ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shidlaghatta News: ಗುರುಗಳ ಮಾರ್ಗದರ್ಶನವೇ ಯಶಸ್ಸಿನ ಮೊದಲ ಮೆಟ್ಟಿಲು: ಅರುಣ್ ಚಕ್ರವರ್ತಿ

ಕಾನೂನು ಮಹಾವಿದ್ಯಾಲಯದ ಪ್ರಗತಿಪರ ಚಿಂತಕ ರಾಜಣ್ಣ ಎಸ್.ಎಂ. ಮಾತನಾಡಿ, ಉತ್ತಮ ನಾಗರಿಕತ್ವ ಎಂದರೆ ಕೇವಲ ಹಕ್ಕುಗಳನ್ನು ಅನುಭವಿಸುವುದಲ್ಲ. ಕಾನೂನು, ಶಿಸ್ತು ಗೌರವಿಸುವುದು, ಸಮಾಜದ ಬಗ್ಗೆ ಕಾಳಜಿ ಹೊಂದುವುದು ಹಾಗೂ ಅಗತ್ಯವಿರುವವರಿಗೆ ನೆರವಾಗುವುದೂ ಅದರ ಭಾಗವಾಗಿದೆ

ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಿ ಸಮಾಜಕ್ಕೆ ಕೊಡುಗೆ ನೀಡಲಿ

-

Profile
Ashok Nayak Aug 23, 2026 10:18 AM

ಶಿಡ್ಲಘಟ್ಟ: ವಿದ್ಯಾರ್ಥಿಗಳು ಭವಿಷ್ಯದಲ್ಲಿ ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೂ ಉತ್ತಮ ವ್ಯಕ್ತಿತ್ವ, ಶಿಸ್ತು ಹಾಗೂ ನಾಗರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ರಾಜಕಾರಣಿ, ಉದ್ಯಮಿ, ಐಎಎಸ್, ಐಪಿಎಸ್ ಸೇರಿದಂತೆ ಯಾವುದೇ ಉನ್ನತ ಹುದ್ದೆಗೇರುವ ಮೊದಲು ಉತ್ತಮ ನಾಗರಿಕ ರಾಗಿ ಸಮಾಜಕ್ಕೆ ಕೊಡುಗೆ ನೀಡುವ ಮನೋಭಾವ ಬೆಳೆಸಿಕೊಳ್ಳುವುದು ಮುಖ್ಯ ಎಂದು ಪೊಲೀಸ್ ಮಹಾನಿರ್ದೇಶಕ ಹಾಗೂ ಐಪಿಎಸ್ ಅಧಿಕಾರಿ ಅರುಣ್ ಚಕ್ರವರ್ತಿ ಹೇಳಿದರು.

ನಗರದ ದಿ ಕ್ರೆಸೆಂಟ್ ಶಾಲೆಯ ಆವರಣದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಂದೆ-ತಾಯಿಯಷ್ಟೇ ಶಿಕ್ಷಕರ ಪಾತ್ರವೂ ಮಕ್ಕಳ ಜೀವನದಲ್ಲಿ ಮಹತ್ವ ದ್ದಾಗಿದೆ. ತಮಗೆ ವಿದ್ಯೆ ಕಲಿಸಿದ ಗುರುಗಳ ಮಾರ್ಗದರ್ಶನ ಹಾಗೂ ಸಂಸ್ಕಾರವನ್ನು ಜೀವನ ದುದ್ದಕ್ಕೂ ಮರೆಯಬಾರದು. ಪ್ರತಿಯೊಬ್ಬ ವಿದ್ಯಾರ್ಥಿಯೂ ಗುರುಗಳಿಗೆ ಗೌರವ ನೀಡಬೇಕು ಎಂದರು.

ಇದನ್ನೂ ಓದಿ: Shidlaghatta News: ಜನರ ಪ್ರೀತಿ, ವಿಶ್ವಾಸವೇ ಪುಟ್ಟು ಅಂಜಿನಪ್ಪ ಅವರ ಬಲ

ಶಿಕ್ಷಕರು ಪಾಠ ಬೋಧಿಸುವುದರ ಜೊತೆಗೆ ಮಕ್ಕಳಲ್ಲಿ ಶಿಸ್ತು, ಮಾನವೀಯತೆ, ಉತ್ತಮ ಸಂಸ್ಕಾರ ಹಾಗೂ ಸಮಾಜಮುಖಿ ಚಿಂತನೆ ಬೆಳೆಸಬೇಕು. ಉತ್ತಮ ಶಾಲೆ ಮತ್ತು ಸಮರ್ಥ ಶಿಕ್ಷಕರ ಮಾರ್ಗ ದರ್ಶನ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ಕಾನೂನು ಮಹಾವಿದ್ಯಾಲಯದ ಪ್ರಗತಿಪರ ಚಿಂತಕ ರಾಜಣ್ಣ ಎಸ್.ಎಂ. ಮಾತನಾಡಿ, ಉತ್ತಮ ನಾಗರಿಕತ್ವ ಎಂದರೆ ಕೇವಲ ಹಕ್ಕುಗಳನ್ನು ಅನುಭವಿಸುವುದಲ್ಲ. ಕಾನೂನು, ಶಿಸ್ತು ಗೌರವಿಸು ವುದು, ಸಮಾಜದ ಬಗ್ಗೆ ಕಾಳಜಿ ಹೊಂದುವುದು ಹಾಗೂ ಅಗತ್ಯವಿರುವವರಿಗೆ ನೆರವಾಗುವುದೂ ಅದರ ಭಾಗವಾಗಿದೆ ಎಂದರು.

ಬಳಿಕ ಅರುಣ್ ಚಕ್ರವರ್ತಿ ಶಿಡ್ಲಘಟ್ಟದ ಅಂಧ ಮಕ್ಕಳ ಶಾಲೆಗೆ ಭೇಟಿ ನೀಡಿ, ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.

ಕಾರ್ಯಕ್ರಮದಲ್ಲಿ ಲಿಯೊ ಕ್ಲಬ್ ಅಧ್ಯಕ್ಷ ಶ್ರೀಕಾಂತ್, ದಂತವೈದ್ಯ ಡಾ.ದಿಲೀಪ್, ನೋಟರಿ ಸಂಘದ ರಾಜ್ಯಾಧ್ಯಕ್ಷ ಟಿ.ನಾರಾಯಣಸ್ವಾಮಿ, ಸುರೇಶ್, ನಗರ ಠಾಣೆ ಪಿಎಸ್ಐ ಸುನಿಲ್ ಕುಮಾರ್, ಲಿಯೊ ಲೋಕೇಶ್ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

image

ಗುರುಗಳಿಗೆ ಮೊದಲ ಸ್ಥಾನ ನೀಡಿದ ಅರುಣ್ ಚಕ್ರವರ್ತಿ: “ಗುರು ಬ್ರಹ್ಮ, ಗುರು ವಿಷ್ಣು, ಗುರು ಮಹೇಶ್ವರ ಎಂಬ ಮಾತಿನಂತೆ ಅರುಣ್ ಚಕ್ರವರ್ತಿ ಅವರು ಗುರುಗಳಿಗೆ ಮೊದಲ ಸ್ಥಾನ ನೀಡಿ ಗೌರವಿಸಿದ್ದಾರೆ. ವಿದ್ಯಾರ್ಥಿಗಳು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಪಡೆದು ಐಎಎಸ್, ಐಪಿಎಸ್, ನ್ಯಾಯಾಧೀಶ ಸೇರಿದಂತೆ ಉನ್ನತ ಹುದ್ದೆಗೇರಬೇಕು. ಸಮಾಜದಲ್ಲಿ ಉತ್ತಮ ಹೆಸರು ಗಳಿಸಬೇಕು. ಮುಂದೊಂದು ದಿನ ನಿಮ್ಮಲ್ಲಿ ಯಾರಾದರೂ ಗುರುವಾಗಿ ತಮ್ಮ ಸಾಧನೆಯ ಅನುಭವವನ್ನು ನನ್ನೊಂದಿಗೆ ಹಂಚಿಕೊಳ್ಳುವಂತಾಗಲಿ ಎಂಬುದು ನನ್ನ ಆಶಯ.”

ಮಹಮದ್ ತಮೀಮ್ ಅನ್ಸಾರಿ, ಕಾರ್ಯದರ್ಶಿ, ದಿ ಕ್ರೆಸೆಂಟ್ ಶಾಲೆ