ಯುವತಿಯ ಎದೆ ಭಾಗ ನೋಡಿ ಬಟ್ಟೆ ಬಗ್ಗೆ ಅಶ್ಲೀಲ ಕಮೆಂಟ್ ಮಾಡಿದ 10 ವರ್ಷದ ಬಾಲಕ; ಬೆಂಗಳೂರಿನಲ್ಲಾದ ಮುಜುಗರದ ಸನ್ನಿವೇಶ ವಿವರಿಸಿದ ಸಂತ್ರಸ್ತೆ
Viral Video: ಸ್ಲೀವ್‌ಲೆಸ್ ಟಾಪ್ ಧರಿಸಿದ ಯುವತಿಯನ್ನು ಕೆಟ್ಟ ದೃಷ್ಟಿಯಿಂದ ನೋಡಿ 10ರಿಂದ 13 ವರ್ಷದೊಳಗಿನ ಬಾಲಕರು ಅಶ್ಲೀಲ ಕಮೆಂಟ್ ಮಾಡಿರುವ ಘಟನೆ ಬೆಂಗಳೂರಿನ ಆವಲಹಳ್ಳಿಯಲ್ಲಿ ನಡೆದಿದೆ. ಉತ್ತರ ಭಾರತದ ಯುವತಿ ಈ ಘಟನೆ ವಿವರಿಸಿ ವಿಡಿಯೊ ಮಾಡಿದ್ದಾಳೆ. ಸದ್ಯ ಇದು ವೈರಲ್ ಆಗಿದೆ.
ಘಟನೆ ಬಗ್ಗೆ ವಿವರಿಸಿದ ಯುವತಿ -
ಬೆಂಗಳೂರು, ಜ. 20: ಇಂದಿನ ತಲೆಮಾರಿನ ಮಕ್ಕಳು ಸಭ್ಯತೆ ಮೀರಿ ವರ್ತಿಸುತ್ತಾರೆ ಎನ್ನುವ ದೂರು ಸಾಮಾನ್ಯವಾಗಿ ಆಗಾಗ ಕೇಳುತ್ತಿರುತ್ತೇವೆ. ಅದಕ್ಕೆ ತಕ್ಕಂತೆ ಅನೇಕ ಮಕ್ಕಳು ವಯಸ್ಸನ್ನು ಮೀರಿ ಅಸಭ್ಯವಾಗಿ ನಡೆದುಕೊಳ್ಳುವ ಸಾಕಷ್ಟು ಉದಾಹರಣೆ ನೋಡಿದ್ದೇವೆ. ಈ ಘಟನೆಯೂ ಅದನ್ನೇ ಸಾರಿ ಹೇಳುತ್ತಿದೆ. ಸ್ಲೀವ್‌ಲೆಸ್ ಟಾಪ್ ಧರಿಸಿದ ಯುವತಿಯನ್ನು ಕೆಟ್ಟ ದೃಷ್ಟಿಯಿಂದ ನೋಡಿ 10ರಿಂದ 13 ವರ್ಷದೊಳಗಿನ ಬಾಲಕರು ಅಶ್ಲೀಲ ಕಮೆಂಟ್ ಮಾಡಿದ್ದು, ಇಂದಿನ ತಲೆಮಾರು ಎತ್ತ ಸಾಗುತ್ತಿದೆ ಎನ್ನುವ ಆತಂಕ ಮೂಡುವಂತೆ ಮಾಡಿದೆ. ಬೆಂಗಳೂರಿನಲ್ಲಿ ತನಗೆ ಎದುರಾದ ಈ ಮುಜುಗರದ ಸನ್ನಿವೇಶವನ್ನು ಉತ್ತರ ಭಾರತದ ಯುವತಿ ವಿವರಿಸಿ ವಿಡಿಯೊ ಮಾಡಿ (Viral Video) ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾಳೆ.
5 ಕಿ.ಮೀ. ಓಟ ಮುಗಿಸಿ ಆವಲಹಳ್ಳಿ ಅರಣ್ಯ ಪ್ರದೇಶಕ್ಕೆ ವಾಕಿಂಗ್‌ಗಾಗಿ ಆಗಮಿಸಿದ ಯುವತಿಗೆ ಈ ಕೆಟ್ಟ ಅನುಭವವಾಗಿದೆ. ಅದನ್ನು ಅವರು ವಿವರಿಸಿ ಮಕ್ಕಳ ವರ್ತನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ವೇಳೆ ಅವರು ಸ್ಲೀವ್‌ಲೆಸ್ ಟೀ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದರು.
ವೈರಲ್ ವಿಡಿಯೊ ಇಲ್ಲಿದೆ:
ಘಟನೆ ವಿವರ
5 ಕಿ.ಮೀ. ಓಟ ಮುಗಿಸಿದ ಯುವತಿ ವಾಕಿಂಗ್‌ಗಾಗಿ ಆವಲಹಳ್ಳಿ ಅರಣ್ಯಕ್ಕೆ ಬಂದಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ 10ರಿಂದ 13 ವರ್ಷದ ಬಾಲಕರು ಯುವತಿಯನ್ನೇ ದಿಟ್ಟಿಸಿ ನೋಡತೊಡಗಿದರು. ಅವರ ಎಲ್ಲರ ನೋಟ ಯುವತಿಯ ಎದೆ ಭಾಗದಕ್ಕೆ ನೆಟ್ಟಿದ್ದವಂತೆ. ಈ ವೇಳೆ 10 ವರ್ಷದ ಬಾಲಕ ಆಕೆಯ ಬಟ್ಟೆ ಬಗ್ಗೆ ಕೆಟ್ಟ ಕಮೆಂಟ್ ಮಾಡತೊಡಗಿದ. ಜತೆಗೆ ಆಕೆಯನ್ನು ನೋಡಿ ಅಪಹಾಸ್ಯ ಮಾಡಿ ನಗತೊಡಗಿದ. ಉತ್ತರ ಭಾರತೀಯಳಾಗಿದ್ದರಿಂದ ಆಕೆಗೆ ಕನ್ನಡ ಅರ್ಥವಾಗುವುದಿಲ್ಲ. ಹೀಗಾಗಿ ಬಾಲಕ ಏನು ಹೇಳಿದ್ದೆಂದು ಗೊತ್ತಾಗಿಲ್ಲ. ಆತನ ವರ್ತನೆ ಗಮನಿಸಿ ಅಶ್ಲೀಲ ಕಮೆಂಟ್ ಎನ್ನುವುದು ಯುವತಿಗೆ ಅರ್ಥವಾಗಿದೆ. ಇದು ಆಕೆಗೆ ಆಘಾತ ತಂದಿತ್ತಿದೆ. ಈ ವಿಚಾರವನ್ನು ಯುವತಿ ಬೋಲ್ಡ್ ಆಗಿ ಹೇಳಿಕೊಂಡಿದ್ದಾಳೆ.
ಮೈಸೂರು ರೇಷ್ಮೆ ಸೀರೆ ಖರೀದಿಗೆ ಮುಂಜಾನೆ 4 ಗಂಟೆಯಿಂದಲೇ ಕ್ಯೂ ನಿಂತ ಗ್ರಾಹಕರು!
ಯುವತಿ ಹೇಳಿದ್ದೇನು?
ʼʼನಾನು ಧರಿಸಿದ ಈ ಬಟ್ಟೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ವಾಕಿಂಗ್, ಜಾಗಿಂಗ್ ಮಾಡುವವರು ಸಾಮಾನ್ಯವಾಗಿ ಧರಿಸುವ ಬಟ್ಟೆ ಇದುʼʼ ಎಂದು ಹೇಳಿದ್ದಾಳೆ. ಮುಂದುವರಿದು, ʼʼನಮಗೆ ಭಾಷೆ ಅರ್ಥವಾಗದಿದ್ದರೂ ಕೆಲವರು ನಮ್ಮತ್ತ ನೋಡಿ ನಗುತ್ತಿದ್ದರೆ, ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದರೆ ಗೊತ್ತಾಗಿ ಬಿಡುತ್ತದೆ. ಅವರು ಮಕ್ಕಳು. ಅವರಿಗೆ ನಾನು ಏನು ಹೇಳಬೇಕಿತ್ತು? ದೊಡ್ಡದಾದ ಮೇಲೆ ಅವರಿಗೆ ಗೊತ್ತಾಗುತ್ತದೆ ಎಂದು ಕೊಂಡಿದ್ದೆ. ಆದರೆ ಅವರು ನನ್ನ ದೇಹದತ್ತ ನೋಡಿ, ಎದೆ ಭಾಗವನ್ನು ದಿಟ್ಟಿಸುತ್ತಿದ್ದಾಗ ನಿಜಕ್ಕೂ ಸಿಟ್ಟೇ ಬಂತು. ಹೀಗೆ ಮಾಡುವುದು ಸರಿಯಲ್ಲ ಎಂದು ಜೋರು ಮಾಡಿದೆʼʼ ಎಂದು ಹೇಳಿದ್ದಾರೆ.
"ಭಾರತದಲ್ಲಿ ಇದನ್ನು ಊಹಿಸಿರಲಿಲ್ಲ"; ತಾಯಿಯ ಎದುರೇ ಅಮೆರಿಕ ಮಹಿಳೆಯ ಎದೆಗೆ ಕೈ ಹಾಕಿದ ಅಪ್ರಾಪ್ತ ಬಾಲಕ!
ʼʼಈ ಘಟನೆ ನನ್ನ ಮನಸ್ಸಿಗೆ ಘಾಸಿ ಉಂಟು ಮಾಡಿದೆʼʼ ಎಂದು ತಿಳಿಸಿದ್ದಾರೆ. ಸದ್ಯ ಈ ವಿಡಿಯೊ ನೋಡಿ ನೆಟ್ಟಿಗರು ಕೂಡ ಆಘಾತ ವ್ಯಕ್ತಪಡಿಸಿದ್ದಾರೆ. ಮಕ್ಕಳ ವರ್ತನೆ ಬಗ್ಗೆ ಕಿಡಿ ಕಾರಿದ್ದಾರೆ. ಹಲವರು ಈ ವಿಚಾರದತ್ತ ಬೆಳಕು ಚೆಲ್ಲಿದ್ದಕ್ಕೆ ಯುವತಿಯ ನಡೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಕೆಲವರು ತಮಗೂ ಇದೇ ರೀತಿಯ ಅನುಭವವಾಗಿದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಮಕ್ಕಳ ವರ್ತನೆಗೆ ಸಾರ್ವತ್ರಿಕೆ ಖಂಡನೆ ವ್ಯಕ್ತವಾಗಿದೆ.