ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಸ್‌ನಲ್ಲಿ ವಿಂಡೋ ಸೀಟ್ ಕೊಡಲು ನಿರಾಕರಿಸಿದ ವ್ಯಕ್ತಿಯ ವಿಡಿಯೊ ಮಾಡಿ ನಿಂದಿಸಿದ ಮಹಿಳೆ: ಇಂತಹವರು ಮನೆಯಲ್ಲಿರಬೇಕು ಎಂದ ನೆಟ್ಟಿಗರು

Viral Video: ಮಹಿಳೆಯೊಬ್ಬಳು ಬಸ್‌ ಪ್ರಯಾಣದ ವೇಳೆ ತನಗೆ ವಿಂಡೋ ಸೀಟ್ ಬೇಕೆಂದು ಸಹಪ್ರಯಾಣಿಕನ ಬಳಿ ಪಟ್ಟು ಹಿಡಿದಿದ್ದಾಳೆ. ಆದರೆ ಆ ವ್ಯಕ್ತಿ ಸೀಟ್ ನೀಡಲು ಒಪ್ಪಿಲ್ಲ. ಇದರಿಂದ ಕೆರಳಿದ ಮಹಿಳೆ ಆತನ‌ ಮೇಲೆ ಕೂಗಾಡಿ ಬಾಯಿಗೆ ಬಂದಂತೆ ಮಾತನಾಡಿದ್ದಾಳೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಮಹಿಳೆಯ ವರ್ತನೆ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

ವಿಂಡೋ ಸೀಟ್ ಕೊಡದ ಪ್ರಯಾಣಿಕನನ್ನು ನಿಂದಿಸಿದ ಮಹಿಳೆ!

ವಿಂಡೋ ಸೀಟ್ ಕೊಡದ ಪ್ರಯಾಣಿಕನನ್ನು ನಿಂದಿಸಿದ ಮಹಿಳೆ -

Profile
Pushpa Kumari Sep 7, 2026 5:33 PM

ಪಾಟ್ನಾ, ಸೆ. 7: ಇತ್ತೀಚೆಗೆ ಭಾರತೀಯರಲ್ಲಿ ನಾಗರಿಕ ಪ್ರಜ್ಞೆ ಮರೆಯಾಗಿ ಬಿಟ್ಟಿದೆ ಎನ್ನುವ ಆರೋಪ ಆಗಾಗ ಕೇಳಿ ಬರುತ್ತಲೇ ಇದೆ. ಅದಕ್ಕೆ ತಕ್ಕಂತೆ ಸಾರ್ವಜನಿಕ ಸ್ಥಳದಲ್ಲಿ ಅಶಿಸ್ತಿನಿಂದ ನಡೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮಹಿಳೆಯೊಬ್ಬಳು ಬಸ್ ತನಗೆ ವಿಂಡೋ ಸೀಟ್ ಬೇಕೆಂದು ಸಹಪ್ರಯಾಣಿಕನ ಬಳಿ ಪಟ್ಟು ಹಿಡಿದಿದ್ದಾಳೆ. ಆದರೆ ಆ ವ್ಯಕ್ತಿ ಸೀಟ್ ನೀಡಲು ಒಪ್ಪಿದ ಹಿನ್ನೆಲೆಯಲ್ಲಿ ಕೆರಳಿದ ಆಕೆ ಆತನ‌ ಮೇಲೆ ಕೂಗಾಡಿ ಬಾಯಿಗೆ ಬಂದಂತೆ ಮಾತನಾಡಿದ್ದಾಳೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ಮಹಿಳೆಯ ವರ್ತನೆ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

ಬಿಹಾರದಲ್ಲಿ ಈ ಘಟನೆ ನಡೆದಿದ್ದು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಇನ್‌ಫ್ಲುಯೆನ್ಸರ್, ತನ್ನ ಪಕ್ಕದ ಸೀಟಿನಲ್ಲಿದ್ದ ವ್ಯಕ್ತಿಗೆ ವಿಂಡೋ ಸೀಟ್ ಬಿಟ್ಟುಕೊಡುವಂತೆ ಕೇಳಿದ್ದಾಳೆ. ಆದರೆ ಸೀಟ್‌ ಬಿಟ್ಟುಕೊಡಲು ನಿರಾಕರಿಸಿದ್ದಕ್ಕಾಗಿ ಆತನನ್ನು ಟೀಕಿಸಿದ್ದಾಳೆ.

ವಿಡಿಯೊ ನೋಡಿ:

ಕಿಟಕಿ ಬದಿಯ ಸೀಟು ಬಿಟ್ಟುಕೊಡಲು ನಿರಾಕರಿಸಿದ ಸಹಪ್ರಯಾಣಿಕನನ್ನು ಸರಿಯಾಗಿ ಬೈದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಹಂಚಿಕೊಂಡಿದ್ದಾಳೆ. ಬಸ್‌ನಲ್ಲಿ ಬಹುತೇಕ ಪುರುಷ ಪ್ರಯಾಣಿಕರಿದ್ದರಿಂದ ತನಗೆ ಮುಜುಗರವಾಗುತ್ತಿತ್ತು.ಈ ಸಂದರ್ಭದಲ್ಲಿ ವಿಂಡೋ ಸೀಟ್ ನೀಡುವುದು ಕನಿಷ್ಠ ನಾಗರಿಕ ಪ್ರಜ್ಞೆ ಎಂದು ಸಮರ್ಥಿಸಿಕೊಂಡಿದ್ದಾಳೆ. ಅಷ್ಟೇ ಅಲ್ಲದೆ, ಬಿಹಾರದಲ್ಲಿ ಪ್ರಯಾಣಿಸುವಾಗ ಯಾರೂ ಕೂಡ ಮೃದುವಾದ ನಡವಳಿಕೆಯನ್ನು ನಿರೀಕ್ಷಿಸಬಾರದು ಎಂದು ಬೇಸರ ವ್ಯಕ್ತಪಡಿಸಿದ್ದಾಳೆ.

ನಿದ್ದೆಯ ಮಂಪರಿನಲ್ಲಿ ಬೈಕ್ ಸವಾರನನ್ನು ಅರ್ಧ ಕಿಲೋ ಮೀಟರ್ ಎಳೆದೊಯ್ದ ಉಬರ್ ಚಾಲಕ

ವಿಂಡೋ ಸೀಟ್ ನೀಡಲು ಒಪ್ಪಿದ ಪ್ರಯಾಣಿಕನ ವಿಡಿಯೊ ಮಾಡಿ ಆತನ ನಡವಳಿಕೆಯನ್ನು ಟೀಕಿಸಿದ್ದಾಳೆ. ಈ ವಿಡಿಯೊ ನೆಟ್ಟಿಗರಿಂದ ತ್ವರಿತವಾಗಿ ಟೀಕೆಗೆ ಗುರಿಯಾಯಿತು. ಹಲವರು ಆ ವ್ಯಕ್ತಿ ತನ್ನ ಪ್ರಯಾಣಕ್ಕಾಗಿ ಕಾಯ್ದಿರಿಸಿದ ಆಸನವನ್ನು ಏಕೆ ಬಿಟ್ಟುಕೊಡಬೇಕೆಂದು ಪ್ರಶ್ನಿಸಿದರು. ಒಬ್ಬರಂತು ವೈಯಕ್ತಿಕ ವಿವಾದಗಳ ಸಮಯದಲ್ಲಿ ಅಪರಿಚಿತರ ವಿಡಿಯೊ ರೆಕಾರ್ಡ್ ಮಾಡುವುದು ಎಷ್ಟು ಸರಿ? ಈ ದೃಶ್ಯಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬೇಕೆ? ಎಂದು ಎಂದು ಪ್ರಶ್ನಿಸಿದ್ದಾರೆ.