ನಿಮ್ಮಲ್ಲಿ ಕಥೆ ಇದ್ಯಾ? ನೀವು ನಿರ್ದೇಶಕರಾಗಬೇಕಾ? ನಿಮಗಾಗಿ ಬರ್ತಿದೆ ʻಜೀ ಕಿರುಚಿತ್ರ ಸ್ಪರ್ಧೆʼ; ತೀರ್ಪುಗಾರರು ಹೇಳಿದ್ದೇನು?
Zee Short Film Contest: ಭಾರತದಾದ್ಯಂತ ಇರುವ ಉದಯೋನ್ಮುಖ ನಿರ್ದೇಶಕರಿಗೆ ತಮ್ಮ ಅದ್ಭುತ ಪ್ರತಿಭೆ ಪ್ರದರ್ಶಿಸಲು ಜೀ ಸಂಸ್ಥೆ ರಾಷ್ಟ್ರೀಯ ಮಟ್ಟದ ವೇದಿಕೆ ಕಲ್ಪಿಸುತ್ತಿದೆ. ಕನ್ನಡ ಸೇರಿದಂತೆ ಏಳು ಪ್ರಮುಖ ಪ್ರಾದೇಶಿಕ ಭಾಷೆಗಳಲ್ಲಿ ನಡೆಯುತ್ತಿರುವ ಈ ಪ್ರತಿಷ್ಠಿತ ಸ್ಪರ್ಧೆಗೆ ಘಟಾನುಘಟಿ ನಿರ್ದೇಶಕರು ತೀರ್ಪುಗಾರರಾಗಿದ್ದಾರೆ. ವಿಜೇತರಿಗೆ ನಗದು ಬಹುಮಾನದ ಜೊತೆಗೆ ಭವಿಷ್ಯದಲ್ಲಿ ಜೀ ಸಂಸ್ಥೆಯೊಟ್ಟಿಗೆ ಕೆಲಸ ಮಾಡುವ ಸುವರ್ಣಾವಕಾಶವೂ ಸಿಗಲಿದೆ.
-
ಜೀ ಸಂಸ್ಥೆಯು 'ಜೀ ಕಿರುಚಿತ್ರ ಸ್ಪರ್ಧೆ'ಯನ್ನು (Zee Short Film Contest) ಆಯೋಜಿಸುತ್ತಿದ್ದು, ದೇಶದಾದ್ಯಂತ ಉದಯೋನ್ಮುಖ ಪ್ರತಿಭೆಗಳನ್ನು ಗುರುತಿಸಿ, ಅವರನ್ನು ಗೌರವಿಸುವ ಉದ್ದೇಶವನ್ನು ಹೊಂದಿದೆ. ಭಾರತದ ವಿವಿಧ ಪ್ರಾದೇಶಿಕ ಸಿನಿಮಾಕರ್ಮಿಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವ ಈ ಸ್ಪರ್ಧೆ, ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ಬಹುಭಾಷಾ ಪ್ರತಿಭಾ ಅನ್ವೇಷಣೆಯ ಅತ್ಯಂತ ಮಹತ್ವಾಕಾಂಕ್ಷಿ ಪ್ರಯತ್ನಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತಿದೆ.
ಹಿಂದಿ, ಮರಾಠಿ, ಬೆಂಗಾಲಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಸೇರಿದಂತೆ ಏಳು ಪ್ರಮುಖ ಭಾಷೆಗಳಲ್ಲಿ ಈ ಸ್ಪರ್ಧೆ ನಡೆಯಲಿದ್ದು, ಈ ಮೂಲಕ ಕಥೆಗಾರರಿಗೆ ರಾಷ್ಟ್ರೀಯ ಮಟ್ಟದ ಅವಕಾಶ ಸಿಗಲಿದೆ.
ತೀರ್ಪುಗಾರರಾಗಿ ಯಾರು ಬರಲಿದ್ದಾರೆ?
ಈ ಸ್ಪರ್ಧೆಯ ಪ್ರಮುಖ ಆಕರ್ಷಣೆ ಎಂದರೆ ವಿವಿಧ ಜನಪ್ರಿಯ ನಿರ್ದೇಶಕರು ಇಲ್ಲಿ ತೀರ್ಪುಗಾರರಾಗಿ ಇರುವುದು. 'ಗ್ಯಾಂಗ್ಸ್ ಆಫ್ ವಾಸೇಪುರ್' ಚಿತ್ರ ಖ್ಯಾತಿಯ ಅನುರಾಗ್ ಕಶ್ಯಪ್, 'ನಟರಂಗ್' ಚಿತ್ರದಿಂದ ಹೆಸರುವಾಸಿಯಾದ ಮರಾಠಿಯ ರವಿ ಜಾಧವ್, 'ಆಟೋಗ್ರಾಫ್' ಮತ್ತು 'ಜಾತಿಶ್ವರ್' ಚಿತ್ರದ ಮೂಲಕ ಪ್ರಶಂಸಿಸಲ್ಪಟ್ಟ ಬೆಂಗಾಲಿಯ ಸೃಜಿತ್ ಮುಖರ್ಜಿ, ʻಮಹಾನಟಿʼ, 'ಕಲ್ಕಿ 2898 AD'ನಂತಹ ಜಾಗತಿಕ ಮಟ್ಟದ ಸಿನಿಮಾ ನೀಡಿದ ತೆಲುಗಿನ ನಾಗ್ ಅಶ್ವಿನ್, ಪ್ರಭಾವಶಾಲಿ ಸಿನಿಮಾಗಳಿಗೆ ಹೆಸರಾದ ತಮಿಳಿನ ಸಮುದ್ರಖನಿ, 'ಜಲ್ಲಿಕಟ್ಟು' ಮೂಲಕ ಅಂತರಾಷ್ಟ್ರೀಯ ಮನ್ನಣೆ ಪಡೆದ ಮಲಯಾಳಂನ ಲಿಜೋ ಜೋಸ್ ಪೆಲ್ಲಿಸ್ಸೇರಿ ಮತ್ತು 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಮತ್ತು 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರಗಳ ಮೂಲಕ ಭಾವನಾತ್ಮಕ ಕಥೆಗೆ ಹೆಸರುವಾಸಿಯಾದ ಕನ್ನಡದ ಹೆಮಂತ್ ರಾವ್ ತೀರ್ಪುಗಾರರಾಗಿ ಭಾಗವಹಿಸುತ್ತಿದ್ದಾರೆ.
Anchor Anushree: ಜೀ ಕನ್ನಡ ವಾಹಿನಿಯಿಂದ ಮಡಿಲು ತುಂಬುವ ಶಾಸ್ತ್ರ- ತಾಳಿ ಹಿಡಿದು ಅನುಶ್ರೀ ಭಾವುಕ!
ಸ್ಪರ್ಧೆಯಲ್ಲಿ ಭಾಗಿಯಾದವರಿಗೆ ಏನು ಸಿಗಲಿದೆ?
ಮೊದಲ ಬಾರಿಗೆ, ಇಂತಹ ದಿಗ್ಗಜ ನಿರ್ದೇಶಕರು ಉದಯೋನ್ಮುಖ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಲು ಒಂದೇ ವೇದಿಕೆಯಡಿ ಜೊತೆಯಾಗಿದ್ದಾರೆ. ಈ ಸ್ಪರ್ಧೆಯು ಭವಿಷ್ಯದ ಪ್ರತಿಭೆಗಳನ್ನು ಬೆಳೆಸುವ ಜೀ ನ ಉದ್ದೇಶವನ್ನು ಸೂಚಿಸುತ್ತದೆ. ಈ ಸ್ಪರ್ಧೆಯ ಮೂಲಕ ಯುವ ಮತ್ತು ಉತ್ಸಾಹಿ ಪ್ರತಿಭಾವಂತರಿಗೆ ತಮ್ಮ ಕರಕುಶಲತೆಯನ್ನು ಪ್ರದರ್ಶಿಸಲು ಅವಕಾಶ ಸಿಗಲಿದೆ. ಇದರಲ್ಲಿ ಭಾಗವಹಿಸುವವರು ಸಿನಿಮಾಗಳಲ್ಲಿ ಕೆಲಸ ಮಾಡಲು ಮಾನ್ಯತೆ, ನಗದು ಬಹುಮಾನಗಳು ಮತ್ತು ಜೀ ತಂಡದಲ್ಲಿ ಕೆಲಸ ಮಾಡುವ ಅವಕಾಶಗಳನ್ನು ಪಡೆಯಲಿದ್ದಾರೆ.
ಜೀ ತಂಡ ಹೇಳೋದೇನು?
ಈ ಬಗ್ಗೆ ಮಾತನಾಡಿದ ಜೀ ಮತ್ತು ಜೀ5 ನ ಚೀಫ್ ಮಾರ್ಕೆಟಿಂಗ್ ಆಫೀಸರ್ ಕಾರ್ತಿಕ್ ಮಹದೇವ್, "ಭಾರತವು ವಿಶ್ವದ ಅತ್ಯಂತ ವೈವಿಧ್ಯಮಯ ಕಥೆ ಹೇಳುವ ಸಂಸ್ಕೃತಿಗಳಿಗೆ ನೆಲೆಯಾಗಿದೆ. ಜೀ ಕಿರುಚಿತ್ರ ಸ್ಪರ್ಧೆಯ ಮೂಲಕ ನಾವು ಈ ಪ್ರತಿಭೆಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಅವಕಾಶಗಳನ್ನು ಒದಗಿಸುತ್ತಿದ್ದೇವೆ. ಇದು ಕೇವಲ ಸ್ಪರ್ಧೆಯಲ್ಲ, ಬದಲಿಗೆ ಭಾರತೀಯ ಸಿನಿಮಾದ ಭವಿಷ್ಯವನ್ನು ರೂಪಿಸುವ ಮುಂದಿನ ತಲೆಮಾರಿನ ಕಥೆಗಾರರನ್ನು ಬೆಳೆಸುವ ಒಂದು ಕಾರ್ಯತಂತ್ರದ ಹೆಜ್ಜೆಯಾಗಿದೆ" ಎಂದು ಹೇಳಿದ್ದಾರೆ.
Zee Kannada Serial: ಜೀ ಕನ್ನಡದಲ್ಲಿ ಎರಡು ಹೊಸ ಧಾರಾವಾಹಿಗಳು ಬಂದಾಯ್ತು! ಅಂತ್ಯ ಹಾಡೋ ಸೀರಿಯಲ್‌ಗಳು ಯಾವವು?
ತೀರ್ಪುಗಾರರು ಹೇಳಿದ್ದೇನು?
ಅನುರಾಗ್ ಕಶ್ಯಪ್: "ಒಂದು ಕಿರುಚಿತ್ರವು ನನಗೆ ನನ್ನ ಮೊದಲ ದೊಡ್ಡ ಸಿನಿಮಾದ ಅವಕಾಶವನ್ನು ತಂದುಕೊಟ್ಟಿತು. ಸಿನಿಮಾ ನಿರ್ದೇಶಕರಾಗುವವರಿಗೆ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಲು ಇದು ಒಂದು ಸುವರ್ಣ ಅವಕಾಶ".
ಸೃಜಿತ್ ಮುಖರ್ಜಿ: "ಸಿನಿಮಾ ನಿರ್ದೇಶನವು ಯಾವಾಗಲೂ ಹೃದಯಕ್ಕೆ ಸಂಬಂಧಿಸಿದ ವಿಷಯ. ನಿಮ್ಮ ಗುರಿಯನ್ನು ಅನುಸರಿಸಿ, ಅದು ಅಡೆತಡೆಗಳ ನಡುವೆಯೂ ನಿಮಗೆ ದಾರಿಯನ್ನು ತೋರಿಸುತ್ತದೆ".
ಲಿಜೋ ಜೋಸ್ ಪೆಲ್ಲಿಸೇರಿ: "ನೀವು ಒಬ್ಬ ಚಲನಚಿತ್ರ ನಿರ್ದೇಶಕ ಎಂಬ ಆತ್ಮವಿಶ್ವಾಸ ನಿಮ್ಮಲ್ಲಿದ್ದರೆ, ದೊಡ್ಡ ಮಟ್ಟಕ್ಕೆ ಬೆಳೆಯಲು ಒಂದು ಕಿರುಚಿತ್ರ ಮಾಡಿ ಬನ್ನಿ".
ನಾಗ್ ಅಶ್ವಿನ್: "ಚಲನಚಿತ್ರೋದ್ಯಮವು ಕೇವಲ ಕನಸುಗಳ ಲೋಕವಲ್ಲ ಅದು ಕಥೆಗಳ ಲೋಕ. ನಿಮ್ಮ ಪ್ರತಿಭೆಯನ್ನು ಜಗತ್ತಿಗೆ ಪ್ರದರ್ಶಿಸಿ".
ಹೇಮಂತ್ ರಾವ್: "ಸಿನಿಮಾಪ್ರೇಮ ಎಂದರೆ ಎಂದಿಗೂ ಗುಣವಾಗದ ಕಾಯಿಲೆ. ನಿಮ್ಮೊಳಗೆ ಕಾಡುತ್ತಿರುವ ಕಥೆ ಇದೆಯೇ? ಅದನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ. ಝೀ ಕಿರುಚಿತ್ರ ಸ್ಪರ್ಧೆಗೆ ನೋಂದಾಯಿಸಿ ಮತ್ತು ನಿಮ್ಮ ಕಿರುಚಿತ್ರವನ್ನು ಸಲ್ಲಿಸಿ".
ರವಿ ಜಾಧವ್: "ಸಿನಿಮಾಗೆ ಪ್ರತಿಭೆ, ಉತ್ಸಾಹ ಮತ್ತು ದೃಷ್ಟಿ ಮುಖ್ಯ ಅವು ನಿಮ್ಮಲ್ಲಿದ್ದರೆ ಈ ಸ್ಪರ್ಧೆ ನಿಮಗೆ ಸರಿಯಾದ ಆಯ್ಕೆ".