Health Tips: ಹಸಿ ಬೀಟ್ರೂಟ್ ಅಥವಾ ಬೇಯಿಸಿದ ಬೀಟ್ರೂಟ್: ಮೂತ್ರಪಿಂಡದ ಆರೋಗ್ಯಕ್ಕೆ ಯಾವುದು ಉತ್ತಮ?
Health Tips: ಬೀಟ್ರೂಟ್ ಪೌಷ್ಟಿಕಾಂಶದಿಂದ ಕೂಡಿದ ತರಕಾರಿಯಾಗಿದೆ. ಇದರಲ್ಲಿ ವಿಟಮಿನ್ ಸಿ, ಫೋಲೇಟ್, ಪೊಟ್ಯಾಸಿಯಮ್, ಮ್ಯಾಂಗನೀಸ್ ಮತ್ತು ನಾರಿನಾಂಶಗಳ ಪ್ರಮಾಣ ಅಧಿಕವಾಗಿದೆ. ಅದರಲ್ಲೂ ಆರೋಗ್ಯ ಕಾಳಜಿ ಉಳ್ಳವರು ಸಾಂಬಾರು, ಪಲ್ಯ, ಹಾಗೂ ಜ್ಯೂಸ್ ಗೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡುತ್ತಾರೆ. ಆದರೆ ಮೂತ್ರಪಿಂಡದ ಆರೋಗ್ಯ ಸಮಸ್ಯೆ ಇದ್ದವರು ಇದನ್ನು ಸೇವನೆ ಮಾಡಬಹುದೇ?
ಸಂಗ್ರಹ ಚಿತ್ರ -
ನವದೆಹಲಿ,ಸೆ.17: ಬೀಟ್ರೂಟ್ (Beetroot Benefit) ಪೌಷ್ಟಿಕಾಂಶದಿಂದ ಕೂಡಿದ ತರಕಾರಿ ಯಾಗಿದೆ. ಇದರಲ್ಲಿ ವಿಟಮಿನ್ ಸಿ, ಫೋಲೇಟ್, ಪೊಟ್ಯಾಸಿಯಮ್, ಮ್ಯಾಂಗನೀಸ್ ಮತ್ತು ನಾರಿನಾಂಶಗಳ ಪ್ರಮಾಣ ಅಧಿಕವಾಗಿದೆ. ಅದರಲ್ಲೂ ಆರೋಗ್ಯ ಕಾಳಜಿ ಉಳ್ಳವರು ಸಾಂಬಾರು, ಪಲ್ಯ, ಹಾಗೂ ಜ್ಯೂಸ್ ಗೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡುತ್ತಾರೆ. ಆದರೆ ಮೂತ್ರಪಿಂಡದ ಆರೋಗ್ಯ ಸಮಸ್ಯೆ ಇದ್ದವರು ಇದನ್ನು ಸೇವನೆ ಮಾಡಬಹುದೇ? ಹಸಿ ಬೀಟ್ರೂಟ್ ಅಥವಾ ಬೇಯಿಸಿದ ಬೀಟ್ರೂಟ್ ,ಮೂತ್ರ ಪಿಂಡದ ಆರೋಗ್ಯಕ್ಕೆ ಯಾವುದು ಉತ್ತಮ ಎನ್ನುವ ಗೊಂದಲಕ್ಕೆ ತಜ್ಞರು ಸಲಹೆ ನೀಡಿದ್ದಾರೆ.
Health Tips: ಆರೋಗ್ಯಪೂರ್ಣ ಜೀವನ ಸಾಗಿಸಬೇಕೆ? ಬೆಳಗಿನ ಉಪಾಹಾರ ಹೀಗಿರಲಿ
ಹಸಿ ಬೀಟ್ರೂಟ್‌ನಲ್ಲಿ ಹೆಚ್ಚಿನ ಪ್ರಮಾಣದ 'ಆಕ್ಸಲೇಟ್' ಇರುತ್ತದೆ:
100 ಗ್ರಾಂ ಹಸಿ ಬೀಟ್‌ರೂಟ್‌ನಲ್ಲಿ ಸುಮಾರು 94.6 ರಿಂದ 141.6 ಮಿ.ಗ್ರಾಂ ಆಕ್ಸಲಿಕ್ ಆಮ್ಲವಿರುತ್ತದೆ. ಒಂದು ಲೀಟರ್ ಬೀಟ್ರೂಟ್ ಜ್ಯೂಸ್‌ನಲ್ಲಿ 300 ರಿಂದ 525 ಮಿಲಿಗ್ರಾಂ ಆಕ್ಸ ಲೇಟ್ ಇರಬಹುದು. ಸಾಮಾನ್ಯವಾಗಿ ದಿನಕ್ಕೆ 50 ರಿಂದ 100 ಮಿಲಿಗ್ರಾಂ ಆಕ್ಸಲೇಟ್ ಸೇವನೆ ಸಹಜ. ಆದರೆ ಹೆಚ್ಚುವರಿ ಆಕ್ಸಲೇಟ್ ದೇಹ ಸೇರಿದಾಗ,ಕಿಡ್ನಿ ಕಲ್ಲುಗಳಿಗೆ ಸಮಸ್ಯೆ ಉಂಟಾಗಬಹುದು.
ಬೇಯಿಸಿದ ನಂತರ ಸೇವಿಸಿ:
ಬೀಟ್ರೂಟ್ ಅನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಿ, ಕೆಲವು ಆಕ್ಸಲೇಟ್‌ಗಳು ನೀರಿನಲ್ಲಿ ಕರಗುವ ಗುಣವನ್ನು ಹೊಂದಿರುತ್ತವೆ. ಆ ನೀರನ್ನು ಚೆಲ್ಲುವುದರಿಂದ ಅದರಲ್ಲಿ ಕರಗುವ ಆಕ್ಸಲೇಟ್ ಪ್ರಮಾಣ ಶೇ. 30 ರಿಂದ 87ರಷ್ಟು ಕಡಿಮೆಯಾಗುತ್ತದೆ.
ಕಿಡ್ನಿ ಆರೋಗ್ಯ
ಬೀಟ್ರೂಟ್‌ನಲ್ಲಿ ಆಕ್ಸಲೇಟ್ ಹೊರತಾಗಿ ಕಿಡ್ನಿ ಆರೋಗ್ಯಕ್ಕೆ ಒಳಿತಾಗುವ 'ನೈಟ್ರೇಟ್ಸ್' ಅಂಶವು ಕೂಡ ಇದೆ. ಇದು ರಕ್ತನಾಳಗಳನ್ನು ಪ್ರೇರಿಪಿಸಿ ರಕ್ತದೊತ್ತಡವನ್ನು ನಿಯಂತ್ರಣ ದಲ್ಲಿಡಲು ಹಾಗೂ ಕಿಡ್ನಿಯ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.
ಯಾರಿಗೆ ಸೂಕ್ತ?
ಸಾಮಾನ್ಯ ಆರೋಗ್ಯವಂತರು ಬೇಯಿಸಿದ ಅಥವಾ ಹಸಿ ಬೀಟ್ರೂಟ್ ಸೇವಿಸಬಹುದು.ಆದರೆ ದೀರ್ಘಕಾಲದ ಕಿಡ್ನಿ ಕಾಯಿಲೆ ಇದ್ದವರು ಹಸಿ ಬೀಟ್ರೂಟ್ ಹಾಗೂ ಬೀಟ್ರೂಟ್ ಜ್ಯೂಸ್ ಸಂಪೂರ್ಣವಾಗಿ ತಪ್ಪಿಸುವುದು ಒಳಿತು. ಬೇಯಿಸಿದರೂ ಆಕ್ಸಲೇಟ್ ಪೂರ್ತಿಯಾಗಿ ನಾಶವಾಗುವುದಿಲ್ಲ.