ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪ್ರಿಸಿಷನ್ ಆಯುರ್ವೇದ ಚಿಕಿತ್ಸೆ ಮೂಲಕ ಕೋಮಾದಲ್ಲಿದ್ದ 78 ವರ್ಷದ ರೋಗಿಯನ್ನು ಪುನಶ್ಚೇತನಗೊಳಿಸಿ ಸಾಧನೆ ಮಾಡಿದ ಅಪೋಲೋ ಆಯುರ್ವೈದ್

ನಿರಂತರ ಎರಡು ವಾರಗಳ ಜ್ವರ, ಅತಿಯಾದ ಗಂಟಲ ಸ್ರವಿಸುವಿಕೆಯೊಂದಿಗೆ ತೀವ್ರ ಕೆಮ್ಮು, ಉಸಿರಾಟದ ತೊಂದರೆ ಮತ್ತು ಬಲಗೈ ಹಾಗೂ ಕಾಲಿನ ತೀವ್ರ ದೌರ್ಬಲ್ಯದಿಂದ ಅವರು ಬಳಲು ತ್ತಿದ್ದರು. ಅವರನ್ನು ಅಪೋಲೋ ಆಯುರ್ವೈದ್ ಗೆ ದಾಖಲಿಸುವ ಮೊದಲು ಅವರು ಅಲೋಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು, ಅಲ್ಲಿ ಅವರ ಸ್ಥಿತಿ ಹದಗೆಟ್ಟು ಐಸಿಯುನಲ್ಲಿ ಚಿಕಿತ್ಸೆಯಲ್ಲಿ ಚಿಕಿತ್ಸೆ ನೀಡಬೇಕಾಗಿ ಬಂದಿತ್ತು

ಕುಟುಂಬದವರೇ ಆಸೆ ತೊರೆದಿದ್ದ ವ್ಯಕ್ತಿಗೆ ಸಮರ್ಪಕ ಚಿಕಿತ್ಸೆ

-

Ashok Nayak
Ashok Nayak Feb 6, 2026 7:45 PM

ಬೆಂಗಳೂರು: ಭಾರತದ ಪ್ರಮುಖ ಎನ್ಎಬಿಎಚ್ -ಮಾನ್ಯತೆ ಪಡೆದ, ಪ್ರಿಸಿಷನ್ ಆಯುರ್ವೇದ ಆಸ್ಪತ್ರೆ ಜಾಲವಾದ ಅಪೋಲೋ ಆಯುರ್ವೈದ್ ಆಸ್ಪತ್ರೆಯು ಇಂದು ತೀವ್ರ ಅನಾರೋಗ್ಯದ ಕಾರಣ ಕೋಮಾ ಸ್ಥಿತಿ ತಲುಪಿದ್ದ 78 ವರ್ಷದ ರೋಗಿ ವಿಶ್ವನಾಥಂ ಜಿ. ಅವರನ್ನು ಪ್ರಿಸಿಷನ್ ಆಯುರ್ವೇದದ ಮೂಲಕ ಪುನಶ್ಚೇತನಗೊಳಿಸಿದ ಸಾಧನೆ ಮಾಡಿದೆ.

ಶ್ರೀ ವಿಶ್ವನಾಥಂ ಅವರಿಗೆ ಸಾಂಪ್ರದಾಯಿಕ ತೀವ್ರ ನಿಗಾ ಚಿಕಿತ್ಸೆ ನೀಡಿದರೂ ಪರಿಹಾರ ಸಿಕ್ಕಿರಲಿಲ್ಲ. ನಂತರ ತೀವ್ರ ಉಸಿರಾಟದ ತೊಂದರೆ, ನಿರಂತರ ಜ್ವರ ಮತ್ತು ನರ ದೌರ್ಬಲ್ಯದೊಂದಿಗೆ ಕೋಮಾ ಸ್ಥಿತಿಯಲ್ಲಿದ್ದ ಇವರನ್ನು ಅಪೋಲೋ ಆಯುರ್ವೈದ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಿರಂತರ ಎರಡು ವಾರಗಳ ಜ್ವರ, ಅತಿಯಾದ ಗಂಟಲ ಸ್ರವಿಸುವಿಕೆಯೊಂದಿಗೆ ತೀವ್ರ ಕೆಮ್ಮು, ಉಸಿರಾಟದ ತೊಂದರೆ ಮತ್ತು ಬಲಗೈ ಹಾಗೂ ಕಾಲಿನ ತೀವ್ರ ದೌರ್ಬಲ್ಯದಿಂದ ಅವರು ಬಳಲು ತ್ತಿದ್ದರು. ಅವರನ್ನು ಅಪೋಲೋ ಆಯುರ್ವೈದ್ ಗೆ ದಾಖಲಿಸುವ ಮೊದಲು ಅವರು ಅಲೋಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು, ಅಲ್ಲಿ ಅವರ ಸ್ಥಿತಿ ಹದಗೆಟ್ಟು ಐಸಿಯುನಲ್ಲಿ ಚಿಕಿತ್ಸೆಯಲ್ಲಿ ಚಿಕಿತ್ಸೆ ನೀಡಬೇಕಾಗಿ ಬಂದಿತ್ತು. ನರನಾಳದ ಮೂಲಕ ನೀಡುವ ಆಂಟಿ ಬಯಾಟಿಕ್ಸ್, ದ್ರವ ಔಷಧಗಳು, ಆಂಟಿಪಿಲೆಪ್ಟಿಕ್‌ ಗಳು, ನೆಬ್ಯುಲೈಸೇಶನ್ ಮತ್ತು ಪೂರಕ ನಿರ್ವಹಣೆಯ ಹೊರತಾ ಗಿಯೂ ಅವರು ತೀವ್ರ ಡೀಹೈಡ್ರಷನ್, ಅರೆಪ್ರಜ್ಞಾವಸ್ಥೆ ಮತ್ತು ದ್ರವ ಪದಾರ್ಥಗಳನ್ನು ಸಹ ನುಂಗಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದರು. ಅವರ ವೈದ್ಯಕೀಯ ಸ್ಥಿತಿ ಎಷ್ಟು ಹದಗೆಟ್ಟಿತೆಂದರೆ, ಕುಟುಂಬದವರು ಅವರ ಅಂತ್ಯಕಾಲದ ವ್ಯವಸ್ಥೆಗಳನ್ನು ಮಾಡಲು ಸಿದ್ಧರಾಗಿದ್ದರು.

ಇದನ್ನೂ ಓದಿ: Health Tips: ಚಳಿಗಾಲದಲ್ಲಿ ಮೊಸರು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತಾ? ಇಲ್ಲಿದೆ ನೋಡಿ ಮಾಹಿತಿ

ಅಪೋಲೋ ಆಯುರ್ವೈದ್ ಗೆ ದಾಖಲಾದಾಗ, ರೋಗಿಯು ಸ್ಪಂದಿಸದ ಸ್ಥಿತಿಯಲ್ಲಿದ್ದರು. ನುಂಗಲು ಅಸಮರ್ಥರಾಗಿದ್ದರು ಮತ್ತು ಸಂಪೂರ್ಣ ಪೂರಕ ಆರೈಕೆಯ ಮೇಲೆ ಅವಲಂಬಿತರಾಗಿದ್ದರು. ಅವರಿಗೆ ತಕ್ಷಣವೇ ನಿಕಟ ವೈದ್ಯಕೀಯ ಮೇಲ್ವಿಚಾರಣೆಯ ಮೂಲಕ ಸ್ಟೆಬಿಲೈಸೇಷನ್, ಉಸಿರಾಟದ ಸ್ರವಿಸುವಿಕೆಯ ತೆರವು, ನರಮಂಡಲದ ಪುನರ್ವಸತಿ ಮತ್ತು ಜೀರ್ಣಕ್ರಿಯೆ ಹಾಗೂ ನರಸ್ನಾಯುಕ ಕಾರ್ಯದ ಮರುಸ್ಥಾಪನೆಯ ಮೇಲೆ ಗಮನ ಕೇಂದ್ರೀಕರಿಸಿದ ವೈಯಕ್ತೀಕರಿಸಿದ, ಪ್ರೋಟೋಕಾಲ್- ಚಾಲಿತ ಆಯುರ್ವೇದ ಚಿಕಿತ್ಸೆಯನ್ನು ಪ್ರಾರಂಭಿಸಲಾಯಿತು. ಚಿಕಿತ್ಸೆಯ ಅವಧಿಯಲ್ಲಿ, ರೋಗಿ ಯು ಸ್ಥಿರವಾದ ಮತ್ತು ಗಮನಾರ್ಹ ಸುಧಾರಣೆಯನ್ನು ತೋರಿದರು ಮತ್ತು ಶೀಘ್ರವೇ ಅವರು ಪ್ರಜ್ಞೆಯನ್ನು ಮರಳಿ ಪಡೆದರು, ಉಸಿರಾಟದ ತೊಂದರೆ ಕಡಿಮೆಯಾಯಿತು, ನುಂಗುವ ಸಾಮರ್ಥ್ಯ ದೊರೆತಿತು ಮತ್ತು ನರಗಳ ದೌರ್ಬಲ್ಯವು ಸುಧಾರಿಸಿತು. ಸಂರ್ಪಕ ಚಿಕಿತ್ಸೆಯ ಅಂತ್ಯದ ವೇಳೆಗೆ, ಶ್ರೀ ವಿಶ್ವನಾಥಂ ಪ್ರಜ್ಞೆ ಮರಳಿದವರಾಗಿ, ಯಾವುದೇ ತೊಂದರೆಯಿಲ್ಲದೆ ಘನ ಆಹಾರವನ್ನು ನುಂಗಲು, ಮೌಖಿಕ ಔಷಧಿಗಳನ್ನು ಸೇವಿಸಲು ಮತ್ತು ಸ್ವತಂತ್ರವಾಗಿ ನಡೆಯಲು ಶಕ್ತರಾದರು.

ಈ ಪ್ರಕರಣದ ಕುರಿತು ಮಾತನಾಡಿದ ಅಪೋಲೋ ಆಯುರ್ವೈದ್ ಆಸ್ಪತ್ರೆಯ ಕನ್ಸಲ್ಟೆಂಟ್ ಫಿಸಿಶಿಯನ್ ಆದ ಡಾ.ಝಂಖಾನಾ ಅವರು, “ಈ ಪ್ರಕರಣವು ಆಯುರ್ವೇದವನ್ನು ಕೇವಲ ಒಂದು ಪೂರಕ ಚಿಕಿತ್ಸೆಯಾಗಿ ಮಾತ್ರವಲ್ಲದೆ, ಆರೋಗ್ಯದ ಪೂರ್ಣ ಚಕ್ರವನ್ನು ಮರುಸ್ಥಾಪಿಸುವ ಸಾಮರ್ಥ್ಯವಿರುವ ಒಂದು ಸಂಪೂರ್ಣ ವೈದ್ಯಕೀಯ ವ್ಯವಸ್ಥೆ ಎಂಬುದನ್ನು ತೋರಿಸಿ ಕೊಟ್ಟಿದೆ. ರೋಗಿಯ ಆರೋಗ್ಯ ವ್ಯವಸ್ಥೆಯ ವ್ಯವಸ್ಥಿತ ಕುಸಿತವನ್ನು ಸರಿಪಡಿಸುವುದು, ಅಡೆತಡೆಗಳನ್ನು ನಿವಾರಿಸುವುದು, ನರವೈಜ್ಞಾನಿಕ ಸಾಮರ್ಥ್ಯವನ್ನು ಮರುನಿರ್ಮಾಣ ಮಾಡುವುದು ಮತ್ತು ನುಂಗುವಿಕೆ ಹಾಗೂ ಚಲನಶೀಲತೆಯಂತಹ ಮೂಲ ಕಾರ್ಯಗಳನ್ನು ಮರುಸ್ಥಾಪಿಸುವುದರ ಮೇಲೆ ಗಮನ ಕೇಂದ್ರೀಕರಿಸಿ ನಾವು ಚಿಕಿತ್ಸೆ ನೀಡಿದೆವು. ಈ ಫಲಿತಾಂಶವು ಸಂಕೀರ್ಣ ಮತ್ತು ನಿರ್ಣಾಯಕ ಪರಿಸ್ಥಿತಿಗಳನ್ನು ನಿರ್ವಹಿಸುವಲ್ಲಿ ನಿಖರವಾದ, ಪ್ರೋಟೋಕಾಲ್- ಚಾಲಿತ ಆಯು ರ್ವೇದ ಚಿಕಿತ್ಸೆಯ ಮೌಲ್ಯವನ್ನು ಮತ್ತಷ್ಟು ಬಲಪಡಿಸುತ್ತದೆ” ಎಂದು ಹೇಳಿದರು.

ಆಸ್ಪತ್ರೆ ಮತ್ತು ವೈದ್ಯರ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ ರೋಗಿಯ ಮಗ ರಮೇಶ್ ಬಾಬು ಮಾತನಾಡಿ, “ನನ್ನ ತಂದೆಯನ್ನು ಆಸ್ಪತ್ರೆಗೆ ದಾಖಲಿಸಿದಾಗ ನಾವು ಭರವಸೆಯನ್ನೇ ಕಳೆದುಕೊಂಡಿದ್ದೆವು. ಕುಟುಂಬವಾಗಿ ನಾವು ಅವರ ಅಂತ್ಯಸಂಸ್ಕಾರದ ವಿಧಿವಿಧಾನಗಳಿಗೆ ಮಾನಸಿಕವಾಗಿ ಸಿದ್ಧರಾಗು ತ್ತಿದ್ದೆವು. ನಾವು ಅಪೋಲೋ ಆಯುರ್ವೈದ್ ಗೆ ಬಂದಾಗ ಅಂತಹ ಮಾನಸಿಕ ಸ್ಥಿತಿಯಲ್ಲಿದ್ದೆವು. ಇಂದು ಅವರು ನಡೆದುಕೊಂಡು ಮನೆಗೆ ಮರಳುತ್ತಿದ್ದಾರೆ ಎಂದು ಹೇಳಲು ಅಪಾರ ಸಂತೋಷ ವಾಗುತ್ತಿದೆ. ಅದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಇಲ್ಲಿಗೆ ಬಂದಾಗ ನಾನು ಕಂಡ ಏಕೈಕ ಕನಸು ಇದಾಗಿತ್ತು ಮತ್ತು ಡಾ. ಝಂಖಾನಾ ನೇತೃತ್ವದ ವೈದ್ಯರ ತಂಡ ಇದನ್ನು ಸಾಧ್ಯವಾಗಿಸಿದೆ. 27 ದಿನಗಳ ಚಿಕಿತ್ಸೆಯ ನಂತರ, ನನ್ನ ತಂದೆ ತಾವಾಗಿಯೇ ಆಹಾರ ಸೇವಿಸಬಲ್ಲರು, ಮೌಖಿಕವಾಗಿ ಔಷಧಿಗಳನ್ನು ತೆಗೆದುಕೊಳ್ಳಬಲ್ಲರು ಮತ್ತು ಸ್ವತಂತ್ರವಾಗಿ ನಡೆಯಬಲ್ಲರು. ಇದು ತಮಗೆ ಮರು ಜನ್ಮದಂತೆ ಭಾಸವಾಗುತ್ತಿದೆ ಎಂದು ಅವರೇ ಹೇಳುತ್ತಿದ್ದಾರೆ” ಎಂದು ಹೇಳಿದರು.

ಈ ಪ್ರಕರಣವು ಅಪೋಲೋ ಆಯುರ್ವೈದ್ ನ ವೈಯದ್ಯಕೀಯ ವ್ಯವಸ್ಥೆಯು ಆಯುರ್ವೇದದ ಶ್ರೇಷ್ಠ ಮಾದರಿಯನ್ನು ಎತ್ತಿ ತೋರಿಸುತ್ತದೆ, ಇಲ್ಲಿ ಸಂಘಟಿತ ಪ್ರೋಟೋಕಾಲ್‌ ಗಳು, ನಿರಂತರ ಮೇಲ್ವಿಚಾರಣೆ ಮತ್ತು ಸಮಗ್ರ ಪುನರ್ವಸತಿ ಚಿಕಿತ್ಸೆಯು ಮುಂದುವರಿದ, ಜೀವಕ್ಕೆ ಅಪಾಯಕಾರಿ ಯಾದ ಪರಿಸ್ಥಿತಿಗಳಲ್ಲಿಯೂ ಚೇತರಿಕೆ ಉಂಟು ಮಾಡಲು ನೆರವಾಗುತ್ತದೆ. ಇದು ಗಂಭೀರ ಪರಿಸ್ಥಿತಿಯ ಹಂತದಿಂದ ಸಂಪೂರ್ಣ ಕ್ರಿಯಾಶೀಲ ಬದುಕು ಹೊಂದುವವರೆಗೆ ಚಿಕಿತ್ಸೆಯ ಸಂಪೂರ್ಣ ಹಂತಗಳಲ್ಲಿ ಆಯುರ್ವೇದದ ಪ್ರಸ್ತುತತೆಯನ್ನು ಸಾರುತ್ತದೆ.