತ್ಸೆಯ ನಿಖರತೆ, ವೈದ್ಯಕೀಯ ನಿರ್ಧಾರ ಕೈಗೊಳ್ಳುವಿಕೆ ಮತ್ತು ರೋಗಿಗಳ ಆರೈಕೆಯನ್ನು ಸುಧಾರಿಸಲು ನೆರವಾಗುತ್ತದೆ.
ಈ ಸಹಭಾಗಿತ್ವದ ಮೂಲಕ, ಎಫ್‌ಜಿಎಸ್ ಕ್ಷೇತ್ರದಲ್ಲಿ ಗುಣಮಟ್ಟದ ಶೈಕ್ಷಣಿಕ ಅವಕಾಶಗಳ ಲಭ್ಯತೆಯನ್ನು ವಿಸ್ತರಿಸಲು ಸ್ಟ್ರೈಕರ್ ಮತ್ತು ಐಎಜಿಇ ಉದ್ದೇಶಿಸಿವೆ. ಮುಂದಿನ ಎರಡು ವರ್ಷ ಗಳಲ್ಲಿ ದೇಶದಾದ್ಯಂತ ವಿವಿಧ ವೈದ್ಯಕೀಯ ಶೈಕ್ಷಣಿಕ ಕಾರ್ಯಕ್ರಮಗಳನ್ನು ಈ ಸಹಯೋಗದಡಿ ಆಯೋಜಿಸಲಾಗುವುದು. ಭಾಗವಹಿಸುವ ಶಸ್ತ್ರಚಿಕಿತ್ಸಕರು ಭಾರತದ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ತಜ್ಞರಿಂದ ಕಲಿಯುವ ಅವಕಾಶ ಪಡೆಯಲಿದ್ದು, ಇದರಿಂದ ಜ್ಞಾನ ವಿನಿಮಯಕ್ಕೆ ಉತ್ತೇಜನ ದೊರೆಯಲಿದೆ ಮತ್ತು ಸ್ತ್ರೀರೋಗ ಶಸ್ತ್ರಚಿಕಿತ್ಸೆಯಲ್ಲಿ ಜಾಗತಿಕ ಉತ್ತಮ ಪದ್ಧತಿಗಳ ಅಳವಡಿಕೆಗೆ ಪ್ರೋತ್ಸಾಹ ದೊರೆಯಲಿದೆ.
ಸ್ಟ್ರೈಕರ್ ಇಂಡಿಯಾದ ಉಪಾಧ್ಯಕ್ಷರು ಮತ್ತು ಪ್ರಧಾನ ವ್ಯವಸ್ಥಾಪಕರಾದ ಅಮನ್ ರಿಷಿ ಮಾತನಾಡಿ, “ಭಾರತದ ಶಸ್ತ್ರಚಿಕಿತ್ಸಾ ಕ್ಷೇತ್ರವು ನಿರಂತರವಾಗಿ ಬದಲಾಗುತ್ತಿರುವ ಸಂದರ್ಭದಲ್ಲಿ, ನವೀನ ತಂತ್ರಜ್ಞಾನಗಳ ಜೊತೆಗೆ ನಿರಂತರ ವೈದ್ಯಕೀಯ ಕೌಶಲ್ಯಾಭಿವೃದ್ಧಿಗೂ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ. ಆರೋಗ್ಯ ವೃತ್ತಿಪರರು ತಂತ್ರಜ್ಞಾನವನ್ನು ಆತ್ಮವಿಶ್ವಾಸದಿಂದ ಮತ್ತು ನಿಖರವಾಗಿ ಬಳಸಲು ಅಗತ್ಯವಾದ ತರಬೇತಿ ಪಡೆದಾಗ ಮಾತ್ರ ಅದರ ಗರಿಷ್ಠ ಪ್ರಯೋಜನ ಪಡೆಯಬಹುದು ಎಂಬುದು ಸ್ಟ್ರೈಕರ್‌ನ ನಂಬಿಕೆ. ಐಎಜಿಇ ಜೊತೆಗಿನ ನಮ್ಮ ಸಹಯೋಗದ ಮೂಲಕ, ಫ್ಲೋರಸೆನ್ಸ್-ಮಾರ್ಗದರ್ಶಿತ ಶಸ್ತ್ರಚಿಕಿತ್ಸೆಯಲ್ಲಿ ವ್ಯವಸ್ಥಿತ ತರಬೇತಿಯ ಅವಕಾಶ ಗಳನ್ನು ವಿಸ್ತರಿಸಲು ಮತ್ತು ಭಾರತದಾದ್ಯಂತ ರೋಗಿಗಳಿಗೆ ಉತ್ತಮ ಗುಣಮಟ್ಟದ ಆರೈಕೆ ಒದಗಿಸಲು ಶಸ್ತ್ರಚಿಕಿತ್ಸಕರಿಗೆ ನೆರವಾಗಲು ನಾವು ಎದುರು ನೋಡುತ್ತಿದ್ದೇವೆ,” ಎಂದರು.
ಈ ಸಹಭಾಗಿತ್ವದ ಕುರಿತು ಪ್ರತಿಕ್ರಿಯಿಸಿದ ಐಎಜಿಇ ಅಧ್ಯಕ್ಷೆ ಡಾ.ಸುಧಾ ಟಂಡನ್, “ಕನಿಷ್ಠ ಆಕ್ರಮಣಕಾರಿ ಸ್ತ್ರೀರೋಗ ಶಸ್ತ್ರಚಿಕಿತ್ಸೆಯು ಹೊಸ ತಂತ್ರಜ್ಞಾನಗಳು ಮತ್ತು ವಿಧಾನಗಳು ವೈದ್ಯಕೀಯ ಕಾರ್ಯವಿಧಾನಗಳನ್ನು ಮರುರೂಪಿಸುತ್ತಿರುವ ಹೊಸ ಯುಗವನ್ನು ಪ್ರವೇಶಿಸುತ್ತಿದೆ. ಈ ಪ್ರಗತಿಗಳಿಗೆ ಹೊಂದಿಕೊಳ್ಳಲು ನಿರಂತರ ಕಲಿಕೆ, ವ್ಯವಸ್ಥಿತ ತರಬೇತಿ ಮತ್ತು ವೈದ್ಯರು ತಮ್ಮ ವೈದ್ಯಕೀಯ ಅನುಭವಗಳನ್ನು ಪರಸ್ಪರ ಹಂಚಿಕೊಳ್ಳುವ ಅವಕಾಶಗಳು ಅಗತ್ಯವಾಗಿವೆ. ಸ್ಟ್ರೈಕರ್ ಜೊತೆಗಿನ ನಮ್ಮ ಸಹಭಾಗಿತ್ವದ ಮೂಲಕ, ಫ್ಲೋರಸೆನ್ಸ್ ಮಾರ್ಗದರ್ಶಿತ ಶಸ್ತ್ರಚಿಕಿತ್ಸೆ ಮತ್ತು ಮುಂದುವರಿದ ವೈದ್ಯಕೀಯ ವಿಧಾನಗಳ ಕುರಿತು ಶಿಕ್ಷಣ ಹಾಗೂ ಜ್ಞಾನ ವಿನಿಮಯಕ್ಕೆ ಬಲಿಷ್ಠ ವೇದಿಕೆಯನ್ನು ನಿರ್ಮಿಸಿ, ಭಾರತದಾದ್ಯಂತ ಸ್ತ್ರೀರೋಗ ಆರೈಕೆಯ ಗುಣಮಟ್ಟವನ್ನು ಮತ್ತಷ್ಟು ಉನ್ನತೀಕರಿಸಲು ನಾವು ಎದುರು ನೋಡುತ್ತಿದ್ದೇವೆ,” ಎಂದು ಹೇಳಿದರು.
ಭಾರತದ ಆರೋಗ್ಯ ವ್ಯವಸ್ಥೆಯು ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿರುವ ಸಂದರ್ಭದಲ್ಲಿ, ಉದ್ಯಮ ಮತ್ತು ವೈದ್ಯಕೀಯ ಸಮುದಾಯದ ನಡುವಿನ ಸಹಭಾಗಿತ್ವಗಳು ನವೀನತೆಯನ್ನು ಉತ್ತೇಜಿಸುವಲ್ಲಿ, ವೈದ್ಯಕೀಯ ಅಭ್ಯಾಸವನ್ನು ಬಲಪಡಿಸುವಲ್ಲಿ ಮತ್ತು ರೋಗಿಗಳ ಚಿಕಿತ್ಸಾ ಫಲಿತಾಂಶಗಳನ್ನು ಸುಧಾರಿಸುವಲ್ಲಿ ಹೆಚ್ಚು ಮಹತ್ವದ ಪಾತ್ರ ವಹಿಸಲಿವೆ. ಈ ಸಹಭಾಗಿತ್ವದ ಮೂಲಕ, ಭಾರತದಲ್ಲಿ ಸ್ತ್ರೀರೋಗ ಆರೈಕೆಯ ಭವಿಷ್ಯ ರೂಪಿಸುವ ಈ ಸಾಮೂಹಿಕ ದೃಷ್ಟಿಕೋನಕ್ಕೆ ಕೊಡುಗೆ ನೀಡಲು ಸ್ಟ್ರೈಕರ್ ಮತ್ತು ಐಎಜಿಇ ಉದ್ದೇಶಿಸಿವೆ.