Karnataka High Court: ಸ್ನಾತಕೋತ್ತರ ಪದವೀಧರೆ ಎಂದು ಜೀವನಾಂಶ ನಿರಾಕರಿಸಲಾಗದು: ಹೈಕೋರ್ಟ್
ವಾದ-ಪ್ರತಿವಾದ ಆಲಿಸಿದ ಪೀಠವು ವಿಚ್ಚೇದನ ಪ್ರಕರಣದಲ್ಲಿ ಶಾಶ್ವತ ಜೀವನಾಂಶ ತಿರಸ್ಕೃತ ವಾಗಿದ್ದು, ಪತಿಯ ಆರ್ಥಿಕ ಸಾಮರ್ಥ್ಯ ಪತ್ನಿ ಸಾಬೀತುಪಡಿಸಲು ವಿಫಲವಾದ ಕಾರಣಕ್ಕೆ ಮಾತ್ರ. ಇದರಿಂದ ಸಿಆರ್‌ಪಿಸಿ ಸೆಕ್ಷನ್ 125 ರಡಿ ಜೀವನಾಂಶ ಪಡೆಯುವ ಹಕ್ಕು ಕಳೆದುಹೋಗುವುದಿಲ್ಲ. ಪತಿಯು ಖಾಸಗಿ ಸಂಸ್ಥೆಯಲ್ಲಿ ಸಹಾಯಕ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ಸುಮಾರು 29 ಸಾವಿರ ಆದಾಯ ಗಳಿಸುತ್ತಿರುವುದನ್ನು ಪರಿಗಣಿಸಿದ ಹೈಕೋರ್ಟ್, ಪತ್ನಿ ಮತ್ತು ಮಗನಿಗೆ ತಲಾ ತಿಂಗಳಿಗೆ 5, ಸಾವಿರ ನಿರ್ವಹಣಾ ಭತ್ಯೆ ಪಾವತಿಸುವಂತೆ ಆದೇಶಿಸಿದೆ.
-
ಬೆಂಗಳೂರು: ಪತ್ನಿ ಸ್ನಾತಕೋತ್ತರ ಪದವಿ ಪಡೆದಿದ್ದಾಳೆ ಎಂಬ ಕಾರಣಕ್ಕೆ ಮಾತ್ರ ಆಕೆಗೆ ಸಿಆರ್‌ಪಿಸಿ ಸೆಕ್ಷನ್ 125 ಅಡಿಯಲ್ಲಿ ಜೀವನಾಂಶ ನಿರಾಕರಿಸಲಾಗದು ಎಂದು ಹೈಕೋರ್ಟ್(High Court) ಸ್ಪಷ್ಟಪಡಿಸಿದೆ. ವಿಚ್ಛೇದನ ಪ್ರಕರಣದಲ್ಲಿ ಶಾಶ್ವತ ಜೀವನಾಂಶದ ಬೇಡಿಕೆ ತಿರಸ್ಕೃತ ವಾಗಿದ್ದರೂ, ಅದನ್ನು ಆಧಾರವಾಗಿ ಬಳಸಿ ಮಾಸಿಕ ಜೀವನಾಂಶ ನಿರಾಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಡಾ.ಚಿಲ್ಲಕುರ್ ಸುಮಲತಾ ಅವರ ಏಕಸದಸ್ಯ ಪೀಠ ಆದೇಶಿಸಿದೆ.
ವಾದ-ಪ್ರತಿವಾದ ಆಲಿಸಿದ ಪೀಠವು ವಿಚ್ಚೇದನ ಪ್ರಕರಣದಲ್ಲಿ ಶಾಶ್ವತ ಜೀವನಾಂಶ ತಿರಸ್ಕೃತ ವಾಗಿದ್ದು, ಪತಿಯ ಆರ್ಥಿಕ ಸಾಮರ್ಥ್ಯ ಪತ್ನಿ ಸಾಬೀತುಪಡಿಸಲು ವಿಫಲವಾದ ಕಾರಣಕ್ಕೆ ಮಾತ್ರ. ಇದರಿಂದ ಸಿಆರ್‌ಪಿಸಿ ಸೆಕ್ಷನ್ 125 ರಡಿ ಜೀವನಾಂಶ ಪಡೆಯುವ ಹಕ್ಕು ಕಳೆದುಹೋಗುವುದಿಲ್ಲ. ಪತಿಯು ಖಾಸಗಿ ಸಂಸ್ಥೆಯಲ್ಲಿ ಸಹಾಯಕ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ಸುಮಾರು 29 ಸಾವಿರ ಆದಾಯ ಗಳಿಸುತ್ತಿರುವುದನ್ನು ಪರಿಗಣಿಸಿದ ಹೈಕೋರ್ಟ್, ಪತ್ನಿ ಮತ್ತು ಮಗನಿಗೆ ತಲಾ ತಿಂಗಳಿಗೆ 5, ಸಾವಿರ ನಿರ್ವಹಣಾ ಭತ್ಯೆ ಪಾವತಿಸುವಂತೆ ಆದೇಶಿಸಿದೆ.
ಇದನ್ನೂ ಓದಿ: Karnataka High court: ಕರ್ನಾಟಕ ಹೈಕೋರ್ಟ್ ಮೊರೆ ಹೋದ ಶ್ರೀಲಂಕಾ ಸುಪ್ರೀಂ ಕೋರ್ಟ್ ಜಡ್ಜ್!
ಪ್ರಕರಣದಲ್ಲಿ ಪತ್ನಿಯ ಪರಿಷ್ಕರಣಾ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಾಲಯವು ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಸ್ವಲ್ಪ ಮಾರ್ಪಾಟು ಮಾಡಿದೆ. ಪತ್ನಿ ಕಲಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾಳೆ ಎಂಬುದಷ್ಟೆ ಆಕೆಗೆ ನಿರ್ವಹಣಾ ಭತ್ಯೆ ನಿರಾಕರಿಸಲು ಸಾಕಷ್ಟು ಕಾರಣವಲ್ಲ. ಆಕೆ ಉದ್ಯೋಗದಲ್ಲಿದ್ದಾಳೆ ಅಥವಾ ಸ್ವತಂತ್ರವಾಗಿ ಆದಾಯ ಗಳಿಸುತ್ತಿzಳೆ ಎಂಬುದನ್ನು ಪತಿ ಕೂಡ ಹೇಳಿಲ್ಲ ಎಂದು ಹೈಕೋರ್ಟ್ ಉಲ್ಲೇಖಿಸಿದೆ.
ಪ್ರಕರಣದ ಹಿನ್ನೆಲೆ ಪತ್ನಿ ಹಾಗೂ ಅಪ್ರಾಪ್ತ ಮಗ ಸಿಆರ್‌ಪಿಸಿ ಸೆಕ್ಷನ್ 125 ರಡಿಯಲ್ಲಿ ಕ್ರಮವಾಗಿ ತಿಂಗಳಿಗೆ 20 ಸಾವಿರ ರು. ಮತ್ತು 10 ಸಾವಿರ ರು. ನಿರ್ವಹಣಾ ಭತ್ಯೆ ಕೋರಿ ಅರ್ಜಿ ಸಲ್ಲಿಸಿದ್ದರು. ಕೌಟುಂಬಿಕ ನ್ಯಾಯಾಲಯವು ಮಗನಿಗೆ ತಿಂಗಳಿಗೆ 5 ಸಾವಿರ ಮಂಜೂರು ಮಾಡಿತ್ತು, ಆದರೆ ಪತ್ನಿಯ ಹಿಂದಿನ 10 ಲಕ್ಷ ಶಾಶ್ವತ ಜೀವನಾಂಶದ ಬೇಡಿಕೆ ತಿರಸ್ಕೃತವಾಗಿತ್ತು ಎಂಬ ಕಾರಣ ನೀಡಿ ಆಕೆಯ ಅರ್ಜಿಯನ್ನು ತಿರಸ್ಕರಿಸಿತ್ತು.
ಜತೆಗೆ, ಪತ್ನಿ ಎಂ ಎ ಪದವಿ ಹೊಂದಿರುವುದರಿಂದ ಉದ್ಯೊಗ ಪಡೆದು ಜೀವನ ನಡೆಸಬಹುದು ಎಂದು ಕೌಟುಂಬಿಕ ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಆ ಆದೇಶ ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಪರಿಷ್ಕರಣಾ ಅರ್ಜಿಯನ್ನು ಹೈಕೋರ್ಟ್ ಇದೀಗ ಭಾಗಶಃ ಮಾನ್ಯ ಮಾಡಿದೆ.