ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭೀಮ - ಶಕ್ತಿ , ಸ್ಥಿರತೆ ಮತ್ತು ಆಧ್ಯಾತ್ಮಿಕ ಸಾಮರಸ್ಯದ ದೈವಿಕ ಅಭಿವ್ಯಕ್ತಿಯಾಗಿ "ಶಿವಾಯ್" ಅನಾವರಣ

ಆಭರಣದ ಕಲ್ಪನೆಗಷ್ಟೇ ಸೀಮಿತವಾಗದ ಶಿವಾಯ್, ಕಾಲಾತೀತವಾದ ಭಾರತದ ಆಧ್ಯಾತ್ಮಿಕ ತತ್ತ್ವಶಾಸ್ತ್ರದಲ್ಲಿ ಬೇರೂರಿರುವ ಸಾಂಸ್ಕೃತಿಕ ಅಭಿವ್ಯಕ್ತಿಯಾಗಿರುವ ಈ ಸಂಗ್ರಹವು, ಶಿವ ಮತ್ತು ಶಕ್ತಿಯ ಪವಿತ್ರ ಸಮನ್ವಯತೆಯನ್ನು ಪ್ರತಿಬಿಂಬಿಸುತ್ತದೆ - ಶಿವಾಯ್ ಸಂಗ್ರಹದಲ್ಲಿ, ಸೃಷ್ಟಿ, ಲಯ, ಶಕ್ತಿ, ಸ್ಥಿರತೆ, ತಪಸ್ಸು ಮತ್ತು ಅನುಗ್ರಹವನ್ನು ಪ್ರತಿನಿಧಿಸುವ ವಿಶ್ವ ಶಕ್ತಿಗಳು ಒಂದು ಗೂಡಿ ಸಂಪೂರ್ಣತೆಯನ್ನು ಸಾಕಾರಗೊಳಿಸುತ್ತಿವೆ.

ಆಧ್ಯಾತ್ಮಿಕ ಸಾಮರಸ್ಯದ ದೈವಿಕ ಅಭಿವ್ಯಕ್ತಿಯಾಗಿ "ಶಿವಾಯ್" ಅನಾವರಣ

-

Ashok Nayak
Ashok Nayak Feb 16, 2026 6:12 PM

ಬೆಂಗಳೂರು: ದಕ್ಷಿಣ ಭಾರತದ ಅತ್ಯಂತ ಗೌರವಾನ್ವಿತ ಮತ್ತು ಜನಪ್ರಿಯ ಆಭರಣ ಮಳಿಗೆಗಳಲ್ಲಿ ಒಂದಾಗಿರುವ ಭೀಮ, ಶಕ್ತಿ , ಸಮತೋಲನ ಮತ್ತು ಆಧ್ಯಾತ್ಮಿಕ ಸಾಮರಸ್ಯ ದ ದೈವಿಕ ಅಭಿವ್ಯಕ್ತಿಯಾಗಿರುವ "ಶಿವಾಯ್" ಎನ್ನುವ ಹೊಸ ಸಂಗ್ರಹವನ್ನು ಬಿಡುಗಡೆ ಮಾಡುವುದನ್ನು ಹೆಮ್ಮೆಯಿಂದ ಘೋಷಿಸುತ್ತದೆ, ಇದು ಶಿವ ಮತ್ತು ಪಾರ್ವತಿ ದೇವಿಯ ದೈವೀಕ ಸಮ್ಮಿಲನದಿಂದ ಆಧ್ಯಾತ್ಮಿಕವಾಗಿ ಪ್ರೇರಿತವಾಗಿರುವ ಸಂಗ್ರಹವಾಗಿದೆ.

ಆಭರಣದ ಕಲ್ಪನೆಗಷ್ಟೇ ಸೀಮಿತವಾಗದ ಶಿವಾಯ್, ಕಾಲಾತೀತವಾದ ಭಾರತದ ಆಧ್ಯಾ ತ್ಮಿಕ ತತ್ತ್ವಶಾಸ್ತ್ರದಲ್ಲಿ ಬೇರೂರಿರುವ ಸಾಂಸ್ಕೃತಿಕ ಅಭಿವ್ಯಕ್ತಿಯಾಗಿರುವ ಈ ಸಂಗ್ರಹವು, ಶಿವ ಮತ್ತು ಶಕ್ತಿಯ ಪವಿತ್ರ ಸಮನ್ವಯತೆಯನ್ನು ಪ್ರತಿಬಿಂಬಿಸುತ್ತದೆ - ಶಿವಾಯ್ ಸಂಗ್ರಹದಲ್ಲಿ ,  ಸೃಷ್ಟಿ, ಲಯ, ಶಕ್ತಿ, ಸ್ಥಿರತೆ, ತಪಸ್ಸು ಮತ್ತು ಅನುಗ್ರಹವನ್ನು ಪ್ರತಿನಿಧಿಸುವ ವಿಶ್ವ ಶಕ್ತಿಗಳು ಒಂದುಗೂಡಿ ಸಂಪೂರ್ಣತೆಯನ್ನು ಸಾಕಾರಗೊಳಿಸುತ್ತಿವೆ. ಶಿವಾಯ್ ಸಂಗ್ರಹದ ಮೂಲಕ, ಭೀಮ ಅಲಂಕಾರವನ್ನು ಮೀರಿದ ಅರ್ಥವುಳ್ಳ ಮತ್ತು ಆಳವಾದ ಸಾಂಕೇತವಿರುವ ಸೂಕ್ಷ್ಮವಾಗಿ ರಚಿಸಲಾದ ಚಿನ್ನದ ಆಭರಣಗಳಾನ್ನಾಗಿ ಅನುವಾದಿಸು ತ್ತದೆ.

ಇದನ್ನೂ ಓದಿ: Bangalore News: ಡಾ.ವಿಷ್ಣು ಭರತ್ ಆಲಂಪಳ್ಳಿ ಅವರ ಲೈಫ್ ಟ್ವಿಸ್ಟ್ ಅಂಡ್ ಟರ್ನ್ ಎಂಬ ಪುಸ್ತಕ ಬಿಡುಗಡೆ

ನೆಕ್ಲೇಸ್‌, ಕಿವಿಯೋಲೆ, ಹಾರ, ಬಳೆ ಮತ್ತು ಸಾಂಪ್ರದಾಯಿಕ ಆಭರಣಗಳಲ್ಲಿರುವ ಅದ್ಭುತ ಶ್ರೇಣಿಯ ಈ ಸಂಗ್ರಹವು ಪ್ರತಿಯೊಂದು ಆಭರಣವನ್ನು ಸಂಕೀರ್ಣವಾದ ವಿವರ ಮತ್ತು ಶಾಸ್ತ್ರೀಯ ಪ್ರಭಾವಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಆಧ್ಯಾತ್ಮಿಕ ನಂಬಿಕೆಗಳನ್ನು ಪ್ರತಿನಿಧಿಸುವ ಪುನರಾವರ್ತಿತ ಕಲಾತ್ಮಕ ಚಿಹ್ನೆಗಳು. ದೇವಾಲಯದ ಸೌಂದರ್ಯಶಾಸ್ತ್ರ ಮತ್ತು ದೈವಿಕ ಪ್ರತಿಮಾಶಾಸ್ತ್ರದಿಂದ ಸ್ಫೂರ್ತಿ ಪಡೆದ ಶಿವಾಯ್‌ನ ಪ್ರತಿಯೊಂದು ಸೃಷ್ಟಿ ಯು ಭಕ್ತಿ, ಕರಕುಶಲತೆ ಮತ್ತು ಸಾಂಸ್ಕೃತಿಕ ಆಳವನ್ನು ಪ್ರತಿಬಿಂಬಿಸುತ್ತದೆ.

"ಬಂಗಾರದಲ್ಲಿ ಹುದುಗಿರುವ ದೈವತ್ವದ ಪ್ರತಿಧ್ವನಿಗಳು" ಎಂಬ ಸಂದೇಶದೊಂದಿಗೆ ಶಿವಾಯ್ ಅನ್ನು ವಿನ್ಯಾಸಗೊಳಿಸಲಾಗಿದ್ದು, ಆಧ್ಯಾತ್ಮಿಕತೆಯನ್ನು ತಮ್ಮ ಅಸ್ತಿತ್ವದ ಹತ್ತಿರಕ್ಕೆ ಕೊಂಡೊಯ್ಯಲು ಬಯಸುವವರಿಗೆ ಈ ಸಂಗ್ರಹವಾಗಿದೆ. ಆಭರಣವನ್ನು ಕೇವಲ ಅಲಂಕಾರಕ್ಕಾಗಿ ಸೀಮಿತಗೊಳಿಸದೆ, ಆಂತರಿಕ ಶಕ್ತಿ ಮತ್ತು ವೈಯಕ್ತಿಕ ನಂಬಿಕೆಯ ವಿಸ್ತರಣೆಯನ್ನಾಗಿ ನೋಡುವುವರೊಂದಿಗೆ ಇದು ಸಂವಹನದಿಂದಿರುತ್ತದೆ. ಪ್ರತಿಯೊಂದು ಆಭರಣವು ದೈನಂದಿನ ಜೀವನದಲ್ಲಿ ದೈವಿಕ ರಕ್ಷಣೆ, ಭಾವನಾತ್ಮಕ ಸಮತೋಲನ ಮತ್ತು ಸಾಮರಸ್ಯದ ಜ್ಞಾಪನೆಯಾಗುತ್ತದೆ.

ಆಭರಣಗಳನ್ನು ಸಾಂಸ್ಕೃತಿಕ ಪರಂಪರೆಯ ಪ್ರತೀಕವಾನ್ನಾಗಿ ಪ್ರಸ್ತುತಪಡಿಸುವ ತನ್ನ ಸಂಪ್ರದಾಯವನ್ನು ಶಿವಾಯ್ ನೊಂದಿಗೆ ಭೀಮ ಮುಂದುವರೆಸಿದೆ  - ಭಕ್ತಿಯಲ್ಲಿ ಬೇರೂ ರಿದ್ದರೂ ಸಹ ಆಧುನಿಕ ಅನ್ವೇಷಕರಿಗೆ ಪ್ರಸ್ತುತವಾಗುವಂತೆ ಈ ಸಂಗ್ರಹವು ಸಾಂಪ್ರದಾ ಯಿಕ ಕಲಾತ್ಮಕತೆಯೊಂದಿಗೆ ಕಾಲಾತೀತ ಸೊಬಗನ್ನು ಸರಾಗವಾಗಿ ಬೆಸೆಯುತ್ತದೆ, ಇದು ಹಬ್ಬ, ಆಧ್ಯಾತ್ಮಿಕ ಕೂಟ ಮತ್ತು ಎಲ್ಲಾ ಸುಸಂಧರ್ಭಗಳಿಗೆ ಸೂಕ್ತವಾಗಿದೆ.

ಶಿವಾಯ್ ಕಲೆಕ್ಷನ್ ಈಗ ಬೆಂಗಳೂರಿನ ಜಯನಗರ 4 ನೇ ಬ್ಲಾಕ್, ಜಯನಗರ 3 ನೇ ಬ್ಲಾಕ್, ಮಲ್ಲೇಶ್ವರಂ ಮತ್ತು ರಾಜಾಜಿನಗರದಲ್ಲಿರುವ ಭೀಮ ಮಳಿಗೆಗಳಲ್ಲಿ ಮಾತ್ರ ಲಭ್ಯ ವಿರುತ್ತದೆ.

ಭೀಮ ಮುಂದಿನ ಶತಮಾನದ ಪರಂಪರೆಗೆ ಹೆಜ್ಜೆಯಿಡುತ್ತಿದ್ದಂತೆ, ಶಿವಾಯ್ ಭೀಮದ ಅಚ್ಯುತ ತತ್ವಶಾಸ್ತ್ರದ ಪ್ರತಿಬಿಂಬವಾಗಿ ನಿಂತಿದೆ - ಆಭರಣವು ಕೇವಲ ಧರಿಸುವುದಕಷ್ಟೆ ಅಲ್ಲದೆ, ಅನುಭವಿಸಲ್ಪಡಬೇಕು. ಇದು ಕಥೆ, ಆಶೀರ್ವಾದ ಮತ್ತು ನಂಬಿಕೆಯನ್ನು ತಲೆಮಾರುಗಳಾದ್ಯಂತ ಸಂವಹನ ಮಾಡುತ್ತದೆ. ಶಿವಾಯ್‌ ಸಂಗ್ರಹದೊಂದಿಗೆ, ಭಕ್ತಿ ಮತ್ತು ನಂಬಿಕೆಯೊಂದಿಗೆ ರೂಪುಗೊಂಡಾಗ ಮಾತ್ರ ಆಭರಣವು ಅರ್ಥಪೂರ್ಣವಾಗುತ್ತದೆ ಎಂದು ಭೀಮ ಪುನರುಚ್ಚರಿಸುತ್ತದೆ.