Health Tips: ಮಲಬದ್ಧತೆ ಸಮಸ್ಯೆಯೇ? ಈ ಆಹಾರಗಳಿಗೆ ಪ್ರಾಮುಖ್ಯತೆ ನೀಡಿ!
ವಾರದಲ್ಲಿ ಮೂರಕ್ಕಿಂತ ಕಡಿಮೆ ಬಾರಿ ಮಲವಿಸರ್ಜನೆಯಾಗುವುದು, ಮಲವಿಸರ್ಜನೆಯ ಸಂದರ್ಭ ದಲ್ಲಿ ತೀವ್ರ ಕಷ್ಟ ಅಥವಾ ನೋವಾದಾಗ ಮಲಬದ್ಧತೆ ಸಮಸ್ಯೆ ಉಂಟಾಗಿದೆ ಎಂದರ್ಥ. ಇದಕ್ಕಾಗಿ ದಿನ ನಿತ್ಯದ ಆಹಾರದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುವ ಮೂಲಕ ಮತ್ತು ಆಹಾರಕ್ರಮದಲ್ಲಿ ಉತ್ತಮ ಆಹಾರಗಳನ್ನು ಸೇರಿಸಿಕೊಳ್ಳಲು ತಜ್ಞರು ಸಲಹೆ ನೀಡಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ,ಅ. 1: ಹವಾಮಾನ ಬದಲಾವಣೆ, ಜೀರ್ಣಕ್ರಿಯೆ ಸಮಸ್ಯೆ ಹೀಗೆ ಕೆಲವೊಂದು ಕಾರಣ ದಿಂದ ಮಲಬದ್ಧತೆ (Constipation) ಸಮಸ್ಯೆ ಉಂಟಾಗುತ್ತದೆ. ವಾರದಲ್ಲಿ ಮೂರಕ್ಕಿಂತ ಕಡಿಮೆ ಬಾರಿ ಮಲವಿಸರ್ಜನೆಯಾಗುವುದು, ಮಲವಿಸರ್ಜನೆಯ ಸಂದರ್ಭದಲ್ಲಿ ತೀವ್ರ ಕಷ್ಟ ಅಥವಾ ನೋವಾದಾಗ ಮಲಬದ್ಧತೆ ಸಮಸ್ಯೆ ಉಂಟಾಗಿದೆ ಎಂದರ್ಥ. ಇದಕ್ಕಾಗಿ ದಿನ ನಿತ್ಯದ ಆಹಾರದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುವ ಮೂಲಕ ಮತ್ತು ಆಹಾರಕ್ರಮದಲ್ಲಿ ಉತ್ತಮ ಆಹಾರಗಳನ್ನು ಸೇರಿಸಿಕೊಳ್ಳಲು ತಜ್ಞರು ಸಲಹೆ ನೀಡಿದ್ದಾರೆ.
ಸಾಕಷ್ಟು ಪ್ರಮಾಣದ ನೀರು ಕುಡಿಯಿರಿ:
ತಜ್ಞರ ಪ್ರಕಾರ, ನೀವು ದಿನಕ್ಕೆ ಕನಿಷ್ಠ 25 ಗ್ರಾಂ ನಾರಿನಂಶವನ್ನು ಪಡೆಯದಿದ್ದರೆ ಮಲವಿಸರ್ಜನೆ ಸಮಸ್ಯೆ ಕಾಡಬಹುದು. ಇದರ ಜೊತೆ ಸಾಕಷ್ಟು ನೀರು ಕುಡಿಯುವುದನ್ನು ಖಚಿತಪಡಿಸಿ ಕೊಳ್ಳಬೇಕು. ಉಗುರುಬೆಚ್ಚಗಿನ ನೀರು ಹೆಚ್ಚು ಸೂಕ್ತ.
ಕಿವಿ ಹಣ್ಣು:
ಕಿವಿ ಹಣ್ಣನ್ನು ತಿನ್ನುವುದರಿಂದ ಮಲಬದ್ಧತೆ ಶೀಘ್ರವಾಗಿ ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ವೈದ್ಯರ ಪ್ರಕಾರ, ಕಿವಿ ಹಣ್ಣನ್ನು, ಅದರಲ್ಲೂ ವಿಶೇಷವಾಗಿ ಸಿಪ್ಪೆಯೊಂದಿಗೆ ಸೇವಿಸುವುದರಿಂದ ಮಲಬದ್ಧತೆಯ ಸಮಸ್ಯೆಯನ್ನು ನಿವಾರಣೆ ಮಾಡಬಹುದು.
ಒಣ ದ್ರಾಕ್ಷಿ ಮತ್ತು ಪ್ಲಮ್ ಹಣ್ಣುಗಳು:
ಒಂದೇ ಬಾರಿಗೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಬದಲು, ನಿಮ್ಮ ಆಹಾರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ದ್ರಾಕ್ಷಿ, ಪ್ಲಮ್ ನಂತ ಹಣ್ಣು ಸೇರಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ನೆನೆಸಿದ ಒಣದ್ರಾಕ್ಷಿಯಲ್ಲಿ ಸೋರ್ಬಿಟೋಲ್ ಎಂಬ ಅಂಶ ವಿರುತ್ತದೆ. ಇದು ಕರುಳಿನೊಳಗೆ ನೀರನ್ನು ಸೆಳೆಯುವ ಮೂಲಕ ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
Vishwavani Health: ಕುಡಿಯುವ ನೀರಿನಿಂದಲೇ ಶುಗರ್ ಬರುತ್ತಾ? ಏನಂತಾರೆ ತಜ್ಞರು ?
ಅಗಸೆ ಬೀಜಗಳು:
ಇವುಗಳಲ್ಲಿ ಕರಗದ ನಾರಿನಂಶ ಹೆಚ್ಚಾಗಿದ್ದು, ಮಲಬದ್ಧತೆಯನ್ನು ನಿವಾರಿಸಲು ನೆರವಾಗುತ್ತದೆ. ಕರುಳಿನ ರಕ್ಷಣೆ ಮೂಲಕ ಸುಲಭವಾಗಿ ಮಲವಿಸರ್ಜನೆಗೆ ಸಹಾಯ ಮಾಡುತ್ತದೆ.
ಪಪ್ಪಾಯಿ ಹಣ್ಣು:
ಇದರಲ್ಲಿ ಅಧಿಕ ನೀರಿನಂಶ ಹೊಂದಿದ್ದು, ಗ್ಯಾಸ್ ಅಥವಾ ಹೊಟ್ಟೆ ಉಬ್ಬರ ಉಂಟುಮಾಡದೆ ಜೀರ್ಣಕ್ರಿಯೆಗೆ ಸಹಕರಿಸುತ್ತದೆ.
ಸೀಬೆಹಣ್ಣು:
ಇದರಲ್ಲಿರುವ ಅತ್ಯಧಿಕ ಫೈಬರ್ ಅಂಶ ದೇಹದ ಜೀರ್ಣಕ್ರಿಯೆ ಹೆಚ್ಚಿಸಿ ಮಲಬದ್ಧತೆ ನಿವಾರಿ ಸುತ್ತದೆ. ಕ್ಯಾನ್ಸರ್ ಹಾಗೂ ಹೃದಯ ಕಾಯಿಲೆಯನ್ನು ದೂರವಿಡುತ್ತದೆ..ಜ್ಯೂಸ್ ಮಾಡುವ ಬದಲು ಹಣ್ಣನ್ನೇ ಪೂರ್ತಿಯಾಗಿ ತಿನ್ನುವುದರಿಂದ ಹೆಚ್ಚಿನ ನಾರಿನಂಶ ಸಿಗುತ್ತದೆ.
ಸಿಹಿ ಗೆಣಸು:
ಸಿಹಿ ಗೆಣಸುಗಳಲ್ಲಿ ಕರಗದ ನಾರಿನಂಶ ಸಮೃದ್ಧವಾಗಿರುತ್ತದೆ, ಇದು ಕರುಳಿನ ಆರೋಗ್ಯಕ್ಕೆ ಬಹಳಷ್ಟು ಒಳ್ಳೆಯದು.
ಬೆಂಡೆಕಾಯಿ:
ಇದರಲ್ಲಿ 'ಮ್ಯೂಸಿಲೇಜ್ ಎಂಬ ಜೆಲ್‌ನಂತಹ ಪದಾರ್ಥವಿರುತ್ತದೆ ಮತ್ತು ಇದು ಕರಗುವ ನಾರಿನಂಶದಿಂದ ಸಮೃದ್ಧವಾಗಿದೆ.