ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Banana Leaves: ಪ್ಲೇಟ್ ಊಟಕ್ಕಿಂತ ಬಾಳೆ ಎಲೆ ಊಟ ಉತ್ತಮ ಯಾಕೆ? ಇಲ್ಲಿದೆ ಕಾರಣ

ಬಾಳೆ ಎಲೆಯು ನೈಸರ್ಗಿಕವಾಗಿ ಶುದ್ಧವಾಗಿದ್ದು, ಅದರಲ್ಲಿನ ಊಟ ಆರೋಗ್ಯಕ್ಕೆ ಎಷ್ಟು ಉತ್ತಮ ವಾದುದ್ದು? ಇದು ಹೇಗೆ ಆಹಾರದ ರುಚಿಯನ್ನು ಹೆಚ್ಚಿಸುವುದು? ಜೀರ್ಣಕ್ರಿಯೆಗೆ ಹೇಗೆ ಸಹಾಯ ಮಾಡುತ್ತದೆ? ಹೊರಗಡೆ ಹೋದಾಗ ಹಾಗೂ ಸಭೆ ಸಮಾರಂಭದಲ್ಲಿ ಯಾಕೆ ಬಾಳೆ ಎಲೆಯಲ್ಲೇ ಊಟ ಮಾಡಬೇಕು? ಎನ್ನುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ಪ್ರೊ. ಸುತ್ತೂರು ಮಾಲಿನಿ ಅವರು ನೀಡಿದ್ದಾರೆ.

ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಈ ಆರೋಗ್ಯ ಲಾಭ ಇದೆ

ಪ್ರೊ. ಸುತ್ತೂರು ಎಸ್. ಮಾಲಿನಿ -

Profile
Pushpa Kumari Jan 23, 2026 6:00 AM

ಬೆಂಗಳೂರು,ಜ.22: ಭಾರತೀಯ ಸಂಸ್ಕೃತಿಯಲ್ಲಿ ಬಾಳೆ ಎಲೆಯ ಊಟಕ್ಕೆ (Banana Leaves) ವಿಶೇಷವಾದ ಸ್ಥಾನಮಾನವಿದೆ. ಇದು ಕೇವಲ ಪರಂಪರೆಯ ಸಂಕೇತವಷ್ಟೇ ಅಲ್ಲ, ಆರೋಗ್ಯದ ದೃಷ್ಟಿ ಯಿಂದಲೂ ಬಹಳ ಪ್ರಯೋಜನಕಾರಿ. ಬಾಳೆ ಎಲೆಯು ನೈಸರ್ಗಿಕವಾಗಿ ಶುದ್ಧವಾಗಿದ್ದು, ಅದರಲ್ಲಿನ ಊಟ ಆರೋಗ್ಯಕ್ಕೆ ಎಷ್ಟು ಉತ್ತಮವಾದುದ್ದು? ಇದು ಹೇಗೆ ಆಹಾರದ ರುಚಿಯನ್ನು ಹೆಚ್ಚಿಸುವುದು? ಜೀರ್ಣಕ್ರಿಯೆಗೆ ಹೇಗೆ ಸಹಾಯ ಮಾಡುತ್ತದೆ? ಹೊರಗಡೆ ಹೋದಾಗ ಹಾಗೂ ಸಭೆ ಸಮಾರಂಭದಲ್ಲಿ ಯಾಕೆ ಬಾಳೆ ಎಲೆಯಲ್ಲೇ ಊಟ ಮಾಡಬೇಕು? ಎನ್ನುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ಪ್ರೊ. ಸುತ್ತೂರು ಮಾಲಿನಿ ಅವರು ನೀಡಿದ್ದಾರೆ.

ಬಾಳೆ ಎಲೆ ಊಟಕ್ಕೆ ಅದರದೇ ಆದ ಮಹತ್ವವಿದೆ. ಸಾಮಾನ್ಯ ವಾಗಿ ಮದುವೆ ಹಾಗೂ ಇತರ ಸಭೆ ಸಮಾರಂಭಗಳಲ್ಲಿ ಬಾಳೆ ಎಲೆ ಊಟಕ್ಕೆ ಅಧಿಕ ಮಾನ್ಯತೆ ನೀಡುತ್ತಾರೆ. ಈ ಎಲೆಯಲ್ಲಿ ಊಟ ಮಾಡುವುದರಿಂದ ವೈಜ್ಞಾನಿಕವಾಗಿಯೂ ಬಹಳಷ್ಟು ಅನುಕೂಲ ಇದೆ ಎಂದು ಸಾಬೀತು ಆಗಿದೆ. ಬಾಳೆ ಎಲೆಗಳಲ್ಲಿ ಪಾಲಿಫಿನಾಲ್‌ಗಳು ಎಂಬ ನೈಸರ್ಗಿಕ ಪೋಷಕಾಂಶಗಳು ಇರುವುದರಿಂದ ಇವು ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ತಡೆಯುವಂತೆ ಮಾಡುತ್ತದೆ.

ವಿಡಿಯೋ ನೋಡಿ:



ಅದರಲ್ಲೂ ಹಬ್ಬಹರಿದಿನದ ಸಂದರ್ಭದಲ್ಲಿ ಬಾಳೆಎಲೆಯಲ್ಲಿ ಊಟ ಮಾಡಿದರೆ ಮನಸ್ಸಿಗೆ ಬಹಳಷ್ಟು ಆನಂದ ಸಿಗುವುದು. ತುಂಬಾ ತಾಜಾ ಮತ್ತು ಸ್ವಚ್ಛವಾಗಿ ಇರುವುದರಿಂದ ಯಾವುದೇ ಬ್ಯಾಕ್ಟೀರಿಯಾಗಳು ತಗಲುವ ಸಾಧ್ಯತೆ ಇರುವುದಿಲ್ಲ. ಹಾಗಾಗಿ ಶುಚಿತ್ವ ಮತ್ತು ಆರೋಗ್ಯದ ದೃಷ್ಟಿಯಿಂದ ಬಾಲೆ ಎಲೆ ಬಹಳಷ್ಟು ಪ್ರಮುಖವಾಗಿದ್ದು ಆಹಾರದ ರುಚಿಯು ಹೆಚ್ಚಿಸುತ್ತದೆ.

Health Tips: ಹಲ್ಲಿನ ಸೆಟ್ ಬದಲು ಡೆಂಟಲ್ ಇಂಪ್ಲ್ಯಾಂಟ್ ‌ಮಾಡಿದರೆ ಈ ಲಾಭ ಸಿಗಲಿದೆ

ಬಾಳೆ ಎಲೆಯಲ್ಲಿ ನಾವು ಬಿಸಿಯಾದ ಆಹಾರ ಹಾಕಿಕೊಂಡಾಗ ಅದರಲ್ಲಿ ಪಾಲಿಫಿನಾಲ್‌ಗಳು ಹೆಚ್ಚಾಗಿ ಇವು ದೇಹದ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ನೈಸರ್ಗಿಕ ಆಂಟಿಆಕ್ಸಿಡೆಂಟ್ ಆಗಿ ಕೆಲಸ ಮಾಡುತ್ತದೆ. ಪಾಲಿಫಿನಾಲ್‌ಗಳಲ್ಲಿ ಉತ್ಕರ್ಷಣ ನಿರೋಧಕಗಳು ಇರುತ್ತವೆ. ಬಿಸಿ ಆಹಾರವು ಎಲೆ ಯೊಂದಿಗೆ ಹಾಕಿ ಕೊಂಡಾಗ, ಈ ಪೋಷಕಾಂಶಗಳು ಆಹಾರದೊಂದಿಗೆ ಬೆರೆತು ನಮ್ಮ ದೇಹಕ್ಕೆ ಪ್ರಯೋಜನವನ್ನು ನೀಡುತ್ತವೆ.ಇದರಿಂದ ರೋಗ ನಿರೋಧಕಶಕ್ತಿಯ ಪ್ರಮಾಣ ಕೂಡ ಹೆಚ್ಚಾಗುತ್ತದೆ.

ಏನೆಲ್ಲಾ ಆರೋಗ್ಯ ಲಾಭ ಇದೆ:

  • ಬಾಳೆ ಎಲೆಗಳಲ್ಲಿ ತಿನ್ನುವುದರಿಂದ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.ಅದರ ಜೊತೆ ಕರುಳಿನ‌ ಆರೋಗ್ಯವನ್ನು ಕೂಡ ಸುಧಾರಿಸುತ್ತದೆ.
  • ಬಾಳೆ ಎಲೆಯ ಊಟ ಮನಸ್ಸಿಗೆ ಹಿತ ನೀಡಲಿದ್ದು ದೇಹದಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
  • ಅದೇ ರೀತಿ ಬಾಲೆ ಎಲೆಯಲ್ಲಿ ಆಹಾರ ಬೇಯಿ ಸುವುದರಿಂದಲೂ ಆಹಾರದ ರುಚಿ ಹೆಚ್ಚಿಸುತ್ತರೆ.
  • ಬಾಳೆ ಎಲೆಗಳು ಸಂಪೂರ್ಣವಾಗಿ ನೈಸರ್ಗಿಕವಾಗಿದ್ದು ಜೈವಿಕ ವಿಘಟನೀಯವಾಗಿವೆ. ಬಳಕೆ ಮಾಡಿದ ನಂತರವೂ ಅವು ಕೊಳೆತು ಗೊಬ್ಬರವಾಗಿ ಬದಲಾಗುತ್ತವೆ.