Job Mela: ಜೆ.ಕೆ.ಕೃಷ್ಣಾರೆಡ್ಡಿ ಆಯೋಜನೆಯ ಬೃಹತ್ ಉದ್ಯೋಗ ಮೇಳಕ್ಕೆ ಹರಿದು ಬಂದ ನಿರುದ್ಯೋಗಿ ಜನಸಾಗರ
ಉದ್ಯೋಗವಿಲ್ಲದೆ ನಿರುದ್ಯೋಗಿಳಾಗಿರುವ ಯವಕರಿಗೆ ಉದ್ಯೋಗ ಕಲ್ಪಿಸಿಕೊಡಬೇಕೆಂಬ ಸದ್ದುದ್ದೇಶ ದಿಂದ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ದಿ ಅವರು ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಂಡು ಸಾವಿರಾರು ಜನ ಯುವಕರಿಗೆ ಉದ್ಯೋಗ ಕೋಡಿಸಲು ಮುಂದಾಗಿರುವುದು ಶ್ಲಾಘನೀಯವಾಗಿದೆ. ಅದರೆ ಉನ್ನತ ಜವಾಬ್ದಾರಿ ಸ್ಥಾನದಲ್ಲಿರುವ ಸಚಿವ ಡಾ.ಎಂ.ಸಿ ಸುಧಾಕರ್ ಉದ್ಯೋಗ ಮೇಳದ ಬಗ್ಗೆ ಲಘುವಾಗಿ ಮಾತನಾಡುವುದು ಖಂಡನೀಯವಾಗಿದೆ.


ಚಿಂತಾಮಣಿ: ಉನ್ನತ ಶಿಕ್ಷಣ ಸಚಿವರಾಗಿ ಎರಡು ವರ್ಷದಿಂದ ನಿಮ್ಮ ಕೊಡುಗೆಯೇನು? ಎಂಬು ದನ್ನು ಯುವಕ ಯುವತಿಯರಿಗೆ ತಿಳಿಸಬೇಕಾಗಿದೆ. ಬೇಜವಾಬ್ದಾರಿಯಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಸುಪ್ರಿಂಕೋರ್ಟನ ನಿವೃತ್ತ ನ್ಯಾಯಮೂರ್ತಿ ವಿ ಗೋಪಾಲಗೌಡರು ಸಚಿವ ಡಾ.ಎಂ.ಸಿ.ಸುಧಾಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಚಿಂತಾಮಣಿ ನಗರದ ಪ್ರಗತಿ ಕಾಲೇಜಿನಲ್ಲಿ ಮಾಜಿ ಶಾಸಕ ಜೆ.ಕೆ ಕೃಷ್ಣಾರೆಡ್ಡಿ ಏರ್ಪಡಿಸಿದ್ದ ಬೃಹತ್ ಉದ್ಯೋಗಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಉದ್ಯೋಗವಿಲ್ಲದೆ ನಿರುದ್ಯೋಗಿಳಾಗಿರುವ ಯವಕರಿಗೆ ಉದ್ಯೋಗ ಕಲ್ಪಿಸಿಕೊಡಬೇಕೆಂಬ ಸದ್ದುದ್ದೇಶದಿಂದ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ದಿ ಅವರು ಬೃಹತ್ ಉದ್ಯೋಗಮೇಳವನ್ನು ಹಮ್ಮಿಕೊಂಡು ಸಾವಿರಾರು ಜನ ಯುವಕರಿಗೆ ಉದ್ಯೋಗ ಕೋಡಿಸಲು ಮುಂದಾಗಿರುವುದು ಶ್ಲಾಘನೀಯವಾಗಿದೆ. ಅದರೆ ಉನ್ನತ ಜವಾಬ್ದಾರಿ ಸ್ಥಾನದಲ್ಲಿರುವ ಸಚಿವ ಡಾ.ಎಂ.ಸಿ ಸುಧಾಕರ್ ಉದ್ಯೋಗ ಮೇಳದ ಬಗ್ಗೆ ಲಘುವಾಗಿ ಮಾತನಾಡುವುದು ಖಂಡನೀಯವಾಗಿದೆ.ಉನ್ನತ ಶಿಕ್ಷಣ ಇಲಾಖೆಯಲ್ಲಿ ಸಹಾಯಕ ಪ್ರಾಧ್ಯಾಪಕರ ಎಷ್ಟು ಸಾವಿರ ಹುದ್ದೆಗಳು ಖಾಲಿಯಿವೆ ಎಂಬುದು ಗೊತ್ತಾ ನಿಮಗೆ? ಟೀಕೆ ಬಿಟ್ಟು ಮೊದಲು ಅದನ್ನು ತುಂಬಲು ಸರಿಯಾದ ರೀತಿಯಲ್ಲಿ ಕ್ರಮವಹಿಸಿ ವ್ಯಂಗ್ಯವಾಡಿದರು.
ಸಾರ್ವಜನಿಕ ಸೇವಕರಾಗಿ ನೀವು ಏನು ಮಾಡಿದ್ದೀರಿ ಎಂಬುದನ್ನು ಮೊದಲು ಕರ್ನಾಟಕದ ಜನತೆಗೆ ಉತ್ತರಿಸಿ? ನೇಮಕಾತಿ ಏಕೆ ಮಾಡಲಿಲ್ಲ? ಅದಕ್ಕೆ ಏನೂ ಕ್ರಮ ಕೈಗೊಂಡಿದ್ದೀರೆಂದು ಎಂಬುದನ್ನು ತಿಳಿಸಿ ಎಂದ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದು ಸಚಿವರಾಗಿರುವ ನೀವುಗಳು ಸಾರ್ವಜನಿಕ ರಿಗೆ ವರದಿ ನೀಡಿರೆಂದು ಕೇಳಿದರು.
ಭಾರತ ಸಂವಿಧಾನದ ೧೬ನೇ ಅನುಚ್ಛೇದ ಕಾಯಿದೆಯ ಸರ್ಕಾರಿ ಕೆಲಸವನ್ನು ಪಡೆಯುವ ಹಕ್ಕು ಇದೆ. ಯಾಕೆ ಸಾರ್ವಜನಿಕ ಅಥವಾ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಿಲ್ಲ. ಅಸಂಬದ್ಧವಾಗಿ ಮಾತನಾಡುವುದನ್ನು ನಿಲ್ಲಿಸಬೇಕೆಂದು ಸಭೆಯಲ್ಲಿ ತಾಕೀತು ಮಾಡಿದರು. ಉದ್ಯೋಗ ಮೇಳ ಆಯೋಜಿಸಿದವರ ವಿರುದ್ದ ಲಘುವಾಗಿ ಮಾತನಾಡಿರುವುದು ತರವಲ್ಲ, ಪ್ರಜಾಪ್ರಭುತ್ವದಲ್ಲಿ ಅಧಿಕಾರ ಪಡೆದು ಸಾರ್ವಜನಿಕರಿಗೆ ಸಂವಿಧಾನದ ಅಡಿಯಲ್ಲಿ ಜನರ ಆಡಳಿತವನ್ನು ನೀಡಬೇಕು, ಸರಿಯಾದ ರೀತಿಯಲ್ಲಿ ನಡೆದುಕೊಂಡು ಹೋಗಬೇಕು ಹಾಗೂ ಆರ್ಥಿಕ ಸ್ವಾವಲಂಬನೆಯನ್ನು ಜನರಿಗೆ ತುಂಬಿಸುವುದು ಸರ್ಕಾರಗಳ ಜವಾಬ್ದಾರಿಯಾಗಿದೆಯೆಂದು ಹರಿಹಾಯ್ದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ತಾಲೂಕಿನಲ್ಲಿ ಪದವೀ ದರ ನಿರುದ್ಯೋಗಿ ಯುವಕ ಯುವತಿಯರು ದೂರದ ಊರುಗಳಿಗೆ ಹೋಗಿ ಉದ್ಯೋಗಕ್ಕಾಗಿ ನಾನಾ ಕಂಪನಿಗಳಲ್ಲಿ ಸಂದರ್ಶಗಳಿಗೆ ಹಾಜರಾಗುತ್ತಾರೆ. ಅಂತಹವರಿಗಾಗಿಯೇ ವಿವಿಧ ಕಂಪನಿಗಳ ಅಧಿಕಾರಿಗಳನ್ನು ಇಲ್ಲಿಗೆ ಕರೆಯಿಸಿ ಒಂದೇ ಸೂರಿನಲ್ಲಿ ಸಾವಿರಾರು ಮಂದಿಗೆ ಉದ್ಯೋಗಾವಕಾಶ ಕಲ್ಪಿಸಬೇಕೆಂಬ ಆಶಯದ ಭಾಗವೇ ಈ ಉದ್ಯೋಗ ಮೇಳ. ಇದನ್ನು ತಾಲ್ಲೂಕಿನ ಎಲ್ಲಾ ಯುವಕ-ಯುವತಿಯರು ಸರಿಯಾದ ರೀತಿಯಲ್ಲಿ ಬಳಸಿಕೊಡು ಉದ್ಯೋಗಿಗಳಾಗಿ ಜೀವನದಲ್ಲಿ ಮುಂದೆ ಬರಬೇಕೆಂದರು.
ಈ ಉದ್ಯೋಗ ಮೇಳದಲ್ಲಿ ಎಸ್.ಎಸ್.ಎಲ್.ಸಿ., ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮ, ಬಿ.ಎ, ಬಿ.ಎಸ್.ಸಿ, ಬಿ.ಕಾಂ, ಬಿ.ಬಿ.ಎ, ಬಿ.ಬಿ.ಎಂ, ಬಿ.ಇ, ಬಿ.ಟೆಕ್, ಬಿ.ಫಾರಂ, ನರ್ಸಿಂಗ್, ಸ್ನಾತಕೋತ್ತರ ಪಧವೀದರರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಉದ್ಯೋಗ ಮೇಳದ ಸದುಪಯೋಗವನ್ನು ಪಡೆದು ಕೊಂಡರು.
ಕಾರ್ಯಕ್ರಮದಲ್ಲಿ ಕೋಲಾರ ಸಂಸದ ಎಂ.ಮಲ್ಲೇಶ್ ಬಾಬು, ಬಿಜೆಪಿ ಮುಖಂಡ ದೇವನಹಳ್ಳಿ ಜಿ.ಎನ್.ವೇಣುಗೋಪಾಲ್, ಉದ್ಯೋಗ ಮೇಳದ ಆಯೋಜಕ ಸುರೇಂದ್ರ ರೆಡ್ಡಿ, ಪ್ರಗತಿ ಕಾಲೇಜಿನ ಮುಖ್ಯಸ್ಥ ಜೆ.ವಿ ನಾರಾಯಣಸ್ವಾಮಿ ಸೇರಿದಂತೆ ಸಾವಿರರು ಸಂಖ್ಯೆಯಲ್ಲಿ ಯುವಕರು ಯುವತಿ ಯರು ಮತ್ತಿತರರು ಭಾಗವಹಿಸಿದ್ದರು.