ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Women's Asia Cup: ಪಾಕಿಸ್ತಾನ ನಾಯಕಿ ಫಾತಿಮಾ ಸನಾಗೆ ದಂಡ ವಿಧಿಸಿದ ಐಸಿಸಿ!

ಭಾರತ ವಿರುದ್ಧ 2026ರ ಮಹಿಳಾ ಏಷ್ಯಾ ಕಪ್‌ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಅನುಚಿತವಾಗಿ ವರ್ತಿಸಿದ ಪಾಕಿಸ್ತಾನ ತಂಡದ ನಾಯಕಿ ಫಾತಿಮಾ ಸನಾ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ದಂಡವನ್ನು ವಿಧಿಸಿದೆ. ಅವರು ಈ ಪಂದ್ಯದಲ್ಲಿ ದುರ್ನಡತೆಯ ಕಾರಣ ಅವರು ಈ ಶಿಕ್ಷೆಗೆ ಗುರಿಯಾಗಿದ್ದಾರೆ.

ಪಾಕಿಸ್ತಾನ ನಾಯಕಿ ಫಾತಿಮಾ ಸನಾಗೆ ದಂಡ ವಿಧಿಸಿದ ಐಸಿಸಿ!

ಪಾಕ್‌ ನಾಯಕಿ ಫಾತಿಮಾ ಸನಾಗೆ ದಂಡ ವಿಧಿಸಿದ ಐಸಿಸಿ. -

Profile
Ramesh Kote Sep 7, 2026 5:20 PM

ನವದೆಹಲಿ: ದುಬೈನಲ್ಲಿ ನಡೆದಿದ್ದ ಮಹಿಳಾ ಏಷ್ಯಾ ಕಪ್ (women's Asia Cup 2026) ಗ್ರೂಪ್ ಎ ಪಂದ್ಯದಲ್ಲಿ ಭಾರತ ವಿರುದ್ಧದ ಸೋಲಿನ ನಂತರ ಪಾಕಿಸ್ತಾನ ಮಹಿಳಾ ಕ್ರಿಕೆಟ್ (Pakistan women team) ತಂಡ ಮತ್ತೊಂದು ದೊಡ್ಡ ಹಿನ್ನಡೆಯನ್ನು ಅನುಭವಿಸಿದೆ. ಪಾಕಿಸ್ತಾನ ನಾಯಕಿ ಫಾತಿಮಾ ಸನಾ (fatima sana) ಅವರ ದುರ್ನಡತೆಯಿಂದಾಗಿ ಐಸಿಸಿ ದಂಡ ವಿಧಿಸಿದೆ. ಭಾರತದ ಚೇಸಿಂಗ್‌ ವೇಳೆ ನಡೆದ ಘಟನೆಯ ನಂತರ ಮ್ಯಾಚ್ ರೆಫರಿ ಅವರ ಪಂದ್ಯ ಶುಲ್ಕದ ಶೇಕಡಾ 10 ರಷ್ಟು ದಂಡವನ್ನು ವಿಧಿಸಿದೆ.

ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.5 ಅನ್ನು ಉಲ್ಲಂಘಿಸಿದ್ದಕ್ಕಾಗಿ ಫಾತಿಮಾ ಸನಾ ತಪ್ಪಿತಸ್ಥರೆಂದು ಕಂಡುಬಂದಿದೆ. ಈ ನಿಯಮವು ಬ್ಯಾಟ್ಸ್‌ಮನ್ ಅನ್ನು ಔಟ್ ಮಾಡಿದ ನಂತರ ಅವರನ್ನು ಅವಮಾನಿಸುವ ಅಥವಾ ಪ್ರಚೋದಿಸುವ ಭಾಷೆ, ಸನ್ನೆಗಳು ಅಥವಾ ಕ್ರಿಯೆಗಳ ಬಳಕೆಗೆ ಸಂಬಂಧಿಸಿದೆ. ಎರಡನೇ ಓವರ್‌ನಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಶಫಾಲಿ ವರ್ಮಾ ಅವರನ್ನು ಔಟ್ ಮಾಡಿದ ನಂತರ,ಫಾತಿಮಾ ಸಂಭ್ರಮಿಸುವ ಬದಲು, ಬ್ಯಾಟರ್‌ ಕಡೆಗೆ ಅನುಚಿತ ಸನ್ನೆ ಮಾಡಿ, ಪೆವಿಲಿಯನ್‌ಗೆ ಹಿಂತಿರುಗುವಂತೆ ಸೂಚಿಸಿದಾಗ ವಿವಾದ ಉಂಟಾಯಿತು.

ಟಿ20ಯಲ್ಲಿ 3 ಸಾವಿರ ರನ್‌ ಪೂರ್ತಿಗೊಳಿಸಿ ವಿಶ್ವ ದಾಖಲೆ ನಿರ್ಮಿಸಿದ ಶಫಾಲಿ ವರ್ಮಾ

ತಮ್ಮ ತಪ್ಪನ್ನು ಒಪ್ಪಿಕೊಂಡ ಫಾತಿಮಾ ಸನಾ

ಮೈದಾನದಲ್ಲಿದ್ದ ಅಂಪೈರ್‌ಗಳ ದೂರಿನ ಬಳಿಕ ಐಸಿಸಿ ಪಂದ್ಯ ರೆಫರಿ ಸುಪ್ರಿಯಾ ರಾಣಿ ದಾಸ್ ಅವರು ಫಾತಿಮಾ ಸನಾ ಅವರ ಈ ವರ್ತನೆಯನ್ನು ನಿಯಮ ಉಲ್ಲಂಘನೆ ಎಂದು ಪರಿಗಣಿಸಿದರು. ಆದರೆ ಪಾಕಿಸ್ತಾನ ನಾಯಕಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರಿಂದ, ಈ ಕುರಿತು ಔಪಚಾರಿಕ ವಿಚಾರಣೆ ನಡೆಸುವ ಅಗತ್ಯ ಎದುರಾಗಲಿಲ್ಲ. ಐಸಿಸಿಯ ಕಠಿಣ ಶಿಸ್ತು ನಿಯಮಗಳ ಅನ್ವಯ, ಮುಂದಿನ ದಿನಗಳಲ್ಲಿ ಉತ್ತಮ ವರ್ತನೆ ಕಾಯ್ದುಕೊಳ್ಳುವಂತೆ ಎಚ್ಚರಿಕೆ ನೀಡಲಾಗಿದ್ದು, ಫಾತಿಮಾ ಸನಾ ಅವರ ಶಿಸ್ತು ದಾಖಲೆಯಲ್ಲಿ 1 ಡಿಮೆರಿಟ್ ಪಾಯಿಂಟ್ ಕೂಡ ಸೇರ್ಪಡೆಯಾಗಿದೆ.

ಎರಡು ವರ್ಷಗಳಲ್ಲಿ ಎರಡನೇ ತಪ್ಪು

ಕಳೆದ 24 ತಿಂಗಳ ಅವಧಿಯಲ್ಲಿ ಫಾತಿಮಾ ಸನಾ ಅವರಿಂದ ನಡೆದಿರುವುದು ಇದು ಎರಡನೇ ನಿಯಮ ಉಲ್ಲಂಘನೆಯಾಗಿದೆ. ಇದಕ್ಕೂ ಮೊದಲು 2025ರ ಆಗಸ್ಟ್ 6ರಂದು ಡಬ್ಲಿನ್‌ನಲ್ಲಿ ಐರ್ಲೆಂಡ್ ವಿರುದ್ಧ ನಡೆದ ಟಿ20 ಪಂದ್ಯದಲ್ಲೂ ಅವರಿಗೆ 1 ಡಿಮೆರಿಟ್ ಪಾಯಿಂಟ್ ನೀಡಲಾಗಿತ್ತು.

ಈ ಹೊಸ ಕ್ರಮದೊಂದಿಗೆ 24 ತಿಂಗಳ ಅವಧಿಯಲ್ಲಿ ಫಾತಿಮಾ ಸನಾ ಅವರ ಖಾತೆಯಲ್ಲಿ ಒಟ್ಟು 2 ಡಿಮೆರಿಟ್ ಪಾಯಿಂಟ್‌ಗಳು ಸೇರಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನಿಯಮ ಉಲ್ಲಂಘನೆ ಮಾಡಿದರೆ ಇದು ಅವರ ಪಂದ್ಯಗಳಲ್ಲಿ ಭಾಗವಹಿಸುವಿಕೆಯ ಮೇಲೂ ಪರಿಣಾಮ ಬೀರಬಹುದು.

Women's Asia Cup: ಪಾಕಿಸ್ತಾನ ವಿರುದ್ಧ ಭಾರತ ಮಹಿಳಾ ತಂಡಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ!

ಮತ್ತೊಂದು ತಪ್ಪಾದರೆ ನಿಷೇಧದ ಸಾಧ್ಯತೆ

ಸಿಸಿಯ ಕಠಿಣ ಶಿಸ್ತು ನಿಯಮಗಳ ಪ್ರಕಾರ, 24 ತಿಂಗಳ ಅವಧಿಯಲ್ಲಿ ಆಟಗಾರರೊಬ್ಬರು 4 ಅಥವಾ ಅದಕ್ಕಿಂತ ಹೆಚ್ಚು ಡಿಮೆರಿಟ್ ಪಾಯಿಂಟ್‌ಗಳನ್ನು ಗಳಿಸಿದರೆ, ಅವುಗಳನ್ನು ಸಸ್ಪೆನ್ಷನ್ ಪಾಯಿಂಟ್‌ಗಳಾಗಿ ಪರಿವರ್ತಿಸಲಾಗುತ್ತದೆ. 2 ಸಸ್ಪೆನ್ಷನ್ ಪಾಯಿಂಟ್‌ಗಳು ಎಂದರೆ ಒಂದು ಟೆಸ್ಟ್ ಪಂದ್ಯ ಅಥವಾ ಎರಡು ಏಕದಿನ/ಟಿ20 ಪಂದ್ಯಗಳ ನಿಷೇಧಕ್ಕೆ ಕಾರಣವಾಗಬಹುದು.

ಹೀಗಾಗಿ ಫಾತಿಮಾ ಸನಾ ಇನ್ನು ಮುಂದಿನ ಪಂದ್ಯಗಳಲ್ಲಿ ತಮ್ಮ ಆಕ್ರಮಣಕಾರಿ ವರ್ತನೆಯನ್ನು ನಿಯಂತ್ರಿಸಬೇಕಾಗಿದೆ. ಮತ್ತೊಂದು ನಿಯಮ ಉಲ್ಲಂಘನೆ ಮಾಡಿದರೆ, ಅದು ಅವರನ್ನು ಪಂದ್ಯದಿಂದ ಹೊರಗುಳಿಯುವಂತೆ ಮಾಡುವ ಸಾಧ್ಯತೆಯಿದೆ.