ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಟಿ20ಐ ಸರಣಿಯ ಆರಂಭಕ್ಕೂ ಮುನ್ನ ಡ್ಯಾರಿಲ್‌ ಮಿಚೆಲ್‌ ಬಗ್ಗೆ ಭಾರತಕ್ಕೆ ಮಿಚೆಲ್‌ ಸ್ಯಾಂಟ್ನರ್‌ ಎಚ್ಚರಿಕೆ!

India vs New zealand 1st T20I: ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಜನವರಿ 21 ರಂದು ನಡೆಯುವ ಮೊದಲನೇ ಟಿ20ಐ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯಕ್ಕೂ ಮುನ್ನ ಕಿವೀಸ್‌ ನಾಯಕ ಮಿಚಲ್‌ ಸ್ಯಾಂಟ್ನರ್‌ ಅವರು ಭಾರತ ತಂಡಕ್ಕೆ ಡ್ಯಾರಿಲ್‌ ಮಿಚೆಲ್‌ ಅವರ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ಡ್ಯಾರಿಲ್‌ ಮಿಚೆಲ್‌ ಬಗ್ಗೆ ಭಾರತಕ್ಕೆ ಸ್ಯಾಂಟ್ನರ್‌ ವಾರ್ನಿಂಗ್‌!

ಡ್ಯಾರಿಲ್‌ ಮಿಚೆಲ್‌ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಮಿಚೆಲ್‌ ಸ್ಯಾಂಟ್ನರ್‌. -

Profile
Ramesh Kote Jan 20, 2026 9:13 PM

ನಾಗ್ಪುರ: ಭಾರತದ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ (IND vs NZ) ತೋರಿದ ಬ್ಯಾಟಿಂಗ್‌ ಪ್ರದರ್ಶನವನ್ನು ಡ್ಯಾರಿಲ್‌ಮಿಚೆಲ್‌ ಟಿ20ಐ ಸರಣಿಯಲ್ಲಿಯೂ ಮುಂದುವರಿಸಲಿದ್ದಾರೆಂದು ನ್ಯೂಜಿಲೆಂಡ್‌ ತಂಡದ ನಾಯಕ ಮಿಚೆಲ್‌ ಸ್ಯಾಂಟ್ನರ್‌ (Mitchell Santner) ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಏಕದಿನ ಸರಣಿಯಲ್ಲಿ ಸ್ಯಾಂಟ್ನರ್‌ ಎರಡು ಶತಕ ಹಾಗೂ ಒಂದು ಅರ್ಧಶತಕ ಗಳಿಸಿದ್ದರು. ಆ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಮೊದಲನೇ ಪಂದ್ಯದಲ್ಲಿ 84 ರನ್‌, ಎರಡನೇ ಪಂದ್ಯದಲ್ಲಿ131 ರನ್‌ ಹಾಗೂ ಮೂರನೇ ಪಂದ್ಯದಲ್ಲಿ 137 ರನ್‌ಗಳನ್ನು ಕಲೆ ಹಾಕಿತ್ತು. ಇವರ ಬ್ಯಾಟಿಂಗ್‌ ಬಲದಿಂದ ಕಿವೀಸ್‌ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಮುಡಿಗೇರಿಸಿಕೊಂಡಿತ್ತು.

ಮೊದಲನೇ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಿಚೆಲ್‌ ಸ್ಯಾಂಟ್ನರ್‌, "ಡ್ಯಾರಿಲ್ ಏಕದಿನ ಸರಣಿಯ ಆರಂಭದಲ್ಲಿ ಸ್ಪಿನ್ ವಿರುದ್ಧ ಹೋರಾಡಿದರು. ಆದಾಗ್ಯೂ, ಅವರು ಕಷ್ಟಪಟ್ಟು ಕೆಲಸ ಮಾಡಿದರು ಮತ್ತು ನೀವು ಅವರ ಫಲಿತಾಂಶಗಳನ್ನು ನೋಡಬಹುದು. ಅವರು ಸ್ಪಿನ್ ಅನ್ನು ಚೆನ್ನಾಗಿ ಆಡುತ್ತಿದ್ದಾರೆ. ಅವರು ಏಕದಿನ ಪಂದ್ಯಗಳಲ್ಲಿ ಮಧ್ಯಮ ಓವರ್‌ಗಳಲ್ಲಿ ಆಟವನ್ನು ನಿಯಂತ್ರಿಸಬಹುದು. ಆಶಾದಾಯಕವಾಗಿ, ಅವರು ಟಿ20ಐ ಕ್ರಿಕೆಟ್‌ನಲ್ಲಿಯೂ ಇದೇ ರೀತಿಯ ಪ್ರದರ್ಶನ ನೀಡುತ್ತಾರೆಂಬ ವಿಶ್ವಾಸವಿದೆ," ಎಂದು ಹೇಳಿದ್ದಾರೆ.

vs NZ: ಇಶಾನ್‌ ಕಿಶನ್‌ ಇನ್‌, ಮೊದಲನೇ ಟಿ20ಐ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

ಭಾರತದ ವಿರುದ್ಧದ ಏಕದಿನ ಸರಣಿಯಲ್ಲಿ ಡ್ಯಾರಿಲ್ ಮಿಚೆಲ್ ಅವರ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನವನ್ನು ತೋರಿದ್ದರು. ಅವರು ಭರ್ಜರಿ ರನ್ ಗಳಿಸಿದ್ದಾರೆ. ಮೂರು ಪಂದ್ಯಗಳಲ್ಲಿ ಮಿಚೆಲ್ 176ರ ಸರಾಸರಿಯಲ್ಲಿ 352 ರನ್ ಗಳಿಸಿದ್ದಾರೆ. ಅವರು ಎರಡು ಶತಕಗಳು ಮತ್ತು ಒಂದು ಅರ್ಧಶತಕ ಗಳಿಸಿದ್ದಾರೆ. ಅವರು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಮಿಚೆಲ್ ಏಕದಿನ ಸ್ವರೂಪದಲ್ಲಿ ಭಾರತದ ವಿರುದ್ಧ ನಾಲ್ಕು ಶತಕಗಳನ್ನು ಗಳಿಸಿದ್ದಾರೆ.

ಟಿ20 ವಿಶ್ವಕಪ್ ಬಗ್ಗೆ ಅವರು ಏನು ಹೇಳಿದರು?

2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಫೆಬ್ರವರಿ 7 ರಂದು ಭಾರತ ಮತ್ತು ಶ್ರೀಲಂಕಾದಲ್ಲಿ ಆರಂಭವಾಗುತ್ತದೆ. ಈ ಬಗ್ಗೆ ಮಿಚೆಲ್ ಸ್ಯಾಂಟ್ನರ್, "ನಾವು ಇಲ್ಲಿ ಆಡಲು ಇಷ್ಟಪಡುತ್ತೇವೆ. ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾಗವಹಿಸುವ ಬಲಿಷ್ಠ ತಂಡವನ್ನು ನಾವು ಇದೀಗ ಎದುರಿಸುತ್ತಿದ್ದೇವೆ. ಅದರಲ್ಲಿಯೂ ವಿಶೇಷವಾಗಿ ಇದೇ ಕಂಡೀಷನ್ಸ್‌ನಲ್ಲಿ ನಾವು ಆಡುತ್ತಿದ್ದೇವೆ," ಎಂದರು.

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾರ ವಾರ್ಷಿಕ ಸಂಬಳಕ್ಕೆ ಕಡಿವಾಣ ಹಾಕಲಿರುವ ಬಿಸಿಸಿಐ?

"ನಿಸ್ಸಂಶಯವಾಗಿ ನಾನು ಈ ಸರಣಿಯನ್ನು ಗೆಲ್ಲಲು ಎದುರು ನೋಡುತ್ತಿದ್ದೇವೆ, ಆದರೆ ಇದೇ ಸಮಯದಲ್ಲಿ ಟಿ20 ವಿಶ್ವಕಪ್‌ ಟೂರ್ನಿಗೆ ತಯಾರಿಯನ್ನು ನಡೆಸುತ್ತಿದ್ದೇವೆ. ಟೂರ್ನಿಯಲ್ಲಿ ಹಾಗೂ ಇದೇ ಕಂಡೀಷನ್ಸ್‌ನಲ್ಲಿ ಯಾವ ತಂಡದ ವಿರುದ್ಧ ಆಡುತ್ತೇವೆ, ಅದೇ ತಂಡವನ್ನು ನಾವು ಇದೀಗ ಎದುರಿಸುತ್ತಿದ್ದೇವೆ, ಹಾಗಾಗಿ ಇದು ಅದ್ಭುತ ಸರಣಿಯಾಗಿದೆ," ಎಂದು ಮಿಚೆಲ್‌ ಸ್ಯಾಂಟ್ನರ್‌ ತಿಳಿಸಿದ್ದಾರೆ.

ಐಸಿಸಿ ಟಿ20 ವಿಶ್ವಕಪ್‌ ನ್ಯೂಜಿಲೆಂಡ್ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೇ, ಜಾಕೋಬ್ ಡಫಿ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಡ್ಯಾರಿಲ್ ಮಿಚೆಲ್, ಆಡಮ್ ಮಿಲ್ನೆ, ಜೇಮ್ಸ್ ನೀಶಮ್, ಗ್ಲೆನ್ ಫಿಲಿಪ್ಸ್, ರಾಚಿನ್ ರವೀಂದ್ರ, ಟಿಮ್ ಸೀಫರ್ಟ್ ಮತ್ತು ಇಶ್ ಸೋಧಿ.

ಮೀಸಲು ಆಟಗಾರ: ಕೈಲ್ ಜೇಮಿಸನ್