ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

3000 ರೊಬೊ ನೆರವಿನ ಶಸ್ತ್ರಚಿಕಿತ್ಸೆಗಳ ಪೂರ್ಣಗೊಳಿಸಿದ ಎಂಬ ಹೆಗ್ಗಳಿಕೆಗೆ ಫೋರ್ಟಿಸ್ ಆಸ್ಪತ್ರೆ ಪಾತ್ರ

2018 ರಲ್ಲಿ ತನ್ನ ರೋಬೋಟಿಕ್ ಶಸ್ತ್ರಚಿಕಿತ್ಸಾ ಕಾರ್ಯಕ್ರಮವನ್ನು ಪ್ರಾರಂಭಿಸಿದ ದಿನದಿಂದಲೂ ಆಸ್ಪತ್ರೆಯು ಯುರಾಲಜಿ, ಮೂತ್ರಪಿಂಡ ಕಸಿ, ಗೈನಕಾಲಜಿ, ಸರ್ಜಿಕಲ್ ಆಂಕಾಲಜಿ, ಗ್ಯಾಸ್ಟ್ರೋ ಇಂಟಸ್ಟೈನಲ್ ಶಸ್ತ್ರಚಿಕಿತ್ಸೆ, ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ, ಹೃದ್ರೋಗ ಶಸ್ತ್ರಚಿಕಿತ್ಸೆ ಮತ್ತು ಇಎನ್‌ಟಿ ಸೇರಿದಂತೆ 12 ಕ್ಕೂ ಹೆಚ್ಚು ವಿಭಾಗಗಳಲ್ಲಿ ಭಾರತದ ಅತ್ಯಂತ ಸಮಗ್ರ ರೋಬೋಟಿಕ್ ಶಸ್ತ್ರಚಿಕಿತ್ಸಾ ಕಾರ್ಯಕ್ರಮಗಳಲ್ಲಿ ಒಂದನ್ನು ನಿರ್ಮಿಸಿದೆ

3000 ರೊಬೊ ನೆರವಿನ ಶಸ್ತ್ರಚಿಕಿತ್ಸೆಗಳ ಪೂರ್ಣಗೊಳಿಸಿದ ಫೋರ್ಟಿಸ್ ಆಸ್ಪತ್ರೆ

-

Profile
Ashok Nayak Aug 2, 2026 2:02 PM

ಬೆಂಗಳೂರು: ಭಾರತದಲ್ಲಿ ರೋಬೋಟಿಕ್ ನೆರವಿನ ಶಸ್ತ್ರಚಿಕಿತ್ಸೆಯ ಬೆಳವಣಿಗೆಯಲ್ಲಿ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿರುವ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯು, ಅತ್ಯಾಧುನಿಕ ಡಾ ವಿನ್ಸಿ ಎಕ್ಸ್ಐ ಶಸ್ತ್ರಚಿಕಿತ್ಸಾ ವ್ಯವಸ್ಥೆ ಬಳಸಿ ದೇಶದಲ್ಲೇ ಅತ್ಯಂತ ವೇಗವಾಗಿ 3000 ರೊಬೊ ನೆರವಿನ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸಿದ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಮೈಲಿಗಲ್ಲು, ಆಸ್ಪತ್ರೆಯ ಅತ್ಯುತ್ಕೃಷ್ಟ ವೈದ್ಯಕೀಯ ಸೇವೆ, ಶಸ್ತ್ರಚಿಕಿತ್ಸಾ ಕ್ಷೇತ್ರದಲ್ಲಿನ ನಾವೀನ್ಯತೆ ಹಾಗೂ ಹಲವು ವಿಭಾಗಗಳಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸಾ ಫಲಿತಾಂಶಗಳನ್ನು ನೀಡುವಲ್ಲಿ ಸಂಸ್ಥೆ ಹೊಂದಿರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ವಿಶೇಷ ಮೈಲಿಗಲ್ಲಿನ ಸಂಭ್ರಮಾಚರಣೆ ಯನ್ನು ಬೆಂಗಳೂರಿನ ದಿ ಲಲಿತ್ ಅಶೋಕ್ ಹೋಟೆಲ್‌ ಆಯೋಜಿಸಲಾಗಿತ್ತು. ಕರ್ನಾಟಕ ಸರ್ಕಾರದ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್(U T Khader) ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮದ ಘನತೆ ಹೆಚ್ಚಿಸಿದರು.

2018 ರಲ್ಲಿ ತನ್ನ ರೋಬೋಟಿಕ್ ಶಸ್ತ್ರಚಿಕಿತ್ಸಾ ಕಾರ್ಯಕ್ರಮ ಪ್ರಾರಂಭಿಸಿದ ದಿನದಿಂದಲೂ ಆಸ್ಪತ್ರೆಯು ಯುರಾಲಜಿ, ಮೂತ್ರಪಿಂಡ ಕಸಿ, ಗೈನಕಾಲಜಿ, ಸರ್ಜಿಕಲ್ ಆಂಕಾಲಜಿ, ಗ್ಯಾಸ್ಟ್ರೋ ಇಂಟಸ್ಟೈನಲ್ ಶಸ್ತ್ರಚಿಕಿತ್ಸೆ, ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ, ಹೃದ್ರೋಗ ಶಸ್ತ್ರಚಿಕಿತ್ಸೆ ಮತ್ತು ಇಎನ್‌ಟಿ ಸೇರಿದಂತೆ 12 ಕ್ಕೂ ಹೆಚ್ಚು ವಿಭಾಗಗಳಲ್ಲಿ ಭಾರತದ ಅತ್ಯಂತ ಸಮಗ್ರ ರೋಬೋಟಿಕ್ ಶಸ್ತ್ರಚಿಕಿತ್ಸಾ ಕಾರ್ಯಕ್ರಮಗಳಲ್ಲಿ ಒಂದನ್ನು ನಿರ್ಮಿಸಿದೆ.

ಫೋರ್ಟಿಸ್ ಬನ್ನೇರುಘಟ್ಟ ಆಸ್ಪತ್ರೆಯು ಒಂದೇ ಸೂರಿನಡಿ ಎರಡು ಡಾ ವಿನ್ಸಿ ಎಕ್ಸ್ಐ ರೋಬೋ ಟಿಕ್ ಶಸ್ತ್ರಚಿಕಿತ್ಸಾ ವ್ಯವಸ್ಥೆಗಳನ್ನು ಹೊಂದಿರುವ ಭಾರತದ ಕೆಲವೇ ಆಸ್ಪತ್ರೆಗಳಲ್ಲಿ ಒಂದಾಗಿದೆ. ಇದು ಶಸ್ತ್ರಚಿಕಿತ್ಸಕರಿಗೆ ಅತ್ಯಂತ ಸಂಕೀರ್ಣವಾದ ಪ್ರಕ್ರಿಯೆಗಳನ್ನು ಇನ್ನಷ್ಟು ನಿಖರತೆಯಿಂದ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಜೊತೆಗೆ, ಆಸ್ಪತ್ರೆಯು ಭಾರತದ ಮೊದಲ ಟ್ರೀಟ್ (ಟೋಟಲ್-ರೊಬೊ ಎನೇಬ್ಲ್ಡ್ ಅಂಡ್ ಅಸಿಸ್ಟೆಂಟ್ ಟ್ರಾನ್ಸ್ ಪ್ಲಾಂಟ್) ಕಾರ್ಯಕ್ರಮವನ್ನು ಪ್ರಾರಂಭಿಸಿದೆ.

ಇದು ಮೂತ್ರಪಿಂಡ ದಾನಿ ಮತ್ತು ಸ್ವೀಕರಿಸುವವರ ಇಬ್ಬರ ಪ್ರಕ್ರಿಯೆಗಳಲ್ಲೂ ರೋಬೋಟಿಕ್ ತಂತ್ರಜ್ಞಾನವನ್ನು ಸಂಯೋಜಿಸುವ ಸುಧಾರಿತ ರೋಬೋಟಿಕ್ ಮೂತ್ರಪಿಂಡ ಕಸಿ ಉಪಕ್ರಮ ವಾಗಿದೆ.

ಇದನ್ನೂ ಓದಿ: Minister U T Khader's Humanity: ಬೆಂಗಾವಲು ವಾಹನ ಡಿಕ್ಕಿ, ಸ್ಕೂಟಿ ಸವಾರನಿಗೆ ಗಂಭೀರ ಗಾಯ: ​ಮಾನವೀಯತೆ ಮೆರೆದ ಸಚಿವರು

ತನ್ನ ರೋಬೋಟಿಕ್ ಶಸ್ತ್ರಚಿಕಿತ್ಸಾ ಕಾರ್ಯಕ್ರಮದ ಯಶಸ್ಸನ್ನು ಪ್ರತಿಬಿಂಬಿಸುವಂತೆ, ಆಸ್ಪತ್ರೆಯು ಇತ್ತೀಚೆಗೆ ನಿರಂತರ ಮೂತ್ರಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ 77 ವರ್ಷದ ಪಟ್ಟಾಭಿ ರಾಮನ್ ವೆಂಕಟರಾಮನ್ ಅವರಿಗೆ ಯಶಸ್ವಿ ಚಿಕಿತ್ಸೆ ನಡೆಸಿದೆ. ಅವರು ಸಮಸ್ಯೆ ಗಳೊಂದಿಗೆ ಬನ್ನೇರುಘಟ್ಟದ ಫೋರ್ಟಿಸ್ ಆಸ್ಪತ್ರೆಯನ್ನು ಸಂಪರ್ಕಿಸಿದ್ದರು. ವಿವರವಾದ ತಪಾಸಣೆಯ ನಂತರ, ಅವರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಅವರಿಗೆ ವಯಸ್ಸಾಗಿದ್ದರೂ ಮತ್ತು ಇತರ ಹಲವು ಆರೋಗ್ಯ ಸಮಸ್ಯೆಗಳಿದ್ದರೂ ಸಹ, ಡಾ. ಮೋಹನ್ ಕೇಶವಮೂರ್ತಿ ಮತ್ತು ಅವರ ತಂಡದ ನೇತೃತ್ವದಲ್ಲಿ ರೋಬೋಟ್ ನೆರವಿನ ರ್ಯಾಡಿಕಲ್ ಪ್ರಾಸ್ಟೇಟೆಕ್ಟಮಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು.

ಅತ್ಯಂತ ಕನಿಷ್ಠ ಕತ್ತರಿಕೆಯೊಂದಿಗೆ ನಿರ್ವಹಿಸಿಸ ಈ ಪ್ರಕ್ರಿಯೆಯಲ್ಲಿ, ಕ್ಯಾನ್ಸರ್ ಪೀಡಿತ ಪ್ರಾಸ್ಟೇಟ್ ಗ್ರಂಥಿ ಮತ್ತು ಅದರ ಹತ್ತಿರದ ಲಿಂಫ್ ನೋಡ್‌ ಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಯಿತು. ಅವರು ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ರೋಬೋಟಿಕ್ ಸ್ತ್ರೀರೋಗ ಶಸ್ತ್ರಚಿಕಿತ್ಸೆಯಲ್ಲಿ ಆಸ್ಪತ್ರೆಯ ನೈಪುಣ್ಯತೆಯನ್ನು ಎತ್ತಿಹಿಡಿಯುವಂತೆ, ಆಸ್ಪತ್ರೆಯು ಇತ್ತೀಚೆಗೆ ತೀವ್ರ ಮುಟ್ಟಿನ ನೋವು ಮತ್ತು ಅತಿಯಾದ ರಕ್ತಸ್ರಾವದಿಂದ ಬಳಲುತ್ತಿದ್ದ 39 ವರ್ಷದ ಶ್ರೀಮತಿ ವೈಷ್ಣವಿ ವಿನಯ್ ಅವರಿಗೆ ಯಶಸ್ವಿ ಚಿಕಿತ್ಸೆ ನಡೆಸಿದೆ. ಈ ಸಮಸ್ಯೆಯು ಅವರ ದೈನಂದಿನ ಜೀವನದ ಮೇಲೆ ತೀವ್ರ ಪರಿಣಾಮ ಬೀರಿತ್ತು. ಸಾಮಾನ್ಯ ಔಷಧೀಯ ಚಿಕಿತ್ಸೆಗಳಿಂದ ಯಾವುದೇ ಉಪಶಮನ ಸಿಗದಿದ್ದಾಗ, ಡಾ.ರುಬಿನಾ ಶಾನಾವಾಝ್ ಮತ್ತು ಅವರ ತಂಡದ ನೇತೃತ್ವದಲ್ಲಿ ಅವರಿಗೆ ರೋಬೋ ನೆರವಿನ ಹಿಸ್ಟೆರೆಕ್ಟೊಮಿ ನಡೆಸಲಾಯಿತು. ಈ ಶಸ್ತ್ರಚಿಕಿತ್ಸೆಯಲ್ಲಿ ಎರಡೂ ಅಂಡಾಶಯಗಳನ್ನು ಸುರಕ್ಷಿತವಾಗಿರಿಸಿ, ಗರ್ಭಾಶಯ ಮತ್ತು ಎರಡೂ ಫಾಲೋಪಿಯನ್ ಟ್ಯೂಬ್‌ ಗಳನ್ನು ತೆರವುಗೊಳಿಸಲಾಯಿತು. ಕನಿಷ್ಠ ಕತ್ತರಿಕೆಯೊಂದಿಗೆ ನಡೆಸಲಾದ ಈ ಪ್ರಕ್ರಿಯೆ ಯಿಂದಾಗಿ ಅವರಿಗೆ ಕಡಿಮೆ ನೋವು, ಕನಿಷ್ಠ ರಕ್ತಸ್ರಾವದಿಂದ ವೇಗವಾಗಿ ಚೇತರಿಸಿಕೊಳ್ಳಲು ಸಾಧ್ಯವಾಯಿತು. ಇದರಿಂದ ಅವರು ಶೀಘ್ರದಲ್ಲೇ ತಮ್ಮ ದೈನಂದಿನ ಜೀವನಕ್ಕೆ ಮರಳಲು ನೆರವಾಯಿತು.

ಅಾಧುನಿಕ ಹಾಗೂ ಕನಿಷ್ಠ ಕತ್ತರಿಕೆಯ ಶಸ್ತ್ರಚಿಕಿತ್ಸಾ ಹೃದ್ರೋಗ ವಿಭಾಗದಲ್ಲಿ ಆಸ್ಪತ್ರೆಯ ನೈಪುಣ್ಯತೆಯನ್ನು ಮತ್ತಷ್ಟು ಪ್ರದರ್ಶಿಸುವಂತೆ, ತಾಂಜಾನಿಯಾದ 49 ವರ್ಷದ ಶ್ರೀ ಅಜೀಮ್ ಸುರೇಂದ್ರ ದತ್ತಾನಿ ಎಂಬುವವರು ಪದೇ ಪದೇ ಕಾಣಿಸಿಕೊಳ್ಳುತ್ತಿದ್ದ ಎದೆನೋವಿನ ಸಮಸ್ಯೆಯಿಂದ ಬನ್ನೇರುಘಟ್ಟದ ಫೋರ್ಟಿಸ್ ಆಸ್ಪತ್ರೆಯನ್ನು ಸಂಪರ್ಕಿಸಿದ್ದರು. ವೈದ್ಯಕೀಯ ತಪಾಸಣೆಯ ನಂತರ, ಅವರಿಗೆ ಸಂಕೀರ್ಣವಾದ ಕೊರೊನರಿ ಆರ್ಟರಿ ಡಿಸೀಸ್ ಇರುವುದು ಪತ್ತೆಯಾಯಿತು. ಡಾ. ಸುದರ್ಶನ್ ಜಿ.ಟಿ. ಮತ್ತು ಅವರ ತಂಡದ ನೇತೃತ್ವದಲ್ಲಿ, ಸಣ್ಣ ಕತ್ತರಿಕೆಗಳ ಮೂಲಕ ಮೂರು ಗ್ರಾಫ್ಟ್‌ ಗಳನ್ನು ಒಳಗೊಂಡ ಕನಿಷ್ಠ ಗಾಯದ ಕೊರೊನರಿ ಆರ್ಟರಿ ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.

ಈ ಆಧುನಿಕ ವಿಧಾನವು ಶಸ್ತ್ರಚಿಕಿತ್ಸೆಯ ನೋವನ್ನು ಕಡಿಮೆ ಮಾಡಲು, ರಕ್ತಸ್ರಾವವನ್ನು ತಡೆಯಲು ಮತ್ತು ವೇಗವಾಗಿ ಚೇತರಿಸಿಕೊಳ್ಳಲು ನೆರವಾಯಿತು. ಅವರು ಚೆನ್ನಾಗಿ ಚೇತರಿಸಿಕೊಂಡು ಪ್ರಸ್ತುತ ಆರೋಗ್ಯವಾಗಿ ಬಿಡುಗಡೆ ಹೊಂದಿದ್ದಾರೆ. ಕನಿಷ್ಠ ಗಾಯದ ಹೃದ್ರೋಗ ಶಸ್ತ್ರಚಿಕಿತ್ಸೆಯು ಅತ್ಯುತ್ತಮ ವೈದ್ಯಕೀಯ ಫಲಿತಾಂಶಗಳನ್ನು ನೀಡುವ ಮೂಲಕ ರೋಗಿಗಳು ಶೀಘ್ರವಾಗಿ ಗುಣಮುಖರಾಗಲು ಹೇಗೆ ಸಹಾಯ ಮಾಡುತ್ತದೆ ಎಂಬುದಕ್ಕೆ ಈ ಪ್ರಕರಣವು ಸಾಕ್ಷಿಯಾಗಿದೆ.

ಕರ್ನಾಟಕ ಸರ್ಕಾರದ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರು, "ಕ್ಲಿನಿಕಲ್ ಪರಿಣತಿ, ನಾವೀನ್ಯತೆ ಮತ್ತು ರೋಗಿಗಳ ಆರೈಕೆಯ ದೃಢವಾದ ಬದ್ಧತೆ ಯಿಂದಾಗಿ ಕರ್ನಾಟಕವು ಆರೋಗ್ಯ ರಕ್ಷಣೆಯಲ್ಲಿ ಶ್ರೇಷ್ಠತೆಯ ಕೇಂದ್ರವಾಗಿ ಪ್ರತಿಷ್ಠೆ ಗಳಿಸಿದೆ. ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯು 3,000 ಡಾ ವಿನ್ಸಿ ರೋಬೋಟಿಕ್ ನೆರವಿನ ಶಸ್ತ್ರಚಿಕಿಗಳನ್ನು ಪೂರೈಸಿರುವುದು ರಾಜ್ಯದಲ್ಲಿ ಬೆಳೆಯುತ್ತಿರುವ ಕ್ಲಿನಿಕಲ್ ಅನುಭವ ಮತ್ತು ಸಾಮರ್ಥ್ಯಗಳನ್ನು ಪ್ರತಿಬಿಂಬಿಸುವ ಪ್ರಮುಖ ಮೈಲಿಗಲ್ಲಾಗಿದೆ. ವೈದ್ಯಕೀಯ ತಂತ್ರಜ್ಞಾನವು ಬೆಳೆಯುತ್ತಾ ಸಾಗಿದಂತೆ, ಆವಿಷ್ಕಾರವು ರೋಗಿಗಳಿಗೆ ಸುರಕ್ಷಿತ ಆರೈಕೆ, ಉತ್ತಮ ಲಭ್ಯತೆ ಮತ್ತು ಸುಧಾರಿತ ಫಲಿತಾಂಶಗಳನ್ನು ತಲುಪಿಸುವುದನ್ನು ಖಚಿತಪಡಿಸಿಕೊಳ್ಳುವುದೇ ನಮ್ಮ ಆದ್ಯತೆಯಾಗಿರಬೇಕು. ತಮ್ಮ ಕೌಶಲ್ಯ, ಶಿಸ್ತು ಮತ್ತು ಸಮರ್ಪಣಾ ಭಾವದಿಂದ ಈ ಸಾಧನೆಯನ್ನು ಸಾಧ್ಯವಾಗಿಸಿದ ವೈದ್ಯರು, ಶುಶ್ರೂಷಕರು ಮತ್ತು ಇಡೀ ಕ್ಲಿನಿಕಲ್ ತಂಡಕ್ಕೆ ನನ್ನ ಅಭಿನಂದನೆಗಳು. ಆವಿಷ್ಕಾರವನ್ನು ಜವಾಬ್ದಾರಿಯೊಂದಿಗೆ ಬೆಸೆಯುವ, ಕ್ಲಿನಿಕಲ್ ಶ್ರೇಷ್ಠತೆ ಮತ್ತು ರೋಗಿ-ಕೇಂದ್ರಿತ ಆರೈಕೆಯೊಂದಿಗೆ ಸಂಯೋಜಿಸುವ ಆರೋಗ್ಯಸೇವಾ ವ್ಯವಸ್ಥೆಯನ್ನು ಬೆಂಬಲಿಸಲು ಕರ್ನಾಟಕ ಸರ್ಕಾರವು ಬದ್ಧವಾಗಿದೆ” ಎಂದರು.

ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ರೀನಲ್ ಸೈನ್ಸಸ್ ವಿಭಾಗದ ಪ್ರಧಾನ ನಿರ್ದೇಶಕರಾದ ಡಾ. ಮೋಹನ್ ಕೇಶವಮೂರ್ತಿ ಅವರು, "3,000 ರೋಬೋಟಿಕ್ ಶಸ್ತ್ರಚಿಕಿಗಳನ್ನು ಯಶಸ್ವಿಯಾಗಿ ಪೂರೈಸಿರುವುದು ಒಂದು ಮಹತ್ವದ ಚಿಕಿತ್ಸೆಯ ಮೈಲಿಗಲ್ಲಾಗಿದೆ. ಇದು ನಾವೀನ್ಯತೆ, ನಿಖರತೆ ಮತ್ತು ಶಸ್ತ್ರಚಿಕಿತ್ಸೆಯ ಶ್ರೇಷ್ಠತೆಯ ಕಡೆಗಿನ ನಮ್ಮ ವರ್ಷಗಳ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಅತ್ಯಂತ ಮುಖ್ಯವಾಗಿ, ರೋಬೋಟಿಕ್ ಶಸ್ತ್ರಚಿಕೆಯು ಹೆಚ್ಚಿನ ನಿಖರತೆ, ಹೆಚ್ಚಿದ ಸುರಕ್ಷತೆ ಮತ್ತು ರೋಗಿಗಳು ಬೇಗನೆ ಚೇತರಿಸಿಕೊಳ್ಳಲು ನೆರವಾಗುವ ಮೂಲಕ ಜಟಿಲವಾದ ಕಾಯಿಲೆಗಳ ಚಿಕಿತ್ಸಾ ವಿಧಾನವನ್ನು ಹೇಗೆ ಪರಿವರ್ತಿಸಿದೆ ಎಂಬುದನ್ನು ಇದು ತೋರಿಸುತ್ತದೆ. ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯಲ್ಲಿ, ನಾವು ಆಧುನಿಕ ತಂತ್ರಜ್ಞಾನವನ್ನು ಬಹು-ವಿಭಾಗೀಯ ಪರಿಣತಿ ಮತ್ತು ನಿರಂತರ ಕ್ಲಿನಿಕಲ್ ಕಲಿಕೆಯೊಂದಿಗೆ ಸಂಯೋಜಿಸಿ ಭಾರತದ ಅತ್ಯಂತ ಸಮಗ್ರ ರೋಬೋಟಿಕ್ ಶಸ್ತ್ರಚಿಕಿತ್ಸೆಯ ಕಾರ್ಯಕ್ರಮಗಳಲ್ಲಿ ಒಂದನ್ನು ನಿರ್ಮಿಸಿದ್ದೇವೆ. ಬಹಳ ಮುಖ್ಯವಾಗಿ ರೋಬೋಟಿಕ್ ಶಸ್ತ್ರಚಿಕೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದು, ಮುಂದಿನ ಪೀಳಿಗೆಯ ಶಸ್ತ್ರಚಿಕಿತ್ಸಕರಿಗೆ ತರಬೇತಿ ನೀಡುವುದು ಮತ್ತು ವಿಶ್ವದರ್ಜೆಯ ಕನಿಷ್ಠ ಕತ್ತರಿಕೆಯ ಆರೈಕೆಯನ್ನು ಇನ್ನೂ ಹೆಚ್ಚಿನ ರೋಗಿಗಳಿಗೆ ತಲುಪಿಸುವುದರ ಕಡೆಗೆ ನಮ್ಮ ಆದ್ಯತೆ ಇರುತ್ತದೆ” ಎಂದರು.

ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ಯೂರೋಗೈನೆಕಾಲಜಿ, ಗೈನೆಕ್-ಆಂಕಾಲಜಿ, ಲ್ಯಾಪರೊಸ್ಕೋಪಿಕ್ ಮತ್ತು ರೋಬೋಟಿಕ್ ಶಸ್ತ್ರಚಿಕಿತ್ಸಾ ವಿಭಾಗದ ಹೆಚ್ಚುವರಿ ನಿರ್ದೇಶಕರಾದ ಡಾ. ರುಬಿನಾ ಶಾನವಾಝ್ ಅವರು, "ರೋಬೋಟಿಕ್ ಶಸ್ತ್ರಚಿಕಿತ್ಸೆಯು ಗಾಯದ ಪ್ರಮಾಣವನ್ನು ಕಡಿಮೆ ಮಾಡುವುದರ ಜೊತೆಗೆ, ಅತ್ಯಂತ ನಿಖರತೆಯೊಂದಿಗೆ ಜಟಿಲವಾದ ಸ್ತ್ರೀರೋಗ ಸಂಬಂಧಿತ ಚಿಕಿತ್ಸೆಗಳನ್ನು ಮಾಡಲು ನಮಗೆ ನೆರವಾಗುವ ಮೂಲಕ ಮಹಿಳಾ ಆರೋಗ್ಯ ರಕ್ಷಣೆಯಲ್ಲಿ ದೊಡ್ಡ ಪರಿವರ್ತನೆ ತರುತ್ತಿದೆ. ಇದು ಫೈಬ್ರಾಯ್ಡ್‌ಗಳು, ಎಂಡೊಮೆಟ್ರಿಯೋಸಿಸ್ ಮತ್ತು ಜಟಿಲವಾದ ಗರ್ಭಾಶಯ ನಿವಾರಣೆಯ ಶಸ್ತ್ರಚಿಕಿಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಇದರಿಂದ ಮಹಿಳೆಯರು ವೇಗವಾಗಿ ಚೇತರಿಸಿಕೊಳ್ಳಲು ಮತ್ತು ಉತ್ತಮ ಜೀವನಮಟ್ಟದೊಂದಿಗೆ ಶೀಘ್ರದಲ್ಲೇ ತಮ್ಮ ಸಾಮಾನ್ಯ ಜೀವನಕ್ಕೆ ಮರಳಲು ಸಾಧ್ಯವಾಗುತ್ತದೆ” ಎಂದರು.

ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ಎಂ.ಐ.ಸಿ.ಎಸ್. ಮತ್ತು ರೋಬೋಟಿಕ್ ಕಾರ್ಡಿಯಾಕ್ ಶಸ್ತ್ರಚಿಕಿತ್ಸಾ ವಿಭಾಗದ ನಿರ್ದೇಶಕರಾದ ಡಾ. ಸುದರ್ಶನ್ ಜಿ.ಟಿ. ಅವರು, "ಕನಿಷ್ಠ ಕತ್ತರಿಕೆ ಮತ್ತು ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆಯು ಹೃದ್ರೋಗಕ್ಕೆ ನೀಡಲಾಗುವ ಚಿಕಿತ್ಸಾ ವಿಧಾನವನ್ನೇ ಬದಲಾಯಿಸುತ್ತಿದೆ. ಸಣ್ಣ ಸಾಧನಗಳನ್ನು ಬಳಸುವುದರಿಂದ, ನಾವು ಶಸ್ತ್ರಚಿಕೆಯಿಂದಾಗುವ ಗಾಯದ ಪ್ರಮಾಣವನ್ನು ಕಡಿಮೆ ಮಾಡಬಹುದು, ಚೇತರಿಕೆಯ ಸಮಯವನ್ನು ಕುಗ್ಗಿಸಬಹುದು ಮತ್ತು ಸೂಕ್ತವಾಗಿ ಆಯ್ಕೆಯಾದ ರೋಗಿಗಳು ಸುರಕ್ಷತೆ ಹಾಗೂ ಫಲಿತಾಂಶಗಳೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳದೆ ಶೀಘ್ರದಲ್ಲೇ ಸಾಮಾನ್ಯ ಜೀವನಕ್ಕೆ ಮರಳಲು ಸಹಾಯ ಮಾಡಬಹುದು."

ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ಫೆಸಿಲಿಟಿ ಡೈರೆಕ್ಟರ್ ಶ್ರೀ ಗೌತಮ್ ಸಿ. ಬಿ. ಅವರು, "ಡಾ ವಿನ್ಸಿ ಎಕ್ಸ್.ಐ ಪ್ಲಾಟ್‌ಫಾರ್ಮ್‌ ನಲ್ಲಿ 3,000 ರೋಬೋಟಿಕ್ ಶಸ್ತ್ರಚಿಕಿಗಳನ್ನು ಯಶಸ್ವಿಯಾಗಿ ಪೂರೈಸಿರುವುದು, ರೋಗಿಗಳು ನಮ್ಮ ಕ್ಲಿನಿಕಲ್ ಪರಿಣತಿಯ ಮೇಲೆ ಇಟ್ಟಿರುವ ನಂಬಿಕೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನ, ವಿಶ್ವದರ್ಜೆಯ ಮೂಲಸೌಕರ್ಯ ಮತ್ತು ನಾವೀನ್ಯತೆಯಲ್ಲಿ ನಾವು ಮಾಡುತ್ತಿರುವ ನಿರಂತರ ಹೂಡಿಕೆಯನ್ನು ಪ್ರತಿಬಿಂಬಿಸುತ್ತದೆ. ಇಂದು ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯು ಭಾರತದ ಅತ್ಯಂತ ಸಮಗ್ರ ರೋಬೋಟಿಕ್ ಶಸ್ತ್ರಚಿಕಿತ್ಸಾ ಕಾರ್ಯಕ್ರಮಗಳಲ್ಲಿ ಒಂದನ್ನು ಹೊಂದಿದೆ, ಮತ್ತು ವಿವಿಧ ವೈದ್ಯಕೀಯ ವಿಭಾಗಗಳಲ್ಲಿ ಸುಧಾರಿತ, ಕನಿಷ್ಠ ಕತ್ತರಿಕೆಯ ಶಸ್ತ್ರಚಿಕಿತ್ಸೆಯ ಆರೈಕೆಯ ಲಭ್ಯತೆಯನ್ನು ಮತ್ತಷ್ಟು ವಿಸ್ತರಿಸಲು ನಾವು ಬದ್ಧರಾಗಿದ್ದೇವೆ."

ಈ ಸಾಧನೆಯ ಸವಿನೆನಪಿಗಾಗಿ, ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯು ರೋಬೋಟಿಕ್ ಶಸ್ತ್ರಚಿಕಿತ್ಸಾ ವಿಭಾಗದ ತನ್ನ ಪ್ರಮುಖ ಸಮ್ಮೇಳನವಾದ ಎಸ್.ಯು.ಆರ್.ಜಿ.ಎಕ್ಸ್.2026(SURGX 2026) ಆಯೋಜಿಸಿತ್ತು. ಇದು ರೋಬೋಟಿಕ್ ಶಸ್ತ್ರಚಿಕಿತ್ಸಯ ರಂಗದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ತಜ್ಞರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿತು. ವಿವಿಧ ವೈದ್ಯಕೀಯ ವಿಭಾಗಗಳಲ್ಲಿ ಪ್ರಾಯೋಗಿಕ ಕಾರ್ಯಾಗಾರಗಳು, ನೇರ ಶಸ್ತ್ರಚಿಕಿತ್ಸೆ ಪ್ರಾತ್ಯಕ್ಷಿಕೆಗಳು ಮತ್ತು ನಿರಂತರ ವೈದ್ಯಕೀಯ ಶಿಕ್ಷಣ ಗೋಷ್ಠಿಗಳನ್ನು ಈ ಕಾರ್ಯಕ್ರಮ ಒಳಗೊಂಡಿತ್ತು. ಇದು ಜ್ಞಾನ ವಿನಿಮಯಕ್ಕೆ ಸೂಕ್ತ ವೇದಿಕೆಯನ್ನು ಒದಗಿಸಿತಲ್ಲದೆ, ರೋಬೋಟ್ ನೆರವಿನ ಶಸ್ತ್ರಚಿಕಿತ್ಸೆಯ ಆರೈಕೆಯ ಭವಿಷ್ಯವನ್ನು ಮತ್ತಷ್ಟು ಮುನ್ನಡೆಸಲು ನೆರವಾಯಿತು.

ಫೋರ್ಟಿಸ್ ಹೆಲ್ತ್‌ಕೇರ್ ಲಿಮಿಟೆಡ್ ಬಗ್ಗೆ

ಫೋರ್ಟಿಸ್ ಹೆಲ್ತ್‌ಕೇರ್ ಲಿಮಿಟೆಡ್ ಭಾರತದಲ್ಲಿ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸುವ ಪ್ರಮುಖ ಸಂಸ್ಥೆಯಾಗಿದೆ. ಕಂಪನಿಯ ಆರೋಗ್ಯಸೇವಾ ಕ್ಷೇತ್ರವು ಮುಖ್ಯವಾಗಿ ಆಸ್ಪತ್ರೆಗಳು,ಡಯಾಗ್ನೊಸ್ಟಿಕ್ ಕೇಂದ್ರಗಳು ಮತ್ತು ಡೇ ಕೇರ್ ಸ್ಪೆಷಾಲಿಟಿ ಸೌಲಭ್ಯಗಳನ್ನು ಒಳಗೊಂಡಿದೆ. ಪ್ರಸ್ತುತ, ಕಂಪನಿಯು 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ (ಜಂಟಿ ಉದ್ಯಮಗಳು ಮತ್ತು ನಿರ್ವಹಣಾ ಸೌಲಭ್ಯಗಳು ಸೇರಿದಂತೆ) 36 ಆರೋಗ್ಯಸೇವಾ ಸೌಲಭ್ಯಗಳನ್ನು ನಡೆಸುತ್ತಿದೆ. ಕಂಪನಿಯ ಜಾಲವು 6,000 ಕ್ಕೂ ಹೆಚ್ಚು ಕಾರ್ಯಾಚರಣೆಯ ಹಾಸಿಗೆಗಳು(ಒ ಅಂಡ್ ಎಂ ಬೆಡ್ ಗಳು ಒಳಗೊಂಡು) ಮತ್ತು 400 ಡಯೋಗ್ನಾಸ್ಟಿಕ್ ಲ್ಯಾಬ್ ಗಳನ್ನು ಹೊಂದಿದೆ.

ಐ.ಎಚ್.ಎಚ್. ಹೆಲ್ತ್‌ಕೇರ್ ಬಗ್ಗೆ

ಐ.ಎಚ್.ಎಚ್. ಆರೋಗ್ಯ ರಕ್ಷಣೆಯ ಭವಿಷ್ಯವನ್ನು ರೂಪಿಸುತ್ತಿರುವ ಒಂದು ಪ್ರಮುಖ ಬಹುರಾಷ್ಟ್ರೀಯ ಆರೋಗ್ಯ ಸೇವಾ ಸಂಸ್ಥೆಯಾಗಿದೆ. ಸದಾ ಶ್ರೇಷ್ಠ ಆರೈಕೆ ನೀಡುವ ನಮ್ಮ ಆಶಯದೊಂದಿಗೆ, ನಾವು ವೈದ್ಯಕೀಯ ಶ್ರೇಷ್ಠತೆ ಮತ್ತು ನಾವೀನ್ಯತೆಯನ್ನು ಒಗ್ಗೂಡಿಸುತ್ತೇವೆ. ನಮ್ಮ ವಿಶ್ವಸನೀಯ ಬ್ರಾಂಡ್ ಗಳಾದ ಅಸಿಬಾಡೆಮ್, ಗ್ಲೆನೆಗಲ್ಸ್, ಫೋರ್ಟಿಸ್, ಐಲ್ಯಾಂಡ್ , ಮೌಂಟ್ ಎಲಿಜಬೆತ್, ಪಂತಾಯ್, ಪಾರ್ಕ್‌ವೇ ಮತ್ತು ಪ್ರಿನ್ಸ್ ಕೋರ್ಟ್ ಮೂಲಕ ಗಡಿಗಳನ್ನು ಮೀರಿ ಸೇವೆ ಸಲ್ಲಿಸುತ್ತಿದ್ದೇವೆ.ಮಲೇಷ್ಯಾ, ಸಿಂಗಾಪುರ, ಟರ್ಕಿ, ಭಾರತ ಮತ್ತು ಗ್ರೇಟರ್ ಚೀನಾ ಸೇರಿದಂತೆ 10 ದೇಶಗಳಲ್ಲಿ ಹರಡಿರುವ ನಮ್ಮ 70,000 ಕ್ಕೂ ಹೆಚ್ಚು ಸಿಬ್ಬಂದಿಯ ತಂಡವು, 80 ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಒಳಗೊಂಡಂತೆ ನಮ್ಮ 140 ಆರೋಗ್ಯ ಕೇಂದ್ರಗಳ ಒಳಗೆ ಮತ್ತು ಹೊರಗೆ ಪ್ರತಿದಿನವೂ ವಿಶ್ವದರ್ಜೆಯ ಶ್ರೇಷ್ಠ ಸೇವೆಯನ್ನು ಒದಗಿಸುತ್ತದೆ. ನಮ್ಮ ಸಮಗ್ರ ಸೇವೆಗಳು ಪ್ರಾಥಮಿಕ ಮತ್ತು ಹೊರರೋಗಿ ವಿಭಾಗದಿಂದ ಹಿಡಿದು ಕ್ವಾಟರ್ನರಿ ಆರೈಕೆಯವರೆಗೆ ಹರಡಿದ್ದು, ರೋಗನಿರ್ಣಯ, ಇಮೇಜಿಂಗ್, ಪುನರ್ವಸತಿ ಟೆಲಿಹೆಲ್ತ್ ಮತ್ತು ಗೃಹ ಆರೈಕೆಗಳನ್ನು ಒಳಗೊಂಡಿವೆ..ವಿಶ್ವದ ಅತ್ಯಂತ ವಿಶ್ವಸನೀಯ ಆರೋಗ್ಯ ಸೇವೆಗಳ ಜಾಲವಾಗುವ ನಮ್ಮ ದೃಷ್ಟಿಕೋನದತ್ತ ಶ್ರಮಿಸುತ್ತಿರುವ ನಾವು, ನಮ್ಮ ಪಾಲುದಾರರೊಂದಿಗೆ ಸೇರಿ ಮೌಲ್ಯಾಧಾರಿತ ಆರೈಕೆಯನ್ನು ಉತ್ತೇಜಿಸುತ್ತಿದ್ದೇವೆ, ಸುಸ್ಥಿರ ಆರೋಗ್ಯ ವ್ಯವಸ್ಥೆಯನ್ನು ನಿರ್ಮಿಸುತ್ತಿದ್ದೇವೆ ಮತ್ತು ಅರ್ಥಪೂರ್ಣ ಪ್ರಭಾವವನ್ನು ಬೀರುತ್ತಿದ್ದೇವೆ.