ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chikkaballapur News: ಬಿಜೆಪಿ ವ್ಯಕ್ತಿನಿಷ್ಠ ಪಕ್ಷವಲ್ಲ, ಕಾರ್ಯಕರ್ತರ ನಿಷ್ಠೆಯ ಪಕ್ಷ ಮೊದಲು ಪಕ್ಷದ ಕಾರ್ಯಕರ್ತರಿಗೆ ಗೌರವ ಕೊಡಿ : ಸಂದೀಪ್‌ರೆಡ್ಡಿ ಟಾಂಗ್

ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಸಮರ್ಥವಾಗಿ ಕಟ್ಟುವ ಉದ್ದೇಶದಿಂದ ಕಷ್ಟ ಬಿದ್ದು ದುಡ್ಡು ತಂದು ಖರ್ಚು ಮಾಡಿ ಪಕ್ಷ ಕಟ್ಟಿಲ್ಲವಾ? ಪಕ್ಷಕ್ಕಾಗಿ ಅವರವರ ಯೋಗ್ಯತೆಗೆ ತಕ್ಕಂತೆ ಸಹಾಯ ಮಾಡಿದ್ದಾರೆ. ಒಬ್ಬ ಒಂದು ರೂಪಾಯಿ ಕೊಟ್ಟಿರಬಹುದು, ಮತ್ತೊಬ್ಬ ಕೋಟಿ ರೂಪಾಯಿ ಕೊಟ್ಟಿರಬಹುದು. ಮೊದಲು ಕಾರ್ಯಕರ್ತರಿಗೆ ಗೌರವ ಕೊಡುವುದು ಕಲಿಯಿರಿ

ಬಿಜೆಪಿ ವ್ಯಕ್ತಿನಿಷ್ಠ ಪಕ್ಷವಲ್ಲ, ಕಾರ್ಯಕರ್ತರ ನಿಷ್ಠೆಯ ಪಕ್ಷ

-

Ashok Nayak
Ashok Nayak Feb 11, 2026 11:45 PM

ಚಿಕ್ಕಬಳ್ಳಾಪುರ: ಬಿಜೆಪಿ ವ್ಯಕ್ತಿನಿಷ್ಟೆಯ ಪಕ್ಷವಲ್ಲ ಬದಲಿಗೆ ಕಾರ್ಯಕರ್ತರ ನಿಷ್ಟೆಯ ಪಕ್ಷ .ಇದನ್ನ ರಿತು ಮೊದಲು ಪಕ್ಷಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರಿಗೆ ಗೌರವಕೊಡಿ ಸಂಸದ ಸುಧಾಕರ್ ಮತ್ತು ಅವರ ಹಿಂಬಾಲಕರಿಗೆ ಮಾಜಿ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಸಂದೀಪ್‌ರೆಡ್ಡಿ ಟಾಂಗ್ ನೀಡಿದರು.

ನಗರ ಹೊರವಲಯ ಕೈಗಾರಿಕಾ ಪ್ರಾಂಗಣದಲ್ಲಿ ಭರತ್ ಡ್ರಿಪ್ ಇಂಡಸ್ಟ್ರಿ ಮಳಿಗೆ ಉದ್ಘಾಟನೆ ಮಾಡಿ ಅವರು ಮಾತನಾಡಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದರು.

ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಸಮರ್ಥವಾಗಿ ಕಟ್ಟುವ ಉದ್ದೇಶದಿಂದ ಕಷ್ಟ ಬಿದ್ದು ದುಡ್ಡು ತಂದು ಖರ್ಚು ಮಾಡಿ ಪಕ್ಷ ಕಟ್ಟಿಲ್ಲವಾ? ಪಕ್ಷಕ್ಕಾಗಿ ಅವರವರ ಯೋಗ್ಯತೆಗೆ ತಕ್ಕಂತೆ ಸಹಾಯ ಮಾಡಿದ್ದಾರೆ. ಒಬ್ಬ ಒಂದು ರೂಪಾಯಿ ಕೊಟ್ಟಿರಬಹುದು, ಮತ್ತೊಬ್ಬ ಕೋಟಿ ರೂಪಾಯಿ ಕೊಟ್ಟಿರಬಹುದು. ಮೊದಲು ಕಾರ್ಯಕರ್ತರಿಗೆ ಗೌರವ ಕೊಡುವುದು ಕಲಿಯಿರಿ ಎಂದು ತಾಕೀತು ಮಾಡಿದರು.

ಸಂದೀಪ್ ಅಂತಲ್ಲ?
ಮಂಗಳವಾರ ಗಜೇಂದ್ರ ಮತ್ತು ತಂಡ ನಡೆಸಿದ ಸುದ್ದಿಗೋಷ್ಟಿ ಬೇಕಿರಲಿಲ್ಲ. ಇದೆಲ್ಲಾ ಬಿಜೆಪಿ ಪಕ್ಷದ ಅಂತರಿಕ ವಿಷಯ,ವಿಶ್ವನಾಥಣ್ಣ ಹೇಳಿರುವುದು ಸಂಸದ ಡಾ.ಕೆ.ಸುಧಾಕರ್ ಮುತ್ಸದ್ದಿ ರಾಜಕಾರಣಿ ಇದ್ದಾರೆ. ಅನುಭವಿಗಳು ಮತ್ತು ಸಚಿವರಾಗಿ ಅಪಾರ ಅನುಭವ ಪಡೆದಿದ್ದಾರೆ. ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಕುಳಿತು ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಅವರು ಕೇಂದ್ರದಲ್ಲಿ ಮಂತ್ರಿ ಸಹ ಆಗಲಿ. ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರದಲ್ಲಿ ಸಂದೀಪ್ ಅಂತಹ ಯುವಕರು ವಿಧಾನಸಭೆಗೆ ಬರಬೇಕು. ಅದಕ್ಕೆ ಸುಧಾಕರ್ ಅವರು, ನರೇಂದ್ರ ಮೋದಿ ಅವರು, ವಿಜಯೇಂದ್ರ ಅವರು, ವಿಶ್ವನಾಥಣ್ಣ ಸೇರಿ ಎಲ್ಲರ ಮಾರ್ಗ ದರ್ಶನ ಇರಬೇಕು ಎಂಬ ಮಾತನ್ನು ಅವರು ಹೇಳಿದ್ದರು.

ಇದನ್ನೂ ಓದಿ: Chikkaballapur News: 70ರ ದಶಕದ ದಸಂಸ ಎಲ್ಲಾ ಹೋರಾಟಗಳ ಮಹಾಮನೆ, ಇತಿಹಾಸ ಮರುಕಳಿಸಬೇಕಿದೆ : ಬಿ.ವಿ. ಆನಂದ್ ಅಭಿಮತ

ಆತಂಕ ಬೇಡ?
ಇದನ್ನು ಕೆಲವರು ತಪ್ಪಾಗಿ ತಿಳಿದುಕೊಂಡು, ಆತಂಕಕ್ಕೆ ಒಳಗಾಗಿ ತುಂಬಾ ಗಾಬರಿಯಾಗಿದ್ದಾರೆ. ಬಿಜೆಪಿಯಲ್ಲಿ ಯಾರೋ ಒಬ್ಬ ನಾಯಕರು ಕೊಡುವ ಹೇಳಿಕೆಯಿಂದ ಟಿಕೆಟ್ ಕೊಡುವುದಿಲ್ಲ. ನೀವೆಲ್ಲಾ ನಮಗಿಂತ ಹೆಚ್ಚಾಗಿ ರಾಜಕೀಯ ನೋಡಿಕೊಂಡು ಬಂದಿದ್ದೀರಾ? ಗಜೇಂದ್ರ ಅವರೇ ಅಲ್ಲಿ ಕೂತುಕೊಂಡು ಸುದ್ದಿಗೋಷ್ಠಿ ಮಾಡುವ ಮೊದಲು ಅವರು ನಗರಸಭೆ ಅಧ್ಯಕ್ಷರಾಗಲು ಏನೆಲ್ಲಾ ಸರ್ಕಸ್ ಮಾಡಿದ್ದಾರೆಯೋ ಆ ರೀತಿ ಬೇರೆ ಬೇರೆ ಪ್ರೊಸೆಸ್ ಇರುತ್ತದೆ. ಎಲ್ಲಕ್ಕೂ ಬೇರೆ ಬೇರೆ ಕಾರ್ಯಾಚರಣೆಯೇ ಇರಲಿದೆ. ಅಂತಿಮವಾಗಿ ಯಾರಿಗೋ ಒಬ್ಬರಿಗೆ ಟಿಕೆಟ್ ಸಿಗಲಿದೆ. ಟಿಕೆಟ್ ಸಿಕ್ಕ ಮೇಲೆ ಏನು ಕೆಲಸ ಮಾಡಬೇಕೋ ಅದನ್ನು ನಾವೆಲ್ಲಾ ಮಾಡಬೇಕಾಗುತ್ತದೆ ಎಂದರು.

ಇವರತ್ತಲೂ ಒಮ್ಮೆ ನೋಡಿ?
ಚಿಕ್ಕಬಳ್ಳಾಪುರದಲ್ಲಿ ಯುವಕರೆಂದರೆ ಕೇವಲ ಸಂದೀಪ್‌ರೆಡ್ಡಿ ಮಾತ್ರವಲ್ಲ,ಯಾಕೆ ನವೀನ್‌ಕಿರಣ್ ಕಾಣಿಸುವುದಿಲ್ಲವಾ? ಅವರಿಗೆ ಒಂದು ಅವಕಾಶ ಕೊಡಿಸಬೇಕು ಎಂದು ನಿಮಗೆ ಯಾರಿಗೂ ಅನ್ನಿಸು ವುದಿಲ್ಲವಾ? ಕೆ.ವಿ.ನಾಗರಾಜ್ ಕಾಣಿಸುವುದಿಲ್ಲವಾ? ಮಿಲ್ಕ್ ಯುನಿಯನ್ ಕ್ಷೇತ್ರದಲ್ಲಿ ಕೆ.ವಿ.ಎನ್ ಚಿಕ್ಕಬಳ್ಳಾಪುರಕ್ಕೆ ಪಿತಾಮಹ ಇದ್ದಂತೆ. ಚಿಮುಲ್ ಚುನಾವಣೆಯಲ್ಲಿ ಅವರು ಟಿಕೆಟ್ ಪಡೆಯ ಬೇಕಾದರೆ ಕಣ್ಣೀರು ಹಾಕಿದ್ದಾರೆ. ಯಾಕೆ ಮರಳುಕುಂಟೆ ಕೃಷ್ಣಮೂರ್ತಿ ಅವರು ಅವರು ನಿಮ್ಮ ಕಣ್ಣಿಗೆ ಕಾಣಿಸುವುದಿಲ್ಲವಾ? ನಿಮ್ಮ ಹಿಂದೆ ಮುಂದೆ ಇರುತ್ತಾ 24 ಗಂಟೆ ಕೆಲಸ ಮಾಡುತ್ತಾರಲ್ಲವಾ? ನಾನು ಬಿಜೆಪಿ ಜಿಲ್ಲಾಧ್ಯಕ್ಷ ಆದಾಗ ಪಾಪ ಯಾರೋ ಹೇಳಿದರಂತ  ಬಂದು ರಾಜ್ಯದ ಅಧ್ಯಕ್ಷರಿಗೆ, ಬಿಜೆಪಿಗೆ ಧಿಕ್ಕಾರ ಕೂಗಿದರಲ್ಲ. ನಿಮಗೋಸ್ಕರ ಅವರು ಬಿಜೆಪಿಯಲ್ಲಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಂಡರಲ್ಲಾ? ಅವರಿಗೆ ಕೊಡಿಸಿರಿ ಟಿಕೆಟ್ಟಾ! ಎಂದು ಗರಂ ಆದರು.

ಮನೆದೇವರಾಣೆ ನಿಮಗೆ ಮತ ಹಾಕಿದ್ದೇನೆ!!!
ನಿಮಗೆ ಯಾರಿಗೆ ಬೇಕೋ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸುವುದು ವ್ಯಕ್ತಿಗತ ಮಾಡಿಕೊಂಡಿದ್ದೀರಾ ನೀವು? ಯಾರಪ್ಪನ ಸೊತ್ತಲ್ಲ ಬಿಜೆಪಿ ಕಾರ್ಯಕರ್ತರ ಸೊತ್ತು.! ಮೊನ್ನೆ ಅವನ್ಯಾರೋ ಹೇಳ್ತಿದ್ದ ಸುಧಾಕರ್ ಬಂದ ಮೇಲೆ ಬಿಜೆಪಿ ಅಂತ.ಸುಧಾಕರ್ ಬಿಜೆಪಿಗೆ ಬಂದ ಮೇಲೆ ಪಕ್ಷಕ್ಕೆ ಶಕ್ತಿ ಬಂದಿರು ವುದು ನಿಜ. ಖಂಡಿತ ನಾವೆಲ್ಲಾ ಒಪ್ತೀವಿ.ಸುಧಾಕರ್ ಒಂದು ಶಕ್ತಿ, ಅವರೊಬ್ಬ ದೂರದೃಷ್ಟಿಯ ನಾಯಕ. ಅವರ ಜತೆ ಭುಜಕ್ಕೆ ಭುಜಕೊಟ್ಟು ಕೆಲಸ ಮಾಡಿದ್ದೀವಿ. ಯಾರೋ ಏನೋ ಹೇಳಿ ಬಿಟ್ಟರಾಗಲ್ಲ. ಮೊನ್ನೆ ಎಂಪಿ ಎಲೆಕ್ಷನ್‌ನಲ್ಲಿ ಎಷ್ಟು ನಾವು ಕೆಲಸ ಮಾಡಿದ್ದೀವಿ. ಇವತ್ತು ಹೇಳ್ತೀರ ನೀವು ಎಂಎಲ್‌ಎ ಎಲೆಕ್ಷನ್‌ನಲ್ಲಿ ವಿರುದ್ಧ ಕೆಲಸ ಮಾಡಿದೆ ಅಂತ. ನನ್ನ ಮನೆ ದೇವರು ಜೀಗಾನ ಹಳ್ಳಿ ಸೀತಿಬೈರವೇಶ್ವರನ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ. ಸುಧಾಕರ್‌ಗೆ ನನ್ನ ಮತ ಹಾಕಿದ್ದೇನೆ. ಬಿಜೆಪಿಗೆ ಮತ ಹಾಕಿದ್ದೇನೆ. ಅಂತಹ ಬದ್ಧತೆ ಇರುವವರು ನಾವೆಲ್ಲಾ ಎಂದು ಗದ್ಗದಿತ ರಾದರು.

ಕಾಂಗ್ರೆಸ್‌ಗೆ ಹೋಗುತ್ತಿದ್ದೆ?
ಏನಾದ್ರು ಹೆಚ್ಚು ಕಡಿಮೆ ಆದರೆ ನಾನು ಕಾಂಗ್ರೆಸ್‌ಗೆ ಹೋಗುತ್ತೇನೆ ಅಂತ ಬಂದಿದ್ಯಲ್ಲಪ್ಪ ಗಜೇಂದ್ರ. ಎಷ್ಟು ಸಲ ನಿನಗೆ ಸಮಾಧಾನ ಮಾಡಿದ್ದೇನೆ. ನಾವು ಕಾಂಗ್ರೆಸ್‌ಗೆ ಹೋಗೋಣ ಎಂದು ಹೇಳಿದ್ದಿದ್ದು ಯಾರು ಗಜೇಂದ್ರ? ಬೇಡಪ್ಪ ನಿನಗೆ ಭವಿಷ್ಯವಿದೆ ಎಂದು ಹೇಳಿದ್ದು ಯಾರು? ಯಾರ ಮೇಲೆ ನೀನು ಮುನಿಸಿಕೊಂಡಿದ್ದಿದ್ದು ಸುಧಾಕರ್ ಮೇಲೆ? ಸುಧಾಕರ್ ವಿರುದ್ದ ನಾವು ಯಾವತ್ತೂ ಮುನಿಸಿ ಕೊಂಡಿಲ್ಲ, ವಿರುದ್ಧ ಕೆಲಸ ಮಾಡಿಲ್ಲ, ಎಂದೂ ಕೂಡ ಷಡ್ಯಂತ್ರ ಮಾಡಿಲ್ಲ ಎಂದು ತಮ್ಮ ಬದ್ಧತೆ ಬಗ್ಗೆ ಸ್ಪಷ್ಟನೆ ನೀಡಿದ ಅವರು ಟಿಕೆಟ್ ಬೇಕು ಎಂದು ಅವರು ಕೇಳಿದ್ದಾಗ ನಾವು ಅದೇ ಸಮಯ ದಲ್ಲಿ ಅಲೋಕ್ ವಿಶ್ವನಾಥ್ ಅವರಿಗೆ ಟಿಕೆಟ್ ಕೇಳಿದಿದ್ದು ನಿಜ. ಒಂದು ಪಕ್ಷ ಅಂದ ಮೇಲೆ ನಾಲ್ಕಾರು ಜನ ಟಿಕೆಟ್ ಕೇಳುವುದು ನಿಜ ಕಣ್ರೀ...ನೀವು ಟಿಕೆಟ್ ತಗೊಂಡು ಬಂದ ಮಾರನೇ ದಿನದಿಂದಲೇ ಕೆಲಸ ಮಾಡಿದ್ದೇವೆ.ಜ್ಞಾನ ಇಲ್ಲವಾ?ಎಂದು ಆಕ್ರೋಶದಿಂದ ನುಡಿದರು.

ಕೆಲಸ ಮಾಡಿದ್ದೇವೆ!!

ಅದೇ ಸುಧಾಕರ್ ನಮ್ಮ ಮನೆಗೆ ಬಂದು ನಮ್ಮನ್ನು ಕೇಳಿಕೊಂಡರು. ನಾನು ಅದಕ್ಕೂ ಮೊದಲೇ ಹೇಳಿದ್ದೆ ಅಲ್ಲವಾ? ಪೋನ್ ಮಾಡಿ ಹೇಳಿದ್ದೆ. ನೀವು ಬರಲಿ ಬರದೇ ಇರಲಿ, ಇದು ನರೇಂದ್ರ ಮೋದಿ ಚುನಾವಣೆ,ನನ್ನ ದೇಶದ ಚುನಾವಣೆ. ಸುಧಾಕರ್ ಅಲ್ಲ ಯಾರು ನಿಂತರೂ ಕೆಲಸ ಮಾಡುತ್ತೇವೆ ಎಂದು.ವಿಶ್ವನಾಥಣ್ಣ ಸುಧಾಕರ್‌ಗೆ ಟಿಕೆಟ್ ಆದ ಮರುದಿನವೇ ನನ್ನನ್ನು, ಬಾಗೇಪಲ್ಲಿ ಮುನಿರಾಜು, ಗೌರಿಬಿದನೂರು ರವಿನಾರಾಯಣರೆಡ್ಡಿ ಅವರನ್ನು ಕರೆಸಿದ್ದರು.ಏನಾಗಿದೆಯೋ ಎಲ್ಲಾ ಮುಗಿದಿದೆ. ಈಗ ಎಲ್ಲರೂ ಸುಧಾಕರ್ ಪರವಾಗಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.ಅದರಂತೆ ನಾವು ಕೆಲಸ ಮಾಡಿದ್ದೇವೆ ಎಂದರು.

ಪಕ್ಷದ ಕಚೇರಿ ಕಟ್ಟಿ?
ನಮಗೂ ಬೇರೆ ಬೇರೆ ಮಾತನಾಡಲು ಬರುತ್ತದೆ.ಪಕ್ಷದ ಚಟವಟಿಕೆ ಇರುವ ಜಾಗದಲ್ಲಿ ಏನಂದ್ರೆ ಅದು ಬಂದು ಮಾತನಾಡುತ್ತೀರಿ.ಕೆಲವರು ಅಲ್ಲಿ ಕೇಳ್ತಿದ್ದರು. ಕಛೇರಿ ಯಾಕೆ ಆಗಲಿಲ್ಲ ಎಂದರೆ ನಿಮಗ್ಯಾರಿಗೂ ಹೇಳಲು ಮಾತುಗಳಿರಲಿಲ್ಲ. 5 ವರ್ಷದ ಹಿಂದೆ ಇದೇ ಸುಧಾಕರ್ ಪಕ್ಷಕ್ಕೆ ಬರುವ ಮೊದಲೇ ಸಿ.ಎ.ಸೈಟ್ ಮಾಡಿಸಿಕೊಂಡು ಪಕ್ಷಕ್ಕೆ 75 ಲಕ್ಷ ಹಣ ಡಿಡಿ ಕಟ್ಟಿ ನಾವು ರಿಜಿಸ್ಟರ್ ಮಾಡಿಸಿದ್ದಿವಿ!. ಕುಪ್ಪಹಳ್ಳಿ ಪಂಚಾಯಿತಿಯಲ್ಲಿ ಪ್ಲಾನ್ ಅಪ್ರೂವಲ್ ಪಡೆದುಕೊಂಡಿದ್ದೇವೆ. ಭವನ ಕಟ್ಟಲು ಹಣ ಸಂಗ್ರಹದಲ್ಲಿ ತೊಡಗಿದ್ದೆವು. ನೀವು ಬಂದು ಆಸೈಟ್ ಬೇಡ ನಾವು ಇನ್ನೇನೋ ಮಾಡುತ್ತೇವೆ ಎಂದು ಹೇಳಿ ಹತ್ತಾರು ವರ್ಷಗಳಿಂದ ಅದ್ಯಾವುದೋ ಸಂದಿಯಲ್ಲಿ ನನ್ನ ರಾಷ್ಟಿçಯ ಪಕ್ಷದ ಕಚೇರಿ ಮಾಡಿಕೊಂಡಿದ್ದೀರಿ. ಇವತ್ತಿಗೂ ಒಂದು ಆಫೀಸು ಮಾಡಲು ನಿಮಗ್ಯಾರಿಗೂ ಯೋಗ್ಯತೆಯಿಲ್ಲ. ದೊಡ್ಡ ದೊಡ್ಡ ಮಾತೇ ಮಾತಾಡುತ್ತೀರಿ ನೀವೆಲ್ಲಾ? ಮೊದಲು ಮನೆ ಕಟ್ಟಿರಪ್ಪ ನಿಮ್ಮನೆಯನ್ನಾ! ಆಮೇಲೆ ಪ್ರಪಂಚ ಕಟ್ಟುವಿರಂತೆ ಎಂದು ಸವಾಲು ಹಾಕಿದರು.

ಚಿಲ್ಲರೆ ರಾಜಕೀಯ ಬಿಡಿ?
ಚಿಲ್ಲರೆ ರಾಜಕೀಯ ಮಾಡಲು ನಿಮಗೊಬ್ಬರಿಗೇ ಬರಲ್ಲ. ಬದ್ಧತೆಯಿದೆಯೇನ್ರಿ ನಿಮಗೆ?ರಾಜಕೀಯ ಮಾಡುವುದಂದ್ರೆ ಯಾರೋ ಒಬ್ಬರ ಹಿಂದೆ ಹೋಗುವುದಲ್ಲ,ಎಲ್ಲರ ಹಿಂದೆಯೂ ಹೋಗಬೇಕು. ಎಲ್ಲರೂ ನಾಯಕರೇ? ಎಂ.ಪಿ ಅವರೇ ಆಗಬೇಕು. ಎಂಎಲ್‌ಎ ಕೂಡ ಆವರೇ ಆಗಬೇಕಾ? ಆಯಿತು ಪಕ್ಷ ಟಿಕೆಟ್ ಅವರಿಗೆ ಕೊಟ್ಟರೆ ಅವರಿಗೇ ಮಾಡೋಣ?ಈಗಲೇ ಏಕೆ ಅಷ್ಟೊಂದು ಆತಂಕಕ್ಕೆ ಒಳಗಾಗುತ್ತೀರಿ? ಕೃಷ್ಣಮೂರ್ತಿ ಅವರ ಬಗ್ಗೆ ನೀವೆಲ್ಲಾ ಯಾವತ್ತು ದನಿ ಯೆತ್ತಿದ್ದೀರಾ? ಅವರಿಗೆ ಟಿಕೆಟ್ ಸಿಗಲಿಲ್ಲ ಎಂದರೆ ಇನ್ಯಾರೋ ಅವರ ಮನೆಯವರಿಗೇ ಕೊಡಬೇಕಾ? ಯಾಕೆ ಬೇರೆ ಯಾರೂ ನಿಮ್ಮ ಭುಜಕ್ಕೆ ಭುಜಕೊಟ್ಟು ಕೆಲಸ ಮಾಡಿಲ್ಲವಾ? ಕಷ್ಟ ಬಿದ್ದು ದುಡ್ಡು ತಂದು ಖರ್ಚು ಮಾಡಿ ಪಕ್ಷ ಕಟ್ಟಿಲ್ಲವಾ? ಅವರವರ ಯೋಗ್ಯತೆಗೆ ತಕ್ಕಂತೆ ಸಹಾಯ ಮಾಡಿದ್ದಾರೆ. ಒಬ್ಬ ಒಂದು ರೂಪಾಯಿ ಕೊಟ್ಟಿರಬಹುದು, ಕೋಟಿ ರೂಪಾಯಿ ಕೊಟ್ಟಿರಬಹುದು. ಮೊದಲು ಕಾರ್ಯಕರ್ತರಿಗೆ ಗೌರವ ಕೊಡುವುದು ಕಲಿಯಿರಿ ಎಂದು ತಾಕೀತು ಮಾಡಿದರು.

ವಿಶ್ವನಾಥ್ ಪಕ್ಷ ನಿಷ್ಠೆಗೆ ಮಾದರಿ!!

ವಿಶ್ವಣ್ಣ ಹೇಳಿದ್ದು ಸುಧಾಕರ್ ಅವರು ಎಂಪಿ ಆಗಿದ್ದಾರೆ ? ಆಕಸ್ಮಾತ್ ಅವರಿಗೆ ಒಂದು ವೇಳೆ ಎಂಎಲ್‌ಎ ಟಿಕೆಟ್ ಸಿಕ್ಕಿತು ಎಂದು ಇಟ್ಟುಕೊಳ್ಳಿ. ಎಂ.ಪಿ ಸೀಟು ಖಾಲಿಯಾದರೆ ಯಾರಿಗೆ ಅದರ ಲಾಭ ಆಗುತ್ತಂತ ಗೊತ್ತಿದ್ಯಾ? ಅಲೋಕ್ ವಿಶ್ವನಾಥ್ ಅವರಿಗೆ ಎಂಪಿ ಆಗುವ ಛಾನ್ಸ್ ಸಿಗುತ್ತೆರೀ, ಅದನ್ನೂ ಸಹ ತ್ಯಾಗ ಮಾಡಿ ಯಾರಾದರೂ ಯುವಕರು ಬರಲಿ ಎಂದು ಹೇಳುತ್ತಿದ್ದಾರೆ.

ಏನದರರ್ಥ ಆ ಮನುಷ್ಯನ ದೊಡ್ಡಗುಣ ನಿಮಗೆ ಅರ್ಥ ಆಗಿದೆಯೇನ್ರಿ. ಅವರ ಪಾರ್ಟಿ ಬದ್ಧತೆ ನಿಮಗೆ ಗೊತ್ತೇನ್ರಿ, ಯಡಿಯೂರಪ್ಪ ಅಂದರೆ ವಿಶ್ವಣ್ಣಗೆ ಪ್ರಾಣಾರಿ. ಕೆಜೆಪಿ ಕಟ್ಟಿ ಪಕ್ಷಕ್ಕೆ ಬಾ ಎಂದಾಗ ಅವರು ಪಕ್ಷದ ಪರವಾಗಿ ನಿಂತುಕೊAಡು ಹೋಗಲಿಲ್ಲ.ಅದು ನಮ್ಮ ಪಕ್ಷದ ಬದ್ದತೆ, ಬಿಜೆಪಿ ಎಂದರೆ ವ್ಯಕ್ತಿಯ ಪಕ್ಷವಲ್ಲ ಕಾರ್ಯಕರ್ತರ ಪಕ್ಷ ಎಂದು ಪಕ್ಷ ನಿಷ್ಟೆಯ ಪಾಠ ಮಾಡಿದರು.

ನಿಲ್ಲದಿದ್ದಾಗ ಪಕ್ಷ ಇತ್ತು!!

ಅಣ್ಣಾ ಸುಧಾಕರ್ ಮತ್ತು ನೀವೆಲ್ಲಾ ಕಾಂಗ್ರೆಸ್‌ನಲ್ಲಿದ್ದಾಗ ಬಿ.ಎನ್.ಬಚ್ಚೇಗೌಡ ಎಂಪಿ ಚುನಾವಣೆಗೆ ನಿಂತಾಗ ೨೦೧೯ರಲ್ಲಿ ೯೫ ಸಾವಿರ ಓಟು ಪಡೆದು ಇತಿಹಾಸ ನಿರ್ಮಾಣ ಮಾಡಿದ್ದರು. ಬೇಕಾದರೆ ಗೂಗಲ್ ಮಾಡಿ ನೋಡಿ?ದಳ ಕೂಡ ಆವತ್ತು ನಮಗೆ ಆಪೋಸಿಟ್ ಇತ್ತು. ಅದಕ್ಕೂ ಮೊದಲು ಬಿಜೆಪಿಗೆ 35 ಸಾವಿರ ಓಟು ಬಂದಿತ್ತು.ರವಿನಾರಾಯಣರೆಡ್ಡಿ, ಡಾ.ಮಂಜುನಾಥ್ ಅವರ ಬಳಿ ಏನಿತ್ತೋ ಏನಿಲ್ಲವೋ ಪಕ್ಷ ಕಟ್ಟಿದ್ದಾರೆ.

ಆಕಾಶದಿಂದ ಉದುರಿಲ್ಲ!!
ಚಿಂತಾಮಣಿ ಮಹೇಶಣ್ಣ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ. ಬಂಗಾರ ಪೇಟೆಯಲ್ಲಿ ಬಿಜೆಪಿ ಗೆದ್ದಿಲ್ಲವಾ? ದೊಡ್ಡಬಳ್ಳಾಪುರದಲ್ಲಿ ಹಿಂದುಳಿದ ವರ್ಗದ ಯುವಕ ಧೀರಜ್ ಮುನಿರಾಜು ಕಾಂಗ್ರೆಸ್ ಭದ್ರಕೋಟೆ ಹೊಡೆದು ಬಿಜೆಪಿ ಬಾವುಟ ಆರಿಸಿಲ್ಲವಾ? ಅದು ಸಾಧನೆ ಅಲ್ಲವಾ? ನೋವೊಬ್ರು ಮಾತ್ರ ಆಕಾಶದಿಂದ ಉದುರಿ ಬಂದಿದ್ದೀರಾ? ಎಲ್ಲರಿಗೂ ಅವಕಾಶ ಕೊಡೋದು, ಗೌರವ ಕೊಡೋದು ಕಲಿಯಿರಿ! ಪ್ರಕೃತಿ ನಿಮ್ಮ ಜತೆ ಇರುತ್ತದೆ.ಅದು ಬಿಟ್ಟು ಕೌಂಟರ್ ಕೊಟ್ಟುಕೊಂಡು ಅದು ಮಾಡಿಕೊಂಡು ಇದು ಮಾಡಿಕೊಂಡು ಇರಲು ಯಾರಪ್ಪನ ಸೊತ್ತಲ್ಲ ಚಿಕ್ಕಬಳ್ಳಾಪುರ. ಎಲ್ಲರಿಗೂ ಒಂದೇ ಓಟು, ಅವನು ನಿರ್ಧಾರ ಮಾಡುತ್ತಾನೆ ಸಂಸದರಿಗೆ ಟಾಂಗ್ ನೀಡಿದರು.