ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಿಎಸ್‌ಐ ಸಂಗೀತಾ ಜತೆ ಫೋಟೋ ವೈರಲ್: ರೌಡಿ ಶೀಟರ್‌ಗೆ ಠಾಣೆಯಲ್ಲೇ ಸನ್ಮಾನ!

ದೇವಲಗಾಣಗಾಪುರ ಠಾಣೆಯ ಪಿಎಸ್‌ಐ ಸಂಗೀತಾ ಅವರು ರೌಡಿ ಶೀಟರ್ ಮಾರುತಿ ಜತೆ ಫೋಟೋ ತೆಗೆಸಿಕೊಂಡಿದ್ದು, ಆತನನ್ನು ಸನ್ಮಾನಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಲ್ಲದೆ, ಪೊಲೀಸ್ ಠಾಣೆಯಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲೂ ಮಾರುತಿ ಭಾಗಿಯಾಗಿರು ವುದು ಚರ್ಚೆಗೆ ಕಾರಣವಾಗಿದೆ.

ರೌಡಿ ಶೀಟರ್‌ಗೆ ಠಾಣೆಯಲ್ಲೇ ಸನ್ಮಾನ!

-

Profile
Ashok Nayak Sep 6, 2026 10:21 AM

ಕಲಬುರಗಿ: ರೌಡಿ ಶೀಟರ್‌ಗಳ ಜತೆ ಪೊಲೀಸರು ಫೋಟೋ ತೆಗೆಸಿಕೊಳ್ಳುವುದು ಹಾಗೂ ಪಾರ್ಟಿ ಮಾಡುವುದನ್ನು ಸಹಿಸುವುದಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ(Home Minister Priyank Kharge) ಎಚ್ಚರಿಕೆ ನೀಡಿರುವ ಬೆನ್ನಲ್ಲೇ, ಅಫಜಲಪುರ ತಾಲೂಕಿನ ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್‌ವೊಬ್ಬರಿಗೆ ಆತಿಥ್ಯ ನೀಡಿರುವ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: Kalaburagi Breaking: ಕಪನೂರ ಕೈಗಾರಿಕಾ ಪ್ರದೇಶದಲ್ಲಿ ದಾಲ್‌ಮಿಲ್‌ನಲ್ಲಿ ಪರವಾನಗಿ ಇಲ್ಲದೆ ಸಂಗ್ರಹ: ಅಕ್ರಮ ಯೂರಿಯಾ ದಂಧೆ ಪತ್ತೆ; 1,250 ಚೀಲ ವಶ

ದೇವಲಗಾಣಗಾಪುರ ಠಾಣೆಯ ಪಿಎಸ್‌ಐ ಸಂಗೀತಾ ಅವರು ರೌಡಿ ಶೀಟರ್ ಮಾರುತಿ ಜತೆ ಫೋಟೋ ತೆಗೆಸಿಕೊಂಡಿದ್ದು, ಆತನನ್ನು ಸನ್ಮಾನಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಲ್ಲದೆ, ಪೊಲೀಸ್ ಠಾಣೆಯಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲೂ ಮಾರುತಿ ಭಾಗಿಯಾಗಿರುವುದು ಚರ್ಚೆಗೆ ಕಾರಣವಾಗಿದೆ.

Rowdy S12

ರೌಡಿ ಶೀಟರ್‌ಗೆ ಠಾಣೆಯಲ್ಲೇ ಸತ್ಕಾರ ನೀಡಿರುವುದು ಹಾಗೂ ಪೊಲೀಸರೊಂದಿಗೆ ಆತ್ಮೀಯವಾಗಿ ಕಾಣಿಸಿಕೊಂಡಿರುವ ಫೋಟೋಗಳು ಸಾರ್ವಜನಿಕ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿವೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸ್ ಠಾಣೆಯಲ್ಲೇ ರೌಡಿ ಶೀಟರ್‌ಗೆ ಇಂತಹ ಆತಿಥ್ಯ ನೀಡಿರುವುದು ಸರಿಯೇ ಎಂಬ ಚರ್ಚೆ ಆರಂಭವಾಗಿದೆ.

Rowdy S

ಗೃಹ ಸಚಿವರ ಎಚ್ಚರಿಕೆಯ ನಡುವೆಯೇ ಈ ಘಟನೆ ನಡೆದಿರುವುದರಿಂದ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಘಟನೆ ಕುರಿತು ಪರಿಶೀಲನೆ ನಡೆಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

ಘಟನೆಯ ಕುರಿತು ಪೊಲೀಸ್ ಇಲಾಖೆಯ ಅಧಿಕೃತ ಸ್ಪಷ್ಟನೆ ಹೊರಬಂದ ಬಳಿಕವಷ್ಟೇ ಸನ್ಮಾನದ ಹಿನ್ನೆಲೆ ಹಾಗೂ ಕಾರ್ಯಕ್ರಮದ ಉದ್ದೇಶದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.