ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಫೋರ್ಟಿಸ್ ಆಸ್ಪತ್ರೆಯಲ್ಲಿ 35ನೇ ವರ್ಷದ ಸಂಭ್ರಮಾಚರಣೆ: 35 ಗಂಟೆಗಳ ಮೆಗಾ ಸಿಪಿಆರ್ ಮ್ಯಾರಥಾನ್ ಮತ್ತು ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳಿಗೆ ಚಾಲನೆ

ಫೋರ್ಟಿಸ್ ಕನ್ನಿಂಗ್‌ಹ್ಯಾಮ್ ರಸ್ತೆಯು ವಿವಿಧ ವಿಭಾಗಗಳಲ್ಲಿ ಚಿಕಿತ್ಸೆ ಪಡೆದು ಜೀವನ ಬದಲಾದ ರೋಗಿಗಳ ಸ್ಫೂರ್ತಿದಾಯಕ ಕಥೆಗಳ ಮೂಲಕ ತನ್ನ ಪ್ರಯಾಣವನ್ನು ಸ್ಮರಿಸಿತು. ಈ ಸಂಜೆಯ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಆರಂಭಿಕ ವರ್ಷಗಳಿಂದಲೂ ಒಡನಾಟ ಹೊಂದಿ ರುವ ವೈದ್ಯರು ಮತ್ತು ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಫೋರ್ಟಿಸ್ ಆಸ್ಪತ್ರೆಯಲ್ಲಿ 35ನೇ ವರ್ಷದ ಸಂಭ್ರಮಾಚರಣೆ

-

Ashok Nayak
Ashok Nayak Feb 25, 2026 11:26 AM

ಬೆಂಗಳೂರು: ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ಸಮಗ್ರ ವೈದ್ಯಕೀಯ ಸಂಸ್ಥೆಗಳಲ್ಲಿ ಒಂದಾಗಿರುವ ಫೋರ್ಟಿಸ್ ಆಸ್ಪತ್ರೆ ಕನ್ನಿಂಗ್‌ಹ್ಯಾಮ್ ರಸ್ತೆ, ಬೆಂಗಳೂರು ನಗರದಲ್ಲಿ ಯಶಸ್ವಿಯಾಗಿ 35 ವರ್ಷಗಳ ಬದ್ಧ ಆರೋಗ್ಯ ಸೇವೆಯನ್ನು ಪೂರೈಸಿದ ಸವಿನೆನಪಿಗಾಗಿ ಬೆಂಗಳೂರಿನ 'ದ ಚಾನ್ಸೆರಿ ಪೆವಿಲಿಯನ್' ಹೋಟೆಲ್‌ನಲ್ಲಿ ಅದ್ಧೂರಿ ಸಂಭ್ರಮಾಚರಣೆ ಯನ್ನು ಆಯೋಜಿಸಿತ್ತು.

ಈ ಕಾರ್ಯಕ್ರಮದಲ್ಲಿ ವೈದ್ಯರು, ಹಿರಿಯ ನಾಯಕತ್ವ, ಸಿಬ್ಬಂದಿ, ರೋಗಿಗಳು ಮತ್ತು ಹಿತೈಷಿಗಳು ಸೇರಿದಂತೆ ಸುಮಾರು 300 ಅತಿಥಿಗಳು ಭಾಗವಹಿಸಿದ್ದರು. ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್( Health and Family Welfare Minister Dinesh Gundu Rao) ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ, ಆಸ್ಪತ್ರೆಯ ವೈದ್ಯಕೀಯ ಶ್ರೇಷ್ಠತೆಯ ಪರಂಪರೆ ಮತ್ತು ನಗರದ ಆರೋಗ್ಯ ವ್ಯವಸ್ಥೆಗೆ ಅದರ ದೀರ್ಘಕಾಲದ ಕೊಡುಗೆಯನ್ನು ಶ್ಲಾಘಿಸಿದರು.

“ಉತ್ಕೃಷ್ಟ ವೈದ್ಯಕೀಯ ಸೇವೆ, ಬದುಕುಗಳನ್ನು ಬದಲಿಸಿದ ಸಾರ್ಥಕತೆ” ಎಂಬ ವಿಷಯದ ಅಡಿಯಲ್ಲಿ ನಡೆದ ಈ ಸಂಭ್ರಮಾಚರಣೆಯು, ಆಸ್ಪತ್ರೆಯು ಒಂದು ಅತ್ಯುತ್ಕೃಷ್ಟ ಹೃದಯ ಆರೈಕೆ ಕೇಂದ್ರದಿಂದ ಆಧುನಿಕ ಬಹು- ವಿಶೇಷತೆಯ ಮಲ್ಟಿ ಸ್ಪೆಷಾಲಿಟಿ ವೈದ್ಯಕೀಯ ಸಂಸ್ಥೆಯಾಗಿ ಬೆಳೆದುಬಂದ ಹಾದಿಯನ್ನು ಸಾರಿತು. ಜೊತೆಗೆ ರೋಗಿ ಕೇಂದ್ರಿತ ಆರೈಕೆ ಮತ್ತು ಉತ್ತಮ ಗುಣಮಟ್ಟದ ಫಲಿತಾಂಶ ಒದಗಿಸುವ ಕಡೆಗಿನ ತನ್ನ ಬದ್ಧತೆಯನ್ನು ಸಾರಿತು. ಕಾರ್ಯಕ್ರಮವು ಆತ್ಮೀಯವಾಗಿ, ಕೃತಜ್ಞತಾ ಪೂರ್ವಕವಾಗಿ ನಡೆಯಿತು ಮತ್ತು ಹಳೆಯ ನೆನಪುಗಳನ್ನು ನೆನೆಯಲಾಯಿತು.

ಇದನ್ನೂ ಓದಿ: Health Tips: ಹಿಪ್ಪಲಿಯ ಔಷಧೀಯ ಗುಣಗಳ ಬಗ್ಗೆ ಗೊತ್ತೆ?

ಫೋರ್ಟಿಸ್ ಕನ್ನಿಂಗ್‌ಹ್ಯಾಮ್ ರಸ್ತೆಯು ವಿವಿಧ ವಿಭಾಗಗಳಲ್ಲಿ ಚಿಕಿತ್ಸೆ ಪಡೆದು ಜೀವನ ಬದಲಾದ ರೋಗಿಗಳ ಸ್ಫೂರ್ತಿದಾಯಕ ಕಥೆಗಳ ಮೂಲಕ ತನ್ನ ಪ್ರಯಾಣವನ್ನು ಸ್ಮರಿಸಿತು. ಈ ಸಂಜೆಯ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಆರಂಭಿಕ ವರ್ಷಗಳಿಂದಲೂ ಒಡನಾಟ ಹೊಂದಿರುವ ವೈದ್ಯರು ಮತ್ತು ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಜೊತೆಗೆ 35 ವರ್ಷಗಳ ವೈದ್ಯಕೀಯ ಶ್ರೇಷ್ಠತೆ, ಆವಿಷ್ಕಾರಕ ಸೌಲಭ್ಯಗಳು ಮತ್ತು ರೋಗಿಗಳ ಅಚಲ ವಿಶ್ವಾಸದ ಬಗ್ಗೆ ಮೆಲುಕು ಹಾಕಲಾಯಿತು.

35 ವರ್ಷಗಳ ಸಾಧನೆಯ ಮೈಲಿಗಲ್ಲಿನ ಭಾಗವಾಗಿ, ಫೋರ್ಟಿಸ್ ಕನ್ನಿಂಗ್‌ಹ್ಯಾಮ್ ರಸ್ತೆಯು ತನ್ನ ಸೇವೆಯನ್ನು ಆಸ್ಪತ್ರೆಯ ಆವರಣದಿಂದ ಆಚೆಗೂ ವಿಸ್ತರಿಸುವ ಉದ್ದೇಶದಿಂದ ಹಲವಾರು ಸಮುದಾಯ ಆರೋಗ್ಯ ಯೋಜನೆಗಳನ್ನು ಆಯೋಜಿಸುತ್ತಿರುವುದಾಗಿ ಘೋಷಿಸಿತು. ಆ ಯೋಜನೆಗಳು ಹೀಗಿವೆ:

    • 35 ಗಂಟೆಗಳ ಮೆಗಾ ಸಿಪಿಆರ್ (ಸಿಪಿಆರ್) ಮತ್ತು ಬೇಸಿಕ್ ಲೈಫ್ ಸಪೋರ್ಟ್ (ಬಿಎಲ್ಎಸ್) ತರಬೇತಿ ಮ್ಯಾರಥಾನ್; ಇದರ ಮೂಲಕ ಸುಮಾರು 3,500 ಜನರಿಗೆ ತರಬೇತಿ ನೀಡುವ ನಿರೀಕ್ಷೆಯಿದ್ದು, ನಾಗರಿಕರಿಗೆ ಜೀವ ಉಳಿಸುವ ತುರ್ತು ಸ್ಪಂದನಾ ಕೌಶಲ್ಯಗಳನ್ನು ಒದಗಿಸಲಾಗುವುದು.
    • ಸಮಗ್ರ ಆರೋಗ್ಯ ತಪಾಸಣಾ ಪ್ಯಾಕೇಜ್‌ ಗಳ ಮೇಲೆ 35% ರಿಯಾಯಿತಿ, ಇದು 31 ಮಾರ್ಚ್ 2026 ರವರೆಗೆ ಲಭ್ಯವಿರುತ್ತದೆ.
    • ಬೆಂಗಳೂರಿನಾದ್ಯಂತ ಹಿಂದುಳಿದ ವರ್ಗದ ಮತ್ತು ಸಲಭ್ಯ ವಂಚಿತ ಸಮುದಾಯಗಳಿಗಾಗಿ 35 ಆರೋಗ್ಯ ಶಿಬಿರಗಳು.
    • 35 ವೃದ್ಧಾಶ್ರಮಗಳಿಗೆ ವಾರ್ಷಿಕ ಉಚಿತ ಆರೋಗ್ಯ ತಪಾಸಣಾ ಸೇವೆಗಳು.
dinesh and Fortis

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು, “35 ವರ್ಷಗಳನ್ನು ಪೂರೈಸುವುದು ಕೇವಲ ಒಂದು ಮೈಲಿಗಲ್ಲು ಮಾತ್ರವಲ್ಲ, ಜೊತೆಗೆ ಇದು ಬೆಂಗಳೂರಿನ ಜನರು ಫೋರ್ಟಿಸ್ ಕನ್ನಿಂಗ್‌ಹ್ಯಾಮ್ ರಸ್ತೆಯ ಮೇಲೆ ಇಟ್ಟಿರುವ ನಂಬಿಕೆಯ ಪ್ರತೀಕ ವಾಗಿದೆ. ಇಂದು ಪ್ರಾರಂಭಿಸಿದ ಸಾರ್ವಜನಿಕ ಆರೋಗ್ಯ ಯೋಜನೆಗಳು ತಡೆಗಟ್ಟುವ ಆರೋಗ್ಯ ರಕ್ಷಣೆಯನ್ನು ಬಲಪಡಿಸುವ ಮತ್ತು ಹೆಚ್ಚಿನ ಜನರಿಗೆ ಜೀವ ಉಳಿಸುವ ಕೌಶಲ್ಯಗಳನ್ನು ನೀಡುವ ಅರ್ಥಪೂರ್ಣ ಕ್ರಮಗಳಾಗಿವೆ” ಎಂದು ಹೇಳಿದರು.

ಈ ಮೈಲಿಗಲ್ಲು ಸಾಧನೆ ಕುರಿತು ಮಾತನಾಡಿದ ಫೋರ್ಟಿಸ್ ಆಸ್ಪತ್ರೆ ಕನ್ನಿಂಗ್‌ ಹ್ಯಾಮ್ ರಸ್ತೆಯ ಫೆಸಿಲಿಟಿ ಡೈರೆಕ್ಟರ್ ಪ್ರವೀಣ್ ವಾಲಿ ಅವರು, “ಫೋರ್ಟಿಸ್ ಕನ್ನಿಂಗ್‌ ಹ್ಯಾಮ್ ರಸ್ತೆಯು 35 ವರ್ಷಗಳನ್ನು ಪೂರೈಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಕ್ಷಣವಾಗಿದೆ. ಬೆಂಗಳೂರಿನಲ್ಲಿ ನಮ್ಮ ಪ್ರಯಾಣದಲ್ಲಿ ಈ ಆಸ್ಪತ್ರೆಯು ನಿರ್ಣಾಯಕ ಪಾತ್ರ ವಹಿಸಿದೆ ಮತ್ತು ನಮ್ಮ ಪ್ರಮುಖ ತೃತೀಯ ಹಂತದ ಆರೈಕೆ ಕೇಂದ್ರಗಳಲ್ಲಿ ಒಂದಾಗಿ ಉಳಿದಿದೆ. ವರ್ಷಗಳಲ್ಲಿ, ಇದು ವೈದ್ಯಕೀಯ ಶ್ರೇಷ್ಠತೆ, ರೋಗಿಗಳ ವಿಶ್ವಾಸ ಮತ್ತು ನಗರದ ಬೆಳೆಯುತ್ತಿರುವ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ನಿರಂತರ ಬೆಳೆಯುತ್ತಿರುವ ಬಲವಾದ ಪರಂಪರೆಯನ್ನು ನಿರ್ಮಿಸಿದೆ. ಈ ಸಾಧನೆಯ ನೆನಪಿನ ಭಾಗವಾಗಿ ಪ್ರಾರಂಭಿಸ ಲಾದ ಸಮುದಾಯ ಯೋಜನೆಗಳು ತಡೆಗಟ್ಟುವ ಆರೋಗ್ಯ ರಕ್ಷಣೆ, ಮುನ್ನೆಚ್ಚರಿಕೆಯ ರೋಗನಿರ್ಣಯ ಮತ್ತು ಗುಣಮಟ್ಟದ ಆರೈಕೆಯ ವ್ಯಾಪಕ ಲಭ್ಯತೆಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತವೆ” ಎಂದು ಹೇಳಿದರು.

ಫೋರ್ಟಿಸ್ ಕನ್ನಿಂಗ್‌ಹ್ಯಾಮ್ ರಸ್ತೆಯು ಎನ್ಎಬಿಎಚ್ ಮಾನ್ಯತೆ ಪಡೆದ 148 ಹಾಸಿಗೆಗಳ ಬಹು ವಿಶೇಷತೆಯ ಆಸ್ಪತ್ರೆಯಾಗಿದ್ದು, ಇದರಲ್ಲಿ 36 ಐಸಿಯು ಹಾಸಿಗೆಗಳು ಮತ್ತು 8 ಎಚ್ ಡಿ ಯು ಹಾಸಿಗೆಗಳಿವೆ. ಇದು ಐದು ಸುಧಾರಿತ ಶಸ್ತ್ರಚಿಕಿತ್ಸಾ ಕೊಠಡಿಗಳು ಮತ್ತು ಹೆಚ್ಚು ನುರಿತ ವೈದ್ಯಕೀಯ ಹಾಗೂ ಸಹಾಯಕ ತಂಡವನ್ನು ಹೊಂದಿದೆ. ಹೃದಯರೋಗ ಶಾಸ್ತ್ರ, ನರಶಸ್ತ್ರಚಿಕಿತ್ಸೆ, ಮೂಳೆಚಿಕಿತ್ಸೆ, ಕ್ಯಾನ್ಸರ್ ಶಾಸ್ತ್ರ, ಮೂತ್ರಶಾಸ್ತ್ರ, ಗ್ಯಾಸ್ಟ್ರೋಎಂಟರಾಲಜಿ, ಸ್ತ್ರೀರೋಗ ಶಾಸ್ತ್ರ, ಸಾಮಾನ್ಯ ಮತ್ತು ಲ್ಯಾಪ್ರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ಸೇರಿದಂತೆ ಪ್ರಮುಖ ವಿಭಾಗಗಳಲ್ಲಿ ಆಸ್ಪತ್ರೆಯು ಶ್ರೇಷ್ಠತೆಗೆ ಹೆಸರುವಾಸಿಯಾಗಿದೆ.

ಇದರ ಶ್ರೇಷ್ಠತಾ ಕೇಂದ್ರಗಳು ಸುಧಾರಿತ ರೊಬೊಟಿಕ್ ಮತ್ತು ಕನಿಷ್ಠ ಆಕ್ರಮಣಕಾರಿ ತಂತ್ರಜ್ಞಾನಗಳು, ಸುಧಾರಿತ ಇಂಟರ್ವೆನ್ಷನಲ್ ಕಾರ್ಡಿಯಾಲಜಿ, ಸಮಗ್ರ ತುರ್ತು ಆರೈಕೆ ಸೇವೆಗಳು, 24x7 ತುರ್ತು ಚಿಕಿತ್ಸೆ ಮತ್ತು ಎನ್ ಎ ಬಿ ಎಚ್- ಎನ್ ಎ ಬಿ ಎಲ್ ಮಾನ್ಯತೆ ಗಳನ್ನು ಹೊಂದಿವೆ. ಫೋರ್ಟಿಸ್ ಆಸ್ಪತ್ರೆ ಕನ್ನಿಂಗ್‌ ಹ್ಯಾಮ್ ರಸ್ತೆಯು ತನ್ನ ಮುಂದಿನ ಅಧ್ಯಾಯಕ್ಕೆ ಕಾಲಿಡುತ್ತಿರುವಾಗ, ವೈದ್ಯಕೀಯ ಶ್ರೇಷ್ಠತೆಯನ್ನು ಮುಂದುವರಿಸಲು, ಸಾರ್ವಜನಿಕ ಸಂಪರ್ಕವನ್ನು ಬಲಪಡಿಸಲು ಮತ್ತು ಪ್ರತೀ ರೋಗಿ, ಪ್ರತೀ ಕುಟುಂಬ ಮತ್ತು ಪ್ರತೀ ಪೀಳಿಗೆಯ ಜೀವನವನ್ನು ಪರಿವರ್ತಿಸಲು ಬದ್ಧವಾಗಿದೆ.