‘ಉತ್ಥಾನ' ಪ್ರಬಂಧ ಸ್ಪರ್ಧೆ-2025 ಫಲಿತಾಂಶ ಪ್ರಕಟ; ಪೂಜಾ ಮಹಾದೇವ ಸಾರವಾಡಗೆ ಪ್ರಥಮ ಬಹುಮಾನ
ಉತ್ಥಾನ ಮಾಸಪತ್ರಿಕೆಯಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ವಾರ್ಷಿಕ ಪ್ರಬಂಧ ಸ್ಪರ್ಧೆ–2025 ಆಯೋಜಿಸಲಾಗಿತ್ತು. ಶತಮಾನ ಪೂರೈಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ: ವಿಚಾರ, ವಿಶೇಷತೆ ಮತ್ತು ಕೊಡುಗೆ – ಎಂಬ ವಿಷಯದ ಕುರಿತು ನಡೆದ ಈ ಪ್ರಬಂಧ ಸ್ಪರ್ಧೆಯ ಫಲಿತಾಂಶವನ್ನು ಇದೀಗ ಪ್ರಕಟಿಸಲಾಗಿದೆ.
ಉತ್ಥಾನ ವಾರ್ಷಿಕ ಪ್ರಬಂಧ ಸ್ಪರ್ಧೆ–2025ರ ವಿಜೇತರು. -
ಬೆಂಗಳೂರು: ಉತ್ಥಾನ ಮಾಸಪತ್ರಿಕೆಯು ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ರಾಜ್ಯಮಟ್ಟದ ವಾರ್ಷಿಕ ಪ್ರಬಂಧ ಸ್ಪರ್ಧೆ–2025ಯ (Utthana Essay Competition 2025) ಫಲಿತಾಂಶ ಪ್ರಕಟವಾಗಿದೆ. ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಪೂಜಾ ಮಹಾದೇವ ಸಾರವಾಡ ಅವರು ಪ್ರಥಮ ಬಹುಮಾನ ಪಡೆದಿದ್ದಾರೆ. ಈ ಬಗ್ಗೆ ಉತ್ಥಾನ ಸಂಪಾದಕ ಅನಿಲ್ ಕುಮಾರ್ ಮೊಳಹಳ್ಳಿ ಅವರು ಮಾಹಿತಿ ನೀಡಿದ್ದಾರೆ.
ಶತಮಾನ ಪೂರೈಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ: ವಿಚಾರ, ವಿಶೇಷತೆ ಮತ್ತು ಕೊಡುಗೆ – ಎಂಬ ವಿಷಯದ ಕುರಿತು ನಡೆದ ಈ ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯದೆಲ್ಲೆಡೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಎಂ.ಎ. ವಿದ್ಯಾರ್ಥಿನಿ ಪೂಜಾ ಮಹಾದೇವ ಸಾರವಾಡ ಅವರು ಪ್ರಥಮ ಬಹುಮಾನವನ್ನು (15,000 ರೂ.), ಬೆಂಗಳೂರಿನ ಜ್ಯೋತಿ ನಿವಾಸ ಕಾಲೇಜಿನ ಎಂ.ಎಸ್ಸಿ, ಮನೋವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸಹನಾ ಎಂ. ಎರಡನೆಯ ಬಹುಮಾನವನ್ನು (12,000 ರೂ.) ಪಡೆದಿದ್ದಾರೆ. ಬೆಳಗಾವಿಯ ಸುಂದರಬಾಯಿ ಬಿ. ಪಾಟೀಲ್ ವುಮೆನ್ಸ್ ಕಾಲೇಜ್ ಆಫ್ ಎಜುಕೇಷನ್‌ಯ ಬಿ.ಇಡಿ ವಿದ್ಯಾರ್ಥಿನಿ ಕಾವೇರಿ ಎಂ. ಹೆಗಡೆ ಅವರು ತೃತೀಯ ಮೂರನೆಯ ಬಹುಮಾನವನ್ನು (10,000 ರೂ.) ಪಡೆದಿದ್ದಾರೆ.

ಹತ್ತು ಮಂದಿ ವಿದ್ಯಾರ್ಥಿಗಳು ಮೆಚ್ಚುಗೆಯ ಬಹುಮಾನಗಳಿಗೆ (ತಲಾ 2,000 ರೂ.) ಪಾತ್ರರಾಗಿದ್ದಾರೆ. ರಾಮನಗರದ ಕ್ರೆಸೆಂಟ್ ಕಾಲೇಜಿನ ಬಿ.ಇಡ್ ವಿದ್ಯಾರ್ಥಿನಿ ಯೋಗೇಶ್ವರಿ ಎಸ್., ಬಾದಾಮಿಯ ಶ್ರೀ ಕಾಳಿದಾಸ (ಬಿ.ಇಡಿ) ಶಿಕ್ಷಣ ಮಹಾವಿದ್ಯಾಲಯದ ಪವಿತ್ರಾ ಸ. ಜೇವೂಜಿ, ಕುಮಟಾದ ಕಮಲಾ ಬಾಳಿಗಾ ಕಾಲೇಜ್ ಆಫ್ ಎಜುಕೇಷನ್‌ನ ವೈಶಾಲಿ ಉಮೇಶ್ ಗೊಂಡ, ಭಟ್ಕಳದ ಶ್ರೀ ಗುರು ಸುಧೀಂದ್ರ ಆರ್ಟ್ಸ್, ಕಾಮರ್ಸ್ ಅಂಡ್ ಸೈನ್ಸ್ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿನಿ ಶ್ರೀರಕ್ಷಾ ಗಜಾನನ ಹೆಬ್ಬಾರ, ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನ ಬಿ.ಎ. ವಿದ್ಯಾರ್ಥಿ ಶಿವಾನಂದ ಎಸ್. ಲಿಂಗದಳ್ಳಿ, ಶಿರಸಿಯ ಸರ್ಕಾರೀ ಪ್ರಥಮ ದರ್ಜೆ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿ ರಿತೇಶ್ ಆರ್. ಶಾನಭೋಗ್, ಮೈಸೂರಿನ ಶಾರದಾ ವಿಲಾಸ ಕಾಲೇಜಿನ ಬಿ.ಸಿ.ಎ. ವಿದ್ಯಾರ್ಥಿನಿ ದೀಕ್ಷಿತಾ, ಕುಮಟಾದ ಡಾ. ಎ.ವಿ. ಬಾಳಿಗಾ ಕಾಲೇಜ್ ಆಫ್ ಆರ್ಟ್ಸ್ ಅಂಡ್ ಸೈನ್ಸ್‌ನ ಬಿ.ಎ. ವಿದ್ಯಾರ್ಥಿ ವಿನಾಯಕ ರಮೇಶ ನಾಯ್ಕ್, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿ ಉಜ್ವಲ್, ಮುಲ್ಕಿಯ ವಿಜಯಾ ಕಾಲೇಜಿನ ಬಿಸಿಎ ವಿದ್ಯಾರ್ಥಿನಿ ಅಕ್ಷತಾ ಪೋಮಸಿಂಗ್ ಚೌವ್ಹಾಣ್ - ಮೆಚ್ಚುಗೆಯ ಬಹುಮಾನಗಳಿಗೆ ಪಾತ್ರರಾಗಿದ್ದಾರೆ.
ಬಹುಮಾನ ವಿತರಣಾ ಕಾರ್ಯಕ್ರಮವು ಮಾರ್ಚ್ 7, 2026 ಶನಿವಾರ ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ನಡೆಯಲಿದೆ.