ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮೈಸೂರು ರೇಷ್ಮೆ ಸೀರೆಗೆ ಡಿಮ್ಯಾಂಡಪ್ಪೊ ಡಿಮ್ಯಾಂಡ್: ಖರೀದಿಗೆ ಮುಂಜಾನೆ 4 ಗಂಟೆಯಿಂದಲೇ ಕ್ಯೂ ನಿಂತ ಗ್ರಾಹಕರು!

Viral Video: ಕರ್ನಾಟಕದ ಹೆಮ್ಮೆಯ ಮೈಸೂರು ಸಿಲ್ಕ್ ಸೀರೆಗಾಗಿ ಗ್ರಾಹಕರು ಮುಂಜಾನೆ 4 ಗಂಟೆಯಿಂದಲೇ ಬೆಂಗಳೂರಿನಲ್ಲಿರುವ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಶೋರೂಂ ಮುಂದೆ ಮುಗಿಬಿದ್ದಿರುವ ವಿಡಿಯೊ ವೈರಲ್‌ ಆಗಿದೆ. ಟೋಕನ್ ಹೊಂದಿರುವ ಗ್ರಾಹಕರಿಗೆ ಮಾತ್ರ ಖರೀದಿಗೆ ಅವಕಾಶವಿದೆ.

ಮೈಸೂರು ಸಿಲ್ಕ್ ಸೀರೆಗಾಗಿ ಮುಂಜಾನೆ 4 ಗಂಟೆಗೆ ಕ್ಯೂ ನಿಂತ ಜನ

ಸೀರೆಗಾಗಿ ಮುಂಜಾನೆ 4 ಗಂಟೆಗೆ ಕಾದು ನಿಂತ ಗ್ರಾಹಕರು -

Profile
Pushpa Kumari Jan 20, 2026 7:18 PM

ಬೆಂಗಳೂರು, ಜ. 20: ಸಾಮಾನ್ಯವಾಗಿ ಯಾವುದೇ ಬೆಲೆ ಬಾಳುವ ವಸ್ತುಗಳು ಕಡಿಮೆ ಬೆಲೆಗೆ ಸಿಗುತ್ತವೆ ಅಥವಾ ಸ್ಪೆಷಲ್‌ ಆಫರ್ ಇದೆ ಅಂದಾಗ ಜನರು ಅಂಗಡಿ ಮುಂದೆ ಮುಗಿಬೀಳೋದು ಸಾಮಾನ್ಯ. ಇದೀಗ ಬೆಂಗಳೂರಿನಲ್ಲಿ ಸೀರೆಗಾಗಿ ಮಹಿಳೆಯರು, ಪುರುಷರು ಸೇರಿದಂತೆ ಗ್ರಾಹಕರು ಜಮಾಯಿಸಿದ ಘಟನೆ ನಡೆದಿದೆ. ಕರ್ನಾಟಕದ ಹೆಮ್ಮೆಯ ಮೈಸೂರು ಸಿಲ್ಕ್ ಸೀರೆಗಳಿಗಾಗಿ ಮಹಿಳೆಯರು ಮತ್ತು ಪುರುಷರು ಮುಂಜಾನೆ 4 ಗಂಟೆಯಿಂದಲೇ ಬೆಂಗಳೂರಿನಲ್ಲಿರುವ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಶೋರೂಂ ಮುಂದೆ ಮುಗಿಬಿದ್ದಿದ್ದಾರೆ. ಟೋಕನ್ ಹೊಂದಿರುವ ಗ್ರಾಹಕರಿಗೆ ಮಾತ್ರ ಈ ಅವಕಾಶ ಇದ್ದು, ಹೆಚ್ಚಿನ ಜನರು ಸೇರಿದ್ದರು. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಇತ್ತೀಚೆಗೆ ಮೈಸೂರು ರೇಷ್ಮೆ ಸೀರೆಗಳಿಗೆ ಭಾರಿ ಡಿಮ್ಯಾಂಡ್‌ ಕಂಡು ಬಂದಿದೆ. ಬೆಂಗಳೂರಿನ ಕರ್ನಾಟಕ ರೇಷ್ಮೆ ಕೈಗಾರಿಕೆಗಳ ನಿಗಮದ (KSIC) ಶೋರೂಂಗಳಲ್ಲಿ ಹೊಸ ಸೀರೆಗಳ ಸ್ಟಾಕ್ ಬಂದಿದೆ. ಹೀಗಾಗಿ ಗ್ರಾಹಕರು ಬೆಳಗ್ಗೆ 4 ಗಂಟೆಯಿಂದಲೇ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಈ ಸಾಲು ಕಿಲೋ ಮೀಟರ್ ಗಟ್ಟಲೆ ವ್ಯಾಪಿಸಿರುವುದು ಕಂಡು ಬಂದಿದೆ.

ವಿಡಿಯೊ ನೋಡಿ:



ವಿಪರೀತ ಬೇಡಿಕೆ ಮತ್ತು ಸೀರೆಗಳ ಕೊರತೆಯಿಂದಾಗಿ KSIC ಆಡಳಿತ ಮಂಡಳಿ ಕೆಲವು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಜನಸಂದಣಿಯನ್ನು ನಿರ್ವಹಿಸಲು ಟೋಕನ್ ವ್ಯವಸ್ಥೆಯನ್ನು ಪರಿಚಯಿಸಿದೆ. ಟೋಕನ್ ಹೊಂದಿರುವ ಗ್ರಾಹಕರಿಗೆ ಮಾತ್ರ ಶೋರೂಮ್ ಒಳಗೆ ಅವಕಾಶವಿದೆ. ಅದೇ ರೀತಿ ಪ್ರತಿಯೊಬ್ಬ ಖರೀದಿದಾರನು ಒಂದೇ ಸೀರೆಯನ್ನು ಖರೀದಿಸಬೇಕು. ಸೀರೆಗಳ ಬೆಲೆ ಸುಮಾರು 23,000 ರುಪಾಯಿಂದ ಆರಂಭವಾಗಿ 2.5 ಲಕ್ಷ ರುಪಾಯಿವರೆಗೆ ಇದೆ.

ಸಿಎಂ ಯೋಗಿ- ಬಾಲಕನ ಮಧ್ಯೆ ನಡೆದ 'ಚಿಪ್ಸ್ ಡೀಲ್' ಸಕ್ಸಸ್

ವಿಡಿಯೊದಲ್ಲಿ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ಶೋ ರೂಂ ಹೊರಗೆ ಸಾಲು ಆರಂಭವಾಗಿರುವುದು ಕಂಡು ಬಂದಿದೆ. ವಯಸ್ಸಾದ ಮಹಿಳೆಯರು ಕೂಡ ಕೈಚೀಲಗಳನ್ನು ಹಿಡಿದುಕೊಂಡು ಮತ್ತು ತಮ್ಮ ಸರದಿಗಾಗಿ ಕಾಯುತ್ತಿರುವ ದೃಶ್ಯ ನೋಡಬಹುದು. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹಲವು ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಖಾಸಗಿ ಕಂಪನಿಗಳ ನಕಲಿ ವಸ್ತುಗಳಿಗಿಂತ ಸರ್ಕಾರದ ಗುಣಮಟ್ಟಕ್ಕೆ ಜನ ಸಾಲುಗಟ್ಟಿ ನಿಂತಿರುವುದು ಹೆಮ್ಮೆಯ ವಿಚಾರ ಎಂದಿದ್ದಾರೆ. ಮತ್ತೊಬ್ಬರು ಮೈಸೂರು ಸಿಲ್ಕ್ ಸಂಪೂರ್ಣವಾಗಿ ಅತಿಯಾಗಿ ಪ್ರಚಾರ ಮಾಡಲಾಗಿದೆ. ಹೀಗಾಗಿ ಜನ ಮುಗಿಬಿದ್ದಿದ್ದಾರೆ ಎಂದು ಬರೆದುಕೊಂಡಿದ್ದಾರೆ.