79th Kalyana Karnataka Utsava celebration: ಸೆ.16, 17 ರಂದು 79ನೇ ಕಲ್ಯಾಣ ಕರ್ನಾಟಕ ಉತ್ಸವ ಸಂಭ್ರಮ: ಕಲಬುರಗಿಯಲ್ಲಿ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮ, ಬೀದಿ ಉತ್ಸವ
ಅಪ್ಪನ ಕೆರೆಯಲ್ಲಿ ಸಂಜೆ 7ರಿಂದ ಭೈರವ್ ಮತ್ತು ತಂಡದಿಂದ ಇಂಡೋ-ಫ್ಯೂಷನ್ ವಾದ್ಯ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ರಾತ್ರಿ 8.30ಕ್ಕೆ ಮುಖ್ಯಮಂತ್ರಿ ಅವರಿಂದ ಕೆರೆ ಅಭಿವೃದ್ಧಿ ಕಾಮಗಾರಿ ಗಳ ಉದ್ಘಾಟನೆ ನಡೆಯಲಿದ್ದು, ರಾತ್ರಿ 9ರಿಂದ ಧ್ವನಿ ಮತ್ತು ಬೆಳಕಿನ ಪ್ರದರ್ಶನದ ಜತೆಗೆ ಡ್ರೋನ್ ಪ್ರದರ್ಶನವೂ ನಡೆಯಲಿದೆ.
-
ಸಂಗೀತ, ನೃತ್ಯ, ಹಾಸ್ಯ, ಧ್ವನಿ–ಬೆಳಕು ಹಾಗೂ ಡ್ರೋನ್ ಪ್ರದರ್ಶನಕ್ಕೆ ಸಿದ್ಧತೆ
ಸೆ.16, 17ರಂದು 79ನೇ ಕಲ್ಯಾಣ ಕರ್ನಾಟಕ ಉತ್ಸವ ಸಂಭ್ರಮ
ಕಲಬುರಗಿ: 79ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ-2026ರ ಅಂಗವಾಗಿ ಕಲಬುರಗಿ ನಗರದಲ್ಲಿ ಸೆ.16 ಮತ್ತು 17ರಂದು ವೈವಿಧ್ಯಮಯ ಸಾಂಸ್ಕೃತಿಕ ಹಾಗೂ ಸಾರ್ವಜನಿಕ ಕಾರ್ಯ ಕ್ರಮಗಳನ್ನು ಆಯೋಜಿಸಲಾಗಿದೆ.
ಪಬ್ಲಿಕ್ ಗಾರ್ಡನ್, ಅಪ್ಪನ ಕೆರೆ ಹಾಗೂ ಎಸ್.ಎಂ. ಪಂಡಿತ್ ರಂಗಮಂದಿರ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಎರಡು ದಿನಗಳ ಕಾಲ ಸಂಗೀತ, ನೃತ್ಯ, ಹಾಸ್ಯ, ಕಲಾ ಪ್ರದರ್ಶನ ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಸೆ.16ರಂದು ಪಬ್ಲಿಕ್ ಗಾರ್ಡನ್‌ನಲ್ಲಿ ಸಂಜೆ 6.30ಕ್ಕೆ ಸ್ಥಳೀಯ ಪ್ರತಿಭೆಗಳಿಗೆ ಮುಕ್ತ ವೇದಿಕೆ ಕಲ್ಪಿಸ ಲಾಗಿದ್ದು, ನಂತರ ಶಾಸ್ತ್ರೀಯ ನೃತ್ಯ ಹಾಗೂ ನೃತ್ಯ ಪ್ರದರ್ಶನಗಳು ಜರುಗಲಿವೆ. ರಾತ್ರಿ 8 ಗಂಟೆಗೆ ಮುಖ್ಯಮಂತ್ರಿ ಅವರಿಂದ ಬೀದಿ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಬಳಿಕ ರಾತ್ರಿ 8.30ರಿಂದ 10ರವರೆಗೆ ‘ಸವಾರಿ’ ಬ್ಯಾಂಡ್‌ನ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಅಪ್ಪನ ಕೆರೆಯಲ್ಲಿ ಸಂಜೆ 7ರಿಂದ ಭೈರವ್ ಮತ್ತು ತಂಡದಿಂದ ಇಂಡೋ-ಫ್ಯೂಷನ್ ವಾದ್ಯ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ರಾತ್ರಿ 8.30ಕ್ಕೆ ಮುಖ್ಯಮಂತ್ರಿ ಅವರಿಂದ ಕೆರೆ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನಡೆಯಲಿದ್ದು, ರಾತ್ರಿ 9ರಿಂದ ಧ್ವನಿ ಮತ್ತು ಬೆಳಕಿನ ಪ್ರದರ್ಶನದ ಜತೆಗೆ ಡ್ರೋನ್ ಪ್ರದರ್ಶನವೂ ನಡೆಯಲಿದೆ.
ಸೆ.17ರಂದು ಬೆಳಿಗ್ಗೆ 8.30ಕ್ಕೆ ಪೊಲೀಸ್ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇದೇ ಸಂದರ್ಭದಲ್ಲಿ ವಿಲಾಸ್ ನಾಯಕ್ ಅವರ ನೇರ ಚಿತ್ರಕಲಾ ಪ್ರದರ್ಶನ ವಿಶೇಷ ಆಕರ್ಷಣೆಯಾಗಲಿದೆ.
ಸಂಜೆ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಗಣೇಶ ವಂದನೆಯೊಂದಿಗೆ ಕಾರ್ಯಕ್ರಮ ಆರಂಭ ವಾಗಲಿದ್ದು, ದಿವೇಶ್ ಮುರಳೀಧರನ್ ಹಾಗೂ ಸೋನು ವೇಣುಗೋಪಾಲ್ ಅವರ ಸ್ಟ್ಯಾಂಡ್‌ಅಪ್ ಹಾಸ್ಯ, ಸ್ಟೆಪ್ ಎನ್ ಸ್ಟೈಲ್ ತಂಡದ ಸಮಕಾಲೀನ ನೃತ್ಯ ಹಾಗೂ ‘ಅಕೌಸ್ಟಿಕ್ ಸಾಗಾ’ ಬ್ಯಾಂಡ್‌ನ ಬಹುಭಾಷಾ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ಪಬ್ಲಿಕ್ ಗಾರ್ಡನ್‌ನಲ್ಲಿ ಸಂಜೆ 6.30ರಿಂದ ನೃತ್ಯ, ಸುಗಮ ಸಂಗೀತ ಹಾಗೂ ಸ್ಟ್ಯಾಂಡ್‌ಅಪ್ ಹಾಸ್ಯ ಕಾರ್ಯಕ್ರಮಗಳ ಬಳಿಕ ರಾತ್ರಿ 8ರಿಂದ 10ರವರೆಗೆ ಜೀ ಕನ್ನಡ ‘ಸರಿಗಮಪ’ ತಂಡದ ಸಂಗೀತ ಕಾರ್ಯಕ್ರಮ ಜರುಗಲಿದೆ. ಅಪ್ಪನ ಕೆರೆಯಲ್ಲಿ ಸಂಜೆ 7ರಿಂದ ರಾತ್ರಿ 9.30ರವರೆಗೆ ಪ್ರತಿ 30 ನಿಮಿಷಕ್ಕೊಮ್ಮೆ ಧ್ವನಿ ಮತ್ತು ಬೆಳಕಿನ ಪ್ರದರ್ಶನ ನಡೆಯಲಿದೆ.
ಎರಡು ದಿನ ಬೀದಿ ಉತ್
ಪಬ್ಲಿಕ್ ಗಾರ್ಡನ್‌ನಲ್ಲಿ ಸೆ.16 ಮತ್ತು 17ರಂದು ಸಂಜೆ 6.30ರಿಂದ ಬೀದಿ ಉತ್ಸವ ನಡೆಯಲಿದ್ದು, ಕರಕುಶಲ ವಸ್ತುಗಳು ಹಾಗೂ ಕೈಮಗ್ಗ ಉತ್ಪನ್ನಗಳ ಪ್ರದರ್ಶನ–ಮಾರಾಟ, ಸ್ಥಳೀಯ ಖಾದ್ಯ ಮತ್ತು ಸ್ಟ್ರೀಟ್ ಫುಡ್, ಲೈವ್ ಪೇಂಟಿಂಗ್, ಪ್ರವಾಸೋದ್ಯಮ ಮಾಹಿತಿ, ಅರಣ್ಯ ಮತ್ತು ವನ್ಯಜೀವಿ ಜಾಗೃತಿ, ಸಾಂಪ್ರದಾಯಿಕ ಆಟಗಳು ಹಾಗೂ ಲೈವ್ ಸ್ಟ್ರೀಟ್ ಮ್ಯೂಸಿಕ್ ಸೇರಿದಂತೆ ಹಲವು ವಲಯಗಳು ಸಾರ್ವಜನಿಕರನ್ನು ಆಕರ್ಷಿಸಲಿವೆ.
ಎರಡು ದಿನಗಳ ಪ್ರಮುಖ ಆಕರ್ಷಣೆ
* ಸೆ.16ರಂದು ‘ಸವಾರಿ’ ಬ್ಯಾಂಡ್ ಸಂಗೀತ
* ಭೈರವ್ ತಂಡದ ಇಂಡೋ-ಫ್ಯೂಷನ್ ವಾದ್ಯ ಸಂಗೀತ
* ಅಪ್ಪನ ಕೆರೆಯಲ್ಲಿ ಧ್ವನಿ–ಬೆಳಕು ಮತ್ತು ಡ್ರೋನ್ ಪ್ರದರ್ಶನ
* ಸೆ.17ರಂದು ವಿಲಾಸ್ ನಾಯಕ್ ಅವರ ನೇರ ಚಿತ್ರಕಲಾ ಪ್ರದರ್ಶನ
* ದಿವೇಶ್ ಮುರಳೀಧರನ್, ಸೋನು ವೇಣುಗೋಪಾಲ್, ಸ್ವಪ್ನಿ ಅವರ ಸ್ಟ್ಯಾಂಡ್‌ಅಪ್ ಹಾಸ್ಯ
* ‘ಅಕೌಸ್ಟಿಕ್ ಸಾಗಾ’ ಬ್ಯಾಂಡ್‌ನ ಬಹುಭಾಷಾ ಸಂಗೀತ
* ಜೀ ಕನ್ನಡ ‘ಸರಿಗಮಪ’ ಸಂಗೀತ ಕಾರ್ಯಕ್ರಮ
ಸೆ.17ರ ಸಾಂಸ್ಕೃತಿಕ ಸಂಜೆ
ಎಸ್.ಎಂ. ಪಂಡಿತ್ ರಂಗಮಂದಿರ:
ಗಣೇಶ ವಂದನೆ → ಸ್ಟ್ಯಾಂಡ್‌ಅಪ್ ಹಾಸ್ಯ → ಸಮಕಾಲೀನ ನೃತ್ಯ → ಸ್ಟ್ಯಾಂಡ್‌ಅಪ್ ಹಾಸ್ಯ → ಬಹುಭಾಷಾ ಸಂಗೀತ.
ಪಬ್ಲಿಕ್ ಗಾರ್ಡನ್:
ನೃತ್ಯ → ಸುಗಮ ಸಂಗೀತ → ಹಾಸ್ಯ → ಜೀ ಕನ್ನಡ ‘ಸರಿಗಮಪ’ ಸಂಗೀತ ಕಾರ್ಯಕ್ರಮ.
ಅಪ್ಪನ ಕೆರೆ:
ಸಂಜೆ 7ರಿಂದ ರಾತ್ರಿ 9.30ರವರೆಗೆ ಪ್ರತಿ 30 ನಿಮಿಷಕ್ಕೊಮ್ಮೆ ಧ್ವನಿ ಮತ್ತು ಬೆಳಕಿನ ಪ್ರದರ್ಶನ.
ಬೀದಿ ಉತ್ಸವದಲ್ಲಿ ಏನೇನಿದೆ?
Handicrafts Zone: ಕರಕುಶಲ ಮತ್ತು ಕೈಮಗ್ಗ ಉತ್ಪನ್ನಗಳ ಪ್ರದರ್ಶನ–ಮಾರಾಟ
Food Zone: ಸ್ಥಳೀಯ ಖಾದ್ಯ, ಸ್ಟ್ರೀಟ್ ಫುಡ್ ಹಾಗೂ ಸಿಹಿ ತಿಂಡಿಗಳು
Painting Zone: ಸಜೀವ ಚಿತ್ರಕಲೆ, ಕಲಾ ಪ್ರದರ್ಶನ ಮತ್ತು ಮಾರಾಟ
Tourism Zone: ಕರ್ನಾಟಕ ಪ್ರವಾಸೋದ್ಯಮ ಮಾಹಿತಿ ಹಾಗೂ ವರ್ಚುವಲ್ ಅನುಭವ
Forest Dept. Zone: ಅರಣ್ಯ, ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆ ಜಾಗೃತಿ
Games Zone: ಸಾಂಪ್ರದಾಯಿಕ ಹಾಗೂ ಮನರಂಜನಾ ಆಟಗಳು
Music Zone: ಲೈವ್ ಸ್ಟ್ರೀಟ್ ಮ್ಯೂಸಿಕ್ ಹಾಗೂ ಮುಕ್ತ ವೇದಿಕೆ
ಸ್ಥಳ: ಪಬ್ಲಿಕ್ ಗಾರ್ಡನ್, ಕಲಬುರಗಿ
ದಿನಾಂಕ: ಸೆ.16 ಮತ್ತು 17
ಸಮಯ: ಸಂಜೆ 6.30ರಿಂದ