ಚರ್ಮದ ಕಾಂತಿಯಿಂದ ಹಿಡಿದು ತೂಕ ಇಳಿಕೆಯವರೆಗೆ- ಬೀಟ್‌ರೂಟ್ ಜ್ಯೂಸ್ ನ ಲಾಭ ಒಂದೆರಡಲ್ಲ!
Health Tips: ತರಕಾರಿಗಳಲ್ಲಿ ಬೀಟ್ ರೂಟ್ ಅಂದಾಗ ಹೆಚ್ಚಿನವರು ದೂರ ಸರಿಯುತ್ತಾರೆ. ಆದರೆ ಇದರ ಆರೋಗ್ಯ ಲಾಭವನ್ನು ತಿಳಿದರೆ ಖಂಡಿತ ನೀವು ಸೇವನೆ ಮಾಡಬಹುದು. ಅಗತ್ಯ ಪೋಷಕಾಂಶಗಳು, ಉತ್ಕರ್ಷಣ ನಿರೋಧಕಗಳು ಮತ್ತು ನೈಟ್ರೇಟ್‌ಗಳಿಂದ ತುಂಬಿದ್ದು ನಿಮ್ಮ ದೇಹವನ್ನು ಚೈತನ್ಯ ಗೊಳಿಸುವುದಲ್ಲದೆ ಆರೋಗ್ಯವಾಗಿರಲು ಪ್ರೇರಿಪಿಸುತ್ತದೆ.
ಇಂಟರ್ ನೆಟ್ ಚಿತ್ರ -
ನವದೆಹಲಿ,ಜು.31: ತರಕಾರಿಗಳಲ್ಲಿ ಬೀಟ್ ರೂಟ್ (Beetroot) ಅಂದಾಗ ಹೆಚ್ಚಿನವರು ದೂರ ಸರಿಯುತ್ತಾರೆ. ಆದರೆ ಇದರ ಆರೋಗ್ಯ ಲಾಭವನ್ನು ತಿಳಿದರೆ ಖಂಡಿತ ನೀವು ಸೇವನೆ ಮಾಡಬಹುದು. ಅಗತ್ಯ ಪೋಷಕಾಂಶಗಳು, ಉತ್ಕರ್ಷಣ ನಿರೋಧಕಗಳು ಮತ್ತು ನೈಟ್ರೇಟ್‌ಗಳಿಂದ ತುಂಬಿದ್ದು ನಿಮ್ಮ ದೇಹವನ್ನು ಚೈತನ್ಯಗೊಳಿಸುವುದಲ್ಲದೆ ಆರೋಗ್ಯವಾಗಿರಲು ಪ್ರೇರಿಪಿಸುತ್ತದೆ. ರಕ್ತದ ಎಣಿಕೆಗಳನ್ನು ಹೆಚ್ಚಿಸಲು ಇದರ ಸೇವನೆ ಪ್ರಮುಖವಾಗಿದ್ದು ಬೀಟ್‌ರೂಟ್‌ನಲ್ಲಿರುವ ಕಬ್ಬಿಣವು ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚು ಮಾಡುತ್ತದೆ. ಹಾಗಾಗಿ ದಿನದ ಆಹಾರದಲ್ಲಿ ಸಲಾಡ್ ಗಳಾಗಿ, ಸ್ಮೂಥಿಯಾಗಿ,ಅಥವಾ ಜ್ಯೂಸ್ ಮೂಲಕ ಸೇವನೆ ಮಾಡಬಹುದು.
ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ:
ಬೀಟ್‌ರೂಟ್ ನಲ್ಲಿ ನೈಟ್ರೇಟ್‌ಗಳು ಅಧಿಕವಾಗಿದೆ. ಇದು ಸ್ನಾಯುಗಳಿಗೆ ಆಮ್ಲಜನಕದ ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಪರಿಣಾಮವಾಗಿ, ಇದು ತ್ರಾಣ ಮತ್ತು ದೇಹದ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ನೀವು ವ್ಯಾಯಾಮದ ಮೊದಲು ಒಂದು ಗ್ಲಾಸ್ ಬೀಟ್ ರೂಟ್ ಜ್ಯೂಸ್ ಕುಡಿಯುವುದರಿಂದ ಆಯಾಸವನ್ನು ಕಡಿಮೆ ಮಾಡಬಹುದು.
ಹೃದಯದ ಆರೋಗ್ಯವನ್ನು ಸುಧಾರಣೆ ಮಾಡುತ್ತದೆ:
ಬೀಟ್‌ರೂಟ್ ಜ್ಯೂಸ್‌ನಲ್ಲಿರುವ ನೈಟ್ರೇಟ್‌ಗಳು ರಕ್ತನಾಳಗಳನ್ನು ವಿಸ್ತರಿಸುವ ಮತ್ತು ರಕ್ತ ಪರಿಚಲನೆಯನ್ನು ಅಭಿವೃದ್ಧಿ ಮಾಡಲು ಸಹಾಯ ಮಾಡುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಹೃದಯದ ಆರೋಗ್ಯ ಬೆಂಬಲಿಸುತ್ತದೆ.
Health Tips: ನಿದ್ದೆಯಲ್ಲಿ ಬಾಯಲ್ಲೇ ಉಸಿರಾಡುತ್ತೀರಾ? ಈ ಸಮಸ್ಯೆ ಎದುರಾಗಬಹುದು ಎಚ್ಚರ
ಚರ್ಮದ ಹೊಳಪನ್ನು ಹೆಚ್ಚು ಮಾಡುತ್ತದೆ:
ನೀವು ನೈಸರ್ಗಿಕವಾಗಿ ಹೊಳೆಯುವ ಚರ್ಮ ಹೊಂದಬೇಕಾದರೆ ಬೀಟ್‌ರೂಟ್ ನಿಮಗೆ ಅದ್ಬುತ ಪ್ರಯೋಜನವನ್ನು ನೀಡಬಹುದು. ಬೀಟ್‌ರೂಟ್‌ನಲ್ಲಿರುವ ಉತ್ಕರ್ಷಣ ನಿರೋಧಕಗಳು, ಕಬ್ಬಿಣ ಪ್ರಮಾಣವು ಚರ್ಮವನ್ನು ರಕ್ಷಣೆ ಮಾಡುತ್ತದೆ. ಮೊಡವೆಗಳನ್ನು ರಿಮೂವ್ ಮಾಡಿ ನಿಮ್ಮ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.
ಯಕೃತ್ತಿನ ಆರೋಗ್ಯವನ್ನು ಬೆಂಬಲಿಸುತ್ತದೆ:
ಬೀಟ್‌ರೂಟ್ ಜ್ಯೂಸ್ ವಿಷಕಾರಿ ಅನಿಲವನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಯಕೃತ್ತು ಸರಿಯಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುವ ಸಂಯುಕ್ತವಾದ ಬೀಟೈನ್ ಇದರಲ್ಲಿದೆ. ಇದು ಉತ್ತಮ ಜೀರ್ಣಕ್ರಿಯೆ, ಸುಧಾರಿತ ಚಯಾಪಚಯ ಕ್ರಿಯೆಯನ್ನು ಬೆಂಬಲಿಸಬಹುದು.
ಮೆದುಳಿನ ಕಾರ್ಯವನ್ನು ಬೆಂಬಲಿಸುತ್ತದೆ:
ನೈಟ್ರಿಕ್ ಆಕ್ಸೈಡ್ ರಕ್ತದ ಹರಿವನ್ನು ಸುಧಾರಿಸುವುದಲ್ಲದೆ, ಮೆದುಳಿಗೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದು ಉತ್ತಮ ಕಾರ್ಯಶೀಲತೆ, ಸ್ಮರಣಶಕ್ತಿ ಮತ್ತು ಏಕಾಗ್ರತೆಗೆ ಸಹಾಯ ಮಾಡುತ್ತದೆ.
ತೂಕ ನಿಯಂತ್ರಣಕ್ಕೆ ಉತ್ತಮ:
ಕಡಿಮೆ ಕ್ಯಾಲೋರಿಗಳು ಮತ್ತು ಹೆಚ್ಚಿನ ಫೈಬರ್ ಅಂಶವಿರುವ ಬೀಟ್‌ರೂಟ್ ಹಸಿವು ಆಗದಂತೆ ತಡೆಯುತ್ತದೆ. ಇದು ನಿಮ್ಮನ್ನು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ.
ನಿಮ್ಮ ಆಹಾರದಲ್ಲಿ ಬೀಟ್‌ರೂಟ್ ಹೇಗೆ ಸೇವನೆ ಮಾಡಬಹುದು?
*ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ತಾಜಾ ಬೀಟ್‌ರೂಟ್ ಜ್ಯೂಸ್ ಕುಡಿಯಿರಿ.
*ನೈಸರ್ಗಿಕವಾಗಿ ಸಿಹಿ ಹೆಚ್ಚಿಸಲು ಸೇಬಿನೊಂದಿಗೆ ಸೇವಿಸಿ
*ಸಕ್ಕರೆ ಸೇರಿಸುವುದನ್ನು ತಪ್ಪಿಸಿ ನೈಸರ್ಗಿಕವಾಗಿ ಕುಡಿಯಿರಿ.