ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Minister K H Muniyappa: BIEC ನಲ್ಲಿ ಜೂ.11ರಿಂದ ಮೆಗಾ ಫುಡ್ ಎಕ್ಸ್‌ಪೋ 2026’ : ಸಚಿವ ಕೆ.ಎಚ್.ಮುನಿಯಪ್ಪ ಚಾಲನೆ

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ(Food and Civil Supplies Minister K.H. Muniyappa) ಅವರು ಸಮ್ಮೇಳನಕ್ಕೆ ಚಾಲನೆ ನೀಡಲಿದ್ದು, ದೇಶ, ವಿದೇಶಗಳ ತಯಾರಕರು, ಪೂರೈಕೆ ದಾರರು, ವಿತರಕರು, ನವೋದ್ಯಮಗಳು ಹಾಗೂ ಕೈಗಾರಿಕಾ ವೃತ್ತಿಪರರಿಗೆ ತಮ್ಮ ಇತ್ತೀಚಿನ ಉತ್ಪನ್ನಗಳು, ತಂತ್ರಜ್ಞಾನ ಮತ್ತು ನವೀನ ಆವಿಷ್ಕಾರಗಳನ್ನು ಪ್ರದರ್ಶಿಸಲು ಸಮಗ್ರ ವೇದಿಕೆಯನ್ನು ಇದು ಒದಗಿಸ ಲಿವೆ.

BIEC ನಲ್ಲಿ ಜೂ.11ರಿಂದ ಮೆಗಾ ಫುಡ್ ಎಕ್ಸ್‌ಪೋ 2026’

-

Profile
Ashok Nayak Jun 10, 2026 10:13 PM

ಬೆಂಗಳೂರು: ನಗರದ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಜೂ.11 ರಿಂದ 13ರ ವರೆಗೆ ಆಹಾರ, ಪಾನೀಯ, ಕೋಳಿ ಸಾಕಣೆ, ಹೈನುಗಾರಿಕೆ ಮತ್ತು ಅಡುಗೆ ಸಲಕರಣೆಗಳ ಪಾಲು ದಾರರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಐದು ಪ್ರಮುಖ ವಲಯಗಳ ವ್ಯಾಪಾರ ಮತ್ತು ಪ್ರದರ್ಶನ ಮೇಳ ಆಯೋಜಿಸಲಾಗಿದೆ.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ(Food and Civil Supplies Minister K.H. Muniyappa) ಅವರು ಸಮ್ಮೇಳನಕ್ಕೆ ಚಾಲನೆ ನೀಡಲಿದ್ದು, ದೇಶ, ವಿದೇಶಗಳ ತಯಾರಕರು, ಪೂರೈಕೆದಾರರು, ವಿತರಕರು, ನವೋದ್ಯಮಗಳು ಹಾಗೂ ಕೈಗಾರಿಕಾ ವೃತ್ತಿಪರರಿಗೆ ತಮ್ಮ ಇತ್ತೀಚಿನ ಉತ್ಪನ್ನಗಳು, ತಂತ್ರಜ್ಞಾನ ಮತ್ತು ನವೀನ ಆವಿಷ್ಕಾರಗಳನ್ನು ಪ್ರದರ್ಶಿಸಲು ಸಮಗ್ರ ವೇದಿಕೆಯನ್ನು ಇದು ಒದಗಿಸಲಿವೆ.

ಇದನ್ನೂ ಓದಿ: KH Muniyappa: ಐ ಆ್ಯಮ್​ ಹ್ಯಾಪಿ; ರಾಹುಲ್‌ ಗಾಂಧಿ ಜತೆ ಚರ್ಚೆ ಬಳಿಕ ರಾಜೀನಾಮೆಯಿಂದ ಹಿಂದೆ ಸರಿದ ಕೆ.ಎಚ್.ಮುನಿಯಪ್ಪ

ಆಹಾರ ಸಂಸ್ಕರಣೆ, ಚಹಾ-ಕಾಫಿ ಹಾಗೂ ಕೋಳಿ ಸಾಕಣೆ ಕ್ಷೇತ್ರಗಳ 100ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು, ಸುಧಾರಿತ ಯಂತ್ರೋ ಪಕರಣಗಳು, ನವೀನ ಪ್ಯಾಕೇಜಿಂಗ್ ಹಾಗೂ ಆಟೋಮೇಷನ್ ಪರಿಹಾರಗಳು, ವಿಶೇಷ ಆಹಾರ ಪದಾರ್ಥಗಳು ಸೇರಿದಂತೆ ಹಲವು ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತಿದೆ.

ಕರ್ನಾಟಕ ಪ್ರಗತಿಪರ ಹೈನುಗಾರರ ಸಂಘದ ಅಧ್ಯಕ್ಷ ಬಿ.ಜೆ. ಪೃಥ್ವಿ ಗೌಡ, ಎಫ್.ಕೆ.ಸಿ.ಸಿ.ಐ ಅಧ್ಯಕ್ಷ( President of FKCCI)ರಾದ ಉಮಾ ರೆಡ್ಡಿ, ಫೇರಿ ಅಧ್ಯಕ್ಷ ರಮೇಶ್ ಶಿವಣ್ಣ, ಕ್ರೇಶ್ಮಾ ಅಧ್ಯಕ್ಷ ಸುರೇಂದ್ರ ಕುಮಾರ್, ಕೆ.ಆರ್, ಕಾರ್ಯದರ್ಶಿ ಎ.ಸಿ. ಈಶ್ವರ್, ಆಟೋ ಡೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ವಿ.ಕೆ.ವೆಂಕಟೇಶ್ ಮತ್ತಿತರರು ಭಾಗವಹಿಸಲಿದ್ದಾರೆ.