ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವೈಜ್ಞಾನಿಕ ಆಧಾರಿತ ಆರೋಗ್ಯ ನಿಭಾಯಿಸಲು ಹ್ಯಾಪಿಯೆಸ್ಟ್‌ ಹೆಲ್ತ್‌ ವತಿಯಿಂದ “ಬಾಡಿ ಡೈನಾಮಿಕ್ಸ್‌” ವಿಭಾಗ ಆರಂಭ: ಭಾರತಿ ಜೂಜು ನಿರ್ದೇಶಕಿಯಾಗಿ ನೇಮಕ

35 ವರ್ಷಗಳಿಗೂ ಹೆಚ್ಚು ಕಾಲ ವೈದ್ಯಕೀಯ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಜಜೂ ಅವರು, ಆಕ್ಯುಪೇಷನಲ್ ಥೆರಪಿ ಕ್ಷೇತ್ರದಲ್ಲಿ ಅಪಾರ ಪರಿಣತಿ ಮತ್ತು ಅನುಭವ ಹೊಂದಿದ್ದಾರೆ. ಬಾಡಿ ಡೈನಾಮಿಕ್ಸ್ ವಿಭಾಗವು ಎರ್ಗೋನಾಮಿಕ್ಸ್ (Ergonomics), ಫಿಸಿಯೋಥೆರಪಿ ಮತ್ತು ಯೋಗದ ಮೂಲಕ ಸಮಗ್ರ ಪುನಶ್ಚೇತನ ಸೇವೆಯನ್ನು(rehabilitation) ನೀಡುತ್ತದೆ.

“ಬಾಡಿ ಡೈನಾಮಿಕ್ಸ್‌” ಆರಂಭ: ಭಾರತಿ ಜೂಜು ನಿರ್ದೇಶಕಿಯಾಗಿ ನೇಮಕ

-

Ashok Nayak
Ashok Nayak Feb 17, 2026 4:02 PM

ಬೆಂಗಳೂರು: ವೈಜ್ಞಾನಿಕ ಆಧಾರಿತ ಚಿಕಿತ್ಸೆ ಹಾಗೂ ವೆಲ್‌ನೆಸ್‌ ಕಾಪಾಡುವ “ಬಾಡಿ ಡೈನಾಮಿಕ್ಸ್‌ʼ ಎಂಬ ವಿಶೇಷ ವಿಭಾಗವನ್ನು ಹ್ಯಾಪಿಯೆಸ್ಟ್‌ ಹೆಲ್ತ್‌ ತೆರೆದಿದ್ದು, ಇದರ ವೈದ್ಯಕೀಯ ನಿರ್ದೇಶಕಿಯಾಗಿ ಭಾರತಿ ಜಜೂ ಅವರನ್ನು ನೇಮಕ ಮಾಡಿದೆ.

35 ವರ್ಷಗಳಿಗೂ ಹೆಚ್ಚು ಕಾಲ ವೈದ್ಯಕೀಯ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಜಜೂ ಅವರು, ಆಕ್ಯುಪೇಷನಲ್ ಥೆರಪಿ ಕ್ಷೇತ್ರದಲ್ಲಿ ಅಪಾರ ಪರಿಣತಿ ಮತ್ತು ಅನುಭವ ಹೊಂದಿ ದ್ದಾರೆ. ಬಾಡಿ ಡೈನಾಮಿಕ್ಸ್ ವಿಭಾಗವು ಎರ್ಗೋನಾಮಿಕ್ಸ್ (Ergonomics), ಫಿಸಿಯೋಥೆರಪಿ ಮತ್ತು ಯೋಗದ ಮೂಲಕ ಸಮಗ್ರ ಪುನಶ್ಚೇತನ ಸೇವೆಯನ್ನು(rehabilitation) ನೀಡುತ್ತದೆ. ಸಾಮಾನ್ಯ ವೆಲ್‌ನೆಸ್ ಅಷ್ಟೆ ಅಲ್ಲದೆ, ವೈಜ್ಞಾನಿಕ ಆಧಾರಿತ ಚಿಕಿತ್ಸೆ ಮತ್ತು ಕೆಲಸದ ಸ್ಥಳದಲ್ಲಿ ಉನ್ನತ ಮಟ್ಟದ ಆರೋಗ್ಯವನ್ನು ಕಾಪಾಡುವ ಉದ್ದೇಶದೊಂದಿಗೆ ಈ ವಿಭಾಗ ವನ್ನು ತೆರೆಯಲಾಗಿದೆ.

ಇದನ್ನೂ ಓದಿ: Bangalore News: ಡಾ.ವಿಷ್ಣು ಭರತ್ ಆಲಂಪಳ್ಳಿ ಅವರ ಲೈಫ್ ಟ್ವಿಸ್ಟ್ ಅಂಡ್ ಟರ್ನ್ ಎಂಬ ಪುಸ್ತಕ ಬಿಡುಗಡೆ

ಈ ಕುರಿತು ಮಾತನಾಡಿದ ಹ್ಯಾಪಿಯೆಸ್ಟ್ ಹೆಲ್ತ್‌ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯತಂತ್ರ ಅಧಿಕಾರಿ ಅಶೋಕ್ ಸೂಟಾ, "ಬಾಡಿ ಡೈನಾಮಿಕ್ಸ್ ವಿಭಾಗವನ್ನು ವಿಜ್ಞಾನ ಆಧಾರಿತ ಆರೋಗ್ಯ ವ್ಯವಸ್ಥೆಯನ್ನಾಗಿ ರೂಪಿಸಲಾಗಿದೆ. ಇಂದು ಕೇವಲ ಹೆಲ್ತ್‌ನೆಸ್‌ ಬಗ್ಗೆ ಜಾಗೃತಿ ಮೂಡಿಸಿದರೂ ಅದನ್ನು ಫಾಲೋ ಮಾಡುವವರು ತೀರ ಕಡಿಮೆ. ಹೀಗಾಗಿ ಬಾಡಿ ಡೈಮಾಮಿಕ್ಸ್‌ ವಿಭಾಗವು, ಆರೋಗ್ಯವನ್ನು ವೈಜ್ಞಾನಿಕವಾಗಿ ಹೇಗೆ ನಿಭಾಯಿಸಬಹುದು, ಅದರ ಪುನಶ್ಚೇತನ ಮತ್ತು ಕಾರ್ಯಕ್ಷಮತೆ ಹೆಚ್ಚಿಸುವ ಸಮಗ್ರ ವೇದಿಕೆಗಳನ್ನು ನಿರ್ಮಿಸು ವುದು ನಮ್ಮ ಉದ್ದೇಶವಾಗಿದೆ. ಮುಂದಿನ ಕೆಲವು ವರ್ಷಗಳಲ್ಲಿ ಬೆಂಗಳೂರಿನಾದ್ಯಂತ ನಮ್ಮ ಕ್ಲಿನಿಕ್‌ಗಳು, ಕಾರ್ಪೊರೇಟ್ ಎರ್ಗೋನಾಮಿಕ್ಸ್ ಸೇವೆಗಳು, ಫಿಸಿಯೋಥೆರಪಿ ಮತ್ತು ಯೋಗ ಕೇಂದ್ರಗಳನ್ನು ವ್ಯವಸ್ಥಿತವಾಗಿ ವಿಸ್ತರಿಸಲಿದ್ದೇವೆ. ಭಾರತಿ ಅವರ ನಾಯಕತ್ವವು ಈ ನಮ್ಮ ದೂರದೃಷ್ಟಿಯನ್ನು ಕಾರ್ಯರೂಪಕ್ಕೆ ತರಲು ಬಲ ತುಂಬಲಿದೆ" ಎಂದರು.

13429-bharati ok

ಹ್ಯಾಪಿಯೆಸ್ಟ್ ಹೆಲ್ತ್‌ನ ಸಹ-ಅಧ್ಯಕ್ಷ ಮತ್ತು ಸಿಒಒ (COO) ಡೇವಿಸ್ ಕರೇಡನ್ ಮಾತನಾಡಿ, "ನಮ್ಮ ಕೆಲಸದ ಮುಖ್ಯ ಉದ್ದೇಶವು ಮಾನವೀಯ ಸ್ಪರ್ಶವನ್ನು ನೀಡುವುದಾಗಿದೆ. ನಮ್ಮ ಕ್ಲಿನಿಕ್‌ಗಳಲ್ಲಿನ 'ಅತಿಥಿ ಅನುಭವ'ದ ಮೂಲಕ ಪ್ರತಿಯೊಬ್ಬರಿಗೂ ಬೆಂಬಲ ಮತ್ತು ಸಬಲೀ ಕರಣದ ಭಾವನೆ ಮೂಡುವಂತೆ ನೋಡಿಕೊಳ್ಳುತ್ತೇವೆ. ಭಾರತಿ ಅವರ ಅನುಭವವು ವೈಯಕ್ತಿಕ ಸ್ವಾಸ್ಥ್ಯದ ಪ್ರಯಾಣ ಮತ್ತು ಕಾರ್ಪೊರೇಟ್ ಪರಿಹಾರಗಳನ್ನು ಎಲ್ಲಾ ಸ್ಥಳ ಗಳಲ್ಲಿಯೂ ಉತ್ತಮವಾಗಿ ತಲುಪಿಸಲು ಸಹಾಯ ಮಾಡಲಿದೆ" ಎಂದಿದ್ದಾರೆ.

ಬಾಡಿ ಡೈನಾಮಿಕ್ಸ್ ವೈದ್ಯಕೀಯ ನಿರ್ದೇಶಕಿ ಭಾರತಿ ಜಜೂ ಅವರು ಮಾತನಾಡಿ, "ಹ್ಯಾಪಿಯೆಸ್ಟ್ ಹೆಲ್ತ್ ಸೇರುತ್ತಿರುವುದು ನನಗೆ ಸಂತೋಷ ತಂದಿದೆ. ಪುರಾವೆ ಆಧಾರಿತ ಎರ್ಗೋನಾಮಿಕ್ಸ್, ಬಿಹೇವಿಯರಲ್ ಸೈನ್ಸ್ ಮತ್ತು ಪುನಶ್ಚೇತನದ ಮೂಲಕ ಉದ್ಯೋಗ ಸ್ಥಳದಲ್ಲಿ ಆರೋಗ್ಯ ಮತ್ತು ವೈಯಕ್ತಿಕ ಯೋಗಕ್ಷೇಮವನ್ನು ಸುಧಾರಿಸುವುದು ನನ್ನ ಗುರಿಯಾಗಿದೆ" ಎಂದು ಸಂತಸವನ್ನು ವ್ಯಕ್ತಪಡಿಸಿದ್ದಾರೆ.