ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bangalore Jatre Website: ಜಾತ್ರೆಯ ಅಧಿಕೃತ ವೆಬ್‌ಸೈಟ್ ಬಿಡುಗಡೆಗೊಳಿಸಿದ ಸಚಿವ ಕೃಷ ಬೈರೇಗೌಡ: ಡಿ.4ರಿಂದ 10ದಿನ ಬೆಂಗಳೂರು ಜಾತ್ರೆ

300ಕ್ಕೂ ಹೆಚ್ಚು ಕಾರ್ಯಕ್ರಮ ಶಾಲೆ, ಕಾಲೇಜು, ಐಟಿ ಕಂಪನಿಗಳು, ಸಾರ್ವಜನಿಕ ವಲಯ ಹಾಗೂ ಆರ್ಟ್ ಗ್ಯಾಲರಿಗಳು ಸೇರಿ ನಗರದೆಡೆ ಸಣ್ಣ ಹಾಗೂ ದೊಡ್ಡ ಪ್ರಮಾಣದ ಕಾರ್ಯಕ್ರಮಗಳು ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಕಾರ್ಯಕ್ರಮಗಳು ಜರುಗಲಿದ್ದು, ನಗರದ ಮಧ್ಯ ಭಾಗದ ಎರಡು ಕಡೆಗಳಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಲು ಉದ್ದೇಶಿಸಲಾಗಿದೆ.

ಡಿ.4ರಿಂದ 10ದಿನ ಬೆಂಗಳೂರು ಜಾತ್ರೆ

-

Profile
Ashok Nayak Oct 4, 2026 11:55 AM

ಬೆಂಗಳೂರು: ‘ಬೆಂಗಳೂರಿನ ಜನರಿಂದ, ಬೆಂಗಳೂರಿನ ಜನರಿಗಾಗಿ’ ಎಂಬ ಕಲ್ಪನೆಯೊಂದಿಗೆ ಬೆಂಗಳೂರಿನ ಐದು ಜಿಬಿಎ ನಗರ ಪಾಲಿಕಾ ವಲಯಗಳಲ್ಲಿ ಡಿ.4ರಿಂದ 13ರ ವರೆಗೆ ಹತ್ತು ದಿನಗಳ ಕಾಲ ಬೆಂಗಳೂರು ಜಾತ್ರೆ(Bangalore Jatre)ಯನ್ನು ಆಚರಿಸಲು ತೀರ್ಮಾನಿಸಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ(Krishna Byre Gowda) ತಿಳಿಸಿದರು.

‘ಬೆಂಗಳೂರು ಜಾತ್ರೆ’ಯ ಪೂರ್ವಭಾವಿ ಸಿದ್ಧತೆ ಕುರಿತು ನಡೆದ ಸಭೆ ಬಳಿಕ ಮಾತನಾಡಿದ ಅವರು, ನಮ್ಮ ರಾಜ್ಯವು ಆರ್ಥಿಕತೆಯಲ್ಲಿ, ತಂತ್ರಜ್ಞಾನದಲ್ಲಿ ದೇಶ ವಿದೇಶಗಳಿಗೆ ಮಾದರಿಯಾಗಿರುವಂತೆ, ಕಲೆ, ಸಂಸ್ಕೃತಿ, ಸಾಹಿತ್ಯ, ಸಂಗೀತ ಸೇರಿದಂತೆ ಜೀವನ ಶೈಲಿಯಲ್ಲಿಯೂ ಅತ್ಯುತ್ತಮ ನಗರವಾಗ ಬೇಕು. ನಗರದಲ್ಲಿ ಕಲೆ, ಸಾಹಿತ್ಯ ಹಾಗೂ ಸಾಮಾಜಿಕ ಮೂಲಸೌಕರ್ಯಗಳನ್ನು ಉತ್ತೇಜಿಸುವುದ ರಿಂದ ಬೆಂಗಳೂರಿನ ಪ್ರವಾಸೋದ್ಯಮ ಮತ್ತು ಆರ್ಥಿಕ ಪ್ರಗತಿಗೆ ಹೊಸ ಚೈತನ್ಯ ಸಿಗಲಿದೆ. ಈ ಹಬ್ಬವು ಕೇವಲ ಸರಕಾರಿ ಆಯೋಜನೆಯಾಗದೆ, ಬೆಂಗಳೂರಿನ ಸಂಸ್ಕೃತಿ, ಕಲೆ, ಸಾಹಿತ್ಯ ಹಾಗೂ ಆಹಾರ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಉದ್ದೇಶದಿಂದ ಸಾರ್ವಜನಿಕರು, ವಿವಿಧ ಸಂಘ- ಸಂಸ್ಥೆಗಳು ಹಾಗೂ ಖಾಸಗಿ ಸಹಭಾಗಿತ್ವದೊಂದಿಗೆ ನಡೆಸುವ ಹಬ್ಬವಾಗಿದೆ ಎಂದರು.

ಇದನ್ನೂ ಓದಿ: Sirsi Marikamba Jatre 2026: ಶಿರಸಿ ಮಾರಿಕಾಂಬಾ ಜಾತ್ರೆ ಹಿನ್ನೆಲೆ ಯಶವಂತಪುರ-ತಾಳಗುಪ್ಪ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು; ಇಲ್ಲಿದೆ ವೇಳಾಪಟ್ಟಿ

ಜಾತ್ರೆಯಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಷ್ಟೇ ಅಲ್ಲದೆ, ಕರ್ನಾಟಕದ ವಿಶಿಷ್ಟ ಆಹಾರ ಶೈಲಿ ಮತ್ತು ಸಂಸ್ಕೃತಿಯನ್ನು ಪರಿಚಯಿಸಲು ಫುಡ್ ಫೆಸ್ಟಿವಲ್ ಗಳನ್ನು ಆಯೋ ಜಿಸುವಂತೆ ರೆಸ್ಟೋರೆಂಟ್ ಅಸೋಸಿಯೇಷನ್ ಗಳಿಗೆ ಮನವಿ ಮಾಡಲಾಗಿದೆ. ಬೆಂಗಳೂರು ನಗರ ಸಮೀಪದಲ್ಲಿ ಇತಿಹಾಸ ಹೊಂದಿರುವ ಹಳೆಯ ಊರುಗಳ ಪ್ರಮುಖರು ಈ ಉತ್ಸವದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಆಹ್ವಾನಿಸಲಾಗಿದೆ.

ಕನ್ನಡ ಚಿತ್ರರಂಗದ ಕಲಾ ವಿದರು, ಐಟಿ ಕಂಪನಿಗಳು, ನಾಸ್ಕಾಂ, ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಸಹ ಕೈಜೋಡಿಸಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಮನವಿ ಮಾಡಲಾಗುತ್ತಿದೆ ಎಂದರು.

ಭದ್ರತಾ ದೃಷ್ಟಿಯಿಂದ ಬೃಹತ್ ಕಾರ್ಯಕ್ರಮಗಳಿಗೆ ಮಾತ್ರ 10-15 ದಿನಗಳ ಮುಂಚಿತವಾಗಿ ಆನ್‌ಲೈನ್ ನೋಂದಣಿ ಲಭ್ಯವಿರಲಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಇವುಗಳ ದಿನಾಂಕ, ಸಮಯ, ಸ್ಥಳ ಹಾಗೂ ನೋಂದಣಿ ವಿವರಗಳನ್ನು ಅಧಿಕೃತ ವೆಬ್ ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.

300ಕ್ಕೂ ಹೆಚ್ಚು ಕಾರ್ಯಕ್ರಮ ಶಾಲೆ, ಕಾಲೇಜು, ಐಟಿ ಕಂಪನಿಗಳು, ಸಾರ್ವಜನಿಕ ವಲಯ ಹಾಗೂ ಆರ್ಟ್ ಗ್ಯಾಲರಿಗಳು ಸೇರಿ ನಗರದೆಡೆ ಸಣ್ಣ ಹಾಗೂ ದೊಡ್ಡ ಪ್ರಮಾಣದ ಕಾರ್ಯಕ್ರಮಗಳು ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಕಾರ್ಯಕ್ರಮಗಳು ಜರುಗಲಿದ್ದು, ನಗರದ ಮಧ್ಯ ಭಾಗದ ಎರಡು ಕಡೆಗಳಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಅಲ್ಲದೆ, ದೇಶದ ಇತರೆ ವಿವಿಧ ರಾಜ್ಯಗಳ ಸಾಂಸ್ಕೃತಿಕ ಕಲಾತಂಡಗಳಿಗೂ ಈ ಜಾತ್ರೆಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

image

ಬೆಂಗಳೂರು ಎಲ್ಲಾ ಧರ್ಮ, ಸಂಸ್ಕೃತಿ ಹಾಗೂ ಕಲಾ ಪ್ರಕಾರಗಳ ನೆಲೆವೀಡಾಗಿದೆ. ಈ ಇತಿಹಾಸ ವನ್ನು ಗೌರವಿಸುವ ನಿಟ್ಟಿನಲ್ಲಿ ಮುಕ್ತ ಮನಸ್ಸಿನಿಂದ ಎ ಧಾರ್ಮಿಕ ಮತ್ತು ಸಾಂಸ್ಕೃತಿಕ ಅಂಶ ಗಳನ್ನು ಒಳಗೊಂಡಂತೆ ಕಾರ್ಯಕ್ರಮ ಗಳನ್ನು ರೂಪಿಸಲಾಗುವುದು. ಸರಕಾರದ ವತಿಯಿಂದ ಆಯೋಜಿಸುವ ಎಲ್ಲಾ ಕಾರ್ಯಕ್ರಮಗಳಿಗೂ ಸಾರ್ವಜನಿಕರಿಗೆ ಉಚಿತ ಪ್ರವೇಶವಿರಲಿದೆ.

-ಕೃಷ್ಣಬೈರೇಗೌಡ, ನಗರಾಭಿವೃದ್ಧಿ ಸಚಿವ