ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬುದ್ಧಿವಂತ ಮಗುವನ್ನು ಪಡೆಯಲು ಸುಧಾರಿತ ಚಿಕಿತ್ಸಾ ಕ್ರಮ ಇದೆಯೇ? ಈ ಬಗ್ಗೆ ವೈದ್ಯರ ಸಲಹೆ ಏನು?

Intelligent Child: ಬುದ್ಧಿವಂತ ಮಗುವನ್ನು ಪಡೆಯುವುದು ಹೇಗೆ? ಮಹಿಳೆಯರು ಗರ್ಭಧರಿಸುವ ಮೊದಲೆ ತಯಾರು ಮಾಡಿಕೊಳ್ಳಬೇಕಾಗುತ್ತಾ? ಅಂತಹ ಒಂದು ಆಸೆ ಸುಧಾರಿತ ವೈದ್ಯಕೀಯ 6 ಚಿಕಿತ್ಸೆಯಲ್ಲಿ ಸಾಧ್ಯ ಇದೆಯೇ? ಯಾವೆಲ್ಲಾ ವಿಶೇಷ ಚಿಕಿತ್ಸೆಗಳಿವೆ? ತಾಯಿಯ ಆಹಾರ ಕ್ರಮ ಹೇಗಿರ ಬೇಕು? ಎನ್ನುವುದರ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಖ್ಯಾತ ಸ್ತ್ರೀ ರೋಗ ತಜ್ಞೆ, ವಿದ್ಯಾ ಭಟ್ ಅವರು ಈ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.

ಬುದ್ಧಿವಂತ ಮಗುವನ್ನು ಪಡೆಯಲು ವೈದ್ಯರ ಸಲಹೆ ಇಲ್ಲಿದೆ!

ಸಂಗ್ರಹ ಚಿತ್ರ -

Profile
Pushpa Kumari Jan 13, 2026 7:00 AM

ಬೆಂಗಳೂರು,ಜ.12: ಹೆಚ್ಚಿನ ದಂಪತಿಗಳು ತಮಗೆ ಹುಟ್ಟುವ ಮಗುವಿನ ಬಗ್ಗೆ ಕನಸು ಕಾಣುತ್ತಾರೆ. ಮಗು ಅಂದವಾಗಿ ಇರಬೇಕು, ಆ್ಯಕ್ಟೀವ್ ಆಗಬೇಕು,ಅದೇ ರೀತಿ ಬುದ್ದಿವಂತ ಮಗು (Intelligent Child) ಜನಿಸಬೇಕು ಇತ್ಯಾದಿ..ಆದರೆ ಬುದ್ಧಿವಂತ ಮಗುವನ್ನು ಪಡೆಯುವುದು ಹೇಗೆ? ಮಹಿಳೆ ಯರು ಗರ್ಭಧರಿಸುವ ಮೊದಲೆ ತಯಾರು ಮಾಡಿಕೊಳ್ಳಬೇಕಾಗುತ್ತಾ? ಅಂತಹ ಒಂದು ಆಸೆ ಸುಧಾರಿತ ವೈದ್ಯಕೀಯ 6 ಚಿಕಿತ್ಸೆಯಲ್ಲಿ ಸಾಧ್ಯ ಇದೆಯೇ? ಯಾವೆಲ್ಲಾ ವಿಶೇಷ ಚಿಕಿತ್ಸೆಗಳಿವೆ? ತಾಯಿಯ ಆಹಾರ ಕ್ರಮ ಹೇಗಿರಬೇಕು? ಎನ್ನುವುದರ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಖ್ಯಾತ ಸ್ತ್ರೀ ರೋಗ ತಜ್ಞೆ, ವಿದ್ಯಾ ಭಟ್ ಅವರು ಈ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.

ತನ್ನ ಮಗು ಎಲ್ಲರಿಗಿಂತಲೂ ಚಂದವಾಗಿ ಹುಟ್ಟಬೇಕು ತುಂಬಾ ಬುದ್ಧಿವಂತವಾಗಿ ಬೆಳೆದು ಸಾಧನೆ ಮಾಡಬೇಕೆಂದು ಹೆತ್ತವರು ಬಯಸುತ್ತಾರೆ.‌ ಆದರೆ ಅಂದದ ಮಗುವನ್ನು ಪಡೆಯಲು ಫ್ಯಾಮಿಲಿ ಹೆರಿಡಿಟಿ ಕೂಡ ಪ್ರಮುಖವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ತಂದೆ ತಾಯಿಯ ಜೀನ್‌ಗಳು ಮಗುವಿಗೆ ಆನುವಂಶಿಕವಾಗಿ ಬರುತ್ತವೆ. ತಂದೆಯಿಂದ, ತಾಯಿಯಿಂದ ಅಜ್ಜಿಯಿಂದ, ಮುತ್ತಾತ ನಿಂದ ಹೀಗೂ ಬರಬಹುದು.ಈ ಜೀನ್‌ಗಳು ಕಣ್ಣಿನ ಬಣ್ಣ, ಕೂದಲು, ಮುಖದ ಆಕಾರ ಮತ್ತು ಇತರ ದೈಹಿಕ ಗುಣಲಕ್ಷಣಗಳನ್ನು ನಿರ್ಧರಿಸುತ್ತವೆ ಎಂದು ಸ್ತ್ರೀ ರೋಗ ತಜ್ಞೆ, ವಿದ್ಯಾ ಭಟ್ ಮಾಹಿತಿ ನೀಡಿದ್ದಾರೆ.

ವಿಡಿಯೋ ನೋಡಿ:



ಇನ್ನು ಮಗುವಿನ ಬುದ್ದಿವಂತಿಕೆ ಅನ್ನೋದು ತಾಯಿಯ ಎಕ್ಸ್ ಕ್ರೊಮೊಸೊಮ್ ನಿಂದ ಹೆಚ್ಚಾಗಿ ಬರಬಹುದು ಎಂದು ಸಂಶೋಧನೆಯಿಂದ ಕೂಡ ಸಾಬೀತು ಆಗಿದೆ. ಇದರ ಜೊತೆ ಮಗು ತುಂಬಾ ಜಾಣ ಹಾಗೂ ಚುರುಕಾಗಿರಲು ಗರ್ಭಧಾರಣೆ ವೇಳೆ ಮಹಿಳೆಯರು ಸೇವಿಸಬೇಕಾದ ಆಹಾರಗಳು ಕೂಡ ಪ್ರಮುಖ ವಾಗಬಹುದು.ಈ ವೇಳೆ ಮಗುವಿನ ಮೆದುಳಿಗೆ ಶಕ್ತಿ ನೀಡುವ ಪೋಷಕಾಂಶಗಳನ್ನು ಸೇವಿಸಬಹುದು. ಪ್ರಮುಖವಾಗಿ ಕೋಲೀನ್ ಪ್ರಮಾಣ ಹೆಚ್ಚಾಗಿರುವ ಆಹಾರ ಮೊಟ್ಟೆ, ಡ್ರೈ ಪ್ರೂಟ್ಸ್, ಹಸಿರು ತರಕಾರಿ ಸೇವಿಸದರೆ ಬುದ್ದಿವಂತ ಮಗು ಜನಿಸಬಹುದು ಎಂದು ಸಲಹೆ ನೀಡಿದ್ದಾರೆ. ಆದರೆ ಮಗುವಿನ ಬುದ್ದಿವಂತಿಕೆ ಮೇಲೆ ತಾಯಿಯ ಜೀನ್ ಗಳೇ ಕಾರಣ ಎಂದು ಸ್ಪಷ್ಟ ಪಡಿಸಿದ್ದಾರೆ.

Health Tips: ರಾತ್ರಿ ಸಮಯದಲ್ಲಿ ಉತ್ತಮ ನಿದ್ರೆ ಮಾಡಬೇಕಾ?; ಹಾಗಾದ್ರೆ ಇಂದಿನಿಂದಲೇ ಮಲಗುವ ಮುನ್ನ ಇಂತಹ ಆಹಾರಗಳನ್ನು ಸೇವಿಸುವುದನ್ನು ನಿಲ್ಲಿಸಿ

ಆರೋಗ್ಯ ವಂತ ಮಗು ಪಡೆಯಲು ವೈದ್ಯರ ಸಲಹೆ:

*ಗರ್ಭಿಣಿ ಮಹಿಳೆ ಆಹಾರದಲ್ಲೂ ಮಿತವಾಗಿ ಸೇವನೆ ಮಾಡಬೇಕು. ಇಲ್ಲದಿದ್ದಲ್ಲಿ ಪ್ಯಾಟ್ ಹೆಚ್ಚಾಗಿ ತೂಕ ಹೆಚ್ಚುವ ಸಾಧ್ಯತೆ ಇರುತ್ತದೆ.

*ಗರ್ಭಿಣಿ ಮಹಿಳೆಯರಿಗೆ ಹಿಮೋಗ್ಲೋಬಿನ್ ಪ್ರಮುಖವಾಗಿದ್ದು ಈ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ.ಇದರ ಜೊತೆ ಥೈರಾಯ್ಡ್ ಪರೀಕ್ಷೆ ಕೂಡ ಮಾಡಿಸಬೇಕು.

*ಅದೇ ರೀತಿ ವಿಟಮಿನ್ ಡಿ, ಫಾಲಿಕ್ ಆಮ್ಲ ಮತ್ತು ಕಬ್ಬಿನಾಂಶದ ಸಪ್ಲಿಮೆಂಟ್ ಗಾಗಿ ಹಸಿರೆಲೆ ತರಕಾರಿಗಳು ಮತ್ತು ಕೆಲವೊಂದು ಧಾನ್ಯಗಳನ್ನು ಸೇವಿಸಬೇಕು.

*ಗರ್ಭಿಣಿಯರಲ್ಲಿ ಕಬ್ಬಿನಾಂಶದ ಕೊರತೆಯಾದರೆ ಆಗ ಮಗುವಿನ ಬೆಳವಣೆಗೆ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.