Amitabh Bachchan: ‘ಕೆಬಿಸಿ 18’ ಶೂಟಿಂಗ್ ವೇಳೆ ಅಮಿತಾಭ್ ಬಚ್ಚನ್ ಕಾಲಿಗೆ ಗಾಯ
Amitabh Bachchan: ಕಾರ್ಯಕ್ರಮದ ಆರಂಭದಲ್ಲಿಯೇ ಅಮಿತಾಬ್ ಬಚ್ಚನ್ ತಮ್ಮ ಅಭಿಮಾನಿಗಳು ಮತ್ತು ವೀಕ್ಷಕರಿಗೆ ‘ಕೌನ್ ಬನೇಗಾ ಕರೋಡ್‌ಪತಿ 18’ ಚಿತ್ರೀಕರಣದ ವೇಳೆ ಗಾಯವಾಗಿದೆ ಎಂದು ಹೇಳಿಕೊಂಡಿದ್ದಾರೆ. ತಮ್ಮ ಎಡ ಮೊಣಕಾಲಿನ ಕಡೆಗೆ ಬೆರಳು ತೋರಿಸಿ, ಹಿಂದಿನ ದಿನ ಶೂಟಿಂಗ್ ಮಾಡುವಾಗ ಜಾರಿ ಬಿದ್ದೆ ಎಂದು ಹೇಳಿದರು. ಕಾರ್ಯಕ್ರಮದ ಆರಂಭಿಕ ಹಂತದಲ್ಲಿ ವೇದಿಕೆಯ ಮಧ್ಯಭಾಗದಲ್ಲಿ ನಿಂತುಕೊಂಡು ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡುವ ಅಮಿತಾಭ್ ಬಚ್ಚನ್, ಈ ಬಾರಿ ಗಾಯದ ಕಾರಣದಿಂದಾಗಿ ಕುಳಿತುಕೊಂಡೇ ತಮ್ಮ ಮಾತುಗಳನ್ನು ಆರಂಭಿಸಿದರು.
ಅಮಿತಾಭ್ ಬಚ್ಚನ್ -
ಕಾರ್ಯಕ್ರಮದ ಆರಂಭದಲ್ಲಿಯೇ ಅಮಿತಾಬ್ ಬಚ್ಚನ್ (Amitabh) ತಮ್ಮ ಅಭಿಮಾನಿಗಳು ಮತ್ತು ವೀಕ್ಷಕರಿಗೆ ‘ಕೌನ್ ಬನೇಗಾ ಕರೋಡ್‌ಪತಿ 18’ (Kaun Banega Crorepati 18) ಚಿತ್ರೀಕರಣದ ವೇಳೆ ಗಾಯವಾಗಿದೆ ಎಂದು ಹೇಳಿಕೊಂಡಿದ್ದಾರೆ. ತಮ್ಮ ಎಡ ಮೊಣಕಾಲಿನ ಕಡೆಗೆ ಬೆರಳು ತೋರಿಸಿ, ಹಿಂದಿನ ದಿನ ಶೂಟಿಂಗ್ ಮಾಡುವಾಗ ಜಾರಿ ಬಿದ್ದೆ ಎಂದು ಹೇಳಿದರು. ಕಾರ್ಯಕ್ರಮದ ಆರಂಭಿಕ ಹಂತದಲ್ಲಿ ವೇದಿಕೆಯ ಮಧ್ಯಭಾಗದಲ್ಲಿ (Shooting) ನಿಂತುಕೊಂಡು ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡುವ ಅಮಿತಾಭ್ ಬಚ್ಚನ್, ಈ ಬಾರಿ ಗಾಯದ ಕಾರಣದಿಂದಾಗಿ ಕುಳಿತುಕೊಂಡೇ ತಮ್ಮ ಮಾತುಗಳನ್ನು ಆರಂಭಿಸಿದರು.
ವೀಕ್ಷಕರಲ್ಲಿ ಹೆಚ್ಚು ಜನಪ್ರಿಯ
'ಕೌನ್ ಬನೇಗಾ ಕರೋಡ್ ಪತಿ'ಯ 18 ನೇ ಸೀಸನ್ ವೀಕ್ಷಕರಲ್ಲಿ ಹೆಚ್ಚು ಜನಪ್ರಿಯವಾಗಿದೆ. ಅಮಿತಾಬ್ ಬಚ್ಚನ್ 2000 ರಿಂದ ಈ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ. ಶಾರುಖ್ ಖಾನ್ ನಿರೂಪಣೆ ಮಾಡಿದ ಮೂರನೇ ಸೀಸನ್ ಹೊರತುಪಡಿಸಿ, ಉಳಿದ ಎಲ್ಲಾ ಸೀಸನ್‌ಗಳಲ್ಲಿ ಅಮಿತಾಬ್ ಕಾರ್ಯಕ್ರಮದ ಪ್ರಮುಖ ಮುಖವಾಗಿದ್ದಾರೆ. 83 ನೇ ವಯಸ್ಸಿನಲ್ಲಿಯೂ ಜನರು ಅವರ ಫಿಟ್ನೆಸ್ ಮತ್ತು ಕೆಲಸ ಮಾಡುವ ಸಮರ್ಪಣೆಯನ್ನು ಹೊಗಳುತ್ತಲೇ ಇದ್ದಾರೆ.
ಇದನ್ನೂ ಓದಿ: Bethlehem Kudumba Unit OTT: ಸಾರ್ವಕಾಲಿಕ ದಾಖಲೆ ಬರೆದ ನಿವಿನ್ ನಟನೆಯ ಈ ಮೂವಿ ಒಟಿಟಿ ರಿಲೀಸ್ ಡೇಟ್ ಅನೌನ್ಸ್!
ನಿನ್ನೆ ಶೂಟಿಂಗ್ ನಡೆಯುತ್ತಿದ್ದಾಗ ಜಾರಿ ಬಿದ್ದಿದ್ದರಿಂದ ಎಡ ಮೊಣಕಾಲಿಗೆ ಏಟಾಗಿದೆ’ ಎಂದು ತಮ್ಮ ಎಡಗಾಲನ್ನು ತೋರಿಸುತ್ತಾ ಘಟನೆಯನ್ನು ವಿವರಿಸಿದರು. ‘ಗಾಯವೇನೂ ಅಷ್ಟೊಂದು ಗಂಭೀರವಾಗಿಲ್ಲ. ಸ್ಪರ್ಧಿಗಳನ್ನು ವೇದಿಕೆಗೆ ಸ್ವಾಗತಿಸುವಾಗ ನಿಂತುಕೊಳ್ಳುತ್ತೇನೆ. ಆದರೆ ಸದ್ಯಕ್ಕೆ ಎದ್ದು ನಿಲ್ಲಲು ಸ್ವಲ್ಪ ಕಷ್ಟವಾಗುತ್ತಿರುವುದರಿಂದ ಕುಳಿತಿದ್ದೇನೆ’ ಎಂದು ಸ್ಪಷ್ಟಪಡಿಸಿದರು.
ಅದೇ ವೇಳೆ, ಅಮಿತಾಭ್ ಬಚ್ಚನ್ ತಮ್ಮ ಮಗ ಅಭಿಷೇಕ್ ಬಚ್ಚನ್ ಜೊತೆಗಿನ ಬಂಧವನ್ನು ಕುರಿತು ಒಂದು ಬ್ಲಾಗ್ ಪೋಸ್ಟ್‌ನಲ್ಲಿ ಮಾತನಾಡಿದ್ದಾರೆ.
ತಂದೆ ಮತ್ತು ಮಗ ಇಬ್ಬರೂ ಒಂದೇ ವೇದಿಕೆಯ ಮೇಲೆ ಕುಳಿತಿದ್ದಾರೆ; ಅವರ ಆಲೋಚನೆಗಳು ಬೇರೆ ಬೇರೆ ಆಗಿರಬಹುದು, ಆದರೆ ಗುರಿ ಒಂದೇ ಆಗಿದೆ. ಅವರು ಇನ್ನೂ ಮುಂದುವರಿದು ಪರಸ್ಪರ ಪ್ರೀತಿ ಮತ್ತು ಗೌರವದ ಬಗ್ಗೆ ಬರೆದಿದ್ದಾರೆ. “ಮುಂದಿನ ಪೀಳಿಗೆಯ ಮೇಲೆ ಯಾವಾಗಲೂ ಗೌರವ... ಆದರೆ ಗುರಿ ಯಾವಾಗಲೂ ಒಂದೇ... ಅದು ಪ್ರತಿಯೊಂದು ದಾರಿಯ ಆದರ್ಶವಾಗಿರಲಿ... ಮತ್ತು ಅದು ಯಾವಾಗಲೂ ನಮ್ಮ ಸಂಬಂಧವಾಗಿದೆ ಎಂದಿದ್ದರು.
ಇದನ್ನೂ ಓದಿ: Bigg Boss Kannada 13: ʻಕಳಪೆʼ ಪಟ್ಟ ಹೊತ್ತ ಗಾನವಿ! Hijacker ವಿರುದ್ದ ಒಂದಾಯ್ತಾ ಇಡೀ ಮನೆ?
ಇನ್ನು ಸಿನಿಮಾ ವಿಚಾರಕ್ಕೆ ಬರೋದಾದರೆ, ರಿಭು ದಾಸ್‌ಗುಪ್ತಾ ನಿರ್ದೇಶನದ ‘ಸೆಕ್ಷನ್ 84’ ಎಂಬ ಕೋರ್ಟ್‌ರೂಂ ಡ್ರಾಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಡಯಾನಾ ಪೆಂಟಿ, ನಿಮ್ರತ್ ಕೌರ್ ಮತ್ತು ಅಭಿಷೇಕ್ ಬ್ಯಾನರ್ಜಿ ಸಹ ನಟಿಸಿದ್ದಾರೆ ಮತ್ತು ಇದು ಪ್ರಸ್ತುತ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ.