ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕ್ಯಾಮರಾ ಇಲ್ಲದೆ ಬೀದಿ ಬದಿಯ ಮಕ್ಕಳಿಗೆ ಪಾಠ ಕಲಿಸಿದ ಶಿಕ್ಷಕ: ನಿಸ್ವಾರ್ಥ ಸೇವೆಗೆ ನೆಟ್ಟಿಗರಿಂದ ಹ್ಯಾಟ್ಸ್ ಆಫ್

Viral Video: ಇಲ್ಲೊಬ್ಬ ಶಿಕ್ಷಕನ ಹೃದಯವಂತಿಕೆಯ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ದೆಹಲಿಯ ಶಿಕ್ಷಕರೊಬ್ಬರು ಯಾವುದೇ ಪ್ರಚಾರದ ಹಂಗಿಲ್ಲದೆ, ಬೀದಿ ಬದಿಯ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ದೃಶ್ಯ ಕಂಡು ಬಂದಿದೆ. ಸದ್ಯ ಇದರ ವಿಡಿಯೊ ಭಾರಿ ವೈರಲ್ ಆಗಿದೆ.

ಪ್ರಚಾರದ ಹಂಗಿಲ್ಲದೆ ಬೀದಿಯಲ್ಲಿ ಮಕ್ಕಳಿಗೆ ಪಾಠ ಕಲಿಸಿದ ಶಿಕ್ಷಕ

ಬೀದಿಯಲ್ಲಿ ಮಕ್ಕಳಿಗೆ ಪಾಠ ಕಲಿಸಿದ ದೆಹಲಿ ಶಿಕ್ಷಕ -

Profile
Pushpa Kumari Feb 16, 2026 7:45 PM

ನವದೆಹಲಿ, ಫೆ.16: ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುವ ಕ್ರೇಜ್ ಹೆಚ್ಚಿನವರಲ್ಲಿ ಇದೆ.‌ ಹೀಗಾಗಿ ಏನೇ ಮಾನವೀಯ ಕೆಲಸ ಮಾಡಿದರೂ, ಯಾರಿಗೆ ಸಹಾಯ ಮಾಡಿದರೂ ಅದನ್ನು ರೆಕಾರ್ಡ್ ಮಾಡಿ ಶೇರ್ ಮಾಡಿಕೊಳ್ಳುವವರು ಅನೇಕರು ಇದ್ದಾರೆ. ಆದರೆ ಇಲ್ಲೊಬ್ಬ ಶಿಕ್ಷಕನ ಹೃದಯವಂತಿಕೆಯ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ದೆಹಲಿಯ ಶಿಕ್ಷಕರೊಬ್ಬರು ಯಾವುದೇ ಪ್ರಚಾರದ ಹಂಗಿಲ್ಲದೆ, ಬೀದಿ ಬದಿಯ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ದೃಶ್ಯ ಕಂಡು ಬಂದಿದೆ. ಸದ್ಯ ಇದರ ವಿಡಿಯೊ ಭಾರಿ ವೈರಲ್ (Viral Video) ಆಗಿದೆ.

ದಕ್ಷಿಣ ದೆಹಲಿಯ ಶೇಖ್ ಸರೈನಲ್ಲಿ ಸೆರೆಹಿಡಿಯಲಾದ ವಿಡಿಯೊ ಇದಾಗಿದ್ದು, ಶಿಕ್ಷಕ ಫುಟ್‌ಪಾತ್‌ನಲ್ಲಿ ಕುಳಿತು ತಾಳ್ಮೆಯಿಂದ ಮಕ್ಕಳ ಗುಂಪಿಗೆ ಪಾಠ ಮಾಡುವುದನ್ನು ತೋರಿಸಿದೆ. ಇಲ್ಲಿ ಯಾವುದೇ ಸುಸಜ್ಜಿತ ಕಟ್ಟಡಗಳಿಲ್ಲ, ಯಾವುದೇ ಕುಳಿತುಕೊಳ್ಳಲು ವ್ಯವಸ್ಥೆ ಇಲ್ಲ. ಆದರೂ ಶಿಕ್ಷಕ ಮಾತ್ರ ಅತ್ಯಂತ ತಾಳ್ಮೆಯಿಂದ ಮಕ್ಕಳಿಗೆ ಅಕ್ಷರ ದಾನ ಮಾಡಿದ್ದಾರೆ. ಅವರ ಹತ್ತಿರದಲ್ಲೇ ಇರುವ ಪುಟ್ಟ ಬಾಲಕಿಯೊಬ್ಬಳು ಓದಿನಲ್ಲಿ ಮಗ್ನಳಾಗಿದ್ದ ದೃಶ್ಯ ನೀವು ಗಮನಿಸಬಹುದು. ಶಿಕ್ಷಕನಿಗೆ ಗೊತ್ತಿಲ್ಲದಂತೆ ಈ ದೃಶ್ಯವನ್ನು ಸೆರೆ ಹಿಡಿಯಲಾಗಿದೆ.

ವಿಡಿಯೊ ನೋಡಿ:

ಪಾದಚಾರಿ ಮಾರ್ಗದಲ್ಲಿ ಕುಳಿತು ಶಿಕ್ಷಕನು ಬಹಳ ತಾಳ್ಮೆಯಿಂದ ಮಕ್ಕಳ ನೋಟ್‌ಬುಕ್ ಪರಿಶೀಲಿಸುತ್ತಿರುವುದು ಕಂಡುಬಂದಿದೆ. ದಾರಿಹೋಕರೊಬ್ಬರು ಈ ದೃಶ್ಯವನ್ನು ಚಿತ್ರೀಕರಿಸಿ ಇನ್‌ ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. "ಜಗತ್ತು ವೇಗವಾಗಿ ಹೋಗುವಾಗ ಕೆಲವು ಹೃದಯಗಳು ಇಂತಹ ಕೆಲಸಗಳಿಗೆ ಸಮಯ ಮೀಸಲಿಡುತ್ತವೆ. ನಿರಾಶ್ರಿತ ಮಕ್ಕಳಿಗೆ ಕಲಿಸುವ ವ್ಯಕ್ತಿ ಖ್ಯಾತಿಗಾಗಿ ಅಲ್ಲ, ಚಪ್ಪಾಳೆಗಾಗಿ ಅಲ್ಲ, ಆದರೆ ಮಾನವೀಯತೆಗಾಗಿʼʼ ಎಂದು ಬರೆದು ಕೊಂಡಿದ್ದಾರೆ.

ಛೇ ಎಂತಾ ಅಮಾನವೀಯ ಕೃತ್ಯ: ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!

ಈ ವಿಡಿಯೊ ಸುಮಾರು 1.2 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಪಡೆದಿದ್ದು, ಜನರು ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆ ವ್ಯಕ್ತಿಯ ನಿಸ್ವಾರ್ಥ ಮತ್ತು ದಯೆಗಾಗಿ ಅವರನ್ನು ಹೊಗಳಿದ್ದಾರೆ. "ಇನ್ಫ್ಲುಯೆನ್ಸರ್‌ಗಳಂತೆ ಪ್ರಚಾರಕ್ಕಾಗಿ ಇದನ್ನು ಮಾಡಿಲ್ಲ ಅದುವೇ ಇವರ ದೊಡ್ಡ ಗುಣ" ಎಂದು ಒಬ್ಬರು ಶ್ಲಾಘಿಸಿದ್ದಾರೆ. ತನ್ನ ವಿಡಿಯೊ ವೈರಲ್ ಆಗಿರುವುದನ್ನು ಕಂಡು ಈ ಶಿಕ್ಷಕ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ʼʼಕೆಲವು ಮಕ್ಕಳಿಗೆ ಉಚಿತವಾಗಿ ಕಲಿಸುವ ಸಣ್ಣ ಪ್ರಯತ್ನವನ್ನು ನಾನು ನಾನು ಆರಂಭಿಸಿದ್ದೇನೆ. ಇಂದು ನಿಮ್ಮೆಲ್ಲರ ಸಹಾಯದಿಂದ ಈ ವಿಡಿಯೊ ವೈರಲ್ ಆಗಿದೆ. ಈ ಗೆಲವು ನಮಗೆಲ್ಲರಿಗೂ ಸೇರಿದ್ದು‌ʼʼ ಎಂದು ಹೇಳಿದ್ದಾರೆ.