ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇರಾನ್‌ ವಿರುದ್ಧ ಸೋಷಿಯಲ್‌ ಮೀಡಿಯಾ ಮೂಲಕವೂ ಅಮೆರಿಕ ದಾಳಿ: ಇರಾನ್ ನಕ್ಷೆಯಲ್ಲಿ ಡೊನಾಲ್ಡ್ ಟ್ರಂಪ್ ಮುಖ ಬಳಕೆ; ದೇಶವನ್ನೇ ಸ್ವಾದೀನಪಡಿಸಿಕೊಳ್ಳುತ್ತ ದೊಡ್ಡಣ್ಣ?

Donald Trump Launches Social Media Attack: ಬಾಂಬ್‌ ದಾಳಿ ಮೂಲಕ ಇರಾನ್‌ ಮೇಲೆ ಆಕ್ರಮಣ ನಡೆಸುತ್ತಿರುವ ಅಮೆರಿಕ ಇದೀ ಸೋಷಿಯಲ್‌ ಮೀಡಿಯಾ ಮೂಲಕವೂ ಯುದ್ಧ ನಡೆಸುತ್ತಿದೆ. ಇರಾನ್‌ನ ತೈಲ ರಫ್ತು ಕುಸಿಯುತ್ತಿರುವುದನ್ನು ತೋರಿಸುವ ಗ್ರಾಫಿಕ್ಸ್ ಪೋಸ್ಟ್‌ ಮಾಡಿರುವ ಅಮೆರಿಕ ಇದೀಗ ಮಧ್ಯಪ್ರಾಚ್ಯ ನಕ್ಷೆಯಲ್ಲಿ ಇರಾನ್ ಇರಬೇಕಾದ ಜಾಗದಲ್ಲಿ ಡೊನಾಲ್ಡ್‌ ಟ್ರಂಪ್ ಅವರ ಮುಖದ ಆಕೃತಿ ಇರಿಸಿದೆ.

ಇರಾನ್ ದೇಶದ ನಕ್ಷೆಯಲ್ಲಿ ಡೊನಾಲ್ಡ್ ಟ್ರಂಪ್ ಮುಖ ಬಳಕೆ!

ಎಐ ಪೋಸ್ಟ್ ಹಂಚಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ -

Priyanka P
Priyanka P Sep 7, 2026 5:04 PM

ವಾಷಿಂಗ್ಟನ್, ಸೆ. 7: ಮಧ್ಯ ಪ್ರಾಚ್ಯ ಸಂಘರ್ಷ ಸದ್ಯ ಕಡಿಮೆಯಾಗುವ ಲಕ್ಷಣ ಗೋಚರಿಸುತ್ತಿಲ್ಲ. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಇರಾನ್ ಮೇಲೆ ಅಮೆರಿಕ ಒತ್ತಡ ಹೆಚ್ಚಿಸುತ್ತಿದೆ. ಕಳೆದ ವಾರಾಂತ್ಯದಲ್ಲಿ ಇರಾನ್ ವಿರುದ್ಧ ಅಮೆರಿಕ ನೇರವಾಗಿ ಮಿಲಿಟರಿ ದಾಳಿ ನಡೆಸದಿದ್ದರೂ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಮ್ಮ ಟ್ರೂತ್ ಸೋಶಿಯಲ್ (Truth Social) ಮೀಡಿಯಾದಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಸರಣಿ ಪೋಸ್ಟ್‌ಗಳ ಮೂಲಕ ಪರೋಕ್ಷ ಯುದ್ಧ ನಡೆಸುತ್ತಿದ್ದಾರೆ. ಈ ಪೋಸ್ಟ್‌ಗಳಲ್ಲಿ ಅವರು, ಇರಾನ್ ಸಂಪೂರ್ಣವಾಗಿ ನಾಶಗೊಳ್ಳಲಿದೆ ಎಂದು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಎಐ ಪೋಸ್ಟ್‌ಗಳಲ್ಲಿ, ಇರಾನ್‌ನ ತೈಲ ರಫ್ತು ಕುಸಿಯುತ್ತಿರುವುದನ್ನು ತೋರಿಸುವ ಗ್ರಾಫಿಕ್ಸ್, ಇರಾನ್‌ನ ಆರ್ಥಿಕ ಜೀವನಾಡಿಯಾಗಿರುವ ಖಾರ್ಗ್ ತೈಲದ ಮೇಲೆ ದಾಳಿ ನಡೆಸುವ ಎಚ್ಚರಿಕೆ ಹಾಗೂ ನಕ್ಷೆಯಲ್ಲಿ ಇರಾನ್ ಇರಬೇಕಾದ ಜಾಗದಲ್ಲಿ ಡೊನಾಲ್ಡ್ ಟ್ರಂಪ್ ಅವರ ಮುಖದ ಆಕೃತಿಯನ್ನು ಇರಿಸಿ ಪೋಸ್ಟ್‌ ಹಂಚಿಕೊಳ್ಳಲಾಗಿದೆ.

ಡೊನಾಲ್ಡ್‌ ಟ್ರಂಪ್‌ ಅವರ ಸೋಷಿಯಲ್‌ ಮೀಡಿಯಾ ಪೋಸ್ಟ್‌:



ಫೆಬ್ರವರಿ ಅಂತ್ಯದಲ್ಲಿ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ದಾಳಿ ನಡೆಸಿದ್ದರ ಪ್ರತೀಕಾರವಾಗಿ ಇರಾನ್ ಜಾಗತಿಕ ಇಂಧನ ಪೂರೈಕೆಗೆ ನಿರ್ಣಾಯಕವಾದ ಮಾರ್ಗ ಹೊರ್ಮುಜ್‌ ಜಲಸಂಧಿಯನ್ನು ಪರಿಣಾಮಕಾರಿಯಾಗಿ ಸ್ಥಗಿತಗೊಳಿಸಿತು. ಈ ಜಲಸಂಧಿ ಮೂಲಕ ವಿಶ್ವದ ಐದನೇ ಒಂದು ಭಾಗದಷ್ಟು ತೈಲ ಸಾಗುತ್ತದೆ. ಈ ನಿರ್ಣಾಯಕ ಜಲಮಾರ್ಗವನ್ನು ಇರಾನ್ ಬಂದ್ ಮಾಡಿರುವುದರಿಂದ, ಜಾಗತಿಕ ಮಟ್ಟದಲ್ಲಿ ತೈಲ ಹಡಗುಗಳ ಸಂಚಾರಕ್ಕೆ ಭಾರಿ ಅಡಚಣೆ ಉಂಟಾಗಿದೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಗಗನಕ್ಕೇರುವ ಭೀತಿ ಎದುರಾಗಿದೆ.

ಮದುವೆ ಸಮಾರಂಭದ ಮೇಲೆ ದಾಳಿ; ಇದನ್ನು ಅಮೆರಿಕ ಮರೆಯಲಾಗದಂತೆ ಮಾಡುತ್ತೇವೆ: ಇರಾನ್ ಎಚ್ಚರಿಕೆ

ಟ್ರಂಪ್ ಹಂಚಿಕೊಂಡಿರುವ ಇತರ ಗ್ರಾಫಿಕ್ಸ್ ಪೋಸ್ಟ್‌ಗಳು, ಇರಾನ್‌ನ ಆರ್ಥಿಕತೆಯು ಸಂಪೂರ್ಣವಾಗಿ ಕುಸಿದಿರುವುದನ್ನು ಬಿಂಬಿಸುತ್ತಿವೆ. ಇರಾನ್‌ನ ಕರೆನ್ಸಿ ರಿಯಾಲ್ ಮೌಲ್ಯವು ಪಾತಾಳಕ್ಕೆ ಕುಸಿದಿದೆ ಎಂಬುದನ್ನು ತೋರಿಸಿವೆ. 2025ರ ಆರಂಭದಲ್ಲಿ ಅಮೆರಿಕನ್ ಡಾಲರ್ ಎದುರು ಸುಮಾರು 9,00,000 ರಿಯಾಲ್ ಇದ್ದ ಮೌಲ್ಯವು, ಇದೀಗ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಪ್ರತಿ ಡಾಲರ್‌ಗೆ ಬರೋಬ್ಬರಿ 2.27 ಮಿಲಿಯನ್ (22.7 ಲಕ್ಷ) ರಿಯಾಲ್‌ಗಿಂತಲೂ ಹೆಚ್ಚು ದುರ್ಬಲಗೊಂಡಿದೆ.

ಬೈ ಬೈ ಖಾರ್ಗ್

ಇರಾನ್ ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಹಲವು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುವ ಟ್ರಂಪ್ ಇದೀಗ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಇರಾನ್‌ನ ಇಡೀ ಭೂಪಟದ ಮೇಲೆ ಟ್ರಂಪ್ ಅವರ ಮುಖದ ಪಾರ್ಶ್ವದ ಆಕೃತಿಯನ್ನು ಎಐ ಮೂಲಕ ಮೂಡಿಸಲಾಗಿದೆ. ಅಷ್ಟೇ ಅಲ್ಲದೆ, ಯುದ್ಧ ವಿಮಾನವೊಂದು ತೈಲ ಕೇಂದ್ರದ ಮೇಲೆ ಭೀಕರ ಬಾಂಬ್ ದಾಳಿ ನಡೆಸುತ್ತಿರುವ ಎಐ ಚಿತ್ರವನ್ನೂ ಹಂಚಿಕೊಳ್ಳಲಾಗಿದ್ದು, ಬೈ ಬೈ ಖಾರ್ಗ್ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.

ಇರಾನ್ ಜತೆಗಿನ ಮಿಲಿಟರಿ ಸಂಘರ್ಷಗಳು ನಡೆಯುತ್ತಿರುವ ಮಧ್ಯೆಯೇ, ಹೊರ್ಮುಜ್ ಜಲಸಂಧಿಯ ಹೆಸರನ್ನು ಟ್ರಂಪ್ ಜಲಸಂಧಿ ಎಂದು ಮರುನಾಮಕರಣ ಮಾಡುವ ಆಲೋಚನೆಯನ್ನು ಡೊನಾಲ್ಡ್ ಟ್ರಂಪ್ ವ್ಯಕ್ತಪಡಿಸಿದ ಕೆಲವೇ ದಿನಗಳ ಬಳಿಕ ಇಂತಹ ಪೋಸ್ಟ್ ಮಾಡಲಾಗಿದೆ. ಆದರೆ ಇದನ್ನು ಹೇಳಿದ್ದ ಕೆಲವೇ ಗಂಟೆಗಳ ನಂತರ, ತಾವು ಇದನ್ನು ಗಂಭೀರವಾಗಿ ಹೇಳಿಲ್ಲ ಎಂದೂ ಸಹ ಟ್ರಂಪ್ ಸ್ಪಷ್ಟಪಡಿಸಿದ್ದರು.

ಇನ್ನು ಇರಾನಿನ ಬಂದರುಗಳ ಮೇಲೆ ಅಮೆರಿಕವು ಪ್ರತಿ-ದಿಗ್ಬಂಧನ ಹೇರಿದ್ದರೂ ಹೊರ್ಮುಜ್ ಮೇಲೆ ತನ್ನ ಹಿಡಿತವನ್ನು ಕಾಯ್ದುಕೊಂಡಿರುವ ಇರಾನ್, ಟ್ರಂಪ್ ಅವರ ಸಾಮಾಜಿಕ ಮಾಧ್ಯಮ ದಾಳಿಯನ್ನು ಧಿಕ್ಕರಿಸಿತು.