ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ICAI: ರಾಷ್ಟ್ರ ಮಟ್ಟದ ಸಿಎಂಎ ಪರೀಕ್ಷೆ: ವಿ.ನಂದಿನಿ 36 ನೇ ರ‍್ಯಾಂಕ್

ಸಿಎಂಎ ಅಂತಿಮ ಫಲಿತಾಂಶ ಹೊರ ಹೊಮ್ಮಿದ್ದು, ಜಿ.ಸಿ. ರಾವ್ ಅಕಾಡೆಮಿಯ ನಂದಿನಿ ವಿ ಜೊತೆ ಮಂಜುನಾಥ್ ಎಚ್ ಕೆ, ಜಿ.ಎಂ. ರಾಜೇಶ್, ರಮ್ಯಾ , ಡಿ ಎ, ವಿನಯ್ ಕುಮಾರ್ ಜಿ.ವಿ., ರಾಜಿತ್ ಎನ್, ಶ್ರೀ ಲಕ್ಷ್ಮಿ ಎಚ್ ಹೆಗಡೆ, ಪೂರ್ಣಿಮಾ ಎಚ್ ಹಾಗೂ ಕಿರಣಾ ಎಸ್ ಭಟ್ ಅವರು ಕಾಸ್ಟ್ ಅಂಡ್ ಮ್ಯಾನೇಜ್ಮೆಂಟ್ ಅಕೌಂಟೆಂಟ್ ಪದವಿಗೆ ಅರ್ಹತೆ ಪಡೆದಿದ್ದಾರೆ.

ರಾಷ್ಟ್ರ ಮಟ್ಟದ ಸಿಎಂಎ ಪರೀಕ್ಷೆ: ವಿ.ನಂದಿನಿ 36 ನೇ ರ‍್ಯಾಂಕ್

-

Ashok Nayak
Ashok Nayak Feb 12, 2026 10:49 PM

ಬೆಂಗಳೂರು: ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ)ದ ರಾಷ್ಟ್ರ ಮಟ್ಟದ ಸಿಎಂಎ ಪರೀಕ್ಷೆಯಲ್ಲಿ ಕರ್ನಾಟಕ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದು, ಜಿ.ಸಿ. ರಾವ್ ಅಕಾಡೆಮಿಯ ವಿ. ನಂದಿನಿ 36 ನೇ ರ‍್ಯಾಂಕ್ ಗಳಿಸಿದ್ದಾರೆ.

ಸಿಎಂಎ ಅಂತಿಮ ಫಲಿತಾಂಶ ಹೊರ ಹೊಮ್ಮಿದ್ದು, ಜಿ.ಸಿ. ರಾವ್ ಅಕಾಡೆಮಿಯ ನಂದಿನಿ ವಿ ಜೊತೆ ಮಂಜುನಾಥ್ ಎಚ್ ಕೆ, ಜಿ.ಎಂ. ರಾಜೇಶ್, ರಮ್ಯಾ , ಡಿ ಎ, ವಿನಯ್ ಕುಮಾರ್ ಜಿ.ವಿ., ರಾಜಿತ್ ಎನ್, ಶ್ರೀ ಲಕ್ಷ್ಮಿ ಎಚ್ ಹೆಗಡೆ, ಪೂರ್ಣಿಮಾ ಎಚ್ ಹಾಗೂ ಕಿರಣಾ ಎಸ್ ಭಟ್ ಅವರು ಕಾಸ್ಟ್ ಅಂಡ್ ಮ್ಯಾನೇಜ್ಮೆಂಟ್ ಅಕೌಂಟೆಂಟ್ ಪದವಿಗೆ ಅರ್ಹತೆ ಪಡೆದಿದ್ದಾರೆ.

ಇದನ್ನೂ ಓದಿ: Bangalore News: ಡಾ.ವಿಷ್ಣು ಭರತ್ ಆಲಂಪಳ್ಳಿ ಅವರ ಲೈಫ್ ಟ್ವಿಸ್ಟ್ ಅಂಡ್ ಟರ್ನ್ ಎಂಬ ಪುಸ್ತಕ ಬಿಡುಗಡೆ

ಈ ಪ್ರಯತ್ನದಲ್ಲಿ ಅಕಾಡೆಮಿಯ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಗುಂಪುಗಳಲ್ಲಿ ಸಿಎಂಎ ಇಂಟರ್ ಹಾಗೂ ಫೈನಲ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಇದರೊಂದಿಗೆ ಸಿಎಂಎ ಇಂಟರ್ ಮತ್ತು ಫೈನಲ್ನಲ್ಲಿ ಅಕಾಡೆಮಿಯ ಒಟ್ಟು ಆಲ್ ಇಂಡಿಯಾ ಶ್ರೇಯಾಂಕಗಳ ಸಂಖ್ಯೆ 37ಕ್ಕೆ ಏರಿದೆ.

institute_of_cost_accountants_of_india

ಕಳೆದ 14 ವರ್ಷಗಳಿಂದ ಜಿ.ಸಿ. ರಾವ್ ಅಕಾಡೆಮಿ ರಾಜ್ಯದಲ್ಲಿ ಗುಣಮಟ್ಟದ ಸಿಎಂಎ ತರಬೇತಿ ನೀಡುತ್ತಾ ಬಂದಿದೆ. ನಗರದ ವಾಣಿಜ್ಯ ವಿದ್ಯಾರ್ಥಿಗಳನ್ನು ಉತ್ತೇಜಿಸಲು ಮತ್ತು ಪ್ರೇರೇಪಿಸುವ ಕಾರ್ಯದಲ್ಲಿ ನಿರತವಾಗಿದೆ ಜಿ.ಸಿ. ರಾವ್ ಅಕಾಡೆಮಿ. ನಿರ್ದೇಶಕರು ಸಿಎ ಸಿಎಂಎ ಜಿ.ಸಿ. ರಾವ್, ಸಂಪರ್ಕಿಸಬಹುದು 9741916916 / 8884695460 ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.