ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Olive Oil : ಆಲಿವ್‌ ಎಣ್ಣೆಯ ದೌರ್ಬಲ್ಯಗಳು !

ಎಕ್ಸ್‌ಟ್ರಾ ವರ್ಜಿನ್ ಆಲಿವ್ ಆಯಿಲ್ ಒಂದು ಉತ್ತಮ ಸೂಪರ್ ಫುಡ್, ಸಂಶಯವಿಲ್ಲ. ಇದರಲ್ಲಿ ‘ಫಿನಾಲ್ಸ್’ ಎಂಬ ಸೂಕ್ಷ್ಮವಾದ ಆಂಟಿ ಆಕ್ಸಿಡೆಂಟ್ ಗಳಿರುತ್ತವೆ. ಆದರೆ ಇವು ಉಷ್ಣತೆಯನ್ನು ತಾಳಲಾ ರದೇ ನಮ್ಮ ಒಗ್ಗರಣೆಯ ಕಟು ಶಾಖಕ್ಕೆ ನಾಶವಾಗುತ್ತವೆ. ಅಂದರೆ, ಸಾವಿರ ರೂಪಾಯಿ ಕೊಟ್ಟು ತಂದ ಎಣ್ಣೆಯ ಸತ್ವವೆಲ್ಲಾ ಬೂದಿಯಾದಂತೆ. ಅಷ್ಟೇ ಅಲ್ಲ, ಹೆಚ್ಚು ಕಾಯಿಸಿದರೆ ಇದು ಬೇಗನೆ ಹೊಗೆ ಯಾಡಲು ಶುರುವಾಗಿ, ಕಹಿ ಮತ್ತು ವಿಷಕಾರಿಯಾಗಿ ಬದಲಾಗುತ್ತದೆ.

Olive Oil : ಆಲಿವ್‌ ಎಣ್ಣೆಯ ದೌರ್ಬಲ್ಯಗಳು !

-

Profile
Ashok Nayak Apr 19, 2026 2:12 PM

ವಿದೇಶಿ ವಸ್ತುಗಳೆಂದರೆ ಶ್ರೇಷ್ಠ ಎಂಬ ಭಾವನೆ ಅನೇಕರಲ್ಲಿದೆ. ಟಿವಿ ಜಾಹೀರಾತುಗಳಲ್ಲಿ ಹಾರ್ಟ್‌ ಹೆಲ್ತ್‌ಗೆ ಆಲಿವ್ ಆಯಿಲ್ ಒಳ್ಳೆಯದು ಎಂದು ನೋಡಿ, ಸಾವಿರಾರು ರೂಪಾಯಿ ಕೊಟ್ಟು ಆ ಎಣ್ಣೆಯನ್ನು ತರುತ್ತಾರೆ. ಅದನ್ನು ನಮ್ಮ ದೋಸೆ, ಸಾರು ಮತ್ತು ಒಗ್ಗರಣೆಗೆ ಧಾರಾಳವಾಗಿ ಬಳಸು ತ್ತಾರೆ.

ಇದು ಕೆಲವರು ಮಾಡುತ್ತಿರುವ ಅತಿ ದೊಡ್ಡ ತಪ್ಪು. ಉಷ್ಣತೆಯೇ ಇಲ್ಲಿನ ಸಮಸ್ಯೆ. ಎಕ್ಸ್‌ಟ್ರಾ ವರ್ಜಿನ್ ಆಲಿವ್ ಆಯಿಲ್ ಒಂದು ಉತ್ತಮ ಸೂಪರ್ ಫುಡ್, ಸಂಶಯವಿಲ್ಲ. ಇದರಲ್ಲಿ ‘ಫಿನಾಲ್ಸ್’ ಎಂಬ ಸೂಕ್ಷ್ಮವಾದ ಆಂಟಿ ಆಕ್ಸಿಡೆಂಟ್ ಗಳಿರುತ್ತವೆ. ಆದರೆ ಇವು ಉಷ್ಣತೆಯನ್ನು ತಾಳಲಾರದೇ ನಮ್ಮ ಒಗ್ಗರಣೆಯ ಕಟು ಶಾಖಕ್ಕೆ ನಾಶವಾಗುತ್ತವೆ. ಅಂದರೆ, ಸಾವಿರ ರೂಪಾಯಿ ಕೊಟ್ಟು ತಂದ ಎಣ್ಣೆಯ ಸತ್ವವೆಲ್ಲಾ ಬೂದಿಯಾದಂತೆ. ಅಷ್ಟೇ ಅಲ್ಲ, ಹೆಚ್ಚು ಕಾಯಿಸಿದರೆ ಇದು ಬೇಗನೆ ಹೊಗೆ ಯಾಡಲು ಶುರುವಾಗಿ, ಕಹಿ ಮತ್ತು ವಿಷಕಾರಿಯಾಗಿ ಬದಲಾಗುತ್ತದೆ.

ಪೊಮೇಸ್ ಆಯಿಲ್ ಎಂಬ ಕೈಗಾರಿಕಾ ಕಸ

ಅಪ್ಪಟ ಆಲಿವ್ ಆಯಿಲ್ ದುಬಾರಿ ಎಂದು ಅನೇಕರು ಅದರ ಅಗ್ಗದ ಆವೃತ್ತಿಗಳಾದ ಪೊಮೇಸ್ ಆಲಿವ್ ಆಯಿಲ್ ಅಥವಾ ಪ್ಯೂರ್ ಆಲಿವ್ ಆಯಿಲ್ ತರುತ್ತಾರೆ. ದಯವಿಟ್ಟು ಇದನ್ನು ಮಾಡ ಬೇಡಿ. ಏಕೆಂದರೆ, ಪೋಮೋಸ್ ಒಳ್ಳೆಯದಲ್ಲ!

ಇದನ್ನೂ ಓದಿ: Cooking oil prices rise: ಅಡುಗೆ ಎಣ್ಣೆ ಬೆಲೆ ಏರಿಕೆ, ಗ್ರಾಹಕರಿಗೆ ಬರೆ

ಉತ್ತಮ ಗುಣಮಟ್ಟದ ಎಣ್ಣೆಯನ್ನು ಹಿಂಡಿದ ನಂತರ ಉಳಿಯುವ ಆಲಿವ್ ಚರಟದಿಂದ, ಹೆಕ್ಸೇನ್ ನಂತಹ ರಾಸಾಯನಿಕ ಬಳಸಿ ಹಿಂಸಿಸಿ ತೆಗೆದ ಎಣ್ಣೆ ಪೊಮೇಸ್. ಇದು ನಮ್ಮ ಅಗ್ಗದ ಸೂರ್ಯ ಕಾಂತಿ ಎಣ್ಣೆಯಷ್ಟೇ ಹಾಳು. ಇದರಲ್ಲಿ ನಮ್ಮ ಶೇಂಗಾ ಎಣ್ಣೆಗಿಂತ ಯಾವ ವಿಶೇಷ ಗುಣಗಳೂ ಇಲ್ಲ. ಆದರೆ ಬೆಲೆ ಮಾತ್ರ ಮೂರ್ನಾಲ್ಕು ಪಟ್ಟು ಹೆಚ್ಚು!

ಮೆಡಿಟರೇನಿಯನ್ ಆಹಾರ ಆರೋಗ್ಯಕರ, ಏಕೆಂದರೆ ಅವರು ಆಲಿವ್ ಎಣ್ಣೆಯನ್ನು ಸಲಾಡ್ ಅಥವಾ ಬ್ರೆಡ್ ಮೇಲೆ ಹಸಿಯಾಗಿ ಬಳಸುತ್ತಾರೆ. ಕರಿಯಲು ಬಳಸುವುದಿಲ್ಲ. ಭಾರತೀಯರಾದ ನಾವು ಅಧಿಕ ಉಷ್ಣತೆಯಲ್ಲಿ ಒಗ್ಗರಣೆ ಕೊಟ್ಟು ಅಡುಗೆ ಮಾಡುವವರು. ಬೆಂಕಿಯನ್ನು ತಡೆದುಕೊಳ್ಳುವ ಶಕ್ತಿ ಆಲಿವ್ ಎಣ್ಣೆಗಿಲ್ಲ.

ತಪ್ಪು ಕಲ್ಪನೆಗಳು ಮತ್ತು ವಾಸ್ತವ:

ತಪ್ಪು ಕಲ್ಪನೆ: ಆಲಿವ್ ಆಯಿಲ್ ಪ್ರಪಂಚದಲ್ಲೇ ಅತ್ಯಂತ ಆರೋಗ್ಯಕರ ಎಣ್ಣೆ.

ವಾಸ್ತವ: ಹಸಿಯಾಗಿ ಬಳಸಿದರೆ ಮಾತ್ರ ಅದು ಆರೋಗ್ಯಕರ. ಕಾಯಿಸುವ ಭಾರತೀಯ ಅಡುಗೆಗೆ ತುಪ್ಪ, ತೆಂಗಿನ ಎಣ್ಣೆ ಅಥವಾ ಶೇಂಗಾ ಎಣ್ಣೆಗಳೇ ಹೆಚ್ಚು ಸ್ಥಿರ ಮತ್ತು ಶ್ರೇಷ್ಠ.

ತಪ್ಪು ಕಲ್ಪನೆ: ತೂಕ ಇಳಿಸಲು ಆಲಿವ್ ಎಣ್ಣೆಯನ್ನು ಬಳಸಬೇಕು.

ವಾಸ್ತವ: ಎಣ್ಣೆ ಎಲ್ಲಿಯದೇ ಆಗಲಿ, ಕ್ಯಾಲೋರಿ ಒಂದೇ (ಪ್ರತಿ ಗ್ರಾಮಿಗೆ 9 ಕ್ಯಾಲೋರಿ). ಹೆಚ್ಚು ತಿಂದರೆ ತೂಕ ಏರುವುದು ಖಂಡಿತ. ಆದರೆ ಯಾವುದೇ ಆರೋಗ್ಯಕರ ಎಣ್ಣೆಯನ್ನು ಸೇವಿಸಿದಾಗ ಹೊಟ್ಟೆ ಬೇಗ ತುಂಬಿದ ಹಾಗಾಗುವುದರಿಂದ ಕೆಲವರಿಗೆ ಅದರಿಂದ ತೂಕ ಇಳಿಸಲು ಸಹಾಯ.

ತಪ್ಪು ಕಲ್ಪನೆ: ಪೊಮೇಸ್ ಆಯಿಲ್ ಒಳ್ಳೆಯ ಬಜೆಟ್ ಆಯ್ಕೆ.

ವಾಸ್ತವ: ಅದು ಸಂಸ್ಕರಿಸಿದ ಕೈಗಾರಿಕಾ ತ್ಯಾಜ್ಯ. ಹಣ ಉಳಿಸಬೇಕಿದ್ದರೆ ತಾಜಾ ಸ್ಥಳೀಯ ಶೇಂಗಾ ಎಣ್ಣೆ ಬಳಸಿ, ಪೊಮೇಸ್ ಬೇಡ.

ನಿಮ್ಮ ಬಳಿ ಎಕ್ಸ್‌ಟ್ರಾ ವರ್ಜಿನ್ ಆಲಿವ್ ಎಣ್ಣೆ ಇದ್ದರೆ, ಅದನ್ನು ಸಲಾಡ್, ಸೂಪ್ ಅಥವಾ ಬೇಯಿಸಿದ ತರಕಾರಿಗಳ ಮೇಲೆ ಹಸಿಯಾಗಿ ಬಳಸಿ. ಒಗ್ಗರಣೆಗೆ ಆಲಿವ್ ಆಯಿಲ್ ಹಾಕಬೇಡಿ.

ಆ ಶಾಖವನ್ನು ತಡೆದುಕೊಳ್ಳಲು ಅದಕ್ಕೆ ಶಕ್ತಿಯಿಲ್ಲ. ಅದಕ್ಕೆ ತುಪ್ಪ, ತೆಂಗಿನೆಣ್ಣೆ ಅಥವಾ ಶೇಂಗಾ ಎಣ್ಣೆ ಬಳಸಿ. ಬಾಟಲ್ ಮೇಲೆ ಪೊಮೇಸ್ ಎಂದು ಬರೆದಿದ್ದರೆ, ಅದನ್ನು ಖರೀದಿಸಬೇಡಿ.

ಅಡುಗೆ ಎಣ್ಣೆಯ ವಿಷಯದಲ್ಲಿ ಪಾಶ್ಚಾತ್ಯರನ್ನು ಕುರುಡಾಗಿ ಅನುಕರಿಸಬೇಡಿ. ನಮ್ಮ ವಾತಾವರಣ ಬೇರೆ, ನಮ್ಮ ಅಡುಗೆ ಶೈಲಿ ಬೇರೆ. ಪ್ರಕೃತಿ ಅವರಿಗೆ ಆಲಿವ್ ನೀಡಿದೆ, ನಮಗೆ ತೆಂಗು, ಶೇಂಗಾ ಮತ್ತು ತುಪ್ಪವನ್ನು ನೀಡಿದೆ. ನಮ್ಮ ಮಣ್ಣಿನದು ನಮಗೆ ಶ್ರೇಷ್ಠ.