Health Tips: ಚುರುಕಾದ ಮೆದುಳು ಬೇಕೇ? ಈ ಆಹಾರಗಳ ಸೇವನೆ ಮಾಡಿ
ನೀವು ಸೇವನೆ ಮಾಡುವ ಆಹಾರದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವ ಮೂಲಕ ಆರೋಗ್ಯ ವೃದ್ಧಿಸಿ ಸ್ಮರಣ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ನೀವು ಆರೋಗ್ಯಕರ ಮತ್ತು ಚುರುಕಾದ ಮೆದುಳನ್ನು ಬೆಂಬಲಿಸಲು ಬಯಸಿದರೆ ನಿಮ್ಮ ಊಟಕ್ಕೆ ಸೇರಿಸಲು ಯೋಗ್ಯವಾದ ಆಹಾರಗಳ ಬಗ್ಗೆ ತಜ್ಞರು ಸಲಹೆ ನೀಡಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ,ಆ.31: ನಾವು ದಿನ ನಿತ್ಯ ಸೇವಿಸುವ ಆಹಾರವು ಕೇವಲ ದೇಹದ ಶಕ್ತಿಗೆ ಮಾತ್ರವಲ್ಲ, ನಮ್ಮ ಮೆದುಳಿನ ಆರೋಗ್ಯದ (Sharper Brain) ಮೇಲೂ ಪ್ರಭಾವ ಬೀರುತ್ತದೆ. ಹಾಗಾಗಿ ನೀವು ಸೇವನೆ ಮಾಡುವ ಆಹಾರದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವ ಮೂಲಕ ಆರೋಗ್ಯ ವೃದ್ಧಿಸಿ ಸ್ಮರಣ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ನೀವು ಆರೋಗ್ಯಕರ ಮತ್ತು ಚುರುಕಾದ ಮೆದುಳನ್ನು ಬೆಂಬಲಿಸಲು ಬಯಸಿದರೆ ನಿಮ್ಮ ಊಟಕ್ಕೆ ಸೇರಿಸಲು ಯೋಗ್ಯವಾದ ಆಹಾರಗಳ ಬಗ್ಗೆ ತಜ್ಞರು ಸಲಹೆ ನೀಡಿದ್ದಾರೆ.
ಮೊಟ್ಟೆಗಳು:
ಮೆದುಳಿನ ಆರೋಗ್ಯ ವೃದ್ಧಿಗೆ ಮೊಟ್ಟೆಗಳು ಅಗತ್ಯ ಆಹಾರವಾಗಿದೆ. ಇದು ಪ್ರೋಟೀನ್ ಜೊತೆಗೆ ಕೋಲೀನ್, ವಿಟಮಿನ್‌ಗಳು ಮತ್ತು ಖನಿಜಾಂಶಗಳನ್ನು ಒದಗಿಸುತ್ತವೆ. ಕೋಲೀನ್ ಎಂಬುದು ಅಸೆಟೈಲ್ಕೋಲೀನ್ ಉತ್ಪಾದನೆಗೆ ಅತ್ಯಗತ್ಯವಾಗಿದೆ. ಇದು ಮೆಮೊರಿ, ಕಲಿಕೆ ಹಾಗೂ ಮೆದುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
ವಾಲ್ನಟ್ಸ್:
ಇದು ಒಮೆಗಾ-3 ಕೊಬ್ಬಿನಾಮ್ಲಗಳು, ಮೆಗ್ನೀಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಅಧಿಕವಾಗಿದೆ. ಮೆದುಳಿನ ನರಕೋಶಗಳನ್ನು ಆ್ಯಕ್ಟೀವ್ ಮಾಡಿ ಒತ್ತಡ ಮತ್ತು ಉರಿ ಯೂತದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಮೆಗ್ನೀಸಿಯಮ್ ಮೆದುಳು ಮತ್ತು ನರಮಂಡಲದ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು ಮಾನಸಿಕ ಕಾರ್ಯಕ್ಷಮತೆಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.
ಕೊಬ್ಬಿನಾಂಶವಿರುವ ಮೀನು:
ಸಲ್ಮನ್, ಸರಡೈನ್‌ನಂತಹ ಮೀನುಗಳಲ್ಲಿ ಓಮೆಗಾ-3 ಪ್ರಮಾಣ ಹೇರಳವಾಗಿವೆ. ಒಮೆಗಾ-3 ಅಂಶದಿಂದ ಮೆದುಳಿನ ಬೆಳವಣಿಗೆಗೆ ಮತ್ತು ನೆನಪಿನ ಶಕ್ತಿಗಯನ್ನು ಹೆಚ್ಚಿಸುತ್ತದೆ. ಇವು ಮೆದುಳಿನ ಕೋಶ ಪೊರೆಗಳ ಪ್ರಮುಖ ರಚನಾತ್ಮಕ ಭಾಗವಾಗಿದ್ದು, ನರಕೋಶಗಳ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತವೆ.
ಬೆರ್ರಿ ಹಣ್ಣುಗಳು:
ಬೆರ್ರಿಗಳಲ್ಲಿಪಾಲಿಫಿನಾಲ್ ಮತ್ತು ಅಂಥೋಸಯಾನಿನ್ ಗಳಿದ್ದು, ಇವು ಮೆದುಳಿನಲ್ಲಿ ಉರಿಯೂತ ವನ್ನು ಕಡಿಮೆ ಮಾಡುತ್ತವೆ. ಬೆರ್ರಿಗಳಲ್ಲಿರುವ ಪೋಷಕಾಂಶಗಳು ಮೆದುಳಿನ ಜೀವಕೋಶಗಳ ನಡುವೆ ಹೊಸ ಸಂಪರ್ಕಗಳನ್ನು ಬೆಳೆಸಲು ಹಾಗೂ ಏಕಾಗ್ರತೆ ಹೆಚ್ಚಿಸಲು ಸಹಾಯ ಮಾಡುತ್ತದೆ.