ಎಷ್ಟೇ ಪ್ರೀತಿ ಇದ್ದರೂ ದಾಂಪತ್ಯದಲ್ಲಿ ಈ ವಿಚಾರಕ್ಕೆ ಕಲಹ ಉಂಟಾಗಬಹುದು
Relationship Tips: ಇತ್ತೀಚೆಗೆ ಸಣ್ಣ ಪುಟ್ಟ ಕಾರಣಗಳಿಗಾಗಿ ದಾಂಪತ್ಯ ಜೀವನ ಅನ್ನೋದು ಕೊನೆಗೊಳ್ಳುತ್ತಿದೆ. ಸಂಗಾತಿಯು ಪರಿಪೂರ್ಣವಾಗಿಲ್ಲ, ತಮ್ಮ ಬಯಕೆಗಳನ್ನು ಈಡೇರಿಸಿಲ್ಲ, ವೃತ್ತಿಜೀವನದ ಒತ್ತಡ ಹೀಗೆ ನಾನಾ ಕಾರಣದಿಂದ ಡಿವೊರ್ಸ್ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಕೆಲವೊಮ್ಮೆ ಎಷ್ಟೇ ವರ್ಷದ ಪ್ರೀತಿ ಇದ್ದರೂ ದಾಂಪತ್ಯದಲ್ಲಿ ವಿರಸ ಬರುವುದು ಇದೆ. ಹಾಗಾದರೆ ದಾಂಪತ್ಯದಲ್ಲಿ ಸಂಗಾತಿ ಜತೆಗೆ ಜಗಳ ಆಗುವುದು ಯಾವ ಕಾರಣಕ್ಕೆ? ಎಷ್ಟೇ ಪ್ರೀತಿ ಇದ್ದರೂ ಹೊಂದಾಣಿಕೆಯಾಗಲ್ಲ ಯಾಕೆ? ಎಂದು ಪ್ರೊ. ಸುತ್ತೂರು ಮಾಲಿನಿ ತಿಳಿಸಿಕೊಟ್ಟಿದ್ದಾರೆ.
ಪ್ರೊ. ಸುತ್ತೂರು ಮಾಲಿನಿ -
ಬೆಂಗಳೂರು, ಫೆ. 17: ಮದುವೆ (Marriage) ಎಂದರೆ ಜೀವನದ ಅತೀ ಮಹತ್ವದ ಘಟ್ಟ. ಎರಡು ಜೀವ ಗಳು ಒಬ್ಬರಿಗೊಬ್ಬರು ಜೊತೆಯಾಗಿ ನಿಲ್ಲುವ ಬಂಧ ಇದಾಗಿದ್ದು ಸಂಸಾರವನ್ನು ಸರಿ ದೂಗಿ ಸುವುದೇ ಇಲ್ಲಿ ಮುಖ್ಯ ಆಗಿರುತ್ತದೆ. ಆದರೆ ಇತ್ತೀಚೆಗೆ ಸಣ್ಣ ಪುಟ್ಟ ಕಾರಣಗಳಿಗಾಗಿ ದಾಂಪತ್ಯ ಜೀವನ ಅನ್ನೋದು ಕೊನೆ ಗೊಳ್ಳುತ್ತಿದೆ. ಸಂಗಾತಿಯು ಪರಿಪೂರ್ಣವಾಗಿಲ್ಲ, ತಮ್ಮ ಬಯಕೆಗಳನ್ನು ಈಡೇರಿಸಿಲ್ಲ, ವೃತ್ತಿಜೀವನದ ಒತ್ತಡ ಹೀಗೆ ನಾನಾ ಕಾರಣದಿಂದ ಡಿವೊರ್ಸ್ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಕೆಲವೊಮ್ಮೆ ಎಷ್ಟೇ ವರ್ಷದ ಪ್ರೀತಿ ಇದ್ದರೂ ದಾಂಪತ್ಯ ದಲ್ಲಿ ವಿರಸ ಬರುವುದು ಇದೆ. ಹಾಗಿದ್ರೆ ದಾಂಪತ್ಯ ದಲ್ಲಿ ಸಂಗಾತಿ ಜತೆಗೆ ಜಗಳ ಆಗುವುದು ಯಾವ ಕಾರಣಕ್ಕೆ? ಎಷ್ಟೇ ಪ್ರೀತಿ ಇದ್ದರೂ ಹೊಂದಾಣಿಕೆಯಾಗಲ್ಲ ಯಾಕೆ? ಎಂಬ ಬಗ್ಗೆ ಪ್ರೊ. ಸುತ್ತೂರು ಮಾಲಿನಿ ವಿಶ್ವವಾಣಿ ಹೆಲ್ತ್ ಚಾನಲ್ ಜತೆ ಮಾತನಾಡಿದ್ದಾರೆ.
ದಾಂಪತ್ಯವೆಂದರೆ ಜಗಳ ಸಾಮಾನ್ಯ. ಆದರೆ ಜಗಳವೇ ಹೆಚ್ಚಾಗಿ ಪರಿಣಮಿಸಿದರೆ ಬದುಕು ಅಸಹನೀಯವಾಗಿ ಬಿಡುತ್ತದೆ. ಹಾಗಾಗಿ ದಾಂಪತ್ಯದಲ್ಲಿ ಹೊಂದಾಣಿಕೆ ಎನ್ನುವುದು ಅತೀ ಮುಖ್ಯವಾಗುತ್ತದೆ. ಆದರೆ ಸಂಗಾತಿಗೆ ಹೆಚ್ಚು ಕೇರ್ ತೆಗೆದುಕೊಳ್ಳದೆ ಇರುವಾಗ ಅಥವಾ ಆಸೆಗಳನ್ನು ಈಡೇರಿಸದಿದ್ದಾಗ ಹೀಗೆ ಸಾಕಷ್ಟು ವಿಚಾರಗಳು ಪತಿ ಪತ್ನಿಯ ನಡುವೆ ಕಲಹ ಏರ್ಪಡುವಂತೆ ಮಾಡುತ್ತದೆ. ಹಾಗೆಯೇ ಕೆಲವೊಮ್ಮೆ ಅತೀಯಾದ ನಿರೀಕ್ಷೆಗಳು ಕೂಡ ದಾಂಪತ್ಯದಲ್ಲಿ ಬಿರುಕು ಮೂಡಿಸುವ ಸಾಧ್ಯತೆ ಇರುತ್ತದೆ ಎಂದು ಪ್ರೊ. ಸುತ್ತೂರು ತಿಳಿಸಿಕೊಟ್ಟಿದ್ದಾರೆ.
ವಿಡಿಯೊ ನೋಡಿ:
ಪತಿ-ಪತ್ನಿ ಪರಸ್ಪರ ಒಬ್ಬರಿಗೊಬ್ಬರು ಕೊಡುವ ಸಮಯ ಕೂಡ ಮುಖ್ಯವಾಗುತ್ತದೆ. ಹೀಗಾಗಿ ನೀವು ನಿಮ್ಮ ಕಾರ್ಯಕ್ಷೇತ್ರಕ್ಕೆ ನೀಡುವ ಸಮಯಕ್ಕೆ ತಕ್ಕನಂತೆ ನಿಮ್ಮ ಸಂಗಾತಿಗೂ ನೀಡ ಬೇಕಾಗುತ್ತದೆ. ಮದುವೆಯ ಮೊದಲು ನೀಡಿದ ಪ್ರೀತಿ, ಕೊಡುತ್ತಿದ್ದ ಸರ್ಪ್ರೈಸ್ ಗಳು ಮದುವೆ ನಂತರವು ಸಂಗಾತಿ ನಿರೀಕ್ಷೆ ಇಟ್ಟಿರುವುದರಿಂದ ಇಂತಹ ಆಸೆಗಳನ್ನು ಪೂರೈಸದೆ ಇದ್ದಾಗ ಜಗಳ ಉಂಟಾಗುವ ಸಾಧ್ಯತೆ ಇದೆ.
ಇಂತಹ ಲಕ್ಷಣ ಕಾಣಿಸಿಕೊಂಡರೆ ತಕ್ಷಣ ವೈದ್ಯರ ಸಲಹೆ ಪಡೆದುಕೊಳ್ಳಿ
ಮಹಿಳೆಯರಲ್ಲಿ ಭಾವನಾತ್ಮಕವಾದ ಒಲವು ಹೆಚ್ಚು ಇರುತ್ತವೆ. ಹಾಗಾಗಿ ಕೇಳಿದ್ದನ್ನು ಕೊಡಿಸದೆ ಇದ್ದಾಗ ,ಅಥವಾ ಅವರಿಗೆ ಸಮಯ ನೀಡದೇ ಇದ್ದಾಗ ಕೋಪ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಹಣದ ಕೊರತೆ, ಕುಟುಂಬದ ಜವಾಬ್ದಾರಿಗಳ ನಿರ್ವಹಣೆಯಲ್ಲಿನ ವ್ಯತ್ಯಾಸ ಕಂಡು ಬಂದಾಗಲೂ ಕಲಹ ಉಂಟಾಗವ ಸಾಧ್ಯತೆಗಳು ಇರುತ್ತವೆ.
ಪರಿಹಾರವೇನು?
- ನಿಮ್ಮ ಸಂಗಾತಿಗೆ ಸರಿಯಾದ ಸಮಯವನ್ನು ನೀಡುವುದನ್ನು ಮರೆಯಬೇಡಿ.
- ಮದುವೆ ಮೊದಲು ತೊರಿಸಿದ ಪ್ರೀತಿ,ಕಾಳಜಿಯಂತೆಯೇ ಮದುವೆ ಬಳಿಕವೂ ತೋರಿಸಿ.
- ಪತಿ - ಪತ್ನಿಯ ಪರಸ್ಪರರ ಆಸೆ, ಆಕಾಂಕ್ಷೆಗಳನ್ನು ಗೌರವಿಸಿಕೊಳ್ಳಿ.
- ಇಬ್ಬರ ಮೇಲೂ ಪರಸ್ವರ ನಂಬಿಕೆಯನ್ನು ಇಟ್ಟುಕೊಳ್ಳಿ.
- ಸಂಗಾತಿಯ ಪ್ರಯತ್ನಗಳನ್ನು ಪ್ರಶಂಸಿಸಿ ಮತ್ತು ಅವರಿಗೆ ಬೆಂಬಲ ನೀಡುವುದನ್ನು ಮರೆಯಬೇಡಿ.