ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bengaluru civic polls: ಗ್ರೇಟರ್‌ ಬೆಂಗಳೂರು ಚುನಾವಣೆ; ಮತದಾರರ ಕರಡು ಪಟ್ಟಿ ಪ್ರಕಟ

GBA Election 2026: ಗ್ರೇಟರ್‌ ಬೆಂಗಳೂರಿನ ವಾರ್ಡ್‌ವಾರು ಮತದಾರರ ಕರಡು ಪಟ್ಟಿಯನ್ನು ಜಿಬಿಎ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗಿದ್ದು, ಮತದಾರರು ಪರಿಶೀಲಿಸಿಕೊಳ್ಳಬೇಕು. ಗೊಂದಲವಿದ್ದರೆ ನಗರ ಪಾಲಿಕೆವಾರು ಸಹಾಯವಾಣಿಗೆ ಕರೆ ಮಾಡಿ ಪರಿಹರಿಸಿಕೊಳ್ಳಬಹುದು ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್‌. ಸಂಗ್ರೇಶಿ ತಿಳಿಸಿದ್ದಾರೆ.

ಗ್ರೇಟರ್‌ ಬೆಂಗಳೂರು ಚುನಾವಣೆ; ಮತದಾರರ ಕರಡು ಪಟ್ಟಿ ಪ್ರಕಟ

ಮತದಾರರ ಕರಡು ಪಟ್ಟಿ ಬಗ್ಗೆ ಜಿಬಿಎ ಪ್ರಕಟಣೆ. -

Prabhakara R
Prabhakara R Jan 20, 2026 8:37 PM

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆ (Bengaluru civic polls) ಹಿನ್ನೆಲೆಯಲ್ಲಿ ಮತದಾರರ ಕರಡು ಪಟ್ಟಿ ಬಿಡುಗಡೆ ಮಾಡಲಾಗಿದೆ. ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಮೇ 25ರ ನಂತರ ಜೂನ್ 30ರೊಳಗೆ ಚುನಾವಣೆ ನಡೆಸುವ ಸಾಧ್ಯತೆ ಇದೆ. ಹೀಗಾಗಿ 2025ರ ಅಕ್ಟೋಬರ್‌ 1ರ ಮಾಹಿತಿಯಂತೆ ಮತದಾರರ ಕರಡು ಪಟ್ಟಿ ತಯಾರಿಸಲಾಗಿದೆ.

ವಾರ್ಡ್‌ವಾರು ಮತದಾರರ ಕರಡು ಪಟ್ಟಿಯನ್ನು ಜಿಬಿಎ ಅಧಿಕೃತ ಜಾಲತಾಣದಲ್ಲಿ (https://gba.karnataka.gov.in/home) ಪ್ರಕಟಿಸಲಾಗಿದ್ದು, ಮತದಾರರು ಪರಿಶೀಲಿಸಿಕೊಳ್ಳಬೇಕು. ಗೊಂದಲವಿದ್ದರೆ ನಗರ ಪಾಲಿಕೆವಾರು ಸಹಾಯವಾಣಿ ಸ್ಥಾಪಿಸಲಾಗಿದ್ದು, ಕರೆ ಮಾಡಿ ಪರಿಹರಿಸಿಕೊಳ್ಳಬಹುದು ಎಂದು ಜಿಬಿಎ ತಿಳಿಸಿದೆ.

ನಗರ ಪಾಲಿಕೆವಾರು ಸಹಾಯವಾಣಿ

ಬೆಂಗಳೂರು ಕೇಂದ್ರ - 080 22975803
ಬೆಂಗಳೂರು ಉತ್ತರ - 080 22975936
ಬೆಂಗಳೂರು ದಕ್ಷಿಣ - 9480685704
ಬೆಂಗಳೂರು ಪೂರ್ವ - 9480685706
ಬೆಂಗಳೂರು ಪಶ್ಚಿಮ - 9480685703



GBA Elections: ಕೊನೆಗೂ ಜಿಬಿಎ ಚುನಾವಣೆಗೆ ಡೆಡ್‌ಲೈನ್‌ ಫಿಕ್ಸ್‌ ಮಾಡಿದ ಸುಪ್ರೀಂ ಕೋರ್ಟ್‌

ಮಾರ್ಚ್ 16ಕ್ಕೆ ಮತದಾರರ ಅಂತಿಮ ಪಟ್ಟಿ ಪ್ರಕಟ

ಇಂದಿನಿಂದ ಫೆಬ್ರುವರಿ 3ರವರೆಗೆ ಮತಗಟ್ಟೆ ಅಧಿಕಾರಿಗಳು (ಬಿಎಲ್‌ಒ) ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಈ ಅವಧಿಯಲ್ಲಿ ಹಕ್ಕು ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹಕ್ಕು ಹಾಗೂ ಆಕ್ಷೇಪಣೆಗಳ ವಿಲೇವಾರಿಯು ಫೆಬ್ರವರಿ 4ರಿಂದ 18ರವರೆಗೆ ನಡೆಯಲಿದ್ದು, ಮಾರ್ಚ್ 16ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್‌. ಸಂಗ್ರೇಶಿ ತಿಳಿಸಿದ್ದಾರೆ.

ಜಿಬಿಎ ವ್ಯಾಪ್ತಿಯ ವಾರ್ಡ್‌ಗಳ ವಿವರ: ಒಟ್ಟು-369

ಬೆಂಗಳೂರು ಕೇಂದ್ರ ನಗರ ಪಾಲಿಕೆ (ಒಟ್ಟು ವಾರ್ಡ್‌-63)

  • ಒಟ್ಟು ಮತದಾರರು: 14,25,483
  • ಪುರುಷರು: 7,26,352, ಮಹಿಳೆಯರು: 6,98,828, ಇತರೆ-303, ಮತಗಟ್ಟೆಗಳು- 1,305
  • 32,898: ವಾರ್ಡ್-52 ಪಾದರಾಯನಪುರದಲ್ಲಿ ಅತಿ ಹೆಚ್ಚು ಮತದಾರರು
  • 15,407: ವಾರ್ಡ್-15 ಇಂದಿರಾನಗರದಲ್ಲಿ ಅತಿ ಕಡಿಮೆ ಮತದಾರರು

ಬೆಂಗಳೂರು ಪೂರ್ವ ನಗರ ಪಾಲಿಕೆ (ಒಟ್ಟು ವಾರ್ಡ್-50)

  • ಒಟ್ಟು ಮತದಾರರು-10,41,738
  • ಪುರುಷರು: 5,49,313, ಮಹಿಳೆಯರು- 4,92,167, ಇತರೆ 258, ಮತಗಟ್ಟೆಗಳು-916
  • 35, 678: ವಾರ್ಡ್-6 ಕಲ್ಕೆರೆಯಲ್ಲಿ ಅತಿ ಹೆಚ್ಚು ಮತದಾರರು
  • 10,926 : ವಾರ್ಡ್-16 ಕೊತ್ತೂರಿನಲ್ಲಿ ಅತಿ ಕಡಿಮೆ ಮತದಾರರು

ಬೆಂಗಳೂರು ಪಶ್ಚಿಮ ನಗರ ಪಾಲಿಕೆ (ಒಟ್ಟು ವಾರ್ಡ್-111)

  • ಒಟ್ಟು ಮತದಾರರು-27,25,714
  • ಪುರುಷರು: 13,96,036, ಮಹಿಳೆಯರು : 13,29,210, ಇತರೆ-468, ಮತಗಟ್ಟೆಗಳು-2493
  • 49,530: ವಾರ್ಡ್- 23 ರಾಜರಾಜೇಶ್ವರಿನಗರದಲ್ಲಿ ಅತಿ ಹೆಚ್ಚು ಮತದಾರರು
  • 15,059: ವಾರ್ಡ್-3 ನೆಲಗದರನಹಳ್ಳಿಯಲ್ಲಿ ಅತಿ ಕಡಿಮೆ ಮತದಾರರು

ಬೆಂಗಳೂರು ಉತ್ತರ ನಗರ ಪಾಲಿಕೆ (ಒಟ್ಟು ವಾರ್ಡ್- 72 ವಾರ್ಡ್)

  • ಒಟ್ಟು ಮತದಾರರು: 19,54,206
  • ಪುರುಷರು: 9,94,310, ಮಹಿಳೆಯರು : 9,59,515, ಇತರೆ- 381, ಮತಗಟ್ಟೆಗಳು-1,716
  • 45,892: ವಾರ್ಡ್- 20 ಸಂಪಿಗೆಹಳ್ಳಿಯಲ್ಲಿ ಅತಿ ಹೆಚ್ಚು ಮತದಾರರು
  • 16,968: ವಾರ್ಡ್-60 ಜಾಲಹಳ್ಳಿಯಲ್ಲಿ ಅತಿ ಕಡಿಮೆ ಮತದಾರರು

ಬೆಂಗಳೂರು ದಕ್ಷಿಣ ನಗರ ಪಾಲಿಕೆ (ಒಟ್ಟು ವಾರ್ಡ್ -72)

ಒಟ್ಟು ಮತದಾರರು-17,44,270
ಪುರುಷರು: 9,03,182, ಮಹಿಳೆಯರು : 8,40,863, ಇತರೆ 225, ಮತಗಟ್ಟೆಗಳು 1,614
49,518 : ವಾರ್ಡ್-51 ಸುಬ್ರಹ್ಮಣ್ಯಪುರದಲ್ಲಿ ಅತಿ ಹೆಚ್ಚು ಮತದಾರರು
14,454 : ವಾರ್ಡ್-11 ಜಯನಗರ ಪೂರ್ವದಲ್ಲಿ ಅತಿ ಕಡಿಮೆ ಮತದಾರರು