ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಜಲಕ್ಷ್ಮೀ ದೇಗುಲದಲ್ಲಿ ಭಕ್ತಿಭಾವದ ವರಮಹಾಲಕ್ಷ್ಮೀ ಪೂಜೆ: ಸಪ್ತ ಅಶ್ವಗಳ ಬೆಳ್ಳಿ ರಥದಲ್ಲಿ ಅಮ್ಮನವರ ವೈಭವದ ಮೆರವಣಿಗೆ

ಶ್ರೀ ರಾಜಲಕ್ಷ್ಮೀ ಅಮ್ಮನವರಿಗೆ ಹಾಲಿನ ಅಭಿಷೇಕ, ಕನಕಾಭಿಷೇಕ, ವಿಶೇಷ ಅರ್ಚನೆ ಹಾಗೂ ಪುಷ್ಪಾಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸ ಲಾಯಿತು. ವರಮಹಾಲಕ್ಷ್ಮೀ ವ್ರತ, ಲಲಿತಾ ಸಹಸ್ರನಾಮ ಹಾಗೂ ಲಕ್ಷ್ಮೀ ಸಹಸ್ರನಾಮ ಅರ್ಚನೆ, ದಿಂಡಿ ಉತ್ಸವ, ಅಷ್ಟಾವಧಾನ ಸೇವೆ ಹಾಗೂ ಮಹಾಮಂಗಳಾರತಿ ನಡೆಯಿತು. ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು

ಸಪ್ತ ಅಶ್ವಗಳ ಬೆಳ್ಳಿ ರಥದಲ್ಲಿ ಅಮ್ಮನವರ ವೈಭವದ ಮೆರವಣಿಗೆ

-

Profile
Ashok Nayak Aug 23, 2026 10:14 AM

ಗೌರಿಬಿದನೂರು: ತಾಲೂಕಿನ ಚಿಕ್ಕಕುರುಗೋಡು ಸಮೀಪದ ಶ್ರೀ ಚಕ್ರ ಸಹಿತ ರಾಜಲಕ್ಷ್ಮೀ ದೇವಸ್ಥಾನದಲ್ಲಿ 13ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜಾ ಮಹೋತ್ಸವವು ಶ್ರದ್ಧಾ-ಭಕ್ತಿಭಾವದಿಂದ ವಿಜೃಂಭಣೆಯಿಂದ ನೆರವೇರಿತು.

ಶ್ರೀ ರಾಜಲಕ್ಷ್ಮೀ ಅಮ್ಮನವರಿಗೆ ಹಾಲಿನ ಅಭಿಷೇಕ, ಕನಕಾಭಿಷೇಕ, ವಿಶೇಷ ಅರ್ಚನೆ ಹಾಗೂ ಪುಷ್ಪಾಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸ ಲಾಯಿತು. ವರಮಹಾಲಕ್ಷ್ಮೀ ವ್ರತ, ಲಲಿತಾ ಸಹಸ್ರನಾಮ ಹಾಗೂ ಲಕ್ಷ್ಮೀ ಸಹಸ್ರನಾಮ ಅರ್ಚನೆ, ದಿಂಡಿ ಉತ್ಸವ, ಅಷ್ಟಾವಧಾನ ಸೇವೆ ಹಾಗೂ ಮಹಾಮಂಗಳಾರತಿ ನಡೆಯಿತು. ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಇದನ್ನೂ ಓದಿ: Gauribidanur News: ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯ ಬೆಳೆಸಿಕೊಳ್ಳಿ

ಬೆಳಗ್ಗೆ 12.30ರ ಶುಭ ಮುಹೂರ್ತದಲ್ಲಿ ಸಪ್ತ ಅಶ್ವಗಳ ಬೆಳ್ಳಿ ರಥದಲ್ಲಿ ಶ್ರೀ ರಾಜಲಕ್ಷ್ಮೀ ಅಮ್ಮನವರ ಭವ್ಯ ಮೆರವಣಿಗೆ ನಡೆಯಿತು. ಚಿಕ್ಕಕುರುಗೋಡು, ಚನ್ನಬೈರೇನಹಳ್ಳಿ, ಕಲ್ಲೂಡಿ ಮಾರ್ಗವಾಗಿ ಗೌರಿಬಿದನೂರು ನಗರದ ರಾಜಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳು ಕುಣಿತ ಹಾಗೂ ಮಂಗಳವಾದ್ಯಗಳ ಪ್ರದರ್ಶನ ಗಮನ ಸೆಳೆಯಿತು. ದಾರಿಯುದ್ದಕ್ಕೂ ಭಕ್ತರು ಅಮ್ಮನವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಪ್ರಧಾನ ಅರ್ಚಕ ಭೂಮರಾಜ ನರೇಂದ್ರ ಶರ್ಮಾ ಮಾತನಾಡಿ, ಸುಮಾರು ಐದು ನೂರು ವರ್ಷಗಳ ಇತಿಹಾಸ ಹೊಂದಿರುವ ಈ ಪವಿತ್ರ ಸನ್ನಿಧಿಯಲ್ಲಿ ಉತ್ಸವ ನಡೆಯುತ್ತಿದ್ದು, ಈ ಬಾರಿ 26ನೇ ವರ್ಷದ ಸಂಭ್ರಮವಾಗಿದೆ. ಸಹಸ್ರಾರು ಭಕ್ತರು ಭಾಗವಹಿಸಿ ಅಮ್ಮನವರ ಕೃಪೆಗೆ ಪಾತ್ರರಾದರು ಎಂದರು.

ಮಾಜಿ ಸಚಿವ ಶಿವಶಂಕರರೆಡ್ಡಿ, ಮಾಜಿ ಶಾಸಕಿ ಎನ್.ಜ್ಯೋತಿರೆಡ್ಡಿ ಸೇರಿದಂತೆ ಹಲವು ಗಣ್ಯರು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಸೇವಾ ಸಮಿತಿ ಸದಸ್ಯರು, ಗ್ರಾಮಸ್ಥರು ಹಾಗೂ ಭಕ್ತರು ಉಪಸ್ಥಿತರಿದ್ದರು.