MP Dr.K.Sudhakar: 3 ರಾಜ್ಯಗಳಲ್ಲಿ ಬಿಜೆಪಿ ಗೆಲುವು ಖಚಿತ: ಸಂಸದ ಡಾ.ಕೆ.ಸುಧಾಕರ್ ಭವಿಷ್ಯ
ಚಿಕ್ಕಬಳ್ಳಾಪುರ ನಗರದಲ್ಲಿ ನಡೆದ ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗಿಯಾದ ನಂತರ ಮಾಧ್ಯಮದೊಮದಿಗೆ ಮಾತನಾಡಿದರು. ರಾಜ್ಯದ ದಾವಣಗೆರೆ ಹಾಗೂ ಬಾಗಲಕೋಟೆ ಕ್ಷೇತ್ರಗಳ ಬಗ್ಗೆ ಮಾತನಾಡಿ, ಬಾಗಲಕೋಟೆ ಯಲ್ಲಿ ಬಿಜೆಪಿಯ ಪರವಾದ ವಾತಾವರಣ ಇದ್ದು ಗೆಲುವು ಖಚಿತವಾಗಿದೆ. ದಾವಣಗೆರೆ ಕ್ಷೇತ್ರದಲ್ಲಿ ಸಮಾನ ಸೆಣಸಾಟವಿದ್ದು, ಪ್ರಸ್ತುತ ನಮ್ಮ ಪರ ಶೇ.51 ಹಾಗೂ ಕಾಂಗ್ರೆಸ್ ಪರ ಶೇ.49ರಷ್ಟು ಒಲವು ಇದೆ ಎಂಬ ಮಾಹಿತಿ ಇದೆ
-
ಚಿಕ್ಕಬಳ್ಳಾಪುರ : ಅಸ್ಸಾಂನಲ್ಲಿ ಬಿಜೆಪಿಯ ಗೆಲುವು ಖಚಿತವಾಗಿದ್ದು, ತಮಿಳುನಾಡಿನಲ್ಲಿ ಎನ್‌ಡಿಎ ಮೈತ್ರಿ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಸಂಸದ ಡಾ.ಕೆ.ಸುಧಾಕರ್(MP Dr. K. Sudhakar) ಭವಿಷ್ಯ ನುಡಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ನಡೆದ ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗಿಯಾದ ನಂತರ ಮಾಧ್ಯಮದೊಮದಿಗೆ ಮಾತನಾಡಿದರು. ರಾಜ್ಯದ ದಾವಣಗೆರೆ ಹಾಗೂ ಬಾಗಲ ಕೋಟೆ ಕ್ಷೇತ್ರಗಳ ಬಗ್ಗೆ ಮಾತನಾಡಿ, ಬಾಗಲಕೋಟೆ ಯಲ್ಲಿ ಬಿಜೆಪಿಯ ಪರವಾದ ವಾತಾವರಣ ಇದ್ದು ಗೆಲುವು ಖಚಿತವಾಗಿದೆ. ದಾವಣಗೆರೆ ಕ್ಷೇತ್ರದಲ್ಲಿ ಸಮಾನ ಸೆಣಸಾಟ ವಿದ್ದು, ಪ್ರಸ್ತುತ ನಮ್ಮ ಪರ ಶೇ.51 ಹಾಗೂ ಕಾಂಗ್ರೆಸ್ ಪರ ಶೇ.49ರಷ್ಟು ಒಲವು ಇದೆ ಎಂಬ ಮಾಹಿತಿ ಇದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯ ಎಂಬುದು ಕೇವಲ ಬಾಯಿ ಮಾತಾಗಿದ್ದು, ಅಲ್ಪ ಸಂಖ್ಯಾತರು ಇದನ್ನು ಅರಿತು ಮತ ಚಲಾಯಿಸುವ ಮೊದಲು ತಮ್ಮ ಮನಸ್ಸಾಕ್ಷಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಬೇಕು ಎಂದು ಕರೆ ನೀಡಿದರು.